
ಪ್ರತಿ ಬಾರಿಯಂತೆ ಈ ಐಪಿಎಲ್ನಲ್ಲಿಯೂ (IPL 2026) ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಬ್ಯಾಟಿಂಗ್ ಅಬ್ಬರದಿಂದ ಕೂಡಿದೆ. ತಂಡವು ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಇದಕ್ಕೆ ಹೆಚ್ಚಿನ ಕಾರಣ ತಂಡದ ಮೂವರು ಆಟಗಾರರಾದ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ಹೆನ್ರಿಕ್ ಕ್ಲಾಸೆನ್ ಅವರ ಅತ್ಯುತ್ತಮ ಫಾರ್ಮ್. ಈ ಸೀಸನ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿರುವ ಈ ಜೋಡಿ ರನ್‌ಗಳ ರಾಶಿ ಹಾಕಿದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿಯೂ ಸಹ, ಈ ಮೂವರೂ 50 ಕ್ಕೂ ಹೆಚ್ಚು ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ದಾಖಲೆಯನ್ನು ಸೃಷ್ಟಿಸಿದೆ.
ಈ ಮೂವರು ಆಟಗಾರರು ಪ್ರಸಕ್ತ ಆವೃತ್ತಿಯಲ್ಲಿ 1500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅಂದರೆ ಈ ಮೂವರು ಆಟಗಾರರು ತಲಾ 500 ರನ್‌ಗಳ ಗಡಿ ದಾಟಿದ್ದಾರೆ. ಅಭಿಷೇಕ್ ಶರ್ಮಾ ಮತ್ತು ಹೆನ್ರಿಕ್ ಕ್ಲಾಸೆನ್ 550 ಕ್ಕೂ ಹೆಚ್ಚು ರನ್ ಗಳಿಸಿದರೆ, ಇಶಾನ್ ಕಿಶನ್ ಕೂಡ 500 ರನ್‌ಗಳ ಗಡಿ ದಾಟಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಒಂದೇ ತಂಡದ ಮೂವರು ಆಟಗಾರರು ಒಂದೇ ಆವೃತ್ತಿಯಲ್ಲಿ 500+ ರನ್ ಗಳಿಸಿದ್ದು ದಾಖಲೆಯಾಗಿದೆ. ಇದಕ್ಕೂ ಮೊದಲು, ಗುಜರಾತ್ ಟೈಟಾನ್ಸ್ ತಂಡದ ತ್ರಿಮೂರ್ತಿಗಳಾದ ಶುಭ್ಮನ್ ಗಿಲ್, ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್ 2025 ರ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ್ದರು.
ಈ ಸೀಸನ್‌ನಲ್ಲಿ ಈ ಮೂವರು ಆಟಗಾರರು ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದಾರೆ. ಹೆನ್ರಿಕ್ ಕ್ಲಾಸೆನ್ ಆಡಿರುವ 14 ಇನ್ನಿಂಗ್ಸ್‌ಗಳಲ್ಲಿ 606 ರನ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಇತ್ತ ಅಭಿಷೇಕ್ ಶರ್ಮಾ ಆಡಿರುವ 14 ಇನ್ನಿಂಗ್ಸ್‌ಗಳಲ್ಲಿ 563 ರನ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ಇಶಾನ್ ಕಿಶನ್ ಕೂಡ ಆಡಿರುವ 14 ಇನ್ನಿಂಗ್ಸ್‌ಗಳಲ್ಲಿ 556 ರನ್‌ಗಳೊಂದಿಗೆ ಪ್ರಸ್ತುತ ಏಳನೇ ಸ್ಥಾನದಲ್ಲಿದ್ದಾರೆ.
SRH vs RCB IPL 2026 Live Score: ಆರ್ಸಿಬಿ ಬ್ಯಾಟಿಂಗ್ ಆರಂಭ
ಈ ಮೂವರು ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟ್ಸ್‌ಮನ್‌ಗಳು ಇಡೀ ಸೀಸನ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅಭಿಷೇಕ್ ಶರ್ಮಾ ಅವರ ಸ್ಫೋಟಕ ಆರಂಭಿಕ ಇನ್ನಿಂಗ್ಸ್, ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ ಅವರ ಸ್ಥಿರತೆ ಮತ್ತು ಹೆನ್ರಿಚ್ ಕ್ಲಾಸೆನ್ ಅವರ ಫೈನಲ್ ಟಚ್ ತಂಡದ ಗೆಲುವಿಗೆ ಭದ್ರ ಬುನಾದಿ ಒದಗಿಸಿವೆ. ಇದೀಗ ಪ್ಲೇಆಫ್‌ನಲ್ಲಿ ತಮ್ಮ ಉತ್ತಮ ಫಾರ್ಮ್ ಅನ್ನು ಮುಂದುವರೆಸಲು ಈ ಮೂವರು ಸಜ್ಜಾಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:49 pm, Fri, 22 May 26