SA vs IND 3rd T20I: ಪಂದ್ಯ ಮುಗಿಸಿ ಬಸ್ನಲ್ಲಿ ತೆರಳುವಾಗ ಸೂರ್ಯಕುಮಾರ್-ಅರ್ಶ್ದೀಪ್ ಸಿಂಗ್ ನಡುವೆ ಜಗಳ
Suryakumar Yadav vs Arshdeep Singh: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಟಿ20 ಪಂದ್ಯ ಮುಗಿದ ಬಳಿಕ ಬಸ್ನಲ್ಲಿ ತೆರಳುವಾಗ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಎಡಗೈ ವೇಗದ ಬೌಲರ್ ಅರ್ಶ್ದೀಪ್ ಸಿಂಗ್ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಇದಕ್ಕೆ ಪುಷ್ಠಿ ಎಂಬಂತೆ ವಿಡಿಯೋ ಒಂದು ವೈರಲ್ ಆಗುತ್ತಿದೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ಟಿ20 ಸರಣಿ ಮುಕ್ತಾಯಗೊಂಡಿದೆ. ಜೋಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ಗುರುವಾರ (ಡಿಸೆಂಬರ್ 14) ನಡೆದ ಮೂರು ಪಂದ್ಯಗಳ ಸರಣಿಯ ಮೂರನೇ ಮತ್ತು ಅಂತಿಮ ಟಿ20ಐ ಪಂದ್ಯದಲ್ಲಿ ಭಾರತವು ಹರಿಣಗಳ ಪಡೆಯನ್ನು 106 ರನ್‌ಗಳಿಂದ ಸೋಲಿಸಿತು. ಈ ಮೂಲಕ ಟಿ20 ಸರಣಿ ಸಮಬಲದಿಂದ ಅಂತ್ಯಕಂಡಿದೆ. ಈ ಪಂದ್ಯ ಮುಗಿಸಿ ಬಸ್ನಲ್ಲಿ ಹೋಟೆಲ್ಗೆ ತೆರಳುವ ವೇಳೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಸ್ಟಾರ್ ವೇಗಿ ಅರ್ಶ್ದೀಪ್ ಸಿಂಗ್ ನಡುವೆ ಜಗಳ ನಡೆದಿದೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ವಿಡಿಯೋ ಒಂದು ವೈರಲ್ ಆಗುತ್ತಿದೆ.
ಸೂರ್ಯಕುಮಾರ್ ಅವರು ಎಡಗೈ ವೇಗದ ಬೌಲರ್ ಅರ್ಶ್ದೀಪ್ಗೆ ಗದರಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸೂರ್ಯ ಅವರು ಅರ್ಶ್ದೀಪ್ನತ್ತ ಬೆರಳು ತೋರಿಸಿ ಕೋಪದಲ್ಲಿ ಮಾತಾಡುತ್ತಿದ್ದಾರೆ. ಯಾದವ್ ಕೋಪಕ್ಕೆ ನಿಖರವಾದ ಕಾರಣ ತಿಳಿದಿಲ್ಲ. ಇವರಿಬ್ಬರ ನಡುವೆ ನಿಜವಾಗಿಯೂ ಜಗಳವಾಗಿದೆಯೇ ಅಥವಾ ತಮಾಷೆಗಾಗಿ ಈರೀತಿ ಮಾಡಿದ್ದಾರೆಯ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಇಲ್ಲಿದೆ ನೋಡಿ ಆ ವೈರಲ್ ವಿಡಿಯೋ.
Suryakumar Yadav intense reaction to Arshdeep Singh following the third T20I against South Africa 👀#SAvsIND #SuryakumarYadav #CricketTwitter pic.twitter.com/HvYLsyIcKQ
— OneCricket (@OneCricketApp) December 15, 2023
ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಾಯಕ ಸೂರ್ಯಕುಮಾರ್ ಯಾದವ್ ಅವರ ದಾಖಲೆಯ ನಾಲ್ಕನೇ ಟಿ20I ಶತಕದ ನೆರವಿನಿಂದ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 201 ರನ್ಗಳನ್ನು ಗಳಿಸಿತು. ಸೂರ್ಯ 56 ಎಸೆತಗಳನ್ನು ಎದುರಿಸಿದರು ಏಳು ಫೋರ್ ಮತ್ತು ಎಂಟು ಸಿಕ್ಸರ್‌ಗಳ ಸಹಾಯದಿಂದ 100 ರನ್ ಗಳಿಸಿದರು. 202 ರನ್‌ಗಳ ಗುರಿ ಬೆನ್ನಟ್ಟಿದ ಪ್ರೋಟೀಸ್ 13.5 ಓವರ್‌ಗಳಲ್ಲಿ 95 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಕುಲ್ದೀಪ್ ಯಾದವ್ 2.5 ಓವರ್‌ಗಳಲ್ಲಿ 17 ರನ್ ನೀಡಿ ಐದು ವಿಕೆಟ್ ಪಡೆದರು. ಮೂರನೇ ಟಿ20I ಗೆಲುವಿನೊಂದಿಗೆ, ಭಾರತ ಟಿ20I ಸರಣಿಯನ್ನು 1-1 ಸ್ಕೋರ್‌ಲೈನ್‌ನೊಂದಿಗೆ ಪೂರ್ಣಗೊಳಿಸಿತು.
ಸದ್ಯದಲ್ಲೇ ರೋಹಿತ್ ಶರ್ಮಾ ಬಹುದೊಡ್ಡ ಘೋಷಣೆ ಸಾಧ್ಯತೆ: ಕ್ರಿಕೆಟ್ ಜೀವನಕ್ಕೆ ಪೂರ್ಣವಿರಾಮ?
ಏಕದಿನ ಸರಣಿ:
ಭಾರತ ಇದೀಗ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಟಿ20I ಸರಣಿಯ ಮುಕ್ತಾಯದ ನಂತರ, ಎರಡೂ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿ ಆಗಲಿದೆ. ಇದರ ಮೊದಲ ಪಂದ್ಯವು ಜೋಹಾನ್ಸ್‌ಬರ್ಗ್‌ನಲ್ಲಿ ಭಾನುವಾರ (ಡಿಸೆಂಬರ್ 17) ನಡೆಯಲಿದೆ. 50 ಓವರ್‌ಗಳ ಪಂದ್ಯಗಳಿಗೆ ಭಾರತ ತಂಡವನ್ನು ಕೆಎಲ್ ರಾಹುಲ್ ನಾಯಕನಾಗಿ ಮುನ್ನಡೆಸಲಿದ್ದಾರೆ. ಈಗಾಗಲೇ ರಾಹುಲ್ ಆಫ್ರಿಕಾ ತಲುಪಿದ್ದು, ಏಕದಿನ ತಂಡದಲ್ಲಿರುವ ಆಟಗಾರರು ಅಭ್ಯಾಸ ಶುರುಮಾಡಿಕೊಂಡಿದ್ದಾರೆ. ಐಡೆನ್ ಮಾರ್ಕ್ರಮ್ ಆಫ್ರಿಕಾ ತಂಡದ ನಾಯಕನಾಗಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಗೆ ಭಾರತದ ಏಕದಿನ ತಂಡ: ಕೆಎಲ್ ರಾಹುಲ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ , ರಿಂಕು ಸಿಂಗ್, ರಜತ್ ಪಾಟಿದಾರ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ದೀಪಕ್ ಚಹರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ