
ಟಿ20 ಕ್ರಿಕೆಟ್‌ನ ಅಬ್ಬರದ ನಡುವೆ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಟಿ20 ಪಂದ್ಯಗಳ ಮೇಲೆ ತೋರಿಸುವ ಆಸಕ್ತಿಯನ್ನು ಉಳಿದೆರಡು ಮಾದರಿಗಳ ಮೇಲೆ ಪ್ರೇಕ್ಷಕರು ತೋರಿಸುತ್ತಿಲ್ಲ. ಬಲಿಷ್ಠ ತಂಡಗಳು ಆಡುವಾಗ ಮಾತ್ರ ಈ ಎರಡು ಮಾದರಿಗಳ ಪಂದ್ಯಗಳನ್ನು ನೋಡುವ ಅಭಿಮಾನಿಗಳ ಸಂಖ್ಯೆ ಹೆಚ್ಚಿರುತ್ತದೆ. ಉಳಿದಂತೆ ಜನಪ್ರಿಯವಲ್ಲದ ತಂಡಗಳು ಆಡಿದರೆ ಕ್ರೀಡಾಂಗಣವೂ ಖಾಲಿ ಇರುತ್ತದೆ. ವೀಕ್ಷಕರ ಸಂಖ್ಯೆಯೂ ಕಡಿಮೆ ಇರುತ್ತದೆ. ಹೀಗಾಗಿ ವಿಶ್ವದೆಲ್ಲೆಡೆ ಟಿ20 ಲೀಗ್ಗಳ ಸಂಖ್ಯೆ ಹೆಚ್ಚುತ್ತಿದೆ. ಇತ್ತ ಟೆಸ್ಟ್ ಹಾಗೂ ಏಕದಿನ ಸರಣಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದಾಗ್ಯೂ ಈ ಎಲ್ಲಾ ಸವಾಲುಗಳ ನಡುವೆಯೂ ಏಕದಿನ ಕ್ರಿಕೆಟ್‌ನಲ್ಲಿ ಐತಿಹಾಸಿಕ ದಾಖಲೆಯೊಂದು ದಾಖಲೆಯ ಪುಟಕ್ಕೆ ಸೇರ್ಪಡೆಗೊಂಡಿದೆ.
ಸ್ಕಾಟ್ಲೆಂಡ್ ಮತ್ತು ಕೆನಡಾ ನಡುವಿನ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಲೀಗ್ 2 ರ ಏಕದಿನ ಪಂದ್ಯವು ಸ್ಕಾಟ್ಲೆಂಡ್‌ನ ಡುಂಡೀಯಲ್ಲಿರುವ ಫೋರ್ಥಿಲ್ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಉಭಯ ತಂಡಗಳ ನಡುವಿನ ಈ ಏಕದಿನ ಪಂದ್ಯ ಏಕದಿನ ಮಾದರಿಯಲ್ಲಿ 5000ನೇ ಏಕದಿನ ಪಂದ್ಯವೆಂಬ ದಾಖಲೆ ಬರೆಯಿತು. ವಾಸ್ತವವಾಗಿ 1971 ರಲ್ಲಿ ಪ್ರಾರಂಭವಾದ ಏಕದಿನ ಮಾದರಿಯು ಕಳೆದ 55 ವರ್ಷಗಳಲ್ಲಿ ತನ್ನ ನಿಯಮಗಳಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದೆ. ಟಿ20 ಮಾದರಿಯ ಆಗಮನದ ಹೊರತಾಗಿಯೂ, ಏಕದಿನ ಇನ್ನೂ ತನ್ನದೇಯಾದ ಪ್ರಾಮುಖ್ಯತೆಯನ್ನು ಹೊಂದಿದೆ.
🚨Milestone ODI matches:
• 1st — Australia vs England (Melbourne, 1971)
• 1000th — West Indies vs England (Nottingham, 1995)
• 2000th — Pakistan vs Zimbabwe (Sharjah, 2003)
• 3000th — Australia vs England (Southampton, 2010)
• 4000th — Hong Kong vs Papua New Guinea (Harare,… pic.twitter.com/FWROmm9uKm— TheWicketReport (@WicketReport) August 7, 2026
ಏಕದಿನ ಕ್ರಿಕೆಟ್ ಇತಿಹಾಸದ ಬಗ್ಗೆ ಹೇಳುವುದಾದರೆ, ಮೊದಲ ಪಂದ್ಯವು ಜನವರಿ 5, 1971 ರಂದು ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆಯಿತು, ಈ ಪಂದ್ಯವನ್ನು ಆಸ್ಟ್ರೇಲಿಯಾ 5 ವಿಕೆಟ್‌ಗಳಿಂದ ಗೆದ್ದಿತು. 1000 ನೇ ಏಕದಿನ ಪಂದ್ಯವು 8905 ದಿನಗಳ ನಂತರ ಅಂದರೆ 1995 ರಲ್ಲಿ ನಾಟಿಂಗ್‌ಹ್ಯಾಮ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯಿತು. ತಲಾ 55 ಓವರ್‌ಗಳ ಈ ಪಂದ್ಯ ಎರಡು ದಿನಗಳ ಕಾಲ ನಡೆಯಿತು. 2000 ನೇ ಏಕದಿನ ಪಂದ್ಯವು ಏಪ್ರಿಲ್ 10, 2003 ರಂದು ನಡೆಯಿತು. ಏಕದಿನ ಸ್ವರೂಪದಲ್ಲಿ 3000 ನೇ ಪಂದ್ಯವನ್ನು ಜೂನ್ 22, 2010 ರಂದು ನಡೆದಿತ್ತು. ಹಾಗೆಯೇ 4000 ನೇ ಪಂದ್ಯವನ್ನು ಮಾರ್ಚ್ 17, 2018 ರಂದು ನಡೆಯಿತು. ಇದೀಗ 5000 ನೇ ಪಂದ್ಯವು ಆಗಸ್ಟ್ 7, 2026 ರಂದು ಸ್ಕಾಟ್ಲೆಂಡ್ ಮತ್ತು ಕೆನಡಾ ನಡುವೆ ನಡೆದಿದೆ.
ವೆಸ್ಟ್ ಇಂಡೀಸ್ ತಂಡವು ಏಕದಿನ ಕ್ರಿಕೆಟ್‌ನ ಆರಂಭಿಕ ಹಂತಗಳಲ್ಲಿ ಪ್ರಾಬಲ್ಯ ಸಾಧಿಸಿ, ಸತತ ಎರಡು ವಿಶ್ವಕಪ್‌ಗಳನ್ನು ಗೆದ್ದಿತು. ಅಂದಿನಿಂದ, ಆಡಿದ ಪ್ರತಿ 1,000 ಪಂದ್ಯಗಳಲ್ಲಿ ಅವರ ಪ್ರದರ್ಶನವು ಸ್ಥಿರವಾಗಿ ಕುಸಿಯುತ್ತಿದೆ. ಇತ್ತ ಏಕದಿನ ಸ್ವರೂಪದಲ್ಲಿ ವರ್ಷದಿಂದ ವರ್ಷಕ್ಕೆ ಬಲಿಷ್ಠವಾಗುತ್ತಿರುವ ಟೀಂ ಇಂಡಿಯಾದ ಗೆಲುವಿನ ಶೇಕಡಾವಾರು ಪ್ರಮಾಣ ಹೆಚ್ಚುತ್ತಲೇ ಇದೆ.
ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ತಂಡಗಳ ಪಟ್ಟಿಯಲ್ಲಿ ಭಾರತ ತಂಡವು ಪ್ರಸ್ತುತ ಅಗ್ರಸ್ಥಾನದಲ್ಲಿದೆ. ಟೀಂ ಇಂಡಿಯಾ ಇದುವರೆಗೆ 1,081 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 575 ಪಂದ್ಯಗಳನ್ನು ಗೆದ್ದಿದ್ದರೆ, 452 ಪಂದ್ಯಗಳಲ್ಲಿ ಸೋತಿದೆ. ಉಳಿದಂತೆ 10 ಪಂದ್ಯಗಳು ಟೈ ಆಗಿದ್ದರೆ, 44 ಪಂದ್ಯಗಳು ರದ್ದಾಗಿವೆ. ಆಸ್ಟ್ರೇಲಿಯಾ 1,025 ಪಂದ್ಯಗಳನ್ನು ಆಡಿದ್ದು, ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 1,002 ಏಕದಿನ ಪಂದ್ಯಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.