SRH vs RCB Prediction Playing XI IPL 2022: ಆರ್​ಸಿಬಿ ತಂಡದಲ್ಲಿ 1 ಬದಲಾವಣೆ ಸಾಧ್ಯತೆ: ಉಭಯ ತಂಡಗಳ ಪ್ಲೇಯಿಂಗ್ 11 ಹೀಗಿರಲಿದೆ

SRH vs RCB Prediction Playing XI IPL 2022: ಆರ್​ಸಿಬಿ ತಂಡದಲ್ಲಿ 1 ಬದಲಾವಣೆ ಸಾಧ್ಯತೆ: ಉಭಯ ತಂಡಗಳ ಪ್ಲೇಯಿಂಗ್ 11 ಹೀಗಿರಲಿದೆ
SRH vs RCB Prediction Playing XI

SRH vs RCB Prediction Playing XI: ಟಿ ನಟರಾಜನ್ ಮತ್ತು ವಾಷಿಂಗ್ಟನ್ ಸುಂದರ್ ಅವರು ಗಾಯಗೊಂಡು ಕಳೆದ ಪಂದ್ಯ ಆಡಿರಲಿಲ್ಲ. ಹೀಗಾಗಿ ಆರ್​ಸಿಬಿ ವಿರುದ್ದ ಈ ಇಬ್ಬರು ಬೌಲರ್​ಗಳು ಕಂಬ್ಯಾಕ್ ಮಾಡುವುದನ್ನು ನಿರೀಕ್ಷಿಸಲಾಗಿದೆ.

TV9kannada Web Team

| Edited By: Zahir PY

May 07, 2022 | 6:34 PM

IPL 2022: ಐಪಿಎಲ್​ನ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ (RCB vs SRH) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಉಭಯ ತಂಡಗಳಿಗೂ ಮಹತ್ವದ ಮ್ಯಾಚ್ ಆಗಿದ್ದು, ಪ್ಲೇಆಫ್​ ರೇಸ್​ನಲ್ಲಿ ಇರಲು ಎರಡೂ ತಂಡಗಳೂ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಆದರೆ ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿ ತಂಡವು ಎಸ್​ಆರ್​ಹೆಚ್​ ವಿರುದ್ದ ಹೀನಾಯವಾಗಿ ಸೋತಿತ್ತು. ಹೀಗಾಗಿ ಈ ಪಂದ್ಯದಲ್ಲಿ ಆರ್​ಸಿಬಿ ತಂಡದಲ್ಲಿ ಬದಲಾವಣೆ ಕಂಡು ಬರುವುದು ಖಚಿತ ಎನ್ನಬಹುದು.

ಸಿರಾಜ್ ತಂಡದಿಂದ ಔಟ್? CSK ವಿರುದ್ಧ ಆರ್​ಸಿಬಿ ತಂಡದ ಪ್ರದರ್ಶನವು ಪ್ರತಿಯೊಂದು ವಿಭಾಗದಲ್ಲೂ ಹೆಚ್ಚು ಕಡಿಮೆ ಉತ್ತಮವಾಗಿತ್ತು. ವಿರಾಟ್ ಕೊಹ್ಲಿ ಬಿರುಸಿನ ಬ್ಯಾಟಿಂಗ್ ಮಾಡದಿದ್ದರೂ, ಪವರ್‌ಪ್ಲೇನಲ್ಲಿ ಫಾಫ್ ಡು ಪ್ಲೆಸಿಸ್ ಜೊತೆಗಿನ ಪಾಲುದಾರಿಕೆ ಉತ್ತಮವಾಗಿತ್ತು. ಸದ್ಯಕ್ಕೆ ತಂಡದ ಚಿಂತೆ ಎಂದರೆ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರ ಫಾರ್ಮ್. ಸಿರಾಜ್​ ಪವರ್‌ಪ್ಲೇಯಲ್ಲಿ ದುಬಾರಿಯಾಗುತ್ತಿದ್ದಾರೆ. ಅಷ್ಟೇ ಅಲ್ಲದೆ ವಿಕೆಟ್ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಿರಾಜ್ ಬದಲಿಗೆ ಸಿದ್ದಾರ್ಥ್ ಕೌಲ್​ಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ.

ಮತ್ತೊಂದಡೆ ಎಸ್​ಆರ್​ಹೆಚ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಸತತವಾಗಿ ವಿಫಲವಾಗುತ್ತಿದ್ದಾರೆ. ಇನ್ನು ಮಧ್ಯಮ ಕ್ರಮಾಂಕ ಮತ್ತೆ ಒತ್ತಡಕ್ಕೆ ಸಿಲುಕುತ್ತಿದೆ. ತಂಡವು ಸತತ ಮೂರು ಪಂದ್ಯಗಳಲ್ಲಿ ಸೋಲನ್ನು ಎದುರಿಸಿ ನಿರಾಶೆ ಮೂಡಿಸಿದೆ. ಇನ್ನು ಟಿ ನಟರಾಜನ್ ಮತ್ತು ವಾಷಿಂಗ್ಟನ್ ಸುಂದರ್ ಅವರು ಗಾಯಗೊಂಡು ಕಳೆದ ಪಂದ್ಯ ಆಡಿರಲಿಲ್ಲ. ಹೀಗಾಗಿ ಆರ್​ಸಿಬಿ ವಿರುದ್ದ ಈ ಇಬ್ಬರು ಬೌಲರ್​ಗಳು ಕಂಬ್ಯಾಕ್ ಮಾಡುವುದನ್ನು ನಿರೀಕ್ಷಿಸಲಾಗಿದೆ. ಅದರಂತೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11 ಹೀಗಿರಲಿದೆ.

ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೊರ್, ದಿನೇಶ್ ಕಾರ್ತಿಕ್ , ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್‌ವುಡ್, ಸಿದ್ದಾರ್ಥ್ ಕೌಲ್

ಎಸ್​ಆರ್​ಹೆಚ್ ಸಂಭಾವ್ಯ ಪ್ಲೇಯಿಂಗ್ 11: ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಟಿ ನಟರಾಜನ್ , ಉಮ್ರಾನ್ ಮಲಿಕ್ ಮತ್ತು ಕಾರ್ತಿಕ್ ತ್ಯಾಗಿ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada