IPL 2022: ರಾಜಸ್ಥಾನ್ ರಾಯಲ್ಸ್​ ಪರ ಹೊಸ ಇತಿಹಾಸ ನಿರ್ಮಿಸಿದ ಜೋಸ್ ಬಟ್ಲರ್

IPL Records: ಐಪಿಎಲ್​ನ ಒಂದೇ ಸೀಸನ್​ನಲ್ಲಿ ಅತ್ಯಧಿಕ ರನ್​ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 2016 ರಲ್ಲಿ 973 ರನ್​ ಬಾರಿಸಿ ದಾಖಲೆ ಬರೆದಿದ್ದರು.

May 07, 2022 | 7:21 PM
TV9kannada Web Team

| Edited By: Zahir PY

May 07, 2022 | 7:21 PM

 ಐಪಿಎಲ್ ಸೀಸನ್​ 15 ನಲ್ಲಿ ಜೋಸ್ ಬಟ್ಲರ್ ಅಬ್ಬರ ಮುಂದುವರೆದಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ  ಬಟ್ಲರ್ ಕೇವಲ 16 ಎಸೆತಗಳಲ್ಲಿ 30 ರನ್ ಬಾರಿಸಿದ್ದರು. ಇದರೊಂದಿಗೆ ರಾಜಸ್ಥಾನ್ ರಾಯಲ್ಸ್​ ಪರ ಜೋಸ್ ಬಟ್ಲರ್ ವಿಶೇಷ ದಾಖಲೆಯನ್ನೂ ಕೂಡ ಬರೆದರು.

1 / 5
ಪಂಜಾಬ್ ಕಿಂಗ್ಸ್ ವಿರುದ್ಧ 13 ರನ್ ಗಳಿಸಿಸುವುದರೊಂದಿಗೆ ಬಟ್ಲರ್, ಐಪಿಎಲ್ 2022 ರಲ್ಲಿ 600 ರನ್ ಪೂರೈಸಿದರು. ಈ ಮೂಲಕ ಐಪಿಎಲ್‌ನಲ್ಲಿ 600 ರನ್ ಗಳಿಸಿದ ರಾಜಸ್ಥಾನ್ ರಾಯಲ್ಸ್​ ತಂಡದ ಮೊದಲ ಆಟಗಾರ ಎಂಬ ದಾಖಲೆಯನ್ನು ಬಟ್ಲರ್ ಬರೆದರು. ಇದಕ್ಕೂ ಮುನ್ನ ಅಜಿಂಕ್ಯ ರಹಾನೆ 2012ರಲ್ಲಿ ಗರಿಷ್ಠ 560 ರನ್ ಗಳಿಸಿದ್ದು ದಾಖಲೆಯಾಗಿತ್ತು.

2 / 5
ಇದೀಗ ಈ ಬಾರಿಯ ಐಪಿಎಲ್​ನಲ್ಲಿ 618 ರನ್ ಗಳಿಸುವ ಮೂಲಕ ಜೋಸ್ ಬಟ್ಲರ್ ರಾಜಸ್ಥಾನ್ ರಾಯಲ್ಸ್ ಪರ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ ಆರೆಂಜ್ ಕ್ಯಾಪ್ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ.

3 / 5
ಬಟ್ಲರ್ 11 ಇನ್ನಿಂಗ್ಸ್‌ಗಳಲ್ಲಿ 618 ರನ್ ಗಳಿಸಿದ್ದಾರೆ. ಇನ್ನು ರಾಜಸ್ಥಾನ್ ರಾಯಲ್ಸ್​ಗೆ ಲೀಗ್ ಹಂತದಲ್ಲಿ 3 ಪಂದ್ಯಗಳು ಉಳಿದಿದ್ದು, ಹೀಗಾಗಿ ಅದ್ಭುತ ಫಾರ್ಮ್​ನಲ್ಲಿರುವ ಬಟ್ಲರ್ ಬ್ಯಾಟ್​ನಿಂದ ಮತ್ತಷ್ಟು ರನ್ ಹರಿದು ಬರುವ ನಿರೀಕ್ಷೆಯಿದೆ.

4 / 5
ಸದ್ಯ ಐಪಿಎಲ್​ನ ಒಂದೇ ಸೀಸನ್​ನಲ್ಲಿ ಅತ್ಯಧಿಕ ರನ್​ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 2016 ರಲ್ಲಿ 973 ರನ್​ ಬಾರಿಸಿ ದಾಖಲೆ ಬರೆದಿದ್ದರು. ಇದೀಗ 618 ರನ್​ಗಳಿಸಿರುವ ಜೋಸ್ ಬಟ್ಲರ್ ವಿರಾಟ್ ಕೊಹ್ಲಿಯ ದಾಖಲೆಯನ್ನು ಹಿಂದಿಕ್ಕಲಿದ್ದಾರಾ ಕಾದುನೋಡಬೇಕಿದೆ.

5 / 5

Follow us on

Most Read Stories

Click on your DTH Provider to Add TV9 Kannada