T20 Blast 2023: ಹಾಲಿ ಚಾಂಪಿಯನ್ಸ್ಗೆ ಸೋಲುಣಿಸಿ ಫೈನಲ್ಗೆ ಎಂಟ್ರಿ ಕೊಟ್ಟ ಎಸೆಕ್ಸ್
T20 Blast 2023: ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಎಸೆಕ್ಸ್ ತಂಡವು ಪವರ್ಪ್ಲೇನಲ್ಲಿ 3 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಕೇವಲ 49 ರನ್ಗಳು ಮಾತ್ರ.
T20 Blast 2023: ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಟಿ20 ಬ್ಲಾಸ್ಟ್ನಲ್ಲಿ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹ್ಯಾಂಪ್‌ಶೈರ್ ವಿರುದ್ಧ ಎಸೆಕ್ಸ್ ತಂಡವು ರೋಚಕ ಜಯ ಸಾಧಿಸಿದೆ. ಮಳೆಬಾಧಿತ ಈ ಪಂದ್ಯದಲ್ಲಿ ಟಾಸ್ ಗೆದ್ದ ಎಸೆಕ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಹ್ಯಾಂಪ್‌ಶೈರ್ ಪರ ಆರಂಭಿಕ ಆಟಗಾರ ಬೆನ್ ಮೆಕ್‌ಡರ್ಮಾಟ್ ಕೇವಲ 12 ಎಸೆತಗಳಲ್ಲಿ 5 ಫೋರ್ ಹಾಗೂ 1 ಸಿಕ್ಸ್ನೊಂದಿಗೆ 29 ರನ್ ಬಾರಿಸಿದರು.
ಸ್ಪೋಟಕ ಆರಂಭ ಪಡೆದರೂ ಆ ಬಳಿಕ ಹ್ಯಾಂಪ್‌ಶೈರ್ ತಂಡವು ದಿಢೀರ್ ಕುಸಿತಕ್ಕೊಳಗಾಯಿತು. 57 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ವೇಳೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋ ವೆದರ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದರು.
ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಜೋ ವೆದರ್ಲಿ 39 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 4 ಫೋರ್ನೊಂದಿಗೆ 63 ರನ್ ಬಾರಿಸಿದರು. ಇನ್ನು ಅಂತಿಮ ಓವರ್ಗಳಲ್ಲಿ 11 ಎಸೆತಗಳನ್ನು ಎದುರಿಸಿದ ಹೊವೆಲ್ 22 ರನ್ ಸಿಡಿಸಿದರು. ಪರಿಣಾಮ ಹ್ಯಾಂಪ್‌ಶೈರ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 170 ರನ್ ಕಲೆಹಾಕಿತು.
ಇದೇ ವೇಳೆ ಮಳೆಯಿಂದಾಗಿ ಕೆಲ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಅಲ್ಲದೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಎಸೆಕ್ಸ್ ತಂಡಕ್ಕೆ 12 ಓವರ್ಗಳಲ್ಲಿ 115 ರನ್ಗಳ ಟಾರ್ಗೆಟ್ ನೀಡಲಾಯಿತು.
ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಎಸೆಕ್ಸ್ ತಂಡವು ಪವರ್ಪ್ಲೇನಲ್ಲಿ 3 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಕೇವಲ 49 ರನ್ಗಳು ಮಾತ್ರ. ಆದರೆ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಥ್ಯೂ ಕ್ರಿಚ್ಲಿ ಹಾಗೂ ಡೇನಿಯಲ್ ಸ್ಯಾಮ್ಸ್ ತಂಡದ ರನ್ ಗತಿಯನ್ನು ಹೆಚ್ಚಿಸಿದರು.
17 ಎಸೆತಗಳನ್ನು ಎದುರಿಸಿದ ಸ್ಯಾಮ್ಸ್ 3 ಸಿಕ್ಸ್ ಹಾಗೂ 2 ಫೋರ್ನೊಂದಿಗೆ 29 ರನ್ ಬಾರಿಸಿ ಔಟಾದರು. ಪರಿಣಾಮ ಕೊನೆಯ ಓವರ್ನಲ್ಲಿ ಎಸೆಕ್ಸ್ ತಂಡಕ್ಕೆ ಗೆಲ್ಲಲು 13 ರನ್ಗಳ ಅವಶ್ಯಕತೆಯಿತ್ತು.
ನಾಥನ್ ಎಲ್ಲಿಸ್ ಎಸೆದ ಕೊನೆಯ ಓವರ್ನ ಮೊದಲ ಎಸೆತದಲ್ಲೇ ಮ್ಯಾಥ್ಯೂ ಕ್ಲಿಚ್ಲಿ ಸಿಕ್ಸ್ ಸಿಡಿಸಿದರು. 2ನೇ ಎಸೆತದಲ್ಲಿ 1 ರನ್ ಓಡಿದರು. 3ನೇ ಎಸೆತದಲ್ಲಿ ನಾಯಕ ಸೈಮನ್ ಹಾರ್ಮರ್ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ 11.3 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು.
They required 13 off the final over…@EssexCricket only needed three balls ?#Blast23 #FinalsDay https://t.co/bpe5jbywxi pic.twitter.com/GdkKB8NhMr
— Vitality Blast (@VitalityBlast) July 15, 2023
ಈ ರೋಚಕ ಗೆಲುವಿನೊಂದಿಗೆ ಎಸೆಕ್ಸ್ ತಂಡವು ಟಿ20 ಬ್ಲಾಸ್ಟ್ 2023ರ ಫೈನಲ್ಗೆ ಪ್ರವೇಶಿಸಿದೆ. ಅತ್ತ ಹಾಲಿ ಚಾಂಪಿಯನ್ ಹ್ಯಾಂಪ್‌ಶೈರ್ ಸೆಮಿಫೈನಲ್ನಲ್ಲಿ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದಿದೆ.
ಎಸೆಕ್ಸ್ ಪ್ಲೇಯಿಂಗ್ 11: ಆ್ಯಡಂ ರೋಸಿಂಗ್ಟನ್ (ವಿಕೆಟ್ ಕೀಪರ್) , ಡೇನಿಯಲ್ ಲಾರೆನ್ಸ್ , ಮೈಕೆಲ್-ಕೈಲ್ ಪೆಪ್ಪರ್ , ರಾಬಿನ್ ದಾಸ್ , ಪಾಲ್ ವಾಲ್ಟರ್ , ಮ್ಯಾಥ್ಯೂ ಕ್ರಿಚ್ಲಿ , ಡೇನಿಯಲ್ ಸ್ಯಾಮ್ಸ್ , ಸೈಮನ್ ಹಾರ್ಮರ್ (ನಾಯಕ) , ಶೇನ್ ಸ್ನೇಟರ್ , ಆರನ್ ಬಿಯರ್ಡ್ , ಸ್ಯಾಮ್ ಕುಕ್.
ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್ನಲ್ಲಿನ ಟೀಮ್ ಇಂಡಿಯಾದ 9 ಎದುರಾಳಿಗಳು ಇವರೇ..!
ಹ್ಯಾಂಪ್‌ಶೈರ್ ಪ್ಲೇಯಿಂಗ್ 11: ಜೇಮ್ಸ್ ವಿನ್ಸ್ (ನಾಯಕ) , ಬೆನ್ ಮೆಕ್‌ಡರ್ಮಾಟ್ (ವಿಕೆಟ್ ಕೀಪರ್) , ಟಾಮ್ ಪರ್ಸ್ಟ್ , ಜೋ ವೆದರ್ಲಿ , ಲಿಯಾಮ್ ಡಾಸನ್ , ರಾಸ್ ವೈಟ್ಲಿ , ಜೇಮ್ಸ್ ಫುಲ್ಲರ್ , ಬೆನ್ನಿ ಹೋವೆಲ್ , ಕ್ರಿಸ್ ವುಡ್ , ನಾಥನ್ ಎಲ್ಲಿಸ್ , ಜಾನ್ ಟರ್ನರ್.