AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್ ಫೈನಲ್ ಸೋಲಿನ ಆಘಾತದಿಂದ ಹೊರಬಂದಿಲ್ವ ಶ್ರೇಯಸ್ ಅಯ್ಯರ್?

Shreyas Iyer's Low Scores: ಐಪಿಎಲ್ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸೋಲಿನ ನಂತರ, ಶ್ರೇಯಸ್ ಅಯ್ಯರ್ ಮುಂಬೈ ಟಿ20 ಲೀಗ್‌ನಲ್ಲಿ ಕೂಡ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ಐಪಿಎಲ್ ಫೈನಲ್‌ನಲ್ಲಿ ಕೇವಲ 1 ರನ್ ಗಳಿಸಿದ ಅವರು, ಮುಂಬೈ ಟಿ20 ಲೀಗ್ ಪಂದ್ಯದಲ್ಲಿ 19 ಎಸೆತಗಳಲ್ಲಿ 13 ರನ್ ಮಾತ್ರ ಗಳಿಸಿ ಔಟಾದರು. ಆದರೂ, ಅವರ ತಂಡವು ಯುವ ಆಟಗಾರರ ಅದ್ಭುತ ಪ್ರದರ್ಶನದಿಂದ ಗೆಲುವು ಸಾಧಿಸಿತು.

ಐಪಿಎಲ್ ಫೈನಲ್ ಸೋಲಿನ ಆಘಾತದಿಂದ ಹೊರಬಂದಿಲ್ವ ಶ್ರೇಯಸ್ ಅಯ್ಯರ್?
Shreyas Iyer
ಪೃಥ್ವಿಶಂಕರ
|

Updated on:Jun 06, 2025 | 10:55 PM

Share

18ನೇ ಆವೃತ್ತಿಯಲ್ಲೂ ಟ್ರೋಫಿ ಎತ್ತಿಹಿಡಿಯುವ ಪಂಜಾಬ್ ಕಿಂಗ್ಸ್ (PBKS) ಕನಸು ಕೊನೆಗೂ ನನಸಾಗಲಿಲ್ಲ. ಆರ್​ಸಿಬಿ (RCB) ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದ ಪಂಜಾಬ್ ತಂಡ 6 ರನ್​ಗಳಿಂದ ಸೋತು ಟ್ರೋಫಿಯಿಂದ ವಂಚಿತವಾಯಿತು. ಆದಾಗ್ಯೂ ತಂಡವನ್ನು ಅಗ್ರಸ್ಥಾನಕ್ಕೇರಿಸಿ 14 ವರ್ಷಗಳ ನಂತರ ಫೈನಲ್​ಗೆ ಕೊಂಡೊಯ್ದ ಶ್ರೇಯ ನಾಯಕ ಶ್ರೇಯಸ್​ಗೆ ಸಲ್ಲುತ್ತದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಶ್ರೇಯಸ್ ಆಡಿದ ಇನ್ನಿಂಗ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಆದರೆ ಅದೇ ಪ್ರದರ್ಶನವನ್ನು ಫೈನಲ್ ಪಂದ್ಯದಲ್ಲಿ ನೀಡಲು ಸಾಧ್ಯವಾಗಲಿಲ್ಲ. ತಂಡದ ಸೋಲಿಗೆ ಇದು ಒಂದು ಕಾರಣವಾಯಿತು. ಈ ನಿರ್ಣಾಯಕ ಪಂದ್ಯದಲ್ಲಿ ಶ್ರೇಯಸ್ ಕೇವಲ 1 ರನ್​ಗೆ ಸುಸ್ತಾಗಿದ್ದರು.

ಮುಂಬೈ ಟಿ20 ಲೀಗ್​ನಲ್ಲಿ ಶ್ರೇಯಸ್ ಫೇಲ್

ಪ್ರಸ್ತುತ ಐಪಿಎಲ್ ಮುಗಿಸಿರುವ ಶ್ರೇಯಸ್, ಭಾರತ ಟೆಸ್ಟ್ ತಂಡದಲ್ಲಿ ಆಯ್ಕೆಯಾಗಿಲ್ಲ. ಹೀಗಾಗಿ ಅವರು ದೇಶೀ ಟಿ20 ಲೀಗ್ ಮುಂಬೈ ಟಿ20 ಲೀಗ್​ನಲ್ಲಿ ಸೋಬೊ ಮುಂಬೈ ಫಾಲ್ಕನ್ಸ್ ತಂಡದ ನಾಯಕರಾಗಿ ಆಡುತ್ತಿದ್ದಾರೆ. ಜೂನ್ 6 ರ ಶುಕ್ರವಾರದಂದು ನಡೆದ ಟ್ರಯಂಫ್ಸ್ ನೈಟ್ಸ್ ವಿರುದ್ಧದ ಪಂದ್ಯದಲ್ಲಿ ಅಯ್ಯರ್ ತಂಡ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ಅಯ್ಯರ್ ಅವರಿಂದ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಐಪಿಎಲ್ ಫೈನಲ್‌ನಂತೆಯೇ ಈ ಲೀಗ್​ನಲ್ಲೂ ಅಯ್ಯರ್ ರನ್​ ಗಳಿಸಲು ಇಲ್ಲಿಯೂ ವಿಫಲರಾಗಿ 19 ಎಸೆತಗಳಲ್ಲಿ ಕೇವಲ 13 ರನ್ ಗಳಿಸಿ ಔಟಾದರು.

IPL 2025 Final: ಶ್ರೇಯಸ್ ಅಯ್ಯರ್ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿ ರಜತ್ ಪಟಿದಾರ್

ಆದಾಗ್ಯೂ ಗೆದ್ದ ತಂಡ

10 ನೇ ಓವರ್‌ನ ಕೊನೆಯ ಎಸೆತದಲ್ಲಿ ಅಯ್ಯರ್ ಔಟಾದಾಗ, ತಂಡದ ಸ್ಕೋರ್ ಕೇವಲ 75 ರನ್‌ಗಳಾಗಿದ್ದು, 4 ವಿಕೆಟ್‌ಗಳು ಬಿದ್ದಿದ್ದವು. ಆದರೆ ಇದರ ಹೊರತಾಗಿಯೂ, ತಂಡವು ಪಂದ್ಯವನ್ನು 4 ವಿಕೆಟ್‌ಗಳಿಂದ ಗೆದ್ದಿತು. ಇದಕ್ಕೆ ಕಾರಣ ಯುವ ಬ್ಯಾಟ್ಸ್‌ಮನ್ ಅಂಗ್‌ಕ್ರಿಶ್ ರಘುವಂಶಿ, ಅವರು ಕೇವಲ 25 ಎಸೆತಗಳಲ್ಲಿ 42 ರನ್ ಗಳಿಸಿದರು. ವಿನಾಯಕ್ ನಾರಾಯಣ್ ಕೂಡ 21 ಎಸೆತಗಳಲ್ಲಿ 33 ರನ್​ಗಳ ಇನ್ನಿಂಗ್ಸ್ ಆಡಿದರೆ, ಆಕಾಶ್ ಪ್ರವೀಣ್ ಕೂಡ ಅಜೇಯ 30 ರನ್ ಗಳಿಸಿ ತಂಡವನ್ನು 146 ರನ್‌ಗಳ ಗುರಿ ಮುಟ್ಟಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:53 pm, Fri, 6 June 25

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?