Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸನ್​ರೈಸರ್ಸ್ ಹೈದರಾಬಾದ್​ಗೆ ಹೊಸ ಸಾರಥಿ; ಆಫ್ರಿಕಾ ಆಟಗಾರನಿಗೆ ನಾಯಕತ್ವ ನೀಡಲು ಮುಂದಾದ ಫ್ರಾಂಚೈಸಿ

IPL 2023: ನಾಯಕನೂ ಸೇರಿದಂತೆ ಮಿನಿ-ಹರಾಜಿಗೆ ಮುಂಚಿತವಾಗಿ ಹಲವಾರು ಪ್ರಮುಖ ಆಟಗಾರರನ್ನು ಕೈಬಿಟ್ಟಿತು. ಇದರೊಂದಿಗೆ ಮುಂಬರುವ ಸೀಸನ್​ನಲ್ಲಿ ಹೈದರಾಬಾದ್ ತಂಡದ ನಾಯಕನ ಜವಾಬ್ದಾರಿಯನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬುದು ಈಗ ಎಲ್ಲರ ಮನದಲ್ಲಿ ಮೂಡಿರುವ ಪ್ರಶ್ನೆ.

ಸನ್​ರೈಸರ್ಸ್ ಹೈದರಾಬಾದ್​ಗೆ ಹೊಸ ಸಾರಥಿ; ಆಫ್ರಿಕಾ ಆಟಗಾರನಿಗೆ ನಾಯಕತ್ವ ನೀಡಲು ಮುಂದಾದ ಫ್ರಾಂಚೈಸಿ
ಸನ್​ರೈಸರ್ಸ್ ಹೈದರಾಬಾದ್ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on:Nov 23, 2022 | 9:41 AM

ಈ ಬಾರಿ ಶತಾಯಗತಾಯ ಐಪಿಎಲ್ ಟ್ರೋಫಿ ಗೆಲ್ಲಲೇಬೇಕು ಎಂಬ ಹಟ್ಟಕ್ಕೆ ಬಿದ್ದಿರುವ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ ಮಿನಿ ಹರಾಜಿಗೂ ಮುನ್ನ ಕೆಲವು ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಈ ಅನುಕ್ರಮದಲ್ಲಿ ಫ್ರಾಂಚೈಸಿಯು ನಾಯಕ ಕೇನ್ ವಿಲಿಯಮ್ಸನ್ (Kane Williamson) ಅವರೊಂದಿಗೆ ಮಿನಿ-ಹರಾಜಿಗೆ ಮುಂಚಿತವಾಗಿ ಹಲವಾರು ಪ್ರಮುಖ ಆಟಗಾರರನ್ನು ತಂಡದಿಂದ ಕೈಬಿಟ್ಟಿತು. ಇದರೊಂದಿಗೆ ಮುಂಬರುವ ಸೀಸನ್​ನಲ್ಲಿ ಹೈದರಾಬಾದ್ ತಂಡದ ನಾಯಕನ ಜವಾಬ್ದಾರಿಯನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬುದು ಈಗ ಎಲ್ಲರ ಮನದಲ್ಲಿ ಮೂಡಿರುವ ಪ್ರಶ್ನೆ. ಮೊದಲು ಈ ಸ್ಥಾನಕ್ಕೆ ಭುವನೇಶ್ವರ್ ಕುಮಾರ್ (Bhuvneshwar Kumar) ಹೆಸರು ಕೇಳಿ ಬಂದಿತ್ತು. ನಂತರ ಯುವ ಬ್ಯಾಟ್ಸ್ ಮನ್ ಅಭಿಷೇಕ್ ಶರ್ಮಾ (Abhishek Sharma) ನಾಯಕರಾಗಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಇದೀಗ ನಾಯಕತ್ವದ ರೇಸ್​ನಲ್ಲಿ ಹೊಸ ಹೆಸರೊಂದು ಮುನ್ನೆಲೆಗೆ ಬಂದಿದೆ.

ಮುಂದಿನ ವರ್ಷ ನಡೆಯಲಿರುವ ಐಪಿಎಲ್ 16ನೇ ಆವೃತ್ತಿಗೆ ಸನ್ ರೈಸರ್ಸ್ ತಂಡದ ನಾಯಕನಾಗಿ ದಕ್ಷಿಣ ಆಫ್ರಿಕಾದ ಆಟಗಾರ ಏಡೆನ್ ಮಾರ್ಕ್ರಮ್ ಅವರನ್ನು ನೇಮಿಸಲು ಆಡಳಿತ ಮಂಡಳಿ ಮುಂದಾಗಿದೆ ಎಂದು ವರದಿಯಾಗಿದೆ. ‘ತಂಡದ ನಾಯಕ ಯಾರು ಎಂದು ನಿರ್ಧರಿಸಲು ಸಾಕಷ್ಟು ಸಮಯವಿದೆ. ಅಭಿಮಾನಿಗಳು ಕೂಡ ಅದಕ್ಕಾಗಿ ಕಾಯುತ್ತಿದ್ದಾರೆ. ನಾಯಕತ್ವವು ದೊಡ್ಡ ಜವಾಬ್ದಾರಿಯಾಗಿದೆ. ಇದೀಗ ನಮ್ಮ ದೃಷ್ಟಿಯಲ್ಲಿ ಮಾರ್ಕ್ರಾಮ್ ಇದ್ದಾರೆ. ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಾಯಕತ್ವದ ಅನುಭವವಿಲ್ಲ ಆದರೆ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ದಕ್ಷಿಣ ಆಫ್ರಿಕಾದ ಟಿ20 ಲೀಗ್‌ನಲ್ಲೂ ಮಾರ್ಕ್ರಂ ಅವರನ್ನು ನಮ್ಮ ತಂಡದ ನಾಯಕರನ್ನಾಗಿ ತೆಗೆದುಕೊಳ್ಳಲು ನಾವು ಬಯಸುತ್ತೇವೆ. ನಾವು ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು SRH ಫ್ರಾಂಚೈಸಿಯ ಅಧಿಕಾರಿಯೊಬ್ಬರು ರಾಷ್ಟ್ರೀಯ ಮಾಧ್ಯಮ ಇನ್ಸೈಡ್ ಸ್ಪೋರ್ಟ್‌ಗೆ ತಿಳಿಸಿದ್ದಾರೆ. ಆದರೆ, ಅಧಿಕೃತ ಘೋಷಣೆ ಯಾವಾಗ ಹೊರಬೀಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ENG vs AUS: ‘ಐಪಿಎಲ್ ಇದ್ದಿದ್ದರೆ ತಕ್ಷಣ ಓಡುತ್ತಿದ್ರಿ’; ಮೊಯಿನ್ ಅಲಿ ಹೇಳಿಕೆಗೆ ಮೈಕಲ್ ಕ್ಲಾರ್ಕ್ ಟಾಂಗ್

ಸನ್‌ರೈಸರ್ಸ್ ಬಿಡುಗಡೆ ಮಾಡಿದ ಆಟಗಾರರು

ಕೇನ್ ವಿಲಿಯಮ್ಸನ್, ನಿಕೋಲಸ್ ಪೂರನ್, ಜಗದೀಶ್ ಸುಚಿತ್, ಪ್ರಿಯಮ್ ಗಾರ್ಗ್, ರವಿಕುಮಾರ್ ಸಮರ್ಥ್, ರೊಮಾರಿಯೋ ಶೆಫರ್ಡ್, ಸೌರಭ್ ದುಬೆ, ಸೀನ್ ಅಬಾಟ್, ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಸುಶಾಂತ್ ಮಿಶ್ರಾ, ವಿಷ್ಣು ವಿನೋದ್

ಉಳಿಸಿಕೊಂಡಿರುವ ಆಟಗಾರರು

ಅಬ್ದುಲ್ ಸಮದ್, ಐಡೆನ್ ಮಾರ್ಕ್ರಾಮ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ, ಮಾರ್ಕೊ ಯಾನ್ಸನ್, ವಾಷಿಂಗ್ಟನ್ ಸುಂದರ್, ಫಜ್ಲಕ್ ಫಾರೂಕಿ, ಕಾರ್ತಿಕ್ ತ್ಯಾಗಿ, ಭುವನೇಶ್ವರ್ ಕುಮಾರ್, ನಟರಾಜನ್, ಉಮ್ರಾನ್ ಮಲಿಕ್.

ತಂಡದ ಪ್ರದರ್ಶನ

ಸನ್​ರೈಸರ್ಸ್ ಹೈದರಾಬಾದ್ 2013ರಲ್ಲಿ ನಾಲ್ಕನೇ ಸ್ಥಾನ ಪಡೆದು ಪ್ಲೇಆಫ್ ಪ್ರವೇಶಿಸಿತ್ತು. 2014 ಮತ್ತು 2015ರ ಸೀಸನ್‌ಗಳಲ್ಲಿ ಲೀಗ್ ಹಂತವನ್ನು ಮೀರಿ ಮುನ್ನಡೆಯಲು ಸಾಧ್ಯವಾಗಲಿಲ್ಲ. 2016 ರಲ್ಲಿ, ಡೇವಿಡ್ ವಾರ್ನರ್ ನಾಯಕತ್ವದಲ್ಲಿ, ಈ ತಂಡವು ಐಪಿಎಲ್ ಚಾಂಪಿಯನ್ ಆಗಿತ್ತು. 2017 ರಲ್ಲಿ, ತಂಡವು ಪ್ಲೇ ಆಫ್​ಗೆ ಸುಸ್ತಾಗಿತ್ತು. ನಂತರ 2018 ರ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತು ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತ್ತು. ಸನ್‌ರೈಸರ್ಸ್ ಹೈದರಾಬಾದ್ 2019 ಮತ್ತು 2020 ರಲ್ಲಿ ಮತ್ತೆ ಪ್ಲೇಆಫ್ ತಲುಪಿತು. ಆದರೆ 2021 ಮತ್ತು 2022 ರಲ್ಲಿ, ಈ ತಂಡದ ಪ್ರದರ್ಶನವು ಅತ್ಯಂತ ಕಳಪೆಯಾಗಿದ್ದು, ಈ ಎರಡು ಬಾರಿ ಕನಿಷ್ಠ ಲೀಗ್ ಹಂತವನ್ನು ಸಹ ದಾಟಲು ಸಾಧ್ಯವಾಗಲಿಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:39 am, Wed, 23 November 22

ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ