ವಿಶ್ವದ ನಂಬರ್ 1 ಟಿ20 ಬೌಲರ್ ಸೋಫಿ ಎಕ್ಲೆಸ್ಟೋನ್ ( Sophie Ecclestone) ಸೋಮವಾರ ತಮ್ಮ ಬ್ಯಾಟ್‌ನಿಂದ ಅದ್ಭುತ ಪ್ರದರ್ಶನ ನೀಡಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸೋಫಿ ಕೇವಲ 12 ಎಸೆತಗಳಲ್ಲಿ 33 ರನ್ ಗಳಿಸುವ ಮೂಲಕ ತನ್ನ ತಂಡದ ಗೆಲುವನ್ನು ನಿರ್ಧರಿಸಿದರು. ಎಕ್ಲೆಸ್ಟೋನ್ ಕೊನೆಯ ಓವರ್‌ನಲ್ಲಿ 26 ರನ್ ಗಳಿಸಿದರು. ಅದರ ಆಧಾರದ ಮೇಲೆ ಇಂಗ್ಲೆಂಡ್ 20 ಓವರ್‌ಗಳಲ್ಲಿ 176 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು ಮತ್ತು ಕೊನೆಯಲ್ಲಿ ದಕ್ಷಿಣ ಆಫ್ರಿಕಾ 38 ರನ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು. T20 ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ ಇಂಗ್ಲೆಂಡ್, ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (Commonwealth Games) ಚಿನ್ನದ ಪದಕವನ್ನು ತನ್ನ ಬಲವಾಗಿ ಪ್ರದರ್ಶಿಸಿತು.
ಸೋಫಿ ಎಕ್ಲೆಸ್ಟೋನ್ ಅಬ್ಬರ
ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಮಸಾಬತ್ ಕ್ಲಾಸ್ ಅವರನ್ನು ತೀವ್ರವಾಗಿ ಸೋಫಿ ಎಕ್ಲೆಸ್ಟೋನ್ ದಂಡಿಸಿದರು. ಎಕ್ಲೆಸ್ಟೋನ್ ಕ್ಲಾಸ್ ಓವರ್‌ನಲ್ಲಿ 3 ಬೌಂಡರಿ, 2 ಸಿಕ್ಸರ್‌ಗಳ ನೆರವಿನಿಂದ 26 ರನ್ ಗಳಿಸಿದರು. ಎಕ್ಲೆಸ್ಟೋನ್ ಕ್ಲಾಸ್‌ನ ಮೊದಲ ಎರಡು ಎಸೆತಗಳಲ್ಲಿ ಎರಡು ಬೌಂಡರಿಗಳನ್ನು ಬಾರಿಸಿದರು. ಮೂರನೇ ಎಸೆತದಲ್ಲಿ ಎರಡು ರನ್ ಗಳಿಸಿದರು. ನಾಲ್ಕನೇ ಎಸೆತದಲ್ಲಿ ಎಕ್ಲೆಸ್ಟೋನ್ ಸಿಕ್ಸರ್ ಬಾರಿಸಿದರು. ಮತ್ತೊಮ್ಮೆ ಐದನೇ ಎಸೆತದಲ್ಲಿ ಎಕ್ಲೆಸ್ಟೋನ್ ಒಂದು ಬೌಂಡರಿ ಹೊಡೆದರು. ನಂತರ ಅವರು ಸಿಕ್ಸರ್ನೊಂದಿಗೆ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು. 19 ಓವರ್‌ಗಳ ನಂತರ ಇಂಗ್ಲೆಂಡ್ ಸ್ಕೋರ್ ಕೇವಲ 150 ರನ್ ಆಗಿತ್ತು, ಆದರೆ 20 ನೇ ಓವರ್‌ನ ನಂತರ ತಂಡದ ಸ್ಕೋರ್ 176 ತಲುಪಿತು.
26 runs from the final over!
An entertaining cameo from @sophecc19 last night ? pic.twitter.com/pyRusOtVrk
— England Cricket (@englandcricket) July 26, 2022
ಎಕ್ಲೆಸ್ಟೋನ್ ಚೆಂಡಿನಲ್ಲೂ ಅದ್ಭುತ ಪ್ರದರ್ಶನ
ಇದಾದ ಬಳಿಕ ಎಕ್ಲೆಸ್ಟೋನ್ ಬೌಲಿಂಗ್ನಲ್ಲೂ ಬಲ ತೋರಿದರು. ಈ ಎಡಗೈ ನಂ.1 ಟಿ20 ಬೌಲರ್ 4 ಓವರ್‌ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದರು. ಈ ಪ್ರದರ್ಶನದ ಆದಾರದ ಮೇಲೆ ಎಕ್ಲೆಸ್ಟೋನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ದಕ್ಷಿಣ ಆಫ್ರಿಕಾದ ಬೌಲರ್‌ಗಳ ಕಳಪೆ ಪ್ರದರ್ಶನ
ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20ಯಲ್ಲಿ ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ಗಳು ಹೀನಾಯ ಪ್ರದರ್ಶನ ನೀಡಿದರು. ಅದರಲ್ಲೂ ಮಸಾಬಟಾ ಕ್ಲಾಸ್ 4 ಓವರ್‌ಗಳಲ್ಲಿ 62 ರನ್ ಬಿಟ್ಟುಕೊಟ್ಟರು. ಈ ವೇಗಿ 24 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ತಿಂದರು. ಅಯಾಬೊಂಗೆ ಖಾಕಾ 4 ಓವರ್‌ಗಳಲ್ಲಿ 33 ರನ್ ನೀಡಿದರು. ಡೆಲ್ಮಿ ಟಕರ್ 31 ರನ್ ನೀಡಿದರು. ಇಂಗ್ಲೆಂಡ್ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾ ತಂಡವು ಏಕದಿನ ಮತ್ತು ಟಿ 20 ಸರಣಿಯಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಏಕದಿನ ಸರಣಿಯ ಎಲ್ಲಾ ಮೂರು ಪಂದ್ಯಗಳನ್ನು ಇಂಗ್ಲೆಂಡ್ ಏಕಪಕ್ಷೀಯ ರೀತಿಯಲ್ಲಿ ಗೆದ್ದಿದೆ. ಟಿ20 ಸರಣಿಯಲ್ಲೂ ಕೂಡ ಅದೇ ನಡೆದಿದೆ. ಮೊದಲೆರಡು ಟಿ20 ಪಂದ್ಯಗಳನ್ನು ತಲಾ 6 ವಿಕೆಟ್‌ಗಳಿಂದ ಗೆದ್ದುಕೊಂಡ ಇಂಗ್ಲೆಂಡ್ ಕೊನೆಯ ಪಂದ್ಯವನ್ನು 38 ರನ್‌ಗಳಿಂದ ಗೆದ್ದುಕೊಂಡಿತು.