AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 21 ಸಿಕ್ಸ್..! 69 ಎಸೆತಗಳಲ್ಲಿ 195 ರನ್ ಚಚ್ಚಿದ ಆರ್​ಸಿಬಿ ಕೈಬಿಟ್ಟ ಸ್ವಸ್ತಿಕ್ ಚಿಕಾರ

Swastik Chikara: ಐಪಿಎಲ್ ಮಿನಿ ಹರಾಜಿನಲ್ಲಿ ಯಾವುದೇ ತಂಡಕ್ಕೂ ಬೇಡವಾಗಿದ್ದ ಯುವ ಬ್ಯಾಟ್ಸ್‌ಮನ್ ಸ್ವಸ್ತಿಕ್ ಚಿಕಾರ, ಅಯೋಧ್ಯ ಪ್ರೀಮಿಯರ್ ಲೀಗ್‌ನಲ್ಲಿ ಮಿಂಚಿದ್ದಾರೆ. ಗೋಮತಿ ಥಂಡರ್ ಪರ ಆಡಿದ ಚಿಕಾರ, ಹಿಂಡನ್ ಟೈಟಾನ್ಸ್ ವಿರುದ್ಧ 69 ಎಸೆತಗಳಲ್ಲಿ 195 ರನ್ (21 ಸಿಕ್ಸರ್) ಸಿಡಿಸಿ ದಾಖಲೆ ಬರೆದಿದ್ದಾರೆ. ತಮ್ಮನ್ನು ತಿರಸ್ಕರಿಸಿದ ಫ್ರಾಂಚೈಸಿಗಳಿಗೆ, ವಿಶೇಷವಾಗಿ ಆರ್​ಸಿಬಿಗೆ, ಸರಿಯಾದ ತಿರುಗೇಟು ನೀಡಿದ್ದಾರೆ. ಈ ಸ್ಫೋಟಕ ಇನ್ನಿಂಗ್ಸ್ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದೆ.

ಬರೋಬ್ಬರಿ 21 ಸಿಕ್ಸ್..! 69 ಎಸೆತಗಳಲ್ಲಿ 195 ರನ್ ಚಚ್ಚಿದ ಆರ್​ಸಿಬಿ ಕೈಬಿಟ್ಟ ಸ್ವಸ್ತಿಕ್ ಚಿಕಾರ
Swastik Chikara
ಪೃಥ್ವಿಶಂಕರ
|

Updated on:Mar 22, 2026 | 4:16 PM

Share

ಕೆಲವೇ ತಿಂಗಳ ಹಿಂದೆ ನಡೆದಿದ್ದ ಐಪಿಎಲ್ (IPL) ಮಿನಿ ಹರಾಜಿನಲ್ಲಿ ಯಾವ ತಂಡಕ್ಕೂ ಬೇಡವಾಗಿದ್ದ ಯುವ ಬ್ಯಾಟ್ಸ್‌ಮನ್ ಇದೀಗ ದೇಶಿ ಲೀಗ್​ನಲ್ಲಿ ಸಿಡಿಲಬ್ಬರದ ಇನ್ನಿಂಗ್ಸ್ ಆಡುವ ಮೂಲಕ ತನ್ನನ್ನು ತಿರಸ್ಕರಿಸಿದ ಎಲ್ಲಾ ಫ್ರಾಂಚೈಸಿಗಳಿಗೆ ಸರಿಯಾದ ತಿರುಗೇಟು ನೀಡಿದ್ದಾನೆ. ಅದರಲ್ಲೂ ತಂಡಕ್ಕೆ ಸೇರಿಸಿಕೊಂಡು ಒಂದೇ ಒಂದು ಪಂದ್ಯದಲ್ಲಿ ಆಡಲು ಅವಕಾಶ ಕೊಡದ ಆರ್​ಸಿಬಿ ತಂಡಕ್ಕೆ ತೀವ್ರ ಮುಖಭಂಗವಾದ್ದಂತ್ತಾಗಿದೆ. ಅಷ್ಟಕ್ಕೂ ನಾವು ಇಷ್ಟೆಲ್ಲ ಮಾತನಾಡುವ ಆಟಗಾರ ಯಾರೆಂದರೆ, ಉತ್ತರ ಪ್ರದೇಶ ಮೂಲದ ಸ್ವಸ್ತಿಕ್ ಚಿಕಾರ (Swastik Chikara).

ಯಾವ ಐಪಿಎಲ್ ತಂಡಕ್ಕೂ ಬೇಡವಾದ ಸ್ವಸ್ತಿಕ್ ಚಿಕಾರ ಪ್ರಸ್ತುತ ಅಯೋಧ್ಯಾ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಮಾರ್ಚ್ 22 ರಂದು ನಡೆದ ಪಂದ್ಯದಲ್ಲಿ ಗೋಮತಿ ಥಂಡರ್ ಪರ ಆಡುತ್ತಿರುವ ಸ್ವಸ್ತಿಕ್ ಚಿಕಾರ ಬಿರುಗಾಳಿಯ ಶತಕ ಸಿಡಿಸಿದರು. ಹಿಂಡನ್ ಟೈಟಾನ್ಸ್ ತಂಡದ ವಿರುದ್ಧ ನಡೆದ ಈ ಪಂದ್ಯದಲ್ಲಿ ಗೋಮತಿ ಥಂಡರ್ ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ತಂಡದ ಪರ ಬ್ಯಾಟಿಂಗ್‌ ಆರಂಭಿಸಿದ ಸ್ವಸ್ತಿಕ್ ಚಿಕಾರ ಮತ್ತು ಪ್ರಿಯಾಂಶು ಪಾಂಡೆ ಕೊನೆಯವರೆಗೂ ಅಜೇಯರಾಗಿ ಉಳಿದು ತಂಡವನ್ನು 307 ರನ್​ಗಳ ದಾಖಲೆಯ ಮೊತ್ತ ಪೇರಿಸಿದರು. ಈ ಇಬ್ಬರೂ ಶತಕದ ಇನ್ನಿಂಗ್ಸ್ ಕೂಡ ಆಡಿದರು.

21 ಸಿಕ್ಸರ್‌, 195 ರನ್ ಬಾರಿಸಿದ ಸ್ವಸ್ತಿಕ್

ಮೊದಲು ಬ್ಯಾಟಿಂಗ್ ಮಾಡಿದ ಗೋಮ್ತಿ ಥಂಡರ್ 20 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 307 ರನ್ ಗಳಿಸಿತು. ತಂಡದ ಪರ ಪ್ರಿಯಾಂಶು ಪಾಂಡೆ 54 ಎಸೆತಗಳಲ್ಲಿ 100 ರನ್ ಗಳಿಸಿ ಅಜೇಯರಾಗಿ ಉಳಿದರೆ, ಸ್ವಸ್ತಿಕ್ ಚಿಕಾರ 69 ಎಸೆತಗಳಲ್ಲಿ 195 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಸ್ವಸ್ತಿಕ್ ಚಿಕಾರ ಅವರ ಈ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 21 ಸಿಕ್ಸರ್‌ಗಳು ಸೇರಿದ್ದವು. ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ಟಿ20 ಕ್ರಿಕೆಟ್‌ನಲ್ಲಿ ಇದುವರೆಗೆ ಯಾವುದೇ ಬ್ಯಾಟ್ಸ್‌ಮನ್ 195 ರನ್ ಗಳಿಸಿರಲಿಲ್ಲ. ಆದರೀಗ ಆ ದಾಖಲೆ ಸ್ವಸ್ತಿಕ್ ಪಾಲಾಗಿದೆ.

308 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಹಿಂದನ್ ಟೈಟಾನ್ಸ್ ತಂಡ 180 ರನ್‌ ಕಲೆಹಾಕಲಷ್ಟೇ ಶಕ್ತವಾಗಿ ಪಂದ್ಯವನ್ನು 89 ರನ್‌ಗಳಿಂದ ಸೋತಿತು. ಸರಳವಾಗಿ ಹೇಳುವುದಾದರೆ, ಸ್ವಸ್ತಿಕ್ ಚಿಕಾರ ಕಲೆಹಾಕಿದ 195 ರನ್​ಗಳನ್ನು ಕಲೆಹಾಕುವುದಕ್ಕೂ ಹಿಂದನ್ ಟೈಟಾನ್ಸ್‌ ತಂಡಕ್ಕೆ ಸಾಧ್ಯವಾಗಲಿಲ್ಲ.

ತಂಡದಿಂದ ಕೈಬಿಟ್ಟ ಆರ್​ಸಿಬಿ

ವಾಸ್ತವವಾಗಿ 2025 ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸ್ವಸ್ತಿಕ್ ಚಿಕಾರ ಅವರನ್ನು ಮೂಲ ಬೆಲೆಗೆ ತಂಡಕ್ಕೆ ಸೇರಿಸಿಕೊಂಡಿತ್ತು. ಆದಾಗ್ಯೂ ಅವರಿಗೆ ಕಳೆದ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಗಲಿಲ್ಲ. ಆದಾಗ್ಯೂ ಸ್ವಸ್ತಿಕ್, ಸದಾ ವಿರಾಟ್ ಕೊಹ್ಲಿ ಹಿಂದೆ ಸುತ್ತುವುದರಿಂದಲೇ ಸಾಕಷ್ಟು ಸುದ್ದಿಯಾಗಿದ್ದರು. ಐಪಿಎಲ್ ಮುಗಿದ ಬಳಿಕ 2026 ರ ಮಿನಿ ಹರಾಜಿಗೂ ಮುನ್ನ ಚಿಕಾರ ಅವರನ್ನು ಆರ್​ಸಿಬಿ ಫ್ರಾಂಚೈಸಿ ಬಿಡುಗಡೆ ಮಾಡಿತ್ತು. ಇತ್ತ ಹರಾಜಿನಲ್ಲೂ ಯಾವ ತಂಡವೂ ಅವರನ್ನು ಖರೀದಿಸಿರಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:15 pm, Sun, 22 March 26

Follow Us
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಬೇರೆ ವಿದ್ಯಾರ್ಥಿಯ ಹಾಸಿಗೆಯಲ್ಲಿ ಮಲಗಿದ್ದಕ್ಕೆ ವಿದ್ಯಾರ್ಥಿಗೆ ಥಳಿತ
ಬೇರೆ ವಿದ್ಯಾರ್ಥಿಯ ಹಾಸಿಗೆಯಲ್ಲಿ ಮಲಗಿದ್ದಕ್ಕೆ ವಿದ್ಯಾರ್ಥಿಗೆ ಥಳಿತ
ಈ ವಾರ ಈ ರಾಶಿಗೆ ಆಕಸ್ಮಿಕ ಧನಲಾಭ, ಹಳೆಯ ಬಾಕಿ ವಸೂಲಿ
ಈ ವಾರ ಈ ರಾಶಿಗೆ ಆಕಸ್ಮಿಕ ಧನಲಾಭ, ಹಳೆಯ ಬಾಕಿ ವಸೂಲಿ
ಹೋಟೆಲ್, ಮೊಬೈಲ್ ಶಾಪ್ ಸೇರಿ 12ಕ್ಕೂ ಅಧಿಕ ಅಂಗಡಿಗಳು ಬೆಂಕಿಗಾಹುತಿ!
ಹೋಟೆಲ್, ಮೊಬೈಲ್ ಶಾಪ್ ಸೇರಿ 12ಕ್ಕೂ ಅಧಿಕ ಅಂಗಡಿಗಳು ಬೆಂಕಿಗಾಹುತಿ!
ಲಷ್ಕರ್ ಕಮಾಂಡರ್ ಬಿಲಾಲ್ ಆರಿಫ್ ಮೇಲೆ ಗುಂಡಿನ ದಾಳಿ
ಲಷ್ಕರ್ ಕಮಾಂಡರ್ ಬಿಲಾಲ್ ಆರಿಫ್ ಮೇಲೆ ಗುಂಡಿನ ದಾಳಿ
ಬ್ರಹ್ಮಣಿಪುರ ಕೆರೆಯಲ್ಲಿ ಬೆಳ್ಳಂ ಬೆಳಿಗ್ಗೆ ಕಾಣಿಸಿಕೊಂಡ ಕಾಡಾನೆಗಳ ಹಿಂಡು
ಬ್ರಹ್ಮಣಿಪುರ ಕೆರೆಯಲ್ಲಿ ಬೆಳ್ಳಂ ಬೆಳಿಗ್ಗೆ ಕಾಣಿಸಿಕೊಂಡ ಕಾಡಾನೆಗಳ ಹಿಂಡು