ಭಾರತ ಮಹಿಳಾ ಕ್ರಿಕೆಟ್ ತಂಡ ಸದ್ಯ ಸಿಂಹಳೀಯರ ನಾಡಲ್ಲಿದ್ದು ಶ್ರೀಲಂಕಾ (India Women vs Sri Lanka Women) ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಮೊದಲ ಪಂದ್ಯದಲ್ಲಿ 4 ವಿಕೆಟ್ಗಳಿಂದ ಜಯಿಸಿದ್ದ ಹರ್ಮನ್ಪ್ರೀತ್ ಪಡೆ ಎರಡನೇ ಏಕದಿನದಲ್ಲೂ 10 ವಿಕೆಟ್ಗಳಿಂದ ಗೆದ್ದು ಬೀಗಿದ್ದು ಸರಣಿ ವಶಪಡಿಸಿಕೊಂಡಿದೆ. ಲಂಕಾ ನೀಡಿದ್ದ 173 ರನ್ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿದ ಭಾರತೀಯ ವನಿತೆಯರು ಒಂದೂ ವಿಕೆಟ್ ಕಳೆದುಕೊಳ್ಳದೆ ಕೇವಲ 25.4 ಓವರ್ನಲ್ಲಿ ಗೆಲುವಿನ ಗುರಿ ಮುಟ್ಟಿದರು. ಬೊಂಬಾಟ್ ಬ್ಯಾಟಿಂಗ್ ನಡೆಸಿದ ಶಫಾಲಿ ವರ್ಮಾ (Shafali Verma) ಹಾಗೂ ಸ್ಮೃತಿ ಮಂದಾನ (Smriti Mandhana) ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಈ ಮೂಲಕ ಇವರಿಬ್ಬರು ಉತ್ತಮ ಆರಂಭ ಒದಗಿಸುತ್ತಿಲ್ಲ ಎಂದು ಟೀಕಿಸಿದವರಿಗೆ ಸರಿಯಾದ ಉತ್ತರ ನೀಡಿದ್ದಾರೆ. ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಶಫಾಲಿ 71 ಎಸೆತಗಳಲ್ಲಿ ಅಜೇಯ 71 ರನ್ ಚಚ್ಚಿದರು. ಅದರಲ್ಲೂ ಇವರು ಹೊಡೆದ ಒಂದು ಶಾಟ್ ಅದ್ಭುತವಾಗಿತ್ತು.
ಶ್ರೀಲಂಕಾ ಪರ ಏಳನೇ ಓವರ್ ಬೌಲಿಂಗ್ ಮಾಡಲು ಬಂದ ವೇಗಿ ಅಚಿನಿ ಕುಲಸೂರ್ಯ ತಮ್ಮ ಕೊನೆಯ ಎಸೆತವನ್ನು ಆಫ್ ಸ್ಟಂಪ್ನ ಔಟ್ ಸೈಡ್ ಕಡೆ ಎಸೆತದರು. ಇದನ್ನು ತಕ್ಷಣವೇ ಅರಿತ ಶಫಾಲಿ ವಿಕೆಟ್ನಿಂದ ಎದುರು ಬಂದು ಲೆಗ್ಸೈಡ್ ಕಡೆ ಸ್ಕೂಪ್ ಶಾಟ್ ಹೊಡೆದು. ಚೆಂಡು ಫೈನ್ ಲೆಗ್ನಲ್ಲಿ ಬೌಂಡರಿ ಗೆರೆ ತಲುಪಿತು. ಈ ಹಿಂದೆ ಎಬಿ ಡಿವಿಲಿಯರ್ಸ್ ಕೂಡ ಅನೇಕ ಬಾರಿ ಈ ರೀತಿಯ ಶಾಟ್ ಹೊಡೆದಿದ್ದರು. ಇದೀಗ ಶಫಾಲಿ ವರ್ಮಾ ಕೂಡ ಅದೇರೀತಿ ಶಾಟ್ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಅನೇಕರು ಲೇಡಿ ಎಬಿಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
Jasprit Bumrah: ಕಪಿಲ್ ದೇವ್ ಹೆಸರಲ್ಲಿದ್ದ ಮತ್ತೊಂದು ದಾಖಲೆ ಪುಡಿ ಪುಡಿ ಮಾಡಿದ ಜಸ್ಪ್ರೀತ್ ಬುಮ್ರಾ
— Picasso (@6icasso) July 4, 2022
ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿರುವ ಶ್ರೀಲಂಕಾ ವನಿತೆಯರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ನಾಯಕಿ ಚಾಮರಿ ಅಟಪಟ್ಟು 27 ರನ್, ಅನುಷ್ಕಾ ಸಂಜೀವನಿ 25, ನೀಲಾಕ್ಷಿ ಡಿಸಿಲ್ವಾ 32 ಮತ್ತು ಅಂತಿಮವಾಗಿ ಅಜೇಯರಾಗಿ ಉಳಿದ ಅಮಾ ಕಾಂಚನಾ 47 ರನ್ ಕಲೆ ಹಾಕಿದ್ದೇ ಹೆಚ್ಚು. ಲಂಕಾ 50 ಓವರ್ಗೆಯೆ 173 ರನ್ಗೆ ಆಲೌಟ್ ಆಯಿತು. ಟೀಮ್ ಇಂಡಿಯಾ ಪರ ರೇಣುಕಾ ಸಿಂಗ್ 4 ವಿಕೆಟ್ ಪಡೆದರೆ, ಮೇಘನಾ ಸಿಂಗ್ ಮತ್ತು ದೀಪ್ತಿ ಶರ್ಮಾ ತಲಾ 2 ವಿಕೆಟ್ ಕಬಳಿಸಿದರು.
ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧನಾ ನೆರವಾದರು. ಇಬ್ಬರೂ ಅಜೇಯ ಅರ್ಧಶತಕ ಬಾರಿಸಿದರು. ಮಂದಾನ 83 ಎಸೆತಗಳಿಂದ 94 ರನ್ ಗಳಿಸಿದರೆ, ಶಫಾಲಿ ವರ್ಮಾ 71 ಎಸತೆಗಳಿಂದ 71 ರನ್ ಬಾರಿಸಿದರು. ಭಾರತ 25.4 ಓವರ್ ಗಳಲ್ಲಿ ಗುರಿ ತಲುಪಿತು. ಮಹಿಳೆಯರ ಏಕದಿನ ಪಂದ್ಯದಲ್ಲಿ ತಂಡವೊಂದು ಯಾವುದೇ ವಿಕೆಟ್ ಕಳೆದುಕೊಳ್ಳದೆ ಇಷ್ಟು ದೊಡ್ಡ ಮೊತ್ತವನ್ನು ಬೆನ್ನಟ್ಟಿ ಗೆಲುವು ಪಡೆದಿರುವುದು ಇದೇ ಮೊದಲು. ಲಂಕಾ ವಿರುದ್ಧ ಭಾರತದ ಪರ ಯಾವುದೇ ವಿಕೆಟ್‌ಗೆ ದಾಖಲಾದ ಅತಿದೊಡ್ಡ ಜೊತೆಯಾಟ ಇದಾಗಿದೆ. ಈ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಮೊದಲ ಏಕದಿನ ಸರಣಿಯಲ್ಲೇ ಹರ್ಮನ್ ಪ್ರೀತ್ ಕೌರ್ ಯಶಸ್ವಿಯಾದರು. ಅದ್ಭುತ ಬೌಲಿಂಗ್ ಪ್ರದರ್ಶಿಸಿದ ರೇಣುಕಾ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.
IND vs ENG: ರೋಚಕ ಘಟ್ಟದತ್ತ ಭಾರತ-ಇಂಗ್ಲೆಂಡ್ ಟೆಸ್ಟ್: ಟೀಮ್ ಇಂಡಿಯಾ ಗೆಲುವಿಗೆ ಬೇಕು ಆಂಗ್ಲರ 7 ವಿಕೆಟ್ಸ್
Published On - 9:45 am, Tue, 5 July 22