ಒಂದೇ ಹೋಟೆಲ್ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಸಾರಾ- ಶುಭ್‌ಮನ್; ಗಿಲ್ ಮಾಡಿದ ಪೋಸ್ಟ್ ಸಖತ್ ವೈರಲ್
Shubman Gill: ವಾಸ್ತವವಾಗಿ ಶುಭ್‌ಮನ್ ಗಿಲ್ ಅವರ ಹೆಸರೂ ಸಾರಾ ತೆಂಡೂಲ್ಕರ್ ಜೊತೆಗೆ, ಸಾರಾ ಅಲಿ ಖಾನ್ ಅವರೊಂದಿಗೂ ತಳುಕು ಹಾಕಿಕೊಂಡಿದೆ.

ಟೀಂ ಇಂಡಿಯಾದ ಯಂಗ್ ಸೆನ್ಸೇಶನ್ ಶುಭ್‌ಮನ್ ಗಿಲ್ (Shubman Gill) ಕ್ರಿಕೆಟ್ ಹೊರತಾಗಿ ತಮ್ಮ ವೈಯಕ್ತಿಕ ಜೀವನದಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಕ್ರಿಕೆಟ್ ಹೊರತಾಗಿ ಪ್ರೀತಿ ಪ್ರೇಮ ವಿಚಾರದಲ್ಲಿ ಈ ಯುವ ಕ್ರಿಕೆಟಿಗನ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಸದಾ ಹರಿದಾಡುತ್ತಿರುತ್ತದೆ. ಕೆಲವು ದಿನಗಳಿಂದ ಶುಭ್‌ಮನ್ ಗಿಲ್ ಅವರ ಹೆಸರು ಸಾರಾ ಅಲಿ ಖಾನ್ (Sara Ali Khan) ಅವರೊಂದಿಗೆ ತಳುಕು ಹಾಕಿಕೊಂಡಿತ್ತು. ಆದರೆ ಇದೀಗ ಶುಭಮನ್ ಗಿಲ್ ಯಾರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ವಾಸ್ತವವಾಗಿ, ಇತ್ತೀಚೆಗೆ, ಪ್ರೇಮಿಗಳ ದಿನದಂದು ಗಿಲ್ ಇನ್ಸ್ಟಾಗ್ರಾಮ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ಕೂಡ ಕೆಲವು ದಿನಗಳ ಹಿಂದೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಈ ಇಬ್ಬರ ಪೋಸ್ಟ್ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಯೊಂದು ಹುಟ್ಟಿಕೊಂಡಿದ್ದು, ಸಾರಾ ತೆಂಡೂಲ್ಕರ್ ಜೊತೆ ಗಿಲ್ ಡೇಟಿಂಗ್ ಮಾಡುತ್ತಿದ್ದಾರಾ ಎಂಬ ಚರ್ಚೆ ಶುರುವಾಗಿದೆ.
ಗಿಲ್ ಪೋಸ್ಟ್ನಲ್ಲಿ ಏನಿದೆ?
ವಾಸ್ತವವಾಗಿ ಗಿಲ್ ತಮ್ಮ ಫೋಟೋವೊಂದನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ರೆಸ್ಟೋರೆಂಟ್ ಅಥವಾ ಕೆಫೆಯಲ್ಲಿ ಕುಳಿತಿರುವುದನ್ನು ಕಾಣಬಹುದಾಗಿದೆ. ಇದರಲ್ಲಿ ಗಿಲ್ ಕಾಫಿ ಹಿರುತ್ತಿರುವುದನ್ನು ಕಾಣಬಹುದಾಗಿದೆ. ಈ ಫೋಟೋವನ್ನು ಹಂಚಿಕೊಂಡಿರುವ ಗಿಲ್, ‘ಹಾಗಾದರೆ ಇಂದು ಯಾವ ದಿನ?’ ಎಂಬ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
View this post on Instagram
ಸಾರಾ ತೆಂಡೂಲ್ಕರ್ ಪೋಸ್ಟ್ನಲ್ಲಿ ಏನಿದೆ?
ಕೆಲವು ತಿಂಗಳ ಹಿಂದೆ ಅಂದರೆ ಜುಲೈ 2021 ರಲ್ಲಿ ಸಾರಾ ತೆಂಡೂಲ್ಕರ್ ಸಹ ಫೋಟೋವನ್ನು ಹಂಚಿಕೊಂಡಿದ್ದು, ‘ಹೇ ಸಿರಿ, ನನ್ನ ಊಟ ಎಲ್ಲಿದೆ?’ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದರು. ಆದರೆ ಸಾರಾ ಮತ್ತು ಶುಭ್‌ಮನ್ ಹಂಚಿಕೊಂಡಿರುವ ಫೋಟೋವನ್ನು ಗಮನಿಸಿದರೆ, ಈ ಫೋಟೋಗಳಲ್ಲಿ ಕಂಡುಬರುವ ಹಿನ್ನೆಲೆ ಚಿತ್ರ ಒಂದೇ ಆಗಿದೆ. ಈಗ ಈ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋವನ್ನು ನೋಡಿದ ಅಭಿಮಾನಿಗಳು ಸಾರಾ ತೆಂಡೂಲ್ಕರ್ ಮತ್ತು ಗಿಲ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಊಹಿಸಲಾರಂಭಿಸಿದ್ದಾರೆ.
View this post on Instagram
ಸಾರಾ ಅಲಿ ಖಾನ್ ಜೊತೆಗೆ ಗಿಲ್ ಹೆಸರು
ವಾಸ್ತವವಾಗಿ ಶುಭ್‌ಮನ್ ಗಿಲ್ ಅವರ ಹೆಸರೂ ಸಾರಾ ತೆಂಡೂಲ್ಕರ್ ಜೊತೆಗೆ, ಸಾರಾ ಅಲಿ ಖಾನ್ ಅವರೊಂದಿಗೂ ತಳುಕು ಹಾಕಿಕೊಂಡಿದೆ. ಈ ಹಿಂದೆ ಶುಭಮನ್ ಗಿಲ್ ಫೀಲ್ಡಿಂಗ್ ಮಾಡುವ ವೇಳೆ ಅಭಿಮಾನಿಗಳು ಸಾರಾ-ಸಾರಾ ಎಂದು ಕೂಗಿದ್ದರು. ಇದಕ್ಕೂ ಮೊದಲು, ಶುಭಮನ್ ಗಿಲ್ ಅವರು ಸೋನಮ್ ಬಾಜ್ವಾ ಅವರ ಟಾಕ್ ಶೋಗೆ ಬಂದಿದ್ದರು. ಆ ವೇಳೆ ಬಾಲಿವುಡ್‌ನ ಫಿಟೆಸ್ಟ್ ನಟಿ ಯಾರು ಎಂದು ಶುಭ್‌ಮನ್ ಬಳಿ ಕೇಳಿದಾಗ, ಅದಕ್ಕೆ ಗಿಲ್, ಸಾರಾ ಅಲಿ ಖಾನ್ ಎಂದಿದ್ದರು. ಇಲ್ಲಿಂದಲೇ ಅವರು ಸಾರಾ ಅಲಿ ಖಾನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರಾ ಎಂಬ ಗುಸುಗುಸು ಕೇಳಲಾರಂಭಿಸಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:11 pm, Wed, 15 February 23
