Sourav Ganguly: ‘ದಾದಾಗಿರಿ’… 125 ಕೋಟಿ ರೂ. ಡೀಲ್ ಕುದುರಿಸಿದ ಸೌರವ್ ಗಂಗೂಲಿ

Sourav Ganguly: ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಈ ಹಿಂದೆ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಆ ಬಳಿಕ ಅವರು ಝೀ ಬಾಂಗ್ಲಾ ಚಾನೆಲ್​ನಲ್ಲಿ ಕ್ವಿಝ್ ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಂಡಿದ್ದರು. ಇದೀಗ ಗಂಗೂಲಿ ಹೊಸ ಚಾನೆಲ್​ನತ್ತ ಮುಖ ಮಾಡಿದ್ದಾರೆ.

Sourav Ganguly: ದಾದಾಗಿರಿ... 125 ಕೋಟಿ ರೂ. ಡೀಲ್ ಕುದುರಿಸಿದ ಸೌರವ್ ಗಂಗೂಲಿ
Sourav Ganguly

Updated on: Apr 23, 2025 | 11:54 AM

ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಟಿವಿ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಕಾರ್ಯ ನಿರ್ವಹಿಸುತ್ತಿರುವುದು ಗೊತ್ತೇ ಇದೆ. ಈ ಹಿಂದೆ ಝೀ ಬಾಂಗ್ಲಾ ಚಾನೆಲ್​ನಲ್ಲಿ ಗಂಗೂಲಿ ‘ದಾದಾಗಿರಿ’ ಹೆಸರಿನ ರಸಪ್ರಶ್ನೆ ಕಾರ್ಯಕ್ರಮವನ್ನು ನಿರೂಪಿಸಿದ್ದರು. ಇದೀಗ ಝೀ ಬಾಂಗ್ಲಾ ಚಾನೆಲ್​ನಿಂದ ಹೊರಬಂದಿರುವ ಗಂಗೂಲಿ, ಸ್ಟಾರ್ ಜಲ್ಶಾ ಚಾನೆಲ್​ ಜೊತೆ ಹೊಸ ಒಪ್ಪಂದ ಮಾಡಿಕೊಂಢಿದ್ದಾರೆ. ಅದು ಕೂಡ ಬರೋಬ್ಬರಿ 125 ಕೋಟಿ ರೂ. ಡೀಲ್​ನೊಂದಿಗೆ ಎಂಬುದು ವಿಶೇಷ.

ಸ್ಟಾರ್ ಜಲ್ಶಾ ಚಾನೆಲ್​ ಬಂಗಾಳಿ ಚಾನೆಲ್​ನಲ್ಲಿ ಬಿಗ್ ಬಾಸ್ ಅನ್ನು ಆಯೋಜಿಸಲಿದ್ದು, ಇದರ ನಿರೂಪಕರಾಗಿ ಸೌರವ್ ಗಂಗೂಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದಕ್ಕಾಗಿ ಗಂಗೂಲಿ ಜೊತೆ 125 ಕೋಟಿ ರೂ.ಗಳಿಗೆ 4 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ವರದಿಯಾಗಿದೆ.

ಹಾಗೆಯೇ ಸ್ಟಾರ್ ಜಲ್ಶಾ ಚಾನೆಲ್​ನಲ್ಲಿ ಹೊಸ ರಸಪ್ರಶ್ನೆ ಕಾರ್ಯಕ್ರಮವನ್ನು ಸಹ ಪ್ರಸ್ತುತಪಡಿಸಲಿದೆ. ಈ ಎರಡೂ ಕಾರ್ಯಕ್ರಮಗಳು ಮುಂದಿನ ವರ್ಷದಿಂದ ಪ್ರಸಾರವಾಗಲಿದ್ದು, ಇದರ ನಿರ್ಮಾಣ ಕಾರ್ಯವು ಜುಲೈ 2025 ರಿಂದ ಪ್ರಾರಂಭವಾಗಲಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ
PSL 2025: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ RCB ಮಾಜಿ ಆಟಗಾರರು
ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
ಕ್ರಿಸ್​ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಉಲ್ಟಾ ಹೊಡೆದ RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು

ಈ ಡೀಲ್ ಬಗ್ಗೆ ಮಾತನಾಡಿದ ಸೌರವ್ ಗಂಗೂಲಿ, ಸ್ಟಾರ್ ಜಲ್ಶಾ ಜೊತೆ ಸಂಬಂಧ ಹೊಂದಲು ತುಂಬಾ ಸಂತೋಷವಾಗಿದೆ. ನಾವು ಒಟ್ಟಾಗಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇವೆ. ನವೀನ ಕಾಲ್ಪನಿಕವಲ್ಲದ ಕಾರ್ಯಕ್ರಮಗಳ ಮೂಲಕ ನಿಮ್ಮೆಲ್ಲರ ಮುಂದೆ ಬರಲಿದ್ದೇವೆ ಎಂದು ತಿಳಿಸಿದ್ದಾರೆ.

ಸೌರವ್ ಗಂಗೂಲಿ ಭಾರತದ ಮಾಜಿ ನಾಯಕ. 52 ವರ್ಷದ ಗಂಗೂಲಿ 2021 ರಲ್ಲಿ ಮೊದಲ ಬಾರಿಗೆ ಐಸಿಸಿ ಕ್ರಿಕೆಟ್ ಸಮಿತಿಯ ಅಧ್ಯಕ್ಷರಾದರು. ಈ ವರ್ಷ ಅವರು ಆ ಸ್ಥಾನಕ್ಕೆ ಮರು ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ಟಿವಿ ಕಾರ್ಯಕ್ರಮಗಳಲ್ಲೂ ದಾದಾ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗನ ಪುತ್ರ, ಸರ್ಫರಾಝ್​ ಖಾನ್ ಗೆಳತಿ..!

ಇನ್ನು ಟೀಮ್ ಇಂಢಿಯಾ ಪರ 113 ಟೆಸ್ಟ್ ಮತ್ತು 311 ಏಕದಿನ ಪಂದ್ಯಗಳನ್ನು ಆಡಿರುವ ಸೌರವ್ ಗಂಗೂಲಿ, 18000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈ ವೇಳೆ ಅವರ ಬ್ಯಾಟ್​ನಿಂದ ಒಟ್ಟು 38 ಶತಕಗಳು ಮೂಡಿಬಂದಿದ್ದವು.