AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಶುಭ್​ಮನ್ ಗಿಲ್ ದ್ವಿಶತಕ; 587 ರನ್​ಗಳಿಗೆ ಟೀಂ ಇಂಡಿಯಾ ಆಲೌಟ್

India Dominates Edgbaston Test: ಎಡ್ಜ್ಬಾಸ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಶುಭ್ಮನ್ ಗಿಲ್ ಅವರ 269 ರನ್‌ಗಳ ಅದ್ಭುತ ಇನ್ನಿಂಗ್ಸ್‌ನ ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ 587 ರನ್‌ ಕಲೆಹಾಕಿದೆ. ಈ ಇನ್ನಿಂಗ್ಸ್ನಲ್ಲಿ ಗಿಲ್ ಹೊರತುಪಡಿಸಿ ಜಡೇಜಾ (89) ಮತ್ತು ಜೈಸ್ವಾಲ್ (87) ಕೂಡ ಅರ್ಧಶತಕ ಗಳಿಸಿದರು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್, ಜೋಶ್ ಟಂಗ್ ಮತ್ತು ಶೋಯೆಬ್ ಬಶೀರ್ ತಲಾ 2 ವಿಕೆಟ್ ಪಡೆದರು.

IND vs ENG: ಶುಭ್​ಮನ್ ಗಿಲ್ ದ್ವಿಶತಕ; 587 ರನ್​ಗಳಿಗೆ ಟೀಂ ಇಂಡಿಯಾ ಆಲೌಟ್
Team India
ಪೃಥ್ವಿಶಂಕರ
|

Updated on:Jul 03, 2025 | 9:22 PM

Share

ಎಡ್ಜ್‌ಬಾಸ್ಟನ್​ನಲ್ಲಿ (Edgbaston Test)  ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ, ನಾಯಕ ಶುಭ್​ಮನ್ ಗಿಲ್ (Shubman Gill) ಅವರ ದ್ವಿಶತಕ ಹಾಗೂ ರವೀಂದ್ರ ಜಡೇಜಾ (Ravindra Jadeja) ಮತ್ತು ಯಶಸ್ವಿ ಜೈಸ್ವಾಲ್ ಅವರ ಅರ್ಧಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ 587 ರನ್ ಕಲೆಹಾಕಿದೆ. ಮೊದಲ ಇನ್ನಿಂಗ್ಸ್​ನಲ್ಲಿ ನಾಯಕ ಗಿಲ್ 269 ರನ್​ಗಳ ಇನ್ನಿಂಗ್ಸ್ ಆಡಿದರೆ, ಆಲ್‌ರೌಂಡರ್ ರವೀಂದ್ರ ಜಡೇಜಾ 89 ರನ್ ಹಾಗೂ ಯಶಸ್ವಿ ಜೈಸ್ವಾಲ್ 87 ರನ್​ಗಳ ಕಾಣಿಕೆ ನೀಡಿದರು. ಇತ್ತ ಇಂಗ್ಲೆಂಡ್‌ ಪರ ಶೊಯೆಬ್ ಬಶೀರ್ 3 ವಿಕೆಟ್ ಪಡೆದರೆ, ಕ್ರಿಸ್ ವೋಕ್ಸ್, ಜೋಶ್ ಟಂಗ್  ತಲಾ 2 ವಿಕೆಟ್ ಕಬಳಿಸಿದರು.

ಭಾರತಕ್ಕೆ ಕಳಪೆ ಆರಂಭ

ಟಾಸ್ ಸೋತು ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾದ ಆರಂಭ ಚೆನ್ನಾಗಿರಲಿಲ್ಲ. ಓಪನರ್ ಕೆಎಲ್ ರಾಹುಲ್ ಕೇವಲ 2 ರನ್ ಗಳಿಸಿ ಔಟಾದರು. ರಾಹುಲ್ ನಂತರ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದ ಕರುಣ್ ನಾಯರ್ ಕೂಡ ಕೇವಲ 31 ರನ್ ಗಳಿಸಿ ನಿರ್ಗಮಿಸಿದರು. ಹೀಗಾಗಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ನಾಯಕ ಶುಭ್​ಮನ್ ಗಿಲ್ ಜವಾಬ್ದಾರಿಯನ್ನು ವಹಿಸಿಕೊಂಡರು.

ಜೈಸ್ವಾಲ್- ಗಿಲ್ ಜೊತೆಯಾಟ

ಕರುಣ್ ನಾಯರ್ ಔಟಾದ ನಂತರ, ಯಶಸ್ವಿ ಜೈಸ್ವಾಲ್ ಕೂಡ ಶತಕದ ಸಮೀಪ ತಲುಪಿದ ನಂತರ ತಮ್ಮ ವಿಕೆಟ್ ಕಳೆದುಕೊಂಡರು. ಈ ರೀತಿಯಾಗಿ, ಶುಭ್​ಮನ್ ಜೊತೆಗೆ ಉಪನಾಯಕ ರಿಷಭ್ ಪಂತ್ ಮೇಲಿನ ಜವಾಬ್ದಾರಿ ಹೆಚ್ಚಾಯಿತು, ಆದರೆ ಅವರ ಕೆಟ್ಟ ಶಾಟ್ ಇಂಗ್ಲೆಂಡ್ ಮೇಲುಗೈ ಸಾಧಿಸುವಂತೆ ಮಾಡಿತು. ಹೆಡಿಂಗ್ಲೆ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ರಿಷಭ್ ಪಂತ್ ಬರ್ಮಿಂಗ್‌ಹ್ಯಾಮ್‌ನಲ್ಲೂ ಉತ್ತಮ ಲಯದಲ್ಲಿದ್ದರು, ಆದರೆ ಶೋಯೆಬ್ ಬಶೀರ್ ಅವರ ಎಸೆತದಲ್ಲಿ ಅನಗತ್ಯ ಸಿಕ್ಸರ್ ಬಾರಿಸಲು ಹೋಗಿ ತಮ್ಮ ವಿಕೆಟ್ ಅನ್ನು ಉಡುಗೊರೆಯಾಗಿ ನೀಡಿದರು. ಇದರ ಪರಿಣಾಮವಾಗಿ ಟೀಂ ಇಂಡಿಯಾ 208 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತು.

ಗಿಲ್- ಜಡೇಜಾ ದ್ವಿಶತಕದ ಜೊತೆಯಾಟ

ತನ್ನ ಎರಡನೇ ದಿನದಾಟವನ್ನು ಮುಂದುವರೆಸಿತು. ಈ ವೇಳೆ ನಾಯಕ ಗಿಲ್​ಗೆ ಉತ್ತಮ ಸಾಥ್ ನೀಡಿದ ರವೀಂದ್ರ ಜಡೇಜಾ ಶತಕ ವಂಚಿತರಾದರೂ ತಂಡವನ್ನು 400 ರನ್​ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಹಾಗೆಯೇ ಇಬ್ಬರಿಬ್ಬರ ನಡುವೆ 6ನೇ ವಿಕೆಟ್​ಗೆ 213 ರನ್​ಗಳ ಜೊತೆಯಾಟ ಕೂಡ ಮೂಡಿಬಂತು. ಆದಾಗ್ಯೂ ಜಡೇಜಾ ತಮ್ಮ ಇನ್ನಿಂಗ್ಸ್​ನಲ್ಲಿ 137 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 89 ರನ್ ಬಾರಿಸಿ ಔಟಾದರು. ಜಡೇಜಾ ಔಟಾದ ಬಳಿಕ ಬಂದ ವಾಷಿಂಗ್ಟನ್ ಸುಂದರ್, ನಾಯಕನಿಗೆ ಬೆಂಬಲವಾಗಿ ನಿಂತರು.

IND vs ENG: ಇಂಗ್ಲೆಂಡ್‌ ನೆಲದಲ್ಲಿ ಐತಿಹಾಸಿಕ ದಾಖಲೆ ಸೃಷ್ಟಿಸಿದ ಶುಭ್​ಮನ್ ಗಿಲ್

ಗಿಲ್​ಗೆ ಸಾಥ್ ನೀಡಿದ ಸುಂದರ್

ಜಡೇಜಾ ವಿಕೆಟ್ ಪತನದ ನಂತರ ಬಂದ ವಾಷಿಂಗ್ಟನ್ ಸುಂದರ್ ಕೂಡ ಗಿಲ್ ಜೊತೆಗೆ ಶತಕದ ಜೊತೆಯಾಟ ನಡೆಸಿದರು. ವಾಷಿಂಗ್ಟನ್ ಸುಂದರ್ 42 ರನ್ ಬಾರಿಸಿ ಔಟಾಗುವುದರೊಂದಿಗೆ ತಂಡದ ಪೆವಿಲಿಯನ್ ಪರೇಡ್ ಕೂಡ ಶುರುವಾಯಿತು. ಆದಾಗ್ಯೂ ನಾಯಕನಾಗಿ ಜವಬ್ದಾರಿಯುತ ಬ್ಯಾಟಿಂಗ್‌ ಮಾಡಿದ ಗಿಲ್, ತಂಡದ ಮೊತ್ತ 574 ರನ್​ಗಳಿರುವಾಗ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಟೀಂ ಇಂಡಿಯಾ 587 ರನ್​ಗಳಿಗೆ ಆಲೌಟ್ ಆಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:14 pm, Thu, 3 July 25