India vs England Test Series | ಇಂಗ್ಲೆಂಡ್ ವಿರುದ್ಧದ ಭಾರತದ ಜಯ ಖಚಿತ: ಇದು ಡೇವಿಡ್ ಲಾಯ್ಡ್ ನುಡಿದ ಭವಿಷ್ಯ

ರೆಗ್ಯುಲರ್ ಕ್ಯಾಪ್ಟನ್​ನ ಅನುಪಸ್ಥಿಯಲ್ಲೂ ಆಸ್ಟ್ರೇಲಿಯಾವನ್ನು ಅದರ ಹಿತ್ತಲಲ್ಲೇ ಸೋಲಿಸಿ ತಾನು ವಿಶ್ವದ ಅತ್ಯುತ್ತಮ ತಂಡ ಅಂತ ಇಂಡಿಯಾ ಪ್ರೂವ್ ಮಾಡಿದೆ ಅಂತ ಡೇವಿಡ್ ಲಾಯ್ಡ್ ಹೇಳಿದ್ದಾರೆ

India vs England Test Series | ಇಂಗ್ಲೆಂಡ್ ವಿರುದ್ಧದ ಭಾರತದ ಜಯ ಖಚಿತ: ಇದು ಡೇವಿಡ್ ಲಾಯ್ಡ್ ನುಡಿದ ಭವಿಷ್ಯ
ಜೋ ರೂಟ್ ಮತ್ತು ವಿರಾಟ್ ಕೊಹ್ಲಿ
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: ಪೃಥ್ವಿಶಂಕರ

Updated on:Feb 04, 2021 | 1:05 PM

ಚೆನೈಯಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯಲ್ಲಿ ಅತಿಥೇಯರೇ ಸರಣಿ ಗೆಲ್ಲುವ ನೆಚ್ಚಿನ ತಂಡವಾಗಿದ್ದು ಪ್ರವಾಸಿಗರನ್ನು 4-0 ಇಲ್ಲವೇ 3-0 ಅಂತರದಿಂದ ಸೋಲಿಸಲಿದ್ದಾರೆ ಎಂದು ಇಂಗ್ಲೆಂಡ್ ಮಾಜಿ ಆಟಗಾರ ಮತ್ತು ಖ್ಯಾತ ಕಾಮೆಂಟೇಟರ್ ಡೇವಿಡ್ ಲಾಯ್ಡ್ ಹೇಳಿದ್ದಾರೆ.

ಎರಡೂ ತಂಡಗಳು ಸರಣಿ ಜಯ ಸಾಧಿಸಿದ ಹಿರಿಮೆ ಮತ್ತು ಆತ್ಮವಿಶ್ವಾಸದಿಂದ ರಂಗ ಪ್ರವೇಶಿಸಲಿವೆ, ಭಾರತ, ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಿಂದ ಸರಣಿ ಗೆದ್ದರೆ ಜೋ ರೂಟ್ ಪಡೆಯು ಶ್ರೀಲಂಕಾ ವಿರುದ್ಧ ಆಡಿದ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು.

‘ಡೈಲಿ ಮೇಲ್’ ಪತ್ರಿಕೆಯ ನಿಯಮಿತ ಅಂಕಣಕಾರರಾಗಿರುವ ಲಾಯ್ಡ್ ತಮ್ಮ ಇತ್ತೀಚಿನ ಕಾಲಂನಲ್ಲಿ ಭಾರತ ಸುಲಭವಾಗಿ ಗೆಲುವು ಸಾಧಿಸುವ ಬಗ್ಗೆ ಮಾತಾಡಿದ್ದು ಟೀಮ್ ಇಂಡಿಯಾ ವಿಶ್ವದಲ್ಲೇ ಅತ್ಯುತ್ತಮ ತಂಡವಾಗಿದೆ ಎನ್ನುವುದನ್ನು ಆಸ್ಟ್ರೇಲಿಯಾವನ್ನು ಅದರ ನೆಲದಲ್ಲೇ ಮಣಿಸಿ ಸಾಬೀತು ಮಾಡಿದ್ದಾರೆ ಎಂದು ಹೇಳಿದ್ದಾರೆ.

‘ನಿಸ್ಸಂದೇಹವಾಗಿ ಭಾರತ ಸರಣಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಇಂಗ್ಲಿಷ್ ತಂಡಕ್ಕೆ ಅಂಡರ್​ಡಾಗ್ ಅಂತ ಕರೆಸಿಕೊಳ್ಳುವುದೇ ಒಳ್ಳೆಯದು. ಶ್ರೀಲಂಕಾದಲ್ಲಿ ಹೆಚ್ಚು ಕಡಿಮೆ ಭಾರತದಲ್ಲಿರುವಂಥ ಪಿಚ್​ಗಳಲ್ಲಿ ಆಡಿದ್ದು ಅವರಿಗೆ ನೆರವಾಗಲಿದೆ. ಈ ಎರಡು ತಂಡಗಳ ಪೈಕಿ ಯಾವುದಾದರೂ ಒಂದು ತಂಡದ ಮೇಲೆ ಹಣ ಹೂಡುವುದಾದರೆ ನಾನು ಇಂಡಿಯಾದ ಮೇಲೆ ಹೂಡುತ್ತೇನೆ’ ಎಂದು ಲಾಯ್ಡ್ ಬರೆದಿದ್ದಾರೆ.

ಇದನ್ನೂ ಓದಿ: India vs England: ಮೂರೂ ಆವೃತ್ತಿಗಳ ಕ್ರಿಕೆಟ್ ಪಂದ್ಯಗಳ ಸ್ಥಳ, ವೇಳಾಪಟ್ಟಿ ಇಲ್ಲಿದೆ..

ಡೇವಿಡ್ ಲಾಯ್ಡ್

‘ರೆಗ್ಯುಲರ್ ಕ್ಯಾಪ್ಟನ್​ನ ಅನುಪಸ್ಥಿಯಲ್ಲೂ ಆಸ್ಟ್ರೇಲಿಯಾವನ್ನು ಅದರ ಹಿತ್ತಲಲ್ಲೇ ಸೋಲಿಸಿ ತಾನು ವಿಶ್ವದ ಅತ್ಯುತ್ತಮ ತಂಡ ಅಂತ ಇಂಡಿಯಾ ಪ್ರೂವ್ ಮಾಡಿದೆ. ಅವರ ತಂಡ ಅತ್ಯಂತ ಸಮತೋಲನದಿಂದ ಕೂಡಿದೆ ಮತ್ತು ಕೆಲವು ಅಪ್ರತಿಮ ಬ್ಯಾಟ್ಸ್​ಮನ್​ಗಳ ಸೇವೆ ಅವರಿಗೆ ಲಭ್ಯವಿದೆ. ರವೀಂದ್ರ ಜಡೇಜಾರನ್ನು ಟೀಮ್ ಇಂಡಿಯಾ ಮಿಸ್ ಮಾಡಿಕೊಳ್ಳಲಿದೆ ಎಂದು ನಾಸ್ಸೆರ್ ಹುಸ್ಸೇನ್ (ಇಂಗ್ಲೆಂಡ್ ಮಾಜಿ ನಾಯಕ) ಹೇಳುತ್ತಾರೆ. ಆದರೆ, ಅವರ ಸ್ಥಾನದಲ್ಲಿ ಆಯ್ಕೆಯಾಗಿರುವ ಅಕ್ಸರ್ ಪಟೇಲ್ ಕೂಡ ಅತ್ಯುತ್ತಮ ಬೌಲರ್ ಆಗಿದ್ದಾರೆ. ಭಾರತವು ಸ್ಪಿನ್ ದಾಳಿಗೆ ಪ್ರಾಶಸ್ತ್ಯ ನೀಡಿದರೆ ಅಕ್ಸರ್ ತಂಡದ ಭಾಗವಾಗಲಿದ್ದಾರೆ,’ ಎಂದು ಲಾಯ್ಡ್ ಹೇಳಿದ್ದಾರೆ.

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ಹೇಗೆ ನಿಯಂತ್ರಿಸಬಹುದು ಎನ್ನುವುದಕ್ಕೆ ಇಂಗ್ಲಿಷ್ ಆಟಗಾರರಿಗೆ ಲಾಯ್ಡ್ ಸಲಹೆ ನೀಡಿದ್ದಾರೆ. ಅವರ ಪ್ರಕಾರ ಕೊಹ್ಲಿ ಬ್ಯಾಟಿಂಗ್​ಗೆ ಬಂದಾಗ ರನ್ ಗಳಿಸದಂತೆ ಅವರನ್ನು ಕಟ್ಟಿಹಾಕಬೇಕು, ದುರ್ಬಲ ಎಸೆತಗಳನ್ನು ಸರ್ವಥಾ ಬೌಲ್ ಮಾಡಬಾರದೆಂದು ಲಾಯ್ಡ್ ಹೇಳುತ್ತಾರೆ.

‘ಸರಣಿಯಲ್ಲಿ ಜೋ ರೂಟ್ ತನ್ನ ಕೌಂಟರ್​ಪಾರ್ಟ್ ವಿರಾಟ್​ ಕೊಹ್ಲಿ ಪ್ರದರ್ಶನಗಳಿಗೆ ಹೋಲುವ ಆಟವಾಡಬೇಕು ಮತ್ತು ಇಂಗ್ಲೆಂಡ್ ಬೌಲರ್​ಗಳು ಕೊಹ್ಲಿಯನ್ನು ಕಟ್ಟಿಹಾಕುವ ಪ್ರಯತ್ನ ಮಾಡಬೇಕು. ಇಂಗ್ಲೆಂಡ್ ಆರಂಭ ಆಟಗಾರರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಶ್ರೀಲಂಕಾದಲ್ಲಿ ಅವರು ತಾಂತ್ರಿಕ ನೈಪುಣ್ಯತೆಯನ್ನು ಪ್ರದರ್ಶಿಸಿದರಾದರೂ ಭಾರತದಲ್ಲಿ ಅದು ಮತ್ತಷ್ಟು ಉತ್ತಮಗೊಳ್ಳಬೇಕಿದೆ. ಡಾಮ್ ಸಿಬ್ಲೀ ಎರಡನೇ ಟೆಸ್ಟ್​ನ ಕೊನೆಯ ಇನ್ನಿಂಗ್ಸ್​ನಲ್ಲಿ ಅತ್ಯುತ್ತುಮವಾಗಿ ಆಡಿದರು’ ಎಂದು ಲಾಯ್ಡ್ ಹೇಳಿದ್ದಾರೆ.

‘ಹೆಚ್ಚಿನ ಶ್ರಮವಿಲ್ಲದೆ ಇಂಡಿಯಾ 3-9 ಇಲ್ಲವೇ 4-ಂ ಅಂತರದಿಂದ ಸರಣಿ ಗೆಲ್ಲಲಿದೆ. ಆದರೆ ನನ್ನ ಭವಿಷ್ಯವಾಣಿ ಸುಳ್ಳಾಗಲಿ ಎಂಬ ಇಂಗಿತ ಮನದಾಳದಲ್ಲಿದೆ’ ಎಂಬ ಭವಿಷ್ಯವಾಣಿಯೊಂದಿಗೆ ಲೆಜೆಂಡರಿ ಕಾಮೆಂಟೇಟರ್ ತಮ್ಮ ಅಂಕಣವನ್ನು ಕೊನೆಗೊಳಿದ್ದಾರೆ.

India vs England: 2016 ರ ಇಂಗ್ಲೆಂಡ್ ವಿರುದ್ಧ ನಡೆದ ಸರಣಿಯಲ್ಲಿ ಮಿಂಚಿ ಮರೆಯಾದವರನ್ನು ನೆನೆಯುವ ಸಮಯ

Published On - 9:14 pm, Wed, 3 February 21