Rohit Sharma Out: ಹುಟ್ಟುಹಬ್ಬದ ದಿನ ರೋಹಿತ್ ಶರ್ಮಾಗೆ ಬಹುದೊಡ್ಡ ಮೋಸ: ಇದು ಅಂಪೈರ್ ಮಾಡಿದ ಎಡವಟ್ಟು

IPl 2023 MI vs RR: ಐಪಿಎಲ್ 2023ರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಔಟಾಗಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಇದರ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.

Rohit Sharma Out: ಹುಟ್ಟುಹಬ್ಬದ ದಿನ ರೋಹಿತ್ ಶರ್ಮಾಗೆ ಬಹುದೊಡ್ಡ ಮೋಸ: ಇದು ಅಂಪೈರ್ ಮಾಡಿದ ಎಡವಟ್ಟು
Rohit Sharma Out MI vs RR
Follow us
Vinay Bhat
|

Updated on:May 01, 2023 | 11:33 AM

ಭಾರತ ಕ್ರಿಕೆಟ್ ತಂಡದ ಹಾಗೂ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿರುವ ರೋಹಿತ್ ಶರ್ಮಾ (Rohit Sharma) ಭಾನುವಾರ 36ನೇ ವಸಂತಕ್ಕೆ ಕಾಲಿಟ್ಟರು. ವಿಶೇಷ ಎಂದರೆ ಇವರ ಹುಟ್ಟುಹಬ್ಬದ ದಿನವೇ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ (MI vs RR) ಪಂದ್ಯ ಏರ್ಪಡಿಸಲಾಗಿತ್ತು. ಇದರಲ್ಲಿ ಹಿಟ್​ಮ್ಯಾನ್ ಪಡೆ 6 ವಿಕೆಟ್​ಗಳ ರೋಚಕ ಜಯ ಕೂಡ ಸಾಧಿಸಿತು. ಕೊನೆಯ 6 ಎಸೆತಗಳಲ್ಲಿ ಮುಂಬೈ ಗೆಲುವಿಗೆ 17 ರನ್ ಬೇಕಾಗಿದ್ದಾಗ ಟಿಮ್ ಡೇವಿಡ್ (Tim David) ಮೊದಲ ಮೂರು ಎಸೆತಗಳಲ್ಲಿ ಮೂರು ಸಿಕ್ಸರ್ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಆದರೆ, ಜನ್ಮದಿನ ಆಡಿದ ಪಂದ್ಯದಲ್ಲಿ ರೋಹಿತ್ ಕ್ಲಿಕ್ ಆಗಲಿಲ್ಲ. ಅಂಪೈರ್ ಮಾಡಿದ ಎಡವಟ್ಟಿನಿಂದ ಬೇಗನೆ ಪೆವಿಲಿಯನ್ ಸೇರಬೇಕಾಯಿತು.

ರಾಜಸ್ಥಾನ್ ನೀಡಿದ್ದ 213 ರನ್​ಗಳ ಟಾರ್ಗೆಟ್ ಬೆನ್ನಟ್ಟಲು ಬಂದ ಮುಂಬೈ ಪರ ರೋಹಿತ್ ಶರ್ಮಾ (3 ರನ್) ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಎರಡನೇ ಓವರ್​ನ ಸಂದೀಪ್ ಶರ್ಮಾ ಬೌಲಿಂಗ್​ನ ಕೊನೆಯ ಎಸೆತದಲ್ಲಿ ಔಟಾದರು. ಈ ಎಸೆತದಲ್ಲಿ ದೊಡ್ಡ ಎಸೆತ ಹೊಡೆಯಲು ರೋಹಿತ್ ಕ್ರೀಸ್ ಬಿಟ್ಟುನಿಂತರು. ಆದರೆ, ಚೆಂಡು ಬ್ಯಾಟ್​ಗೆ ತಾಗದೆ ಸಾಗಿತು. ಅತ್ತ ಬೇಲ್ಸ್ ನೆಲಕ್ಕೆ ಬಿತ್ತು. ಬೇಲ್ಸ್ ಕೆಳಗಿ ಬಿದ್ದಿರುವುದನ್ನು ಗಮನಿಸಿ ಅಂಪೈರ್ ಔಟ್ ಎಂದು ತೀರ್ಪು ಪ್ರಕಟಿಸಿದರು. ಆದರೆ, ಸೂಕ್ಷ್ಮವಾಗಿ ಗಮನಿಸಿದಾಗ ಇದು ಔಟ್ ಆಗಿರಲಿಲ್ಲ.

ಇದನ್ನೂ ಓದಿ
Image
RCB Playing XI vs LSG: ಹ್ಯಾಜಲ್​ವುಡ್ ಅಲ್ಲ: ಲಖನೌ ವಿರುದ್ಧ ಗೆಲ್ಲಲು ಆರ್​ಸಿಬಿ ಮಾಸ್ಟರ್ ಪ್ಲಾನ್: ಆ ಪ್ಲೇಯರ್ ಇಂದು ಕಣಕ್ಕೆ
Image
Rohit Sharma: ತಾಳ್ಮೆ ಕಳೆದುಕೊಂಡ ರೋಹಿತ್ ಶರ್ಮಾ: ಪಿಚ್ ಮಧ್ಯೆ ನಿಂತು ಅಂಪೈರ್​ನ ಮೈಚಳಿ ಬಿಡಿಸಿದ ಹಿಟ್​ಮ್ಯಾನ್: ವಿಡಿಯೋ
Image
Tim David: ಕೊನೆಯ ಓವರ್​ನಲ್ಲಿ ಬೇಕಿತ್ತು 17 ರನ್ಸ್: ಸತತ 3 ಸಿಕ್ಸ್ ಸಿಡಿಸಿದ ಟಿಮ್ ಡೇವಿಡ್ ರೋಚಕ ವಿಡಿಯೋ ನೋಡಿ
Image
LSG vs RCB, IPL 2023: ಐಪಿಎಲ್​ನಲ್ಲಿಂದು ಆರ್​ಸಿಬಿ ಪಂದ್ಯ: ಲಖನೌ ವಿರುದ್ಧದ ಪಂದ್ಯಕ್ಕೆ ಮಾಡಿದೆ ಮಾಸ್ಟರ್ ಪ್ಲಾನ್

IPL 2023: ಔಟಾ ಅಥವಾ ನಾಟೌಟಾ? ಹೊಸ ಚರ್ಚೆಗೆ ಕಾರಣವಾದ ಕ್ಯಾಚ್

ಹೌದು, ಅಂಪರ್ ಔಟೆಂದು ಕೊಟ್ಟ ಬಳಿಕ ರೋಹಿತ್ ಶರ್ಮಾ ಪೆವಿಲಿಯನ್​ಗೆ ತೆರಳಿದರು. ಆದರೆ, ಇದು ಔಟ್ ಆಗಿರಲಿಲ್ಲ. ರೋಹಿತ್ ಔಟಾದ ವಿಡಿಯೋವನ್ನು ಸ್ಲೋ ಮೋಷನ್​ನಲ್ಲಿ ನೋಡಿದಾಗ ಚೆಂಡು ವಿಕೆಟ್ ಹತ್ತಿರದಿಂದ ಸಾಗಿತ್ತೆ ಹೊರತು ವಿಕೆಟ್​ಗೆ ಬಡಿದಿರಲಿಲ್ಲ. ಬದಲಾಗಿ ವಿಕೆಟ್​ಗೆ ಆರ್​ಆರ್​ ತಂಡದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರ ಗ್ಲೌಸ್ ತಾಗಿತ್ತು. ಹೀಗಾಗಿ ಬೇಲ್ಸ್ ಕೆಳಕ್ಕೆ ಬಿದ್ದಿದೆ. ಚೆಂಡು ತಾಗಿ ಬೇಲ್ಸ್ ಬಿದ್ದಿದೆ ಎಂದು ಅಂದುಕೊಂಡು ಅಂಪೈರ್ ಔಟೆಂದು ತೀರ್ಪು ನೀಡಿದ್ದಾರೆ. ಈ ಮೂಲಕ ಅಂಪೈರ್ ಮಾಡಿದ ಎಡವಟ್ಟಿನಿಂದ ಹಿಟ್​ಮ್ಯಾನ್ ಬೇಗನೆ ನಿರ್ಗಮಿಸಿಬೇಕಾಯಿತು.

ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ರೋಹಿತ್ ಶರ್ಮಾ ಅಭಿಮಾನಿಗಳು ಸ್ಲೋ ಮೋಷನ್ ವಿಡಿಯೋ ಹಂಚಿಕೊಂಡರು ಅಂಪೈರ್ ವಿರುದ್ಧ ಸಿಡಿದೆದ್ದಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ.

ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್ ಏಕಾಂಗಿಯಾಗಿ ರನ್ ಕಲೆಹಾಕಿದ್ದು ಬಿಟ್ಟರೆ ನಂತರ ಆಡಿದ ಯಾವ ಬ್ಯಾಟರ್​ನ ಸ್ಕೋರ್ 20ರ ಗಡಿ ದಾಟಲಿಲ್ಲ. ಜೈಸ್ವಾಲ್ ಕೇವಲ 62 ಎಸೆತಗಳಲ್ಲಿ 16 ಫೋರ್ ಹಾಗೂ 8 ಸಿಕ್ಸರ್ ಬಾರಿಸಿ 124 ರನ್ ಚಚ್ಚಿದರು. ಆರ್​ಆರ್ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 212 ರನ್ ಬಾರಿಸಿತು. ಕಠಿಣ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಆರಂಭದಲ್ಲಿ 2 ವಿಕೆಟ್ ಕಳೆದುಕೊಂಡರೂ ಮಧ್ಯಮ ಕ್ರಮಾಂಕದಲ್ಲಿ ಕ್ಯಾಮ್ರೋನ್ ಗ್ರೀನ್ (44) ಹಾಗೂ ಸೂರ್ಯಕುಮಾರ್ ಯಾದವ್ (55) ಅಬ್ಬರಿಸಿ ಒಂದು ಹಂತಕ್ಕೆ ಪಂದ್ಯವನ್ನು ತಂದಿಟ್ಟರು. ಕೊನೆಯ ಹಂತದಲ್ಲಿ ತಿಲಕ್ ವರ್ಮಾ (ಅಜೇಯ 29) ಮತ್ತು ಟಿಮ್ ಡೇವಿಡ್ (ಅಜೇಯ 45) ಸ್ಫೋಟಕ ಬ್ಯಾಟಿಂಗ್ ನಡೆಸಿ 19.3 ಓವರ್​ನಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:33 am, Mon, 1 May 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ