ಸಚಿನ್​ಗೆ ಗಾಯಗೊಳಿಸಲೆಂದೇ ಅಂದು ದಾಳಿಗಿಳಿದಿದ್ದೆ! ಕರಾಚಿ ಟೆಸ್ಟ್ ಘಟನೆ ನೆನೆದ ಪಾಕ್ ವೇಗಿ ಅಖ್ತರ್

| Updated By: ಪೃಥ್ವಿಶಂಕರ

Updated on: Jun 06, 2022 | 3:39 PM

Shoaib Akhtar: ನಾನು ಉದ್ದೇಶಪೂರ್ವಕವಾಗಿ ಸಚಿನ್ ಅವರನ್ನು ಗಾಯಗೊಳಿಸಲು ಬಯಸಿದ್ದೆ. ಆ ಟೆಸ್ಟ್ ಪಂದ್ಯದಲ್ಲಿ ಸಚಿನ್‌ಗೆ ಯಾವುದೇ ಬೆಲೆ ತೆತ್ತಾದರೂ ನೋಯಿಸಲೇಬೇಕು ಎಂದು ನಾನು ನಿರ್ಧರಿಸಿದ್ದೆ.

ಸಚಿನ್​ಗೆ ಗಾಯಗೊಳಿಸಲೆಂದೇ ಅಂದು ದಾಳಿಗಿಳಿದಿದ್ದೆ! ಕರಾಚಿ ಟೆಸ್ಟ್ ಘಟನೆ ನೆನೆದ ಪಾಕ್ ವೇಗಿ ಅಖ್ತರ್
ಸಚಿನ್ ತೆಂಡೂಲ್ಕರ್ ಶೋಯೆಬ್ ಅಖ್ತರ್
Follow us on

ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸಚಿನ್ ತೆಂಡೂಲ್ಕರ್ (Sachin Tendulkar) ಹಾಗೂ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ (Shoaib Akhtar) ಅವರ ಪೈಪೋಟಿ ವಿಚಾರ ಕ್ರಿಕೆಟ್​ ಪ್ರೇಮಿಗಳಿಗೆ ಗೊತ್ತಿರುವ ವಿಚಾರವೇ ಆಗಿದೆ. ಇವರಿಬ್ಬರು ಮುಖಾಮುಖಿಯಾದಾಗಲೆಲ್ಲ ಇಡೀ ಜಗತ್ತಿನ ಕಣ್ಣು ಆ ಪಂದ್ಯದ ಮೇಲಿರುತ್ತಿತ್ತು. ಒಂದು ಕಡೆ ಶೋಯೆಬ್ ಅಖ್ತರ್ ತಮ್ಮ ವೇಗದ ಭಯವನ್ನು ತೋರಿಸುತ್ತಿದ್ದರೆ, ಮತ್ತೊಂದೆಡೆ ಸಚಿನ್ ಅದೇ ವೇಗದಲ್ಲಿ ಚೆಂಡನ್ನು ಬೌಂಡರಿ ಗೆರೆಯಿಂದ ಹೊರಗೆ ಕಳುಹಿಸುತ್ತಿದ್ದರು. ಮಾರಕ ಎಸೆತಗಳಿಗೆ ಅಖ್ತರ್ ಹೆಸರುವಾಸಿಯಾಗಿದ್ದು, ಅವರ ಎಸೆತಗಳಲ್ಲಿ ಹಲವು ಬ್ಯಾಟ್ಸ್‌ಮನ್‌ಗಳು ಗಾಯಗೊಂಡಿದ್ದಾರೆ. ಅದರಲ್ಲಿ ಭಾರತೀಯರೂ ಇದ್ದಾರೆ. ಆದರೆ ಈಗ ಅಖ್ತರ್ ತಮ್ಮ ಮನಸ್ಸಿನಲ್ಲಿ ಸಂಚು ಮಾಡಿಕೊಂಡಿದ್ದ ದೂರಲೋಚನೆಯ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.

ಇದು 2006ರಲ್ಲಿ ಭಾರತದ ಪಾಕ್ ಪ್ರವಾಸದಲ್ಲಿ ನಡೆದ ವಿಷಯವಾಗಿದೆ. ಸರಣಿಯ ಮೂರನೇ ಟೆಸ್ಟ್ ಪಂದ್ಯ ಉಭಯ ತಂಡಗಳ ನಡುವೆ ನಡೆಯುತ್ತಿತ್ತು. ಆ ವೇಳೆ ಇಂಜಮಾಮ್-ಉಲ್-ಹಕ್ ಪಾಕಿಸ್ತಾನದ ನಾಯಕರಾಗಿದ್ದರು. ಈ ಪಂದ್ಯದಲ್ಲಿ, ಅಖ್ತರ್ ಪಾಕ್ ತಂಡದ ಪ್ರಮುಖ ಟ್ರಂಪ್ ಕಾರ್ಡ್​ ಬೌಲರ್ ಆಗಿದ್ದರು. ಭಾರತದ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟುವ ಮನಸ್ಥಿತಿಯೊಂದಿಗೆ ಬೌಲಿಂಗ್​ಗೆ ಇಳಿದ್ದಿದ್ದ ಅಖ್ತರ್ ಸಚಿನ್ ವಿರುದ್ಧ ಮಾತ್ರ ಬೇರೆಯದ್ದೆ ಟಾರ್ಗೆಟ್ ಫಿಕ್ಸ್ ಮಾಡಿಕೊಂಡಿದ್ದರು. ಅದೇನೆಂದರೆ, ಸಚಿನ್​ರನ್ನು ವಜಾ ಮಾಡುವುದಕ್ಕಿಂತ ಹೆಚ್ಷಾಗಿ ಅವರಿಗೆ ಗಾಯಗೊಳಿಸುವುದೇ ಅಖ್ತರ್​​ನ ಉದ್ದೇಶವಾಗಿತ್ತಂತೆ. ಸ್ವತಃ ಈ ವಿಚಾರವನ್ನು ಅಖ್ತರ್ ಅವರೇ ಬಹಿರಂಗಗೊಳಿಸಿದ್ದಾರೆ.

ಇದನ್ನೂ ಓದಿ:Ruturaj Gaikwad: ಐಪಿಎಲ್​ನಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ರುತುರಾಜ್ ಗಾಯಕ್ವಾಡ್

ಇದನ್ನೂ ಓದಿ
SL vs AUS: ಲಂಕಾ ವಿರುದ್ಧದ ಮೊದಲ ಟಿ20ಗೆ ಆಸೀಸ್ ತಂಡ ಪ್ರಕಟ; ಐಪಿಎಲ್ ಫ್ಲಾಪ್ ಸ್ಟಾರ್​ಗಳಿಗೆ ತಂಡದಲ್ಲಿ ಸ್ಥಾನ
ಟ್ಯಾಟೂ ಪ್ರಿಯರ ಕಣ್ಣು ಕುಕ್ಕುತ್ತಿದೆ ಸೂರ್ಯಕುಮಾರ್ ಯಾದವ್ ಹೊಸ ಟ್ಯಾಟೂ; ಫೋಟೋ ನೋಡಿ

ಹೆಲ್ಮೆಟ್ಟೆ ನನ್ನ ಟಾರ್ಗೆಟ್

ಸ್ಪೋರ್ಟ್ಸ್‌ಕೀಡಾದಲ್ಲಿ ಮಾತನಾಡುವಾಗ ಅಖ್ತರ್ ಈ ಮಾಹಿತಿ ಬಹಿರಂಗಪಡಿಸಿದ್ದು, ನಾನು ಮೊದಲ ಬಾರಿಗೆ ಈ ರಹಸ್ಯವನ್ನು ಬಹಿರಂಗಪಡಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ನಾನು ಉದ್ದೇಶಪೂರ್ವಕವಾಗಿ ಸಚಿನ್ ಅವರನ್ನು ಗಾಯಗೊಳಿಸಲು ಬಯಸಿದ್ದೆ. ಆ ಟೆಸ್ಟ್ ಪಂದ್ಯದಲ್ಲಿ ಸಚಿನ್‌ಗೆ ಯಾವುದೇ ಬೆಲೆ ತೆತ್ತಾದರೂ ನೋಯಿಸಲೇಬೇಕು ಎಂದು ನಾನು ನಿರ್ಧರಿಸಿದ್ದೆ. ಆದರೆ ವಿಕೆಟ್‌ಗಳ ಮುಂದೆ ಬೌಲ್ ಮಾಡುವಂತೆ ಇಂಜಮಾಮ್ ನಿರಂತರವಾಗಿ ಹೇಳುತ್ತಿದ್ದರು. ಆದರೆ ನಾನು ಸಚಿನ್ ಅವರನ್ನು ಗಾಯಗೊಳಿಸಲು ಬಯಸಿದ್ದೆ. ಹಾಗಾಗಿ ಸಚಿನ್​ ಹೆಲ್ಮೆಟ್ ಗುರಿಯಾಗಿಸಿಕೊಂಡು ಬೌಲಿಂಗ್ ಮಾಡುತ್ತಿದೆ. ಒಮ್ಮೆ ಬಾಲ್ ಸಚಿನ್ ಹೆಲ್ಮೆಟ್​ಗೆ ತಗುಲಿತ್ತು. ಆ ವೇಳೆ ಸಚಿನ್ ಗಾಯಗೊಂಡಿದ್ದಾರೆ ಎಂದು ನಾನು ಭಾವಿಸಿದೆ. ಆದರೆ ವೀಡಿಯೋ ನೋಡಿದಾಗ ಸಚಿನ್ ಗಾಯದಿಂದ ಬಚಾವ್​ ಆಗಿದ್ದಾರೆ ಎಂಬುದು ತಿಳಿಯಿತು ಎಂದಿದ್ದಾರೆ.

ಆಸಿಫ್ ಸೂಪರ್ ಬೌಲಿಂಗ್

ಒಂದು ತುದಿಯಿಂದ ಸಚಿನ್ ಅವರನ್ನು ಗಾಯಗೊಳಿಸಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದು ತುದಿಯಿಂದ ಮೊಹಮ್ಮದ್ ಆಸಿಫ್ ಮಾರಕ ದಾಳಿಯಿಂದ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡಿದ್ದರು. ನಾನು ಮತ್ತೆ ಸಚಿನ್​ರನ್ನು ನೋಯಿಸಲು ಪ್ರಯತ್ನಿಸಿದೆ ಎಂಬುದನ್ನು ಸಹ ಅಖ್ತರ್ ಬಹಿರಂಗಗೊಳಿಸಿದ್ದಾರೆ.

ಇರ್ಫಾನ್ ಪಠಾಣ್ ಹ್ಯಾಟ್ರಿಕ್ ವಿಕೆಟ್

ಆದರೆ ಅದೇ ಟೆಸ್ಟ್ ಪಂದ್ಯದಲ್ಲಿ ಭಾರತದ ಎಡಗೈ ವೇಗದ ಬೌಲರ್ ಇರ್ಫಾನ್ ಪಠಾಣ್ ಮೊದಲ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಅವರು ಸಲ್ಮಾನ್ ಬಟ್, ಯೂನಿಸ್ ಖಾನ್ ಮತ್ತು ಮೊಹಮ್ಮದ್ ಯೂಸುಫ್ ಅವರನ್ನು ಸತತ ಮೂರು ಎಸೆತಗಳಲ್ಲಿ ಪೆವಿಲಿಯನ್​ಗಟ್ಟಿದರು. ಆದರೆ ಈ ಪಂದ್ಯದಲ್ಲಿ ಭಾರತ ಸೋಲನ್ನು ಎದುರಿಸಬೇಕಾಯಿತು.