Suryakumar Yadav: ‘ನೀನೇ ನನ್ನ ಪ್ರಪಂಚ, ನೀ ನನಗೆ ಸಿಕ್ಕಿದ್ದು ನನ್ನ ಅದೃಷ್ಟ’; ಪತ್ನಿ ಜನ್ಮದಿನಕ್ಕೆ ಸೂರ್ಯ ಸಂದೇಶ

Suryakumar Yadav: ನನ್ನ ಜೀವನದಲ್ಲಿ ಒಂದು ಅಮೂಲ್ಯ ಕೊಡುಗೆ. ನೀನು ನನ್ನ ಹೆಂಡತಿಯಾಗಿ ಸಿಕ್ಕಿದ್ದು ನನ್ನ ಅದೃಷ್ಟ' ಎಂದು ಪತ್ನಿಯ ಮೇಲೆ ಪ್ರೀತಿಯ ಧಾರೆ ಎರೆದಿದ್ದಾರೆ.

Suryakumar Yadav: ‘ನೀನೇ ನನ್ನ ಪ್ರಪಂಚ, ನೀ ನನಗೆ ಸಿಕ್ಕಿದ್ದು ನನ್ನ ಅದೃಷ್ಟ’; ಪತ್ನಿ ಜನ್ಮದಿನಕ್ಕೆ ಸೂರ್ಯ ಸಂದೇಶ
ಮಡದಿಯೊಂದಿಗೆ ಸೂರ್ಯಕುಮಾರ್
Follow us
TV9 Web
| Updated By: ಪೃಥ್ವಿಶಂಕರ

Updated on:Nov 18, 2022 | 12:00 PM

ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ (T20 World Cup 2022) ಅಮೋಘ ಪ್ರದರ್ಶನ ನೀಡಿದ ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ (Suryakumar Yadav) ಸದ್ಯ ಅಂತಾರಾಷ್ಟ್ರೀಯ ಟಿ20 ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆಸೀಸ್‌ನಿಂದ ನೇರವಾಗಿ ನ್ಯೂಜಿಲೆಂಡ್‌ಗೆ ವಿಮಾನ ಹತ್ತಿದ ಸೂರ್ಯ ಶುಕ್ರವಾರದಿಂದ ಪ್ರಾರಂಭವಾಗುವ ಟಿ20 ಪಂದ್ಯಗಳ ಸರಣಿಯಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಏತನ್ಮಧ್ಯೆ, ಗುರುವಾರ (ನ.17) ಸೂರ್ಯಕುಮಾರ್ ಯಾದವ್ ತಮ್ಮ ಪತ್ನಿ ದೇವಿಶಾ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ಇನ್ಸ್ಟಾಗ್ರಾಮ್ನಲ್ಲಿ ವಿಶೇಷ ಸಂದೇಶ ಬರೆದು ಶುಭ ಹಾರೈಸಿದ್ದಾರೆ.

ಒಂದು ಅಮೂಲ್ಯ ಕೊಡುಗೆ

ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಪತ್ನಿಯೊಂದಿಗಿರುವ ಫೋಟೋವನ್ನು ಹಂಚಿಕೊಂಡಿರುವ ಸೂರ್ಯ, ‘ನನ್ನ ಸುಂದರ ಹೆಂಡತಿಗೆ ಜನ್ಮದಿನದ ಶುಭಾಶಯಗಳು. ನೀನೇ ನನ್ನ ಪ್ರಪಂಚ.. ನನ್ನನ್ನು ಸಮಸ್ಯೆಗಳಿಂದ ಪಾರು ಮಾಡುವ ನನ್ನ ಪ್ರಿಯತಮೆ. ನನ್ನನ್ನು ಪ್ರೇರೇಪಿಸುವ ಮತ್ತು ನನ್ನ ವೃತ್ತಿಜೀವನದತ್ತ ಗಮನಹರಿಸಲು ಪ್ರೋತ್ಸಾಹಿಸುವ ವ್ಯಕ್ತಿ. ನೀನು ನನ್ನ ಜೀವನದಲ್ಲಿ ಬರದಿದ್ದರೆ ನಾನೇನಾಗುತ್ತಿದ್ದೇನೋ ಏನೋ, ನನ್ನ ಜೀವನದಲ್ಲಿ ಒಂದು ಅಮೂಲ್ಯ ಕೊಡುಗೆ. ನೀನು ನನ್ನ ಹೆಂಡತಿಯಾಗಿ ಸಿಕ್ಕಿದ್ದು ನನ್ನ ಅದೃಷ್ಟ’ ಎಂದು ಪತ್ನಿಯ ಮೇಲೆ ಪ್ರೀತಿಯ ಧಾರೆ ಎರೆದಿದ್ದಾರೆ.

ಇದೀಗ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಶಕತ್ ವೈರಲ್ ಆಗುತ್ತಿದೆ. ಈ ಪೋಸ್ಟ್ ನೋಡಿದ ಕ್ರಿಕೆಟ್ ಅಭಿಮಾನಿಗಳು ಮತ್ತು ನೆಟ್ಟಿಗರು ದೇವಿಶಾ ಶೆಟ್ಟಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕಳುಹಿಸುತ್ತಿದ್ದಾರೆ. ‘ಬ್ಯೂಟಿಫುಲ್ ಅಂಡ್ ಲವ್ಲಿ ಕಪಲ್, ನೀವು ಎಂದೆಂದಿಗೂ ಹೀಗೆಯೇ ಖುಷಿಯಿಂದ ಇರಬೇಕು’ ಎಂಬ ಕಾಮೆಂಟ್‌ಗಳು ಹರಿದು ಬರುತ್ತಿವೆ.

ಇಬ್ಬರದ್ದು ಪ್ರೇಮ ವಿವಾಹ

ಸೂರ್ಯಕುಮಾರ್-ದೇವಿಶಾ ಅವರದ್ದು ಪ್ರೇಮ ವಿವಾಹ. 2012ರಲ್ಲಿ ಮುಂಬೈನ ಕಾಲೇಜೊಂದರಲ್ಲಿ ಓದುತ್ತಿದ್ದಾಗ ಸೂರ್ಯ ಮೊದಲ ಬಾರಿಗೆ ದೇವಿಶಾರನ್ನು ಭೇಟಿಯಾಗಿದ್ದರು. ಇಬ್ಬರ ಆಸಕ್ತಿಗಳು ಮತ್ತು ಇಷ್ಟಗಳು ಹೊಂದಿಕೆಯಾಗುತ್ತಿದ್ದಂತೆ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಅದರ ನಂತರ ಪ್ರೀತಿಯಲ್ಲಿ ಬಿದ್ದ ಈ ಜೋಡಿ, ಐದು ವರ್ಷಗಳ ಪ್ರೇಮಲೋಕದಲ್ಲಿ ತೇಲಾಡಿ, ಹಿರಿಯರ ಮನವೊಲಿಸಿ 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಪತ್ನಿಯನ್ನು ಪಂಚಪ್ರಾಣ ಎಂದು ಭಾವಿಸುವ ಸೂರ್ಯಕುಮಾರ್, ಅವರ ಹೆಸರನ್ನು ಹೃದಯದ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅಲ್ಲದೆ ದೇವಿಶಾ ಪ್ರತಿ ಹೆಜ್ಜೆಯಲ್ಲೂ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಸೂರ್ಯ ಹಲವಾರು ಸಂದರ್ಭಗಳಲ್ಲಿ ಹೇಳಿದ್ದಾರೆ.

Published On - 12:00 pm, Fri, 18 November 22