IPL 2025: ಐಪಿಎಲ್ ಫೈನಲ್ ಸೋಲಿನ ಬಗ್ಗೆ ಕೊನೆಗೂ ಮೌನ ಮುರಿದ ಪ್ರೀತಿ ಜಿಂಟಾ
Preity Zinta's Emotional Post: ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ 2025ರ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತರೂ, ಅದ್ಭುತ ಪ್ರದರ್ಶನ ನೀಡಿದೆ. ತಂಡದ ಮಾಲಕಿ ಪ್ರೀತಿ ಜಿಂಟಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದು, ತಂಡದ ಹೋರಾಟ ಮತ್ತು ಭಾರತೀಯ ಅನ್‌ಕ್ಯಾಪ್ಡ್ ಆಟಗಾರರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ಫೈನಲ್ ಸೋಲಿನ ಹೊರತಾಗಿಯೂ, ಮುಂದಿನ ವರ್ಷ ಬಲಿಷ್ಠವಾಗಿ ಮರಳುವ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಐಪಿಎಲ್ 2025 (IPL 2025) ರ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು (PBKS vs RCB) ವಿರುದ್ಧ 6 ರನ್‌ಗಳಿಂದ ಸೋತು ಚೊಚ್ಚಲ ಟ್ರೋಫಿಯನ್ನು ಎತ್ತಿ ಹಿಡಿಯುವುದರಿಂದ ವಂಚಿತವಾಯಿತು. ಆದಾಗ್ಯೂ ಇಡೀ ಆವೃತ್ತಿಯಲ್ಲಿ ತಂಡದ ಪ್ರದರ್ಶನ ಆಮೋಘವಾಗಿತ್ತು. ತಂಡದ ಒಡತಿ ಮತ್ತು ಬಾಲಿವುಡ್ ನಟಿ ಪ್ರೀತಿ ಜಿಂಟಾ ಕೂಡ ಟೂರ್ನಿಯೂದ್ದಕ್ಕೂ ತಂಡದ ಯಶಸ್ಸಿಗೆ ಸಾಕಷ್ಟು ಶ್ರಮಿಸಿದರು. ಆದಾಗ್ಯೂ ತಂಡಕ್ಕೆ ಫೈನಲ್ ಗೆಲ್ಲಲು ಸಾಧ್ಯಾವಗಲಿಲ್ಲ. ಇದೀಗ ಇದೇ ಮೊದಲ ಬಾರಿಗೆ ಪ್ರೀತಿ ಜಿಂಟಾ (Preity Zinta) ಫೈನಲ್ ಸೋಲಿನ ಬಗ್ಗೆ ಮೌನ ಮುರಿದಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಭಾವನಾತ್ಮಕ ಮತ್ತು ಸ್ಪೂರ್ತಿದಾಯಕ ಸಂದೇಶವನ್ನು ಹಂಚಿಕೊಂಡಿರುವ ಅವರು ತಮ್ಮ ತಂಡದ ಧೈರ್ಯ ಮತ್ತು ಚೈತನ್ಯವನ್ನು ಶ್ಲಾಘಿಸಿದ್ದಾರೆ. ಈ ಪ್ರಯಾಣ ಹಾಗೆ ಕೊನೆಗೊಂಡಿಲ್ಲ. ಭಾರತದ ಅನ್‌ಕ್ಯಾಪ್ಡ್ ಆಟಗಾರರು ಅದ್ಭುತ ಆಟವನ್ನು ತೋರಿಸಿದ್ದಾರೆ ಎಂದು ಪ್ರೀತಿ ಜಿಂಟಾ ಬರೆದುಕೊಂಡಿದ್ದಾರೆ.
ಮನರಂಜನೆ ಮತ್ತು ಸ್ಪೂರ್ತಿದಾಯಕವಾಗಿತ್ತು
ತಮ್ಮ ಎಕ್ಸ್ ಖಾತೆಯಲ್ಲಿ ಪ್ರೀತಿ ಜಿಂಟಾ, ‘ನಾವು ಬಯಸಿದ ರೀತಿಯಲ್ಲಿ ಅಂತ್ಯಗೊಳ್ಳಲಿಲ್ಲ, ಆದರೆ… ಈ ಪ್ರಯಾಣ ಅದ್ಭುತವಾಗಿತ್ತು! ಇದು ರೋಮಾಂಚಕಾರಿ, ಮನರಂಜನೆ ಮತ್ತು ಸ್ಪೂರ್ತಿದಾಯಕವಾಗಿತ್ತು. ನಮ್ಮ ಯುವ ತಂಡ, ನಮ್ಮ ಸಿಂಹಗಳ ಹೋರಾಟ ಮತ್ತು ಉತ್ಸಾಹ ನನಗೆ ತುಂಬಾ ಇಷ್ಟವಾಯಿತು. ನಮ್ಮ ನಾಯಕ ಮುನ್ನಡೆಸಿದ ರೀತಿ ಮತ್ತು ನಮ್ಮ ಭಾರತೀಯ ಅನ್‌ಕ್ಯಾಪ್ಡ್ ಆಟಗಾರರು ಈ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ರೀತಿ ನನಗೆ ತುಂಬಾ ಇಷ್ಟವಾಯಿತು’ ಎಂದು ಬರೆದುಕೊಂಡಿದ್ದಾರೆ.
It didn’t end the way we wanted it to but….the journey was spectacular ! It was exciting, entertaining & it was inspiring. I loved the fight & the grit our young team, our shers showed throughout the tournament. I loved the way our captain, our Sarpanch lead from the front &… pic.twitter.com/kUtRs908aS
— Preity G Zinta (@realpreityzinta) June 6, 2025
ಪಂಜಾಬ್ ಕಿಂಗ್ಸ್ ಪ್ರಯಾಣ
ಈ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪ್ರದರ್ಶನವವು ಏರಿಳಿತಗಳಿಂದ ಕೂಡಿತ್ತು. ಬಹಳ ವರ್ಷಗಳ ಬಳಿಕ ಮೊದಲ ಬಾರಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಸಾಧನೆ ಮಾಡಿದ ಪಂಜಾಬ್, ಹಿಡಿದು ಆಟಗಾರರ ಗಾಯ, ವೇಳಾಪಟ್ಟಿಯಲ್ಲಿನ ಅಡಚಣೆ, ತವರು ಮೈದಾನಗಳ ಸ್ಥಳಾಂತರದಂತಹ ಅನೇಕ ಸವಾಲುಗಳನ್ನು ಎದುರಿಸಿಯೂ ಅಮೋಘ ಪ್ರದರ್ಶನ ನೀಡಿತು. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ, ಪಂಜಾಬ್ 11 ವರ್ಷಗಳ ನಂತರ ಪ್ಲೇಆಫ್‌ಗೆ ತಲುಪಿತು. ಆದರೆ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಬಗ್ಗೆಯೂ ಬರೆದುಕೊಂಡಿರುವ ಪ್ರೀತಿ, ಪಂಜಾಬ್ ಕಿಂಗ್ಸ್‌ನ ಪ್ರಯಾಣ ಇನ್ನೂ ಮುಗಿದಿಲ್ಲ. ಮುಂದಿನ ವರ್ಷ ಈ ತಂಡವು ಬಲಿಷ್ಠವಾಗಿ ಮರಳುತ್ತದೆ ಮತ್ತು ಅಪೂರ್ಣ ಕೆಲಸವನ್ನು ಪೂರ್ಣಗೊಳಿಸುತ್ತದೆ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
