IND vs BAN: 3 ಜೀವದಾನ ಸಿಕ್ಕರೂ ಶತಕ ಸಿಡಿಸದ ಶ್ರೇಯಸ್; ಆದರೂ ಎರಡೆರಡು ದಾಖಲೆ ಸೃಷ್ಟಿ..!

Shreyas Iyer: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೇಯಸ್ ಅಯ್ಯರ್ 3 ಜೀವದಾನಗಳನ್ನು ಪಡೆದರು. 30 ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿ ಮೊದಲ ಜೀವದಾನ ಪಡೆದ ಅಯ್ಯರ್, ಇದಾದ ನಂತರ ಸಿಕ್ಕ ಎರಡನೇ ಜೀವದಾನದಿಂದ ಎಲ್ಲರೂ ಆಶ್ಚರ್ಯಚಕಿತರಾದರು.

IND vs BAN: 3 ಜೀವದಾನ ಸಿಕ್ಕರೂ ಶತಕ ಸಿಡಿಸದ ಶ್ರೇಯಸ್; ಆದರೂ ಎರಡೆರಡು ದಾಖಲೆ ಸೃಷ್ಟಿ..!
ಅಯ್ಯರ್​ಗೆ ಸಿಕ್ಕ ಎರಡನೇ ಜೀವದಾನ
Follow us
TV9 Web
| Updated By: ಪೃಥ್ವಿಶಂಕರ

Updated on:Dec 15, 2022 | 12:08 PM

ಭಾರತ ಮತ್ತು ಬಾಂಗ್ಲಾದೇಶ (India and Bangladesh) ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟವನ್ನು ಆರಂಭಿಸಿರುವ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಿಲ್ಲ. ಮೊದಲ ದಿನದಾಟದಲ್ಲಿ 82 ರನ್​ಗಳಿಸಿದ್ದ ಶ್ರೇಯಸ್ ಅಯ್ಯರ್ (Shreyas Iyer), ಎರಡನೇ ದಿನದಾಟದಲ್ಲಿ ಇದನ್ನು ಶತಕವನ್ನಾಗಿ ಪರಿವರ್ತಿಸಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ ಎರಡನೇ ದಿನದಾಟದಲ್ಲಿ ತನ್ನ ಖಾತೆಗೆ 4 ರನ್ ಸೇರಿಸಿದ ಅಯ್ಯರ್ ಬಾಂಗ್ಲಾದೇಶದ ಬೌಲರ್ ಇಬಾದತ್ ಹುಸೇನ್ (Ibadat Hussain) ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಇದರೊಂದಿಗೆ ಬಾಂಗ್ಲಾದೇಶದ ವಿರುದ್ಧ 86 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಅಯ್ಯರ್, ತಮ್ಮ ಟೆಸ್ಟ್ ವೃತ್ತಿಜೀವನದ (Test career) ನಾಲ್ಕನೇ ಅರ್ಧಶತಕವನ್ನು ಪೂರ್ಣಗೊಳಿಸಿದ್ದಾರೆ.

2. ಸಿಕ್ಕ 3 ಜೀವದಾನಗಳ ಸದುಪಯೋಗ ಮಾಡಿಕೊಳ್ಳಲಿಲ್ಲ

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೇಯಸ್ ಅಯ್ಯರ್ 3 ಜೀವದಾನಗಳನ್ನು ಪಡೆದರು. 30 ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿ ಮೊದಲ ಜೀವದಾನ ಪಡೆದ ಅಯ್ಯರ್, ಇದಾದ ನಂತರ ಸಿಕ್ಕ ಎರಡನೇ ಜೀವದಾನದಿಂದ ಎಲ್ಲರೂ ಆಶ್ಚರ್ಯಚಕಿತರಾದರು. ಏಕೆಂದರೆ ಬಾಂಗ್ಲಾ ವೇಗಿ ಇಬಾದತ್ ಹುಸೇನ್ ಎಸೆದ ಚೆಂಡು ಅಯ್ಯರ್ ಅವರ ಬ್ಯಾಟ್ ತಪ್ಪಿಸಿಕೊಂಡು ಸೀದಾ ವಿಕೆಟ್​ಗೆ ಬಡಿಯಿತು. ಚೆಂಡು ಬಡಿದ ತಕ್ಷಣ ವಿಕೆಟ್​ನಲ್ಲಿ ಲೈಟ್​ ಕೂಡ ಆನ್​ ಆಯಿತು, ಬೆಲ್ಸ್ ಸಹ ಚದುರಿದವು. ಆದರೆ ಚದುರಿದ ಬೆಲ್ಸ್​ಗಳು ನೆಲಕ್ಕೆ ಬೀಳಲಿಲ್ಲ. ಹೀಗಾಗಿ ಅಯ್ಯರ್ ಔಟಾಗುವುದರಿಂದ ಪಾರಾದರು. ಆ ಸಮಯದಲ್ಲಿ ಅಯ್ಯರ್ 67 ರನ್‌ ಗಳಿಸಿದ್ದರು.

ನ್ಯೂಜಿಲ್ಯಾಂಡ್ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದ ಕೇನ್ ವಿಲಿಯಮ್ಸನ್

ಮೊದಲ ದಿನದಾಟದಲ್ಲಿ ಎರಡು ಜೀವದಾನಗಳನ್ನು ಪಡೆದಿದ್ದ ಅಯ್ಯರ್, ಎರಡನೇ ದಿನದಾಟದಲ್ಲೂ ಮತ್ತೊಂದು ಜೀವದಾನ ಪಡೆದರು. 82 ರನ್​ಗಳಿಂದ ಎರಡನೇ ದಿನದಾಟ ಆರಂಭಿಸಿದ ಅಯ್ಯರ್, ವೈಯಕ್ತಿಕ 85 ರನ್​ ಗಳಿಸಿದ್ದಾಗ, ಇಬಾದತ್ ಹುಸೇನ್ ಎಸೆತದಲ್ಲಿ ಮತ್ತೊಂದು ಕ್ಯಾಚ್ ನೀಡಿದರು. ಆದರೆ ಕ್ಯಾಚ್ ಹಿಡಿಯುವಲ್ಲಿ ಎದುರಾಳಿ ತಂಡ ವಿಫಲವಾಯಿತು. ಈ ಮೂಲಕ ಅಯ್ಯರ್​ಗೆ ಒಂದೇ ಇನ್ನಿಂಗ್ಸ್​ನಲ್ಲಿ ಮೂರು ಮೂರು ಜೀವದಾನಗಳು ಸಿಕ್ಕವು. ಆದರೆ ಸಿಕ್ಕ ಈ ಜೀವದಾನವನ್ನು ಅಯ್ಯರ್ ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ಮೂರನೇ ಜೀವದಾನದ ನಂತರ ತನ್ನ ಖಾತೆಗೆ ಕೇವಲ 1 ರನ್ ಸೇರಿಸಿದ ಅಯ್ಯರ್ ಅಂತಿಮವಾಗಿ ಬೌಲ್ಡ್ ಆಗಿ ತಮ್ಮ ವಿಕೆಟ್ ಒಪ್ಪಿಸಿದರು. ಈ ಪಂದ್ಯದಲ್ಲಿ ಶತಕವಂಚಿತರಾದರೂ ಕೂಡ ಅಯ್ಯರ್ ಎರಡೆರಡು ದಾಖಲೆಗಳನ್ನು ಬರೆದರು.

3. ಶ್ರೇಯಸ್ ಅಯ್ಯರ್ ಮೊದಲ ದಾಖಲೆ

ಚಟ್ಟೋಗ್ರಾಮ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ವಂಚಿತರಾದ ಶ್ರೇಯಸ್ ಅಯ್ಯರ್, ಟೆಸ್ಟ್ ಕ್ರಿಕೆಟ್‌ನ ಮೊದಲ 10 ಇನ್ನಿಂಗ್ಸ್‌ಗಳಲ್ಲಿ ಎರಡಂಕ್ಕಿ ಸ್ಕೋರ್ ಮಾಡಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಅಂದರೆ ಅವರು ಈ 10 ಇನ್ನಿಂಗ್ಸ್​ಗಳಲ್ಲಿ ಒಮ್ಮೆಯೂ 10 ರನ್​ ಒಳಗೆ ತಮ್ಮ ವಿಕೆಟ್ ಒಪ್ಪಿಸಿಲ್ಲ. ಈ 10 ಇನ್ನಿಂಗ್ಸ್‌ಗಳಲ್ಲಿ ಅಯ್ಯರ್ 4 ಅರ್ಧ ಶತಕ ಮತ್ತು 1 ಶತಕ ಗಳಿಸಿದ್ದಾರೆ.

4. ಶ್ರೇಯಸ್ ಅಯ್ಯರ್ ಎರಡನೇ ದಾಖಲೆ

ಶ್ರೇಯಸ್ ಅಯ್ಯರ್ 2022 ರಲ್ಲಿ ಬಾಂಗ್ಲಾದೇಶ ವಿರುದ್ಧ 86 ರನ್ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ  ಅಯ್ಯರ್, ಈ ವರ್ಷದಲ್ಲಿ ಇದುವರೆಗೆ 1424 ಅಂತಾರಾಷ್ಟ್ರೀಯ ರನ್ ಗಳಿಸಿದ್ದ ಸೂರ್ಯಕುಮಾರ್ ಯಾದವ್ ಅವರನ್ನು ಹಿಂದಿಕ್ಕಿದ್ದಾರೆ. ಶ್ರೇಯಸ್ ಅಯ್ಯರ್ ಈಗ 1500 ರನ್ ಗಳಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:18 am, Thu, 15 December 22

ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ