AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ: ಮೊದಲ ಓವರ್‌ನಲ್ಲಿ ಸಿಕ್ಸರ್; ವಿಶ್ವ ದಾಖಲೆ ಮುರಿದ ಸಂಜು ಸ್ಯಾಮ್ಸನ್

Sanju Samson Shatters T20 World Cup Record: 2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸಂಜು ಸ್ಯಾಮ್ಸನ್ ಮೊದಲ ಓವರ್‌ನಲ್ಲಿ ಸಿಕ್ಸರ್ ಬಾರಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಮೊದಲ ಓವರ್‌ನಲ್ಲಿ ಅತಿ ಹೆಚ್ಚು (ನಾಲ್ಕು) ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಕೇವಲ 21 ಎಸೆತಗಳಲ್ಲಿ ಈ ಸಾಧನೆ ಮಾಡುವ ಮೂಲಕ ಫಿಲ್ ಸಾಲ್ಟ್ ದಾಖಲೆಯನ್ನು ಮುರಿದಿದ್ದಾರೆ. ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಭಾರತಕ್ಕೆ ಫೈನಲ್‌ನಲ್ಲಿ ವೇಗದ ಆರಂಭ ನೀಡಿದರು, 4 ಓವರ್‌ಗಳಲ್ಲಿ 50 ರನ್ ಗಳಿಸಿ ಐತಿಹಾಸಿಕ ಜೊತೆಯಾಟ ನೀಡಿದರು.

IND vs NZ: ಮೊದಲ ಓವರ್‌ನಲ್ಲಿ ಸಿಕ್ಸರ್; ವಿಶ್ವ ದಾಖಲೆ ಮುರಿದ ಸಂಜು ಸ್ಯಾಮ್ಸನ್
Sanju Samson
ಪೃಥ್ವಿಶಂಕರ
|

Updated on:Mar 08, 2026 | 8:04 PM

Share

2026 ರ ಟಿ20 ವಿಶ್ವಕಪ್ ಫೈನಲ್‌ (T20 World Cup Final) ಪಂದ್ಯ ನ್ಯೂಜಿಲೆಂಡ್ ಹಾಗೂ ಟೀಂ ಇಂಡಿಯಾ (India vs New Zealand) ನಡುವೆ ಅಹಮದಾಬಾದ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪರ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದರು. ಮೊದಲ ಓವರ್​ನಲ್ಲಿ ಸ್ಟ್ರೈಕ್ ತೆಗೆದುಕೊಂಡ ಸಂಜು ಸ್ಯಾಮ್ಸನ್ (Sanju Samson) ಅದ್ಭುತ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಖಾತೆ ತೆರೆದರು. ಇದರೊಂದಿಗೆ ವಿಶ್ವ ದಾಖಲೆಯನ್ನು ಸೃಷ್ಟಿಸಿದರು. ಮ್ಯಾಟ್ ಹೆನ್ರಿ ಅವರ ಎಸೆತದಲ್ಲಿ ಸಂಜು ಸ್ಯಾಮ್ಸನ್ ಸಿಕ್ಸ್ ಬಾರಿಸಿದ ತಕ್ಷಣ ಟಿ20 ವಿಶ್ವಕಪ್​ ಪಂದ್ಯಗಳಲ್ಲಿ ಮೊದಲ ಓವರ್‌ನಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ.

ಸಂಜು ಸ್ಯಾಮ್ಸನ್ ಇದುವರೆಗೆ ಆಡಿರುವ ನಾಲ್ಕು ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಮೊದಲ ಓವರ್‌ನಲ್ಲಿ ಸಿಕ್ಸ್ ಬಾರಿಸಿದ್ದಾರೆ . ಇದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ 40 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದ ಇಂಗ್ಲೆಂಡ್ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅವರ ದಾಖಲೆಯನ್ನು ಮುರಿದಿದ್ದಾರೆ. ಸಂಜು ಕೇವಲ 21 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಸಂಜು ಸ್ಯಾಮ್ಸನ್ ಮತ್ತು ಫಿಲ್ ಸಾಲ್ಟ್ ಜೊತೆಗೆ, ರಹಮಾನಲ್ಲಾ ಗುರ್ಬಾಜ್ ಟಿ20 ವಿಶ್ವಕಪ್ ಪಂದ್ಯಗಳ ಮೊದಲ ಓವರ್‌ನಲ್ಲಿ ಮೂರು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಮೊಹಮ್ಮದ್ ರಿಜ್ವಾನ್ ಮತ್ತು ಕ್ವಿಂಟನ್ ಡಿ ಕಾಕ್ ಕೂಡ ಈ ಸಾಧನೆಯನ್ನು ಮೂರು ಬಾರಿ ಮಾಡಿದ್ದಾರೆ. ಆದಾಗ್ಯೂ, ಸಂಜು ಸ್ಯಾಮ್ಸನ್ ನಾಲ್ಕು ಸಿಕ್ಸರ್‌ ಬಾರಿಸುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಮೊದಲ ಓವರ್​ನಲ್ಲೇ ಸಿಕ್ಸರ್

ನಮೀಬಿಯಾ ವಿರುದ್ಧದ ಪಂದ್ಯದ ಮೊದಲ ಓವರ್‌ನಲ್ಲಿ ಸಂಜು ಸ್ಯಾಮ್ಸನ್ ಸಿಕ್ಸರ್ ಬಾರಿಸಿದ್ದರು. ನಂತರ ಜಿಂಬಾಬ್ವೆ ವಿರುದ್ಧವೂ ಸಿಕ್ಸರ್ ಬಾರಿಸಿದ್ದರು. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಸ್ಯಾಮ್ಸನ್ ಮೊದಲ ಓವರ್‌ನಲ್ಲಿ ಸಿಕ್ಸರ್ ಬಾರಿಸಿದ್ದರು. ಇದೀಗ ನ್ಯೂಜಿಲೆಂಡ್ ವಿರುದ್ಧದ ಫೈನಲ್‌ನಲ್ಲಿ ಸ್ಯಾಮ್ಸನ್ ಮೊದಲ ಓವರ್​ನಲ್ಲಿ ಸಿಕ್ಸರ್ ಬಾರಿಸಿದ್ದಾರೆ.

IND vs NZ: ಫೈನಲ್​ನಲ್ಲಿ ಟಾಸ್ ಸೋತ ಭಾರತ; ಪ್ರಶಸ್ತಿ ಪಂದ್ಯಕ್ಕೆ ಪ್ಲೇಯಿಂಗ್ 11 ಹೀಗಿದೆ

ಭಾರತಕ್ಕೆ ಸ್ಫೋಟಕ ಆರಂಭ

ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಫೈನಲ್‌ನಲ್ಲಿ ಟೀಂ ಇಂಡಿಯಾಗೆ ಭರ್ಜರಿ ಆರಂಭ ನೀಡಿದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಕೇವಲ ನಾಲ್ಕು ಓವರ್‌ಗಳಲ್ಲಿ ತಂಡದ ಸ್ಕೋರ್ ಅನ್ನು ಅರ್ಧಶತಕದ ಗಡಿ ದಾಟಿಸಿದರು. ಇದು ಟಿ20 ವಿಶ್ವಕಪ್ ಫೈನಲ್ ಇತಿಹಾಸದಲ್ಲಿ ಭಾರತದ ವೇಗದ ಆರಂಭಿಕ ಅರ್ಧಶತಕದ ಜೊತೆಯಾಟವಾಗಿದೆ. ಹಾಗೆಯೇ ಈ ಜೋಡಿ ಮೊದಲ ವಿಕೆಟ್​ಗೆ 7.1 ಓವರ್​ಗಳಲ್ಲಿ 98 ರನ್​ಗಳ ಜೊತೆಯಾಟವನ್ನು ನೀಡಿತು. ಅಭಿಷೇಕ್ ಶರ್ಮಾ 21 ಎಸೆತಗಳಲ್ಲಿ 52 ರನ್ ಬಾರಿಸಿ ಔಟಾದರು.

Published On - 8:02 pm, Sun, 8 March 26

Follow Us