AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ಭಾರತ ವಿರುದ್ಧದ ಟೆಸ್ಟ್ ಸರಣಿಗೆ 15 ಸದಸ್ಯರ ದಕ್ಷಿಣ ಆಫ್ರಿಕಾ ತಂಡ ಪ್ರಕಟ

India vs South Africa Test Series: ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಗೆದ್ದು, ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಸೋತ ಟೀಂ ಇಂಡಿಯಾ, ಮುಂಬರುವ ಟಿ20 ಸರಣಿ ಗೆಲ್ಲಲು ಸಜ್ಜಾಗಿದೆ. ಇದರ ನಡುವೆ, ಭಾರತ ಪ್ರವಾಸಕ್ಕಾಗಿ ದಕ್ಷಿಣ ಆಫ್ರಿಕಾ ತನ್ನ 15 ಸದಸ್ಯರ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ಆಸ್ಟ್ರೇಲಿಯಾ ಟಿ20 ಸರಣಿಯ ನಂತರ ಭಾರತ ಹರಿಣಗಳ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಗೆ ಆಫ್ರಿಕಾ ತಂಡ ಸಿದ್ಧವಾಗಿದೆ.

IND vs SA: ಭಾರತ ವಿರುದ್ಧದ ಟೆಸ್ಟ್ ಸರಣಿಗೆ 15 ಸದಸ್ಯರ ದಕ್ಷಿಣ ಆಫ್ರಿಕಾ ತಂಡ ಪ್ರಕಟ
South Africa
ಪೃಥ್ವಿಶಂಕರ
|

Updated on:Oct 27, 2025 | 3:27 PM

Share

ವೆಸ್ಟ್ ಇಂಡೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದ್ದ ಟೀಂ ಇಂಡಿಯಾ (Team India) ಅದೇ ಹುಮ್ಮಸ್ಸಿನಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡಿತ್ತು. ಆದರೆ ಆಸ್ಟ್ರೇಲಿಯಾದಲ್ಲಿ ಭಾರತ ತಂಡಕ್ಕೆ ಏಕದಿನ ಸರಣಿ ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ಮುಂಬರುವ ಟಿ20 ಸರಣಿಯನ್ನು ಗೆದ್ದು, ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿ ಭಾರತ ಟಿ20 ತಂಡವಿದೆ. ಈ ನಡುವೆ ಭಾರತ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾ ತಂಡವನ್ನು (South Africa Test squad India tour) ಪ್ರಕಟಿಸಲಾಗಿದೆ. ವಾಸ್ತವವಾಗಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಬಳಿಕ ಟೀಂ ಇಂಡಿಯಾ, ಹರಿಣಗಳ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ತವರಿನಲ್ಲಿ ಆಡಲಿದೆ. ಇದೀಗ ಈ ಸರಣಿಗೆ 15 ಸದಸ್ಯರ ಆಫ್ರಿಕಾ ತಂಡವನ್ನು ಘೋಷಿಸಲಾಗಿದೆ.

ಭಾರತ ವಿರುದ್ಧದ ಈ ಸರಣಿಗೆ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ಮತ್ತೆ ಟೆಂಬಾ ಬವುಮಾ ಅವರ ಕೈಸೇರಿದೆ. ವಾಸ್ತವವಾಗಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೆಂಬಾ ಬವುಮಾ ತಂಡದ ಭಾಗವಾಗಿರಲಿಲ್ಲ. ಏಕೆಂದರೆ ಇಂಜುರಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಈ ಸರಣಿಯಿಂದ ಹೊರಗಿದ್ದರು. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ, ಐಡೆನ್ ಮಾರ್ಕ್ರಾಮ್ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಇದೀಗ ಸಂಪೂರ್ಣ ಫಿಟ್ ಆಗಿ ತಂಡವನ್ನು ಕೂಡಿಕೊಂಡಿರುವ ಬವುಮಾ, ಭಾರತದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಏಡೆನ್ ಮಾರ್ಕ್ರಾಮ್, ರಿಯಾನ್ ರಿಕೆಲ್ಟನ್, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರ್ರೆನ್, ಡೆವಾಲ್ಡ್ ಬ್ರೆವಿಸ್, ಜುಬೈರ್ ಹಮ್ಜಾ, ಟೋನಿ ಡಿ ಜೊರ್ಜಿ, ಕಾರ್ಬಿನ್ ಬಾಷ್, ವಿಯಾನ್ ಮುಲ್ಡರ್, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಸೆನುರಾನ್ ಮುತ್ತುಸಾಮಿ, ಸೈಮನ್ ಹಾರ್ಮರ್, ಕಗಿಸೊ ರಬಾಡ.

ಭಾರತ-ದಕ್ಷಿಣ ಆಫ್ರಿಕಾ ವೇಳಾಪಟ್ಟಿ

ಟೆಸ್ಟ್ ಸರಣಿ

  • ಮೊದಲ ಟೆಸ್ಟ್: ನವೆಂಬರ್ 14, ಕೋಲ್ಕತ್ತಾ
  • ಎರಡನೇ ಟೆಸ್ಟ್: ನವೆಂಬರ್ 22, ಗುವಾಹಟಿ

ಏಕದಿನ ಸರಣಿ

  • ಮೊದಲ ಏಕದಿನ ಪಂದ್ಯ: ನವೆಂಬರ್ 30, ರಾಂಚಿ
  • ಎರಡನೇ ಏಕದಿನ ಪಂದ್ಯ: ಡಿಸೆಂಬರ್ 3, ರಾಯ್‌ಪುರ
  • ಮೂರನೇ ಏಕದಿನ ಪಂದ್ಯ: ಡಿಸೆಂಬರ್ 6, ವಿಶಾಖಪಟ್ಟಣಂ

ಟಿ20 ಸರಣಿ

  • ಮೊದಲ ಟಿ20: ಡಿಸೆಂಬರ್ 9, ಕಟಕ್
  • 2ನೇ ಟಿ20: ಡಿಸೆಂಬರ್ 11, ನ್ಯೂ ಚಂಡೀಗಢ
  • ಮೂರನೇ ಟಿ20: ಡಿಸೆಂಬರ್ 14, ಧರ್ಮಶಾಲಾ
  • 4ನೇ ಟಿ20: ಡಿಸೆಂಬರ್ 17, ಲಕ್ನೋ
  • ಐದನೇ ಟಿ20: ಡಿಸೆಂಬರ್ 19, ಅಹಮದಾಬಾದ್

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:38 pm, Mon, 27 October 25