ಮತ್ತೆ ಬಂದ ಮೌಕಾ ಮೌಕಾ: ಟಿವಿ ಒಡೆಯಲು ರೆಡಿಯಾಗಿ ಎಂದ ಭಾರತದ ಅಭಿಮಾನಿ

TV9 Digital Desk

| Edited By: Zahir Yusuf

Updated on:Oct 14, 2021 | 6:35 PM

‘Mauka Mauka’: ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಉತ್ತಮ ದಾಖಲೆ ಹೊಂದಿದೆ. ಇದುವರೆಗೆ ಉಭಯ ತಂಡಗಳು 5 ಬಾರಿ ಟಿ20 ವಿಶ್ವಕಪ್​ನಲ್ಲಿ ಮುಖಾಮುಖಿಯಾಗಿದ್ದು, ಐದು ಸಲ ಕೂಡ ಭಾರತ ಗೆದ್ದಿದೆ.

ಮತ್ತೆ ಬಂದ ಮೌಕಾ ಮೌಕಾ: ಟಿವಿ ಒಡೆಯಲು ರೆಡಿಯಾಗಿ ಎಂದ ಭಾರತದ ಅಭಿಮಾನಿ
‘Mauka Mauka’ Ad

Follow us on

ಟಿ20 ವಿಶ್ವಕಪ್ ವಿಶ್ವಕಪ್ ಅಕ್ಟೋಬರ್ 17 ರಿಂದ ಆರಂಭವಾಗುತ್ತಿದೆ. ಆದರೆ ವಿಶ್ವ ಕ್ರಿಕೆಟ್ ಅಭಿಮಾನಿಗಳು ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾದಾಟದ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ ಸ್ಟಾರ್ ಸ್ಪೋರ್ಟ್ಸ್​ ನೆಟ್​ವರ್ಕ್​ನ ಜನಪ್ರಿಯ ಜಾಹೀರಾತು ಮೌಕಾ ಮೌಕಾ ಕೂಡ ಮರಳಿದೆ. ಈ ಹೊಸ ಜಾಹೀರಾತಿನಲ್ಲಿಯೂ, ಅದೇ ಹಳೆಯ ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಯನ್ನು ಕಾಣಬಹುದು. ಈ ಬಾರಿ ದುಬೈನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಪಾಕ್ ಅಭಿಮಾನಿ ಪಾತ್ರಧಾರಿ ದುಬೈನ ಮಾಲ್​ನಲ್ಲಿ ರಾಕೆಟ್‌ಗಳು ಮತ್ತು ಇತರ ಪಟಾಕಿಗಳೊಂದಿಗೆ ಕಾಣಿಸಿಕೊಂಡಿದ್ದಾರೆ.

ಭಾರತವನ್ನು ಪ್ರತಿನಿಧಿಸುವ ವ್ಯಕ್ತಿಯಾಗಿ ಪಂಜಾಬಿ ಪಾತ್ರಧಾರಿ ಟಿವಿ ಶೋರೂಂ ಮಾಲೀಕರಾಗಿ ಕಾಣಿಸಿಕೊಂಡಿದ್ದಾರೆ. ಈ ಇಬ್ಬರ ಮುಖಾಮುಖಿ ವೇಳೆ ಟಿ20 ವಿಶ್ವಕಪ್ ಬರುತ್ತಿದೆ. ಅತೀ ದೊಡ್ಡ ಟಿವಿಯನ್ನು ತೋರಿಸಿ ಪಾಜಿ. ಈ ಬಾರಿ ಬಾಬರ್ ಮತ್ತು ರಿಜ್ವಾನ್ ದುಬೈನಿಂದ ಸಿಕ್ಸರ್‌ಗಳನ್ನು ಹೊಡೆಯುತ್ತಾರೆ. ದೆಹಲಿಯ ಮನೆಗಳ ಗಾಜು ಒಡೆಯಲಿದೆ ಎಂದು ಪಾಕ್​ ಅಭಿಮಾನಿ ಕಾಲೆಳೆದಿರುವುದನ್ನು ಚಿತ್ರಿಸಲಾಗಿದೆ.

ಇದನ್ನು ಕೇಳಿದ ಬೆನ್ನಲ್ಲೇ ಭಾರತ ತಂಡದ ಅಭಿಮಾನಿ ತನ್ನ ಟಿವಿ ಶೋರೂಮ್​ನಲ್ಲಿ ಒಂದು ಟಿವಿಗೆ ಒಂದು ಟಿವಿ ಉಚಿತವಿದ್ದು, ನೀವು 2 ಟಿವಿಗಳನ್ನು ತೆಗೆದುಕೊಳ್ಳಿ. ಒನ್​ ಬ್ರೇಕ್ ಒನ್ ಫ್ರೀ ಎಂದು ಕಿಚಾಯಿಸುತ್ತಾರೆ. ಅಂದರೆ ಪ್ರತಿ ಬಾರಿಯೂ ಭಾರತದ ವಿರುದ್ದ ಪಾಕ್ ಸೋತಾಗ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಆಕ್ರೋಶದಿಂದ ಟಿವಿಯನ್ನು ಒಡೆದು ಹಾಕುತ್ತಾರೆ. ಅದು ಈ ಬಾರಿ ಕೂಡ ಮುಂದುವರೆಯಲಿದ್ದು, ಹೀಗಾಗಿ ಬೈ 1 ಗೆಟ್​ 1 ಟಿವಿ ಆಫರ್ ಇದ್ದು, ನೀವು ಒಂದನ್ನು ಒಡೆದು ಒಂದನ್ನು ಇಟ್ಟುಕೊಳ್ಳಬಹುದು ಸಿಂಗ್ ಕಿಚಾಯಿಸುತ್ತಾರೆ. ಇದೀಗ ಈ ಜಾಹೀರಾತು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗಿದೆ.

ಇನ್ನು ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಉತ್ತಮ ದಾಖಲೆ ಹೊಂದಿದೆ. ಇದುವರೆಗೆ ಉಭಯ ತಂಡಗಳು 5 ಬಾರಿ ಟಿ20 ವಿಶ್ವಕಪ್​ನಲ್ಲಿ ಮುಖಾಮುಖಿಯಾಗಿದ್ದು, ಐದು ಸಲ ಕೂಡ ಭಾರತ ಗೆದ್ದಿದೆ. ಅದರಲ್ಲೂ 2007 ರಲ್ಲಿ, ಟೀಮ್ ಇಂಡಿಯಾ ಪಾಕಿಸ್ತಾನವನ್ನು ಸೋಲಿಸಿ ಕಪ್ ಮುಡಿಗೇರಿಸಿಕೊಂಡಿತು. ಇದಲ್ಲದೇ, 2012, 2014 ಮತ್ತು 2016 ರಲ್ಲಿ ಟೀಮ್ ಇಂಡಿಯಾ ಪಾಕ್​ಗೆ ಸೋಲಿನ ರುಚಿ ತೋರಿಸಿತ್ತು.

ಇದನ್ನೂ ಓದಿ: 1985 ರಿಂದ 2021: 25 ಕ್ಕೂ ಹೆಚ್ಚು ಬಾರಿ ಬದಲಾದ ಟೀಮ್ ಇಂಡಿಯಾ ಜೆರ್ಸಿ

(Star Sports brings back ‘Mauka Mauka’ campaign ahead of T20 World Cup 2021)

ತಾಜಾ ಸುದ್ದಿ

Related Stories

Click on your DTH Provider to Add TV9 Kannada