AFG vs SL, Playing IX: ಉದ್ಘಾಟನಾ ಪಂದ್ಯಕ್ಕೆ ಶ್ರೀಲಂಕಾ vs ಅಫ್ಘಾನಿಸ್ತಾನ ತಂಡಗಳ ಪ್ಲೇಯಿಂಗ್ XI ಹೇಗಿರಬಹುದು?

| Updated By: Vinay Bhat

Updated on: Aug 27, 2022 | 10:10 AM

Asia Cup 2022: ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ (Sri Lanka vs Afghanistan) ತಂಡ ಮುಖಾಮುಖಿ ಆಗಲಿದೆ. ಲಂಕಾವನ್ನು ಆಲ್‌ರೌಂಡರ್‌ ದಸುನ್‌ ಶನಕ (Dasun Shanaka) ಮುನ್ನಡೆಸಿದರೆ, ಮೊಹಮ್ಮದ್‌ ನಬಿ ಅಫ್ಘಾನ್ ನಾಯಕನಾಗಿದ್ದಾರೆ.

AFG vs SL, Playing IX: ಉದ್ಘಾಟನಾ ಪಂದ್ಯಕ್ಕೆ ಶ್ರೀಲಂಕಾ vs ಅಫ್ಘಾನಿಸ್ತಾನ ತಂಡಗಳ ಪ್ಲೇಯಿಂಗ್ XI ಹೇಗಿರಬಹುದು?
SL vs AFG Asia Cup 2022
Follow us on

ಬಹುನಿರೀಕ್ಷಿತ ಏಷ್ಯಾಕಪ್ 2022 (Asia Cup 2022) ಕ್ರಿಕೆಟ್ ಟೂರ್ನಿಗೆ ಇಂದು ಚಾಲನೆ ಸಿಗಲಿದೆ. ಈ ಬಾರಿಯ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಹಾಗೂ ಇತ್ತೀಚೆಗಷ್ಟೆ ಅರ್ಹತೆ ಪಡೆದುಕೊಂಡ ಹಾಂಗ್‌ಕಾಂಗ್ ಹೀಗೆ 6 ತಂಡಗಳು ಕಣಕ್ಕಿಳಿಯಲಿವೆ. ಇಂದಿನಿಂದ ಆರಂಭವಾಗಿ ಸೆಪ್ಟೆಂಬರ್ 11ರವರೆಗೆ ಪಂದ್ಯಗಳು ಜರುಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ (Sri Lanka vs Afghanistan) ತಂಡ ಮುಖಾಮುಖಿ ಆಗಲಿದೆ. ಲಂಕಾವನ್ನು ಆಲ್‌ರೌಂಡರ್‌ ದಸುನ್‌ ಶನಕ (Dasun Shanaka) ಮುನ್ನಡೆಸಿದರೆ, ಮೊಹಮ್ಮದ್‌ ನಬಿ ಅಫ್ಘಾನ್ ನಾಯಕನಾಗಿದ್ದಾರೆ. ಉಭಯ ತಂಡಗಳು ಬಲಿಷ್ಠವಾಗಿರುವ ಕಾರಣ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.

ಏಷ್ಯಾಕಪ್ ಟೂರ್ನಿ ಇತಿಹಾಸದಲ್ಲಿ ಒಟ್ಟು ಐದು ಬಾರಿ ಟ್ರೋಫಿ ಗೆದ್ದು ಎರಡನೇ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಶ್ರೀಲಂಕಾದಲ್ಲಿ ಈಗ ಮೊದಲಿನ ಖದರ್ ಇಲ್ಲ. ಆಲ್‌ರೌಂಡರ್‌ ದಸುನ್‌ ಶನಕ ಯಾವರೀತಿ ತಂಡವನ್ನು ಮುನ್ನಡೆಸುತ್ತಾರೆ ಎಂಬುದು ನೋಡಬೇಕಿದೆ. ಅಲ್ಲದೆ ಪ್ರಮುಖ ವೇಗಿ ದುಷ್ಮಾಂತ ಚಮೀರ ಟೂರ್ನಿಯಿಂದ ಔಟಾಗಿರುವುದು ತಂಡಕ್ಕೆ ದೊಡ್ಡ ಹಿನ್ನಡೆ. ಗುಣತಿಲಕ, ಪತುಮ್‌ ನಿಸಂಕ, ಭಾನುಕ ರಾಜಪಕ್ಷ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ವಾನಿಂದು ಹಸರಂಗ, ಮಹೀಶ ತೀಕ್ಷಣ ಬಿಟ್ಟರೆ ದೊಡ್ಡ ಮಟ್ಟದ ಸ್ಟಾರ್ ಪ್ಲೇಯರ್ಸ್ ತಂಡದಲ್ಲಿಲ್ಲ.

ಇತ್ತ ಟಿ20 ಲೀಗ್‌ಗಳಲ್ಲಿ ತನ್ನ ಶಕ್ತಿ ಪ್ರದರ್ಶನ ತೋರುತ್ತಿರುವ ಅಫ್ಘಾನಿಸ್ತಾನ ತಂಡವನ್ನು ಕಡೆಗಣಿಸುವಂತಿಲ್ಲ. ಹಝರತ್‌ ಉಲ್ಲಾ ಝಜಾಯ್‌ ಸ್ಫೋಟಕ ಆರಂಭ ಒದಗಿಸಿದರೆ ತಂಡ ದೊಡ್ಡ ಮೊತ್ತ ಕಲೆಹಾಕುವುದು ಖಚಿತ. ಇವರಿಗೆ ಮೊಹಮ್ಮದ್‌ ನಬಿ, ಉಸ್ಮಾನ್ ಘನಿ, ವಿಕೆಟ್ ಕೀಪರ್ ರೆಹ್ಮಾನುಲ್ಲ ಸಾಥ್ ಜೊತೆಗೆ ರಶೀದ್‌ ಖಾನ್‌ ಆಲ್ರೌಂಡರ್ ಪ್ರದರ್ಶನ ಕೂಡ ತಂಡಕ್ಕೆ ಸಹಾಯ ಮಾಡಿದರೆ ಗೆಲುವು ಸುಲಭ.

ಇದನ್ನೂ ಓದಿ
IND vs PAK: ಲೀಕ್ ಆಯ್ತು ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI: ಯಾರಿಗೆಲ್ಲ ಸ್ಥಾನ ನೋಡಿ
Neeraj Chopra: ಮೊದಲ ಭಾರತೀಯ: ಡೈಮಂಡ್‌ ಲೀಗ್‌ನಲ್ಲಿ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
Asia Cup 2022: ಏಷ್ಯಾಕಪ್ 2022ಕ್ಕೆ ಇಂದು ಚಾಲನೆ: ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ-ಅಫ್ಘಾನ್ ಮುಖಾಮುಖಿ
Asia Cup 2022: ಶಾಹೀನ್ ಶಾ ಆಫ್ರಿದಿ ಬಳಿಕ ಪಾಕ್ ತಂಡದ ಮತ್ತೊಬ್ಬ ಬೌಲರ್ ಏಷ್ಯಾಕಪ್​ನಿಂದ ಔಟ್..!

ಹೀಗೆ ಅನೇಕ ಕಾರಣಗಳಿಂದ ಇಂದಿನ ಮೊದಲ ಪಂದ್ಯವೇ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಏಷ್ಯಾಕಪ್ ಟೂರ್ನಿಯ ಎಲ್ಲಾ ಪಂದ್ಯಗಳ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ (ಇಂಗ್ಲಿಷ್), ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಎಚ್‌ಡಿ (ಹಿಂದಿ) ಚಾನೆಲ್‌ಗಳಲ್ಲಿ ಲಭ್ಯವಿರಲಿದೆ. ಇದರ ಜೊತೆಗೆ ದೂರದರ್ಶನದಲ್ಲೂ ನೇರಪ್ರಸಾರ ಲಭ್ಯವಾಗಲಿದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲೈವ್​ ಸ್ಟ್ರೀಮ್ ವೀಕ್ಷಿಸಬಹುದು.

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI:

ಶ್ರೀಲಂಕಾ: ದನುಷ್ಕ ಗುಣತಿಲಕ, ಪತುಮ್‌ ನಿಸಂಕ (ವಿಕೆಟ್ ಕೀಪರ್), ಭಾನುಕಾ ರಾಜಪಕ್ಕ್ಷ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಮಹೇಶ್ ತೀಕ್ಷಣ, ಚಾಮಿಕಾ ಕರುಣಾರತ್ನೆ, ಜೆಫ್ರಿ ವಾಂಡರ್ಸೆ, ಅಸಿತ ಫೆರ್ನಾಂಡೋ.

ಅಫ್ಘಾನಿಸ್ತಾನ: ಹಝರತ್‌ ಉಲ್ಲಾ ಝಜಾಯ್‌, ನಜೀಬುಲ್ಲಾ ಝದ್ರಾನ್, ಇಬ್ರಾಹಿಂ ಝದ್ರಾನ್, ಉಸ್ಮಾನ್ ಘನಿ, ರೆಹ್ಮಾನುಲ್ಲ ಗುರ್ಬಾಜ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ (c), ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನವೀನ್ಉಲ್ಹಕ್, ಕರೀಮ್ ಜನತ್, ನೂರ್ ಅಹ್ಮದ್.