ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ (India vs New Zealand) ಟಿ20 ಸರಣಿ ವಶಪಡಿಸಿಕೊಂಡ ಬಳಿಕ ಏಕದಿನ ಸರಣಿಯನ್ನೂ ಬಾಚಿಕೊಳ್ಳುವ ಕನಸು ನುಚ್ಚಿನೂರಾಗಿದೆ. ಮೊದಲ ಏಕದಿನದಲ್ಲಿ ಕಿವೀಸ್ ಪಡೆ ಗೆದ್ದು 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿತು. ದ್ವಿತೀಯ ಏಕದಿನ ಪಂದ್ಯ ಪೂರ್ಣಗೊಳ್ಳದೆ ಮಳೆಯಿಂದಾಗಿ ಅರ್ಧಕ್ಕೆ ಮೊಟಕುಗೊಳಿಸ ಬೇಕಾಗಿ ಬಂತು. ಹೀಗಾಗಿ ತೃತೀಯ ಏಕದಿನ ಪಂದ್ಯದ ಮೇಲೆ ಉಭಯ ತಂಡಗಳ ಕಣ್ಣಿದೆ. ಸರಣಿಯನ್ನು ಕನಿಷ್ಠ ಸಮಬಲ ಪಡಿಸಲು ಟೀಮ್ ಇಂಡಿಯಾ (Team India) ಇಲ್ಲಿ ಹೋರಾಟ ನಡೆಸಬೇಕಿದೆ. ಈಗಾಗಲೇ ಮೂರನೇ ಏಕದಿನಕ್ಕಾಗಿ ಕ್ರಿಸ್ಟ್ಚರ್ಚ್ಗೆ (Christchurch) ಬಂದಿಳಿದಿರುವ ಭಾರತ ಅಭ್ಯಾಸ ಕೂಡ ಶುರು ಮಾಡಿದೆ. ಸೋಮವಾರ ಮೂರನೇ ಏಕದಿನ ಪಂದ್ಯ ನಡೆಯಲಿರುವ ಜಾಗಕ್ಕೆ ಬಂದು ವಿಶ್ರಾಂತಿ ಪಡೆದ ಟೀಮ್ ಇಂಡಿಯಾ ಆಟಗಾರರು ಮಂಗಳವಾರ ಬೆಳಗ್ಗೆ 7 ಗಂಟೆ ಹೊತ್ತಿಗೆನೇ ಪ್ರ್ಯಾಕ್ಟೀಸ್ ಶುರು ಮಾಡಿಕೊಂಡಿದ್ದಾರೆ.
ಭಾರತ-ನ್ಯೂಜಿಲೆಂಡ್ 3ನೇ ಏಕದಿನನ ಯಾವಾಗ?:
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಅಂತಿಮ ಏಕದಿನ ಪಂದ್ಯ ನವೆಂಬರ್ 30 ರಂದು ಕ್ರಿಸ್ಟ್ಚರ್ಚ್ನ ಹೇಗ್ಲೆ ಓವಲ್ ಮೈದಾನದಲ್ಲಿ ನಡೆಯಲಿದೆ. ಬಾರತೀಯ ಕಾಲಮಾನದ ಪ್ರಕಾರ ಪಂದ್ಯ ಬೆಳಗ್ಗೆ 7 ಗಂಟೆಗೆ ಶುರುವಾಗಲಿದೆ. 6:30 ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಹೇಗ್ಲೆ ಓವಲ್ ಮೈದಾನದ ಪಿಚ್ ಬ್ಯಾಟರ್ ಮತ್ತು ಬೌಲರ್ ಇಬ್ಬರಿಗೂ ಸಹಾಯ ಮಾಡಲಿದೆ. ಇಲ್ಲಿ 300+ ರನ್ ಸುಲಭವಾಗಿ ಕಲೆಹಾಕಬಹುದು. ವೇಗಿಗಳು ಲೈನ್ ಮತ್ತು ಲೆಂತ್ ಅನ್ನು ಅರಿತು ಬೌಲಿಂಗ್ ಮಾಡಿದರೆ ಬ್ಯಾಟರ್ಗಳು ಪರದಾಡುವುದು ಖಚಿತ. ಭಾರತ ಈ ಮೈದಾನದಲ್ಲಿ ಇದುವರೆಗೆ ಒಂದೂ ಏಕದಿನ ಪಂದ್ಯವನ್ನು ಆಡಿಲ್ಲ. ನ್ಯೂಜಿಲೆಂಡ್ ಆಡಿದ 11 ಪಂದ್ಯಗಳ ಪೈಕಿ 10 ರಲ್ಲಿ ಜಯ ಸಾಧಿಸಿದೆ.
Vijay Hazare Trophy 2022: ಕಾವೇರಪ್ಪ ಕರಾರುವಾಕ್ ದಾಳಿ: ಸೆಮೀಸ್ಗೆ ಕರ್ನಾಟಕ
ಮಳೆಯ ಕಾಟ ಇದೆಯೇ?:
ಭಾರತಕ್ಕೆ ಗೆಲ್ಲಲೇ ಬೇಕಾಗಿರುವ ಮೂರನೇ ಏಕದಿನ ಪಂದ್ಯಕ್ಕೂ ಮಳೆಯ ಕಾಟ ಇರಲಿದೆ ಎಂದು ಹವಾಮಾನ ಇಲಾಖೆ ನೀಡಿರುವ ವರದಿಯಲ್ಲಿದೆ. ಪಂದ್ಯದ ವೇಳೆ ಕ್ರಿಸ್ಟ್ ಚರ್ಚ್ನಲ್ಲಿ ಶೇ. 70ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮಳೆಯಿಂದಾಗಿ ಮೂರನೇ ಏಕದಿನ ಪಂದ್ಯವೂ ರದ್ದಾಗುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಕೊನೆಯ ಪಂದ್ಯ ರದ್ದಾದರೆ 1-0 ಮುನ್ನಡೆ ಪಡೆದುಕೊಂಡಿರುವ ನ್ಯೂಜಿಲೆಂಡ್ಗೆ ಏಕದಿನ ಸರಣಿ ವಲಿಯಲಿದೆ.
ಟೀಮ್ ಇಂಡಿಯಾದಲ್ಲಿ ಬದಲಾವಣೆ?:
ಮೂರನೇ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಅನುಮಾನ. ದ್ವಿತೀಯ ಪಂದ್ಯದಲ್ಲಿ ಆಡಿದ ಆಟಗಾರರೇ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಬೆಂಚ್ ಕಾಯಬೇಕಿದೆ. ಭಾರತದಲ್ಲಿ ಆರನೇ ಬೌಲರ್ ಅವಶ್ಯತೆ ತುಂಬಾ ಇದೆ. ಮೊದಲ ಪಂದ್ಯದಲ್ಲಿ ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಹಲ್, ಶಾರ್ದೂಲ್ ಸೇರಿ ಪ್ರತಿ ಬೌಲರ್ ದುಬಾರಿಯಾದರು. ಹೀಗಾಗಿ ಎರಡನೇ ಏಕದಿನಕ್ಕೆ ಅರನೇ ಬೌಲರ್ ಅಗತ್ಯವಿದ್ದ ಕಾರಣ ಓರ್ವ ಬ್ಯಾಟರ್ ಅನ್ನು ಹೊರಗಿಡುವುದು ಅನಿವಾರ್ಯವಾಗಿತ್ತು. ಹೀಗಾಗಿ ತಂಡದಿಂದ ಸ್ಯಾಮ್ಸನ್ ಅವರನ್ನು ಬಿಟ್ಟರೆ ಮತ್ಯಾರನ್ನು ಹೊರಗಿಡುವ ಸ್ಥಿತಿಯಲ್ಲಿ ಮ್ಯಾನೇಜ್ಮೆಂಟ್ ಇರಲಿಲ್ಲ. ಇದು ತೃತೀಯ ಏಕದಿನಕ್ಕೂ ಮುಂದುವರೆಯಲಿದೆ.
IPL 2023: ಐಪಿಎಲ್ಗೆ 23 ವರ್ಷದ ಹೊಡಿಬಡಿ ದಾಂಡಿಗ ಎಂಟ್ರಿ..!v
ಭಾರತ ಸಂಂಭಾವ್ಯ ಪ್ಲೆಯಿಂಗ್ XI:
ಶಿಖರ್ ಧವನ್ (ನಾಯಕ), ಶುಭ್ಮನನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ದೀಪಕ್ ಚಹರ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:11 am, Tue, 29 November 22