ಪ್ರಸ್ತುತ, ನಾವು ವೇಗವಾಗಿ ಹೆಸರು ಮಾಡುತ್ತಿರುವ ಅತ್ಯುತ್ತಮ ವೇಗದ ಬೌಲರ್‌ಗಳ ಬಗ್ಗೆ ಮಾತನಾಡಿದರೆ, ಶಾಹೀನ್ ಶಾ ಆಫ್ರಿದಿ (Shaheen Shah Afridi) ಅದರಲ್ಲಿ ಸ್ಥಾನ ಪಡೆಯುತ್ತಾರೆ. ಈ ಪಾಕಿಸ್ತಾನಿ ಬೌಲರ್ ತನ್ನ ವೇಗ ಮತ್ತು ಸ್ವಿಂಗ್‌ಗೆ ಹೆಸರುವಾಸಿಯಾಗಿದ್ದಾನೆ. ಅನೇಕ ಅನುಭವಿಗಳು ಅವರ ನಿಖರತೆಯನ್ನು ಹೊಗಳುತ್ತಾರೆ. ಆದರೆ ಈ ಬೌಲರ್ ವೇಗದ ಬೌಲಿಂಗ್ ಅನ್ನು ಬಿಟ್ಟು ಸ್ಪಿನ್ ಬೌಲಿಂಗ್ ಕಡೆ ಒಲವು ತೋರಿದರೆ ಪರಿಸ್ಥಿತಿ ಹೇಗಿರಲಿದೆ ಎಂಬುದನ್ನು ಊಹಿಸಿ. ಶಾಹೀನ್ ಸ್ಪಿನ್ ಬೌಲಿಂಗ್ ಮಾಡುವುದನ್ನು ನೋಡುವುದು ಸಹ ಊಹಿಸಲು ಸಾಧ್ಯವಿಲ್ಲ. ಆದರೆ ಈ ಬೌಲರ್ ಸ್ಪಿನ್ನರ್ ಆಗಿ ಬೌಲಿಂಗ್ ಮಾಡುತ್ತಿರುವುದನ್ನು ಕಂಡು ಅನೇಕರು ಬೆಚ್ಚಿ ಬಿದ್ದಿದ್ದಾರೆ. ಶಾಹೀನ್ ವೇಗದ ಬೌಲಿಂಗ್ ಬದಲು ನೆಟ್ಸ್‌ನಲ್ಲಿ ಸ್ಪಿನ್ ಬೌಲಿಂಗ್ ಪ್ರಯತ್ನಿಸಿದ್ದಾರೆ. ಇದರಲ್ಲಿ ಅವರು ಭಾರತದ ರವೀಂದ್ರ ಜಡೇಜಾ (Ravindra Jadeja) ಅವರ ಬೌಲಿಂಗ್ ಶೈಲಿಯನ್ನು ಕಾಪಿ ಮಾಡಲು ಪ್ರಯತ್ನಿಸಿದ್ದಾರೆ.
ಪಾಕಿಸ್ತಾನ ಸದ್ಯ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡುತ್ತಿದೆ. ರಾವಲ್ಪಿಂಡಿಯಲ್ಲಿ ನಡೆದ ಸರಣಿಯ ಮೊದಲ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು. ಎರಡನೇ ಪಂದ್ಯ ಕರಾಚಿಯಲ್ಲಿ ನಡೆಯಲಿದೆ. ಈ ಪಂದ್ಯದ ಮೊದಲು, ಶಾಹೀನ್ ಸ್ಪಿನ್‌ನಲ್ಲಿ ತನ್ನ ಸಾಮಥ್ಯ್ರ ಪ್ರಯತ್ನಿಸಿದರು.
ವಿಡಿಯೋ ವೈರಲ್
ಪಾಕಿಸ್ತಾನ ಕ್ರಿಕೆಟ್ ತಂಡದ ಅಭ್ಯಾಸದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶಾಹೀನ್ ಸ್ಪಿನ್ ಮಾಡುತ್ತಿರುವುದನ್ನು ಕಾಣಬಹುದು. ಅವರು ಎಡಗೈಯಿಂದ ತಮ್ಮ ತಂಡದ ಬ್ಯಾಟ್ಸ್‌ಮನ್‌ಗೆ ಸ್ಪಿನ್ ಎಸೆಯುತ್ತಿದ್ದಾರೆ. ಇದರಲ್ಲಿ ಅವರ ಬೌಲಿಂಗ್ ಶೈಲಿ ಭಾರತದ ಅತ್ಯುತ್ತಮ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಂತೆ ಕಾಣುತ್ತದೆ. ಅನೇಕ ಜನರು ಈ ವೀಡಿಯೊವನ್ನು ಟ್ವೀಟ್ ಮಾಡಿ, ಶಾಹೀನ್ ಅವರ ಸ್ಪಿನ್ ಆಕ್ಷನ್ ಅನ್ನು ಜಡೇಜಾಗೆ ಹೋಲಿಸಿದ್ದಾರೆ.
ಟೆಸ್ಟ್ ಆಲ್ ರೌಂಡರ್ ಶ್ರೇಯಾಂಕದಲ್ಲಿ ಜಡೇಜಾ ನಂಬರ್-1
ಇತ್ತೀಚೆಗಷ್ಟೇ ಐಸಿಸಿ ಬಿಡುಗಡೆ ಮಾಡಿರುವ ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಜಡೇಜಾ ಮೊದಲ ಸ್ಥಾನ ಪಡೆದಿದ್ದಾರೆ. ಶ್ರೀಲಂಕಾ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅವರು ಈ ಬಹುಮಾನ ಪಡೆದಿದ್ದಾರೆ. ಈ ಪಂದ್ಯದಲ್ಲಿ ಜಡೇಜಾ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದರು. ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಅಜೇಯ 175 ರನ್ ಗಳಿಸಿದರು. ಇದರ ನಂತರ ಬೌಲಿಂಗ್ನಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ಗಳನ್ನು ಪಡೆದರೆ ಎರಡನೇ ಇನ್ನಿಂಗ್ಸ್ನಲ್ಲಿ ನಾಲ್ಕು ವಿಕೆಟ್ ಪಡೆದರು. ಒಂದೇ ಪಂದ್ಯದಲ್ಲಿ 150ಕ್ಕೂ ಹೆಚ್ಚು ರನ್ ಗಳಿಸಿದ ಮತ್ತು ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದ ಕೆಲವೇ ಆಲ್‌ರೌಂಡರ್‌ಗಳಲ್ಲಿ ಜಡೇಜಾ ಒಬ್ಬರಾದರು. ಎರಡನೇ ಇನ್ನಿಂಗ್ಸ್‌ನಲ್ಲಿ ಇನ್ನೂ ಒಂದು ವಿಕೆಟ್ ಪಡೆದಿದ್ದರೆ, ಪಂದ್ಯವೊಂದರಲ್ಲಿ 150ಕ್ಕೂ ಹೆಚ್ಚು ರನ್ ಹಾಗೂ 10 ವಿಕೆಟ್ ಪಡೆದ ಮೊದಲ ಆಲ್‌ರೌಂಡರ್ ಎನಿಸಿಕೊಳ್ಳುತ್ತಿದ್ದರು.
ಇದನ್ನೂ ಓದಿ:IND vs SL: ಸಿಕ್ಸರ್ಗಳ ದಾಖಲೆ ಮೇಲೆ ಇಬ್ಬರ ಕಣ್ಣು: ರೋಹಿತ್-ಜಡೇಜಾ ನಡುವೆ ಶುರುವಾಗಿದೆ ಪೈಪೋಟಿ