IPL 2023 Mini Auction: ಮಿನಿ ಹರಾಜಿನಲ್ಲಿ 405 ಆಟಗಾರರು; ಯಾವ ತಂಡದಲ್ಲಿ ಎಷ್ಟು ಹಣವಿದೆ? ಇಲ್ಲಿದೆ ವಿವರ

IPL 2023 Mini Auction: ಎಲ್ಲಾ 10 ಫ್ರಾಂಚೈಸಿಗಳನ್ನು ಒಳಗೊಂಡಂತೆ, ಒಟ್ಟು 87 ಸ್ಲಾಟ್‌ಗಳಿವೆ. ಇದರಲ್ಲಿ 30 ಸ್ಲಾಟ್‌ಗಳು ವಿದೇಶಿ ಆಟಗಾರರಿಗೆ ಸಿಮೀತವಾಗಿದೆ. ಅಂದರೆ, ಹರಾಜಿನಲ್ಲಿ ಒಟ್ಟು 87 ಆಟಗಾರರು ಖರೀದಿಯಾಗಲಿದ್ದಾರೆ.

IPL 2023 Mini Auction: ಮಿನಿ ಹರಾಜಿನಲ್ಲಿ 405 ಆಟಗಾರರು; ಯಾವ ತಂಡದಲ್ಲಿ ಎಷ್ಟು ಹಣವಿದೆ? ಇಲ್ಲಿದೆ ವಿವರ
IPL auction
Follow us
TV9 Web
| Updated By: ಪೃಥ್ವಿಶಂಕರ

Updated on:Dec 15, 2022 | 11:12 AM

ಎಲ್ಲಾ 10 ಫ್ರಾಂಚೈಸಿಗಳು ಐಪಿಎಲ್ 2023 ರ ಮಿನಿ ಹರಾಜಿಗೆ (IPL 2023 Mini Auction) ಸಜ್ಜಾಗಿವೆ. ಈ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಬೇಕಾದ ಆಟಗಾರರನ್ನು ಖರೀದಿಸಲು ತಂತ್ರ ರೂಪಿಸಿವೆ. ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, 400ಕ್ಕೂ ಹೆಚ್ಚು ಆಟಗಾರರು ಈ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಐಪಿಎಲ್, ಒಟ್ಟು 405 ಕ್ರಿಕೆಟಿಗರಿನ್ನು ಹರಾಜು ಪ್ರಕ್ರಿಯೆಗೆ ಆಯ್ಕೆ ಮಾಡಿದೆ. ಆರಂಭದಲ್ಲಿ, 10 ಫ್ರಾಂಚೈಸಿಗಳು 991 ಆಟಗಾರರ ಪೈಕಿ 369 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿದ್ದವು. ಆದರೆ ನಂತರ ತಂಡದ ಇಚ್ಛೆಯ ಮೇರೆಗೆ 36 ಆಟಗಾರರನ್ನು ಈ ಪಟ್ಟಿಗೆ ಸೇರಿಸಲಾಯಿತು. ಈ ಮೂಲಕ ಒಟ್ಟು 405 ಆಟಗಾರರು ಈ ಬಾರಿಯ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಿನಿ ಹರಾಜಿಗೆ ಆಯ್ಕೆಯಾದ 405 ಮಂದಿಯಲ್ಲಿ 273 ಮಂದಿ ಭಾರತೀಯ ಆಟಗಾರರಾಗಿದ್ದರೆ, 132 ಮಂದಿ ವಿದೇಶಿ ಆಟಗಾರರಾಗಿದ್ದಾರೆ. 132 ವಿದೇಶಿ ಆಟಗಾರರ ಪೈಕಿ 4 ಆಟಗಾರರು ಅಸೋಸಿಯೇಟ್ ನೇಷನ್‌ನವರು. ಒಟ್ಟು 119 ಕ್ಯಾಪ್ಡ್ ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಮತ್ತು 282 ಅನ್ ಕ್ಯಾಪ್ಡ್ ಆಟಗಾರರಿದ್ದಾರೆ.

ಐಪಿಎಲ್​ ತಂಡವನ್ನೇ ಖರೀದಿಸುವ ಸಾಮರ್ಥ್ಯ ಹೊಂದಿರುವ ಮೆಸ್ಸಿ ಎಷ್ಟು ಸಾವಿರ ಕೋಟಿಯ ಒಡೆಯ ಗೊತ್ತಾ?

2. 1 ಕೋಟಿ ಮೂಲ ಬೆಲೆಯಲ್ಲಿ ಮಯಾಂಕ್

ಎಲ್ಲಾ 10 ಫ್ರಾಂಚೈಸಿಗಳನ್ನು ಒಳಗೊಂಡಂತೆ, ಒಟ್ಟು 87 ಸ್ಲಾಟ್‌ಗಳಿವೆ. ಇದರಲ್ಲಿ 30 ಸ್ಲಾಟ್‌ಗಳು ವಿದೇಶಿ ಆಟಗಾರರಿಗೆ ಸಿಮೀತವಾಗಿದೆ. ಅಂದರೆ, ಹರಾಜಿನಲ್ಲಿ ಒಟ್ಟು 87 ಆಟಗಾರರು ಖರೀದಿಯಾಗಲಿದ್ದಾರೆ. ಹರಾಜಿನಲ್ಲಿ ಅತ್ಯಧಿಕ ಮೂಲ ಬೆಲೆ 2 ಕೋಟಿ ರೂ.ಗಳಾಗಿದ್ದು, ಇದರಡಿಯಲ್ಲಿ 19 ವಿದೇಶಿ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. 1.5 ಕೋಟಿ ಮೂಲ ಬೆಲೆಯಲ್ಲಿ 11 ಆಟಗಾರರಿದ್ದಾರೆ. 20 ಆಟಗಾರರು 1 ಕೋಟಿ ರೂ ಮೂಲ ಬೆಲೆಯೊಂದಿಗೆ ಹರಾಜಿಗೆ ಪ್ರವೇಶಿಸಲಿದ್ದು, ಇದರಲ್ಲಿ ಮನೀಶ್ ಪಾಂಡೆ ಮತ್ತು ಮಯಾಂಕ್ ಅಗರ್ವಾಲ್ ಇಬ್ಬರು ಭಾರತೀಯರಾಗಿದ್ದಾರೆ.

3. ಹೈದರಾಬಾದ್​ ಮೇಲೆ ಎಲ್ಲರ ಕಣ್ಣು

ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ 2023 ಮಿನಿ ಹರಾಜಿನಲ್ಲಿ ಹೆಚ್ಚು ಆಟಗಾರರನ್ನು ಖರೀದಿಸುವ ಸಾಧ್ಯತೆಗಳಿವೆ. ಏಕೆಂದರೆ ಮಿನಿ ಹರಾಜಿಗೂ ಮುನ್ನ ಈ ಫ್ರಾಂಚೈಸಿ, ನಾಯಕ ಕೇನ್ ವಿಲಿಯಮ್ಸನ್ ಸೇರಿದಂತೆ ಹಲವು ಪ್ರಮುಖ ಆಟಗಾರರನ್ನು ತಂಡದಿಂದ ಹೊರಹಾಕಿತ್ತು. ಈ ಮೂಲಕ ಹೈದರಾಬಾದ್ ತನ್ನ ಪರ್ಸ್‌ನಲ್ಲಿ ಹೆಚ್ಚು ಹಣವನ್ನು ಉಳಿಸಿಕೊಂಡಿದೆ. ಅವರ ಬಳಿ ಈಗ ಉಳಿದಿರುವ ಹಣ ಒಟ್ಟು 42.25 ಕೋಟಿ ರೂ. ಇಷ್ಟೇ ಅಲ್ಲ, ಅವರು ತಮ್ಮ ತಂಡವನ್ನು ಪೂರ್ಣಗೊಳಿಸಲು 13 ಆಟಗಾರರನ್ನು ಖರೀದಿಸಬೇಕಾಗುತ್ತದೆ. ಇದರಲ್ಲಿ 4 ಸ್ಲಾಟ್‌ಗಳು ವಿದೇಶಿ ಆಟಗಾರರಿಗೆ ಮೀಸಲಿದೆ. ಹೈದರಾಬಾದ್ ನಂತರ ಪಂಜಾಬ್ ಕಿಂಗ್ಸ್ ತಮ್ಮ ಪರ್ಸ್‌ನಲ್ಲಿ ಹೆಚ್ಚು ಹಣವನ್ನು ಹೊಂದಿದೆ. ಪಂಜಾಬ್ ಕಿಂಗ್ಸ್ ಬಳಿ ಒಟ್ಟು 32.2 ಕೋಟಿ ರೂಪಾಯಿ ಇದ್ದು, ಹರಾಜಿನಲ್ಲಿ 3 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 9 ಆಟಗಾರರನ್ನು ಖರೀದಿಸಲಿದೆ.

4. ಎಲ್ಲಾ ತಂಡಗಳ ವಿವರ ಇಲ್ಲಿದೆ

ಫ್ರಾಂಚೈಸಿ

ಬಾಕಿ ಉಳಿದಿರುವ ಹಣ ಖರೀದಿಸಬೇಕಾದ ಆಟಗಾರರ ಸಂಖ್ಯೆ ಖಾಲಿ ಇರುವ ವಿದೇಶಿ ಆಟಗಾರರ ಸ್ಲಾಟ್
ಚೆನ್ನೈ ಸೂಪರ್ ಕಿಂಗ್ಸ್ 20.45 ಕೋಟಿ. ರೂ 7

2

ದೆಹಲಿ ಕ್ಯಾಪಿಟಲ್ಸ್

19.45 ಕೋಟಿ. ರೂ 5 2
ಗುಜರಾತ್ ಟೈಟಾನ್ಸ್ 19.25 ಕೋಟಿ. ರೂ 7

3

ಕೋಲ್ಕತ್ತಾ ನೈಟ್ ರೈಡರ್ಸ್

7.05 ಕೋಟಿ. ರೂ 11 3
ಲಕ್ನೋ ಸೂಪರ್ ಜೈಂಟ್ಸ್ 23.35 ಕೋಟಿ. ರೂ 10

4

ಮುಂಬೈ ಇಂಡಿಯನ್ಸ್

20.55 ಕೋಟಿ. ರೂ 9 3
ಪಂಜಾಬ್ ಕಿಂಗ್ಸ್ 32.2 ಕೋಟಿ. ರೂ 9

3

ರಾಯಲ್ ಚಾಲೆಂಜರ್ಸ್ ಬೆಂಗಳೂರು

8.75 ಕೋಟಿ. ರೂ 7 2
ರಾಜಸ್ಥಾನ್ ರಾಯಲ್ಸ್ 13.2 ಕೋಟಿ. ರೂ 9

4

ಸನ್​ರೈಸರ್ಸ್​ ಹೈದರಾಬಾದ್

42.25 ಕೋಟಿ. ರೂ 13

4

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:08 am, Thu, 15 December 22

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ