ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗನ ಪುತ್ರ, ಸರ್ಫರಾಝ್ ಖಾನ್ ಗೆಳತಿ..!
Sanjay Bangar Daughter: ಸಂಜಯ್ ಬಂಗಾರ್ ಟೀಮ್ ಇಂಡಿಯಾ ಪರ 12 ಟೆಸ್ಟ್, 15 ಏಕದಿನ ಪಂದ್ಯಗಳನ್ನಾಡಿದ್ದಾರೆ. ಹಾಗೆಯೇ ಭಾರತ ತಂಡದ ಬ್ಯಾಟಿಂಗ್ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೆ ಆರ್ಸಿಬಿ ಸೇರಿದಂತೆ ಒಂದಷ್ಟು ತಂಡಗಳ ಮುಖ್ಯ ಕೋಚ್ ಹುದ್ದೆಯಲ್ಲಿಯೂ ಕಾಣಿಸಿಕೊಂಡಿದ್ದಾರೆ. ತಂದೆಯಂತೆ ಕ್ರಿಕೆಟಿಗನಾಗಬೇಕೆಂದು ಕನಸು ಕಂಡಿದ್ದ ಬಂಗಾರ್ ಅವರ ಪುತ್ರ ಇದೀಗ ಪುತ್ರಿಯಾಗಿ ಬದಲಾಗಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್ (Sanjay Bangar) ಅವರ ಪುತ್ರ ಆರ್ಯನ್ ಹುಡುಗಿಯಾಗಿ ಬದಲಾಗಿದ್ದು ಗೊತ್ತೇ ಇದೆ. ಇದೀಗ ಹುಡುಗನಿಂದ ಹುಡುಗಿಯಾಗಿ ರೂಪಾಂತರಗೊಂಡಿರುವ ಆರ್ಯನ್ ತನ್ನ ಹೆಸರನ್ನು ಅನಯಾ ಎಂದು ಬದಲಿಸಿಕೊಂಡಿದ್ದಾರೆ. ಈ ಹೆಸರು ಬದಲಾವಣೆಯೊಂದಿಗೆ ಭಾರತಕ್ಕೆ ಬಂದಿರುವ ಅನಯಾ ಇದೀಗ ತನ್ನ ಬಾಲ್ಯದ ಗೆಳೆಯ ಸರ್ಫರಾಝ್ ಖಾನ್ ಅವರನ್ನು ಭೇಟಿಯಾಗಿದ್ದಾರೆ.
1 / 6
ಟೀಮ್ ಇಂಡಿಯಾ ಆಟಗಾರ ಸರ್ಫರಾಝ್ ಖಾನ್ ಹಾಗೂ ಆರ್ಯನ್ (ಅನಯಾ) ಜೊತೆಯಾಗಿ ಕ್ರಿಕೆಟ್ ಆಡಿ ಬೆಳೆದವರು. ಇತ್ತ ಸರ್ಫರಾಝ್ ಭಾರತದಲ್ಲಿ ಮುಂದುವರೆದರೆ, ಆರ್ಯನ್ ಲಂಡನ್ನತ್ತ ಪ್ರಯಾಣ ಬೆಳೆಸಿದ್ದರು. ಇದೀಗ ವರ್ಷಗಳ ಬಳಿಕ ಹುಡುಗಿಯಾಗಿ ಅನಯಾ ಭಾರತಕ್ಕೆ ಮರಳಿದ್ದಾರೆ.
2 / 6
ಇದೇ ವೇಳೆ ಸರ್ಫರಾಝ್ ಖಾನ್ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿದ್ದಾರೆ. ಈ ಭೇಟಿಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಾವು ಫೋನ್ಗಳು ಹಿಡಿಯುವ ಮುನ್ನವೇ ಫ್ರೆಂಡ್ಸ್ ಆದವರು ಎಂದು ಸಂತಸದ ಫೋಟೋಗಳನ್ನು ಹಂಚಿಕೊಂಡಿರುವ ಅನಯಾ, ಮುಶೀರ್ ಖಾನ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿಯೂ ತಿಳಿಸಿದ್ದಾರೆ.
3 / 6
ಸರ್ಫರಾಝ್ ಅವರ ಸಹೋದರ ಮುಶೀರ್ ಖಾನ್ ಸದ್ಯ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದಾರೆ. ಹೀಗಾಗಿ ಅನಯಾಗೆ ಮುಶೀರ್ ಖಾನ್ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಇದನ್ನೇ ಪ್ರಸ್ತಾಪಿಸಿ ಎಲ್ಲರೂ ಜೊತೆಯಾಗಿರುವ ಹಳೆಯ ಫೋಟೋವೊಂದನ್ನು ಸಹ ಸಂಜಯ್ ಬಂಗಾರ್ ಅವರ ಪುತ್ರಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
4 / 6
ಅಂದಹಾಗೆ ಅನಯಾ ಬಂಗಾರ್ ಈ ಹಿಂದೆ ತಂದೆಯಂತೆ ಕ್ರಿಕೆಟಿಗನಾಗಬೇಕೆಂದು ಕನಸು ಕಂಡಿದ್ದರು. ಅದರಂತೆ ಬಾಲ್ಯದಿಂದಲೇ ಕ್ರಿಕೆಟ್ ಅಭ್ಯಾಸವನ್ನು ಸಹ ಶುರು ಮಾಡಿದ್ದರು. ಎಡಗೈ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ಆರ್ಯನ್ (ಅನಯಾ) ಇಂಗ್ಲೆಂಡ್ನ ಲೀಸೆಸ್ಟರ್‌ಶೈರ್‌ನ ಹಿಂಕ್ಲೆ ಕ್ರಿಕೆಟ್ ಕ್ಲಬ್ ಪರ ಆಡಿದ್ದರು.
5 / 6
ಆದರೆ ಆ ಬಳಿಕ ದೇಹದಲ್ಲಾದ ಪರಿವರ್ತನೆಯಿಂದಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಈ ಮೂಲಕ ಆರ್ಯನ್ ಆಗಿದ್ದ ಬಂಗಾರ್ ಪುತ್ರ ಇದೀಗ ಅನಯಾ ಆಗಿ ಬದಲಾಗಿದ್ದಾರೆ. ಅಲ್ಲದೆ ನನ್ನ ಈ ನಿರ್ಧಾರದ ಬಗ್ಗೆ ತುಂಬಾ ತೃಪ್ತಿಯಿದೆ ಎಂದು ಅವರು ತಿಳಿಸಿದ್ದಾರೆ.