
18ನೇ ಆವೃತ್ತಿಯಲ್ಲೂ ಟ್ರೋಫಿ ಎತ್ತಿಹಿಡಿಯುವ ಪಂಜಾಬ್ ಕಿಂಗ್ಸ್ (PBKS) ಕನಸು ಕೊನೆಗೂ ನನಸಾಗಲಿಲ್ಲ. ಆರ್ಸಿಬಿ (RCB) ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದ ಪಂಜಾಬ್ ತಂಡ 6 ರನ್ಗಳಿಂದ ಸೋತು ಟ್ರೋಫಿಯಿಂದ ವಂಚಿತವಾಯಿತು. ಆದಾಗ್ಯೂ ತಂಡವನ್ನು ಅಗ್ರಸ್ಥಾನಕ್ಕೇರಿಸಿ 14 ವರ್ಷಗಳ ನಂತರ ಫೈನಲ್ಗೆ ಕೊಂಡೊಯ್ದ ಶ್ರೇಯ ನಾಯಕ ಶ್ರೇಯಸ್ಗೆ ಸಲ್ಲುತ್ತದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಶ್ರೇಯಸ್ ಆಡಿದ ಇನ್ನಿಂಗ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಆದರೆ ಅದೇ ಪ್ರದರ್ಶನವನ್ನು ಫೈನಲ್ ಪಂದ್ಯದಲ್ಲಿ ನೀಡಲು ಸಾಧ್ಯವಾಗಲಿಲ್ಲ. ತಂಡದ ಸೋಲಿಗೆ ಇದು ಒಂದು ಕಾರಣವಾಯಿತು. ಈ ನಿರ್ಣಾಯಕ ಪಂದ್ಯದಲ್ಲಿ ಶ್ರೇಯಸ್ ಕೇವಲ 1 ರನ್ಗೆ ಸುಸ್ತಾಗಿದ್ದರು.
ಪ್ರಸ್ತುತ ಐಪಿಎಲ್ ಮುಗಿಸಿರುವ ಶ್ರೇಯಸ್, ಭಾರತ ಟೆಸ್ಟ್ ತಂಡದಲ್ಲಿ ಆಯ್ಕೆಯಾಗಿಲ್ಲ. ಹೀಗಾಗಿ ಅವರು ದೇಶೀ ಟಿ20 ಲೀಗ್ ಮುಂಬೈ ಟಿ20 ಲೀಗ್‌ನಲ್ಲಿ ಸೋಬೊ ಮುಂಬೈ ಫಾಲ್ಕನ್ಸ್ ತಂಡದ ನಾಯಕರಾಗಿ ಆಡುತ್ತಿದ್ದಾರೆ. ಜೂನ್ 6 ರ ಶುಕ್ರವಾರದಂದು ನಡೆದ ಟ್ರಯಂಫ್ಸ್ ನೈಟ್ಸ್ ವಿರುದ್ಧದ ಪಂದ್ಯದಲ್ಲಿ ಅಯ್ಯರ್ ತಂಡ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ಅಯ್ಯರ್ ಅವರಿಂದ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಐಪಿಎಲ್ ಫೈನಲ್‌ನಂತೆಯೇ ಈ ಲೀಗ್ನಲ್ಲೂ ಅಯ್ಯರ್ ರನ್ ಗಳಿಸಲು ಇಲ್ಲಿಯೂ ವಿಫಲರಾಗಿ 19 ಎಸೆತಗಳಲ್ಲಿ ಕೇವಲ 13 ರನ್ ಗಳಿಸಿ ಔಟಾದರು.
IPL 2025 Final: ಶ್ರೇಯಸ್ ಅಯ್ಯರ್ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿ ರಜತ್ ಪಟಿದಾರ್
10 ನೇ ಓವರ್‌ನ ಕೊನೆಯ ಎಸೆತದಲ್ಲಿ ಅಯ್ಯರ್ ಔಟಾದಾಗ, ತಂಡದ ಸ್ಕೋರ್ ಕೇವಲ 75 ರನ್‌ಗಳಾಗಿದ್ದು, 4 ವಿಕೆಟ್‌ಗಳು ಬಿದ್ದಿದ್ದವು. ಆದರೆ ಇದರ ಹೊರತಾಗಿಯೂ, ತಂಡವು ಪಂದ್ಯವನ್ನು 4 ವಿಕೆಟ್‌ಗಳಿಂದ ಗೆದ್ದಿತು. ಇದಕ್ಕೆ ಕಾರಣ ಯುವ ಬ್ಯಾಟ್ಸ್‌ಮನ್ ಅಂಗ್‌ಕ್ರಿಶ್ ರಘುವಂಶಿ, ಅವರು ಕೇವಲ 25 ಎಸೆತಗಳಲ್ಲಿ 42 ರನ್ ಗಳಿಸಿದರು. ವಿನಾಯಕ್ ನಾರಾಯಣ್ ಕೂಡ 21 ಎಸೆತಗಳಲ್ಲಿ 33 ರನ್‌ಗಳ ಇನ್ನಿಂಗ್ಸ್ ಆಡಿದರೆ, ಆಕಾಶ್ ಪ್ರವೀಣ್ ಕೂಡ ಅಜೇಯ 30 ರನ್ ಗಳಿಸಿ ತಂಡವನ್ನು 146 ರನ್‌ಗಳ ಗುರಿ ಮುಟ್ಟಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:53 pm, Fri, 6 June 25