ವೈಭವ್ ಸೂರ್ಯವಂಶಿ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಮೊದಲ ಗೆಲುವು ದಾಖಲಿಸಿದ ಬಿಹಾರ
Syed Mushtaq Ali Trophy 2025: ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2025 ರಲ್ಲಿ ಬಿಹಾರ ತಂಡವು ಉತ್ತರ ಪ್ರದೇಶವನ್ನು ಸೋಲಿಸಿ ತನ್ನ ಮೊದಲ ಗೆಲುವು ದಾಖಲಿಸಿದೆ. ಪ್ರಮುಖ ಆಟಗಾರ ವೈಭವ್ ಸೂರ್ಯವಂಶಿ ಇಲ್ಲದಿದ್ದರೂ, ಬಿಹಾರ ಆರು ವಿಕೆಟ್‌ಗಳಿಂದ ರಿಂಕು ಸಿಂಗ್ ನಾಯಕತ್ವದ ಯುಪಿ ತಂಡವನ್ನು ಮಣಿಸಿದೆ. ಇಡೀ ಟೂರ್ನಿಯಲ್ಲಿ ಸೋಲಿನಿಂದ ಕಂಗೆಟ್ಟಿದ್ದ ತಂಡಕ್ಕೆ ಇದು ದೊಡ್ಡ ನೈತಿಕ ಸ್ಥೈರ್ಯ ತಂದಿದೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2025 ರ (Syed Mushtaq Ali Trophy 2025) ತನ್ನ ಅಂತಿಮ ಗುಂಪು ಪಂದ್ಯದಲ್ಲಿ ಬಿಹಾರ ತಂಡವು ಉತ್ತರ ಪ್ರದೇಶ ತಂಡವನ್ನು ಸೋಲಿಸುವ ಮೂಲಕ ಈ ಟೂರ್ನಿಯಲ್ಲಿ ತನ್ನ ಮೊದಲು ಗೆಲುವು ದಾಖಲಿಸಿತು. ಅಚ್ಚರಿಯ ಸಂಗತಿಯೆಂದರೆ ಇಡೀ ಟೂರ್ನಿಯಲ್ಲಿ ತಂಡದ ಪರ ರನ್‌ಗಳ ಮಳೆ ಹರಿಸಿದ್ದ ವೈಭವ್ ಸೂರ್ಯವಂಶಿ (Vaibhav Suryavanshi) ಇಲ್ಲದಯೇ ಬಿಹಾರ ತಂಡ ಕಣಕ್ಕಿಳಿದಿತ್ತು. ವೈಭವ್ ಇಲ್ಲದೆಯೇ ತಂಡ ಮೊದಲು ಗೆಲುವು ದಾಖಲಿಸಿರುವುದು ಇಲ್ಲಿ ಗಮನಿಸಬೇಕಾದ ಸಂಗತಿ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಿಂಕು ಸಿಂಗ್ ನೇತೃತ್ವದ ಉತ್ತರ ಪ್ರದೇಶ ತಂಡವು 146 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಬಿಹಾರ ತಂಡವು ಆರು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಈ ಟೂರ್ನಿಯಲ್ಲಿ ಮೊದಲ ಆರು ಪಂದ್ಯಗಳಲ್ಲಿ ಸೋತಿದ್ದ ಬಿಹಾರ ತಂಡವು ಇದೀಗ ಮೊದಲು ಗೆಲುವು ದಾಖಲಿಸಿದ ಸಂತಸದಲ್ಲಿದೆ.
ರಿಂಕು ವಿಫಲ, 146 ರನ್ ಕಲೆಹಾಕಿದ ಯುಪಿ
2025 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಅಂತಿಮ ಗುಂಪು ಪಂದ್ಯದಲ್ಲಿ ಟಾಸ್ ಗೆದ್ದ ಬಿಹಾರ ತಂಡವು ಉತ್ತರ ಪ್ರದೇಶವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತು. ಬಿಹಾರದ ಬಿಗಿಯಾದ ಬೌಲಿಂಗ್ ಮುಂದೆ ತತ್ತರಿಸಿದ ಉತ್ತರ ಪ್ರದೇಶ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತಾ ಸಾಗಿತು. ಇತ್ತ ತಂಡದ ನಾಯಕ ರಿಂಕು ಸಿಂಗ್ ಕೂಡ 25 ಎಸೆತಗಳನ್ನು ಎದುರಿಸಿ 76 ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 19 ರನ್ ಗಳಿಸಿದರು. ಸಮೀರ್ ರಿಜ್ವಿ 22 ರನ್ ಗಳಿಸಿ, ಯುಪಿ ಪರ ಅಗ್ರ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ಅಂತಿಮವಾಗಿ ಯುಪಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 144 ರನ್ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಟಗಾರ ಪ್ರಶಾಂತ್ ವೀರ್, ಅವರು 7 ನೇ ಕ್ರಮಾಂಕದಲ್ಲಿ ಬಂದು 40 ರನ್ ಗಳಿಸಿದರು.
SMAT 2025: ವೈಭವ್ ಎದುರು ಸೋತ ಅರ್ಜುನ್; ಆದರೂ ಬಿಹಾರ ವಿರುದ್ಧ ಗೆದ್ದ ಗೋವಾ
6 ವಿಕೆಟ್‌ಗಳಿಂದ ಗೆದ್ದ ಬಿಹಾರ
ವೈಭವ್ ಸೂರ್ಯವಂಶಿ ಇಲ್ಲದೆ ಆಡುತ್ತಿರುವ ಬಿಹಾರಕ್ಕೆ 145 ರನ್‌ಗಳ ಗುರಿ ಇತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ, ತಂಡದ ಆರಂಭಿಕ ಜೋಡಿ ಉತ್ತಮ ಪ್ರದರ್ಶನ ನೀಡಿತು. ಹೊಸ ಆರಂಭಿಕ ಜೋಡಿ ಆಯುಷ್ ಲೋಹರುಕಾ ಮತ್ತು ಪಿಯೂಷ್ ಕುಮಾರ್ ಸಿಂಗ್ 83 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಪರಿಣಾಮವಾಗಿ, ತಂಡವು ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಗುರಿಯನ್ನು ತಲುಪಿತು. ಆರಂಭಿಕ ಪಿಯೂಷ್ ಕುಮಾರ್ ಸಿಂಗ್ 54 ಎಸೆತಗಳಲ್ಲಿ 57 ರನ್ ಗಳಿಸುವ ಮೂಲಕ ಬಿಹಾರ ಪರ ಅತಿ ಹೆಚ್ಚು ರನ್ ಗಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
