ಜನವರಿಯಿಂದ ಡಿಸೆಂಬರ್​ ತನಕ: ಲೀಗ್ ಕ್ರಿಕೆಟ್ ರಸದೌತಣ..!

T20 leagues Schedule: ಜನವರಿ 9 ರಿಂದ ಸೌತ್ ಆಫ್ರಿಕಾ ಟಿ20 ಲೀಗ್ ಶುರುವಾಗಲಿದೆ. ಈ ಟೂರ್ನಿ ಮುಗಿಯುವುದು ಫೆಬ್ರವರಿ 10 ರಂದು. ಇದೇ ವೇಳೆ ಮತ್ತೊಂದೆಡೆ ಯುಎಇನಲ್ಲಿ ಇಂಟರ್​ನ್ಯಾಷನಲ್​ ಟಿ20 ಲೀಗ್ ಕೂಡ ಜರುಗಲಿದೆ. ಈ ಟೂರ್ನಿ ಜನವರಿ 19 ರಿಂದ ಆರಂಭವಾಗಿ ಫೆಬ್ರವರಿ 17 ಕ್ಕೆ ಮುಗಿಯಲಿದೆ.

ಜನವರಿಯಿಂದ ಡಿಸೆಂಬರ್​ ತನಕ: ಲೀಗ್ ಕ್ರಿಕೆಟ್ ರಸದೌತಣ..!
T20 leagues
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jan 02, 2024 | 2:24 PM

2024 ರಲ್ಲಿ ಕ್ರಿಕೆಟ್ (Cricket)​ ಪ್ರೇಮಿಗಳಿಗೆ ರಸದೌತಣ ಸಿಗಲಿರುವುದು ಖಚಿತ. ಏಕೆಂದರೆ ಈ ಬಾರಿಯ ವರ್ಷಾರಂಭದಿಂದಲೇ ಲೀಗ್ ಕ್ರಿಕೆಟ್ ಟೂರ್ನಿ​ಗಳು ಶುರುವಾಗುತ್ತಿದೆ. ಹೀಗೆ ಜನವರಿಯಿಂದ ಶುರುವಾಗುವ ಕ್ರಿಕೆಟ್ ಟೂರ್ನಿ ಮುಗಿಯುವುದು ಮುಂದಿನ ವರ್ಷ ಜನವರಿಯಲ್ಲಿ ಎಂಬುದು ವಿಶೇಷ. ಅಂದರೆ ಐಸಿಸಿ ಟೂರ್ನಿ ಹಾಗೂ ಸರಣಿಗಳ ನಡುವೆ ಈ ವರ್ಷ 10 ಲೀಗ್ ಟೂರ್ನಿಗಳು ನಡೆಯಲಿದೆ. ಅದು ಕೂಡ ಬ್ಯಾಕ್ ಟು ಬ್ಯಾಕ್. ಹೀಗಾಗಿಯೇ  ವರ್ಷಂಪೂರ್ತಿ ಕ್ರಿಕೆಟ್​ ಪ್ರೇಮಿಗಳಿಗೆ ಭರ್ಜರಿ ಮನರಂಜನೆಯಂತು ಸಿಗಲಿದೆ.

ಜನವರಿ 9 ರಿಂದ ಸೌತ್ ಆಫ್ರಿಕಾ ಟಿ20 ಲೀಗ್ ಶುರುವಾಗಲಿದೆ. ಈ ಟೂರ್ನಿ ಮುಗಿಯುವುದು ಫೆಬ್ರವರಿ 10 ರಂದು. ಇದೇ ವೇಳೆ ಮತ್ತೊಂದೆಡೆ ಯುಎಇನಲ್ಲಿ ಇಂಟರ್​ನ್ಯಾಷನಲ್​ ಟಿ20 ಲೀಗ್ ಕೂಡ ಜರುಗಲಿದೆ. ಈ ಟೂರ್ನಿ ಜನವರಿ 19 ರಿಂದ ಆರಂಭವಾಗಿ ಫೆಬ್ರವರಿ 17 ಕ್ಕೆ ಮುಗಿಯಲಿದೆ.

ಹಾಗೆಯೇ ಜನವರಿ 19 ರಿಂದ ಮಾರ್ಚ್ 1 ರ ತನಕ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ ನಡೆಯಲಿದೆ. ಹಾಗೆಯೇ ಪಾಕಿಸ್ತಾನ್ ಸೂಪರ್ ಲೀಗ್ ಫೆಬ್ರವರಿ 13 ರಿಂದ ಶುರುವಾಗಿ ಮಾರ್ಚ್ 19 ಕ್ಕೆ ಕೊನೆಗೊಳ್ಳಲಿದೆ.

ಇನ್ನು ರಂಗು ರಂಗಿನ ಕ್ರಿಕೆಟ್ ಟೂರ್ನಿ ಐಪಿಎಲ್​ ಮಾರ್ಚ್ 23 ರಿಂದ ಶುರುವಾಗುವ ಸಾಧ್ಯತೆಯಿದೆ. ಅದರಂತೆ ಮೇ 26 ರಂದು ಫೈನಲ್ ಪಂದ್ಯ ನಡೆಯಬಹುದು. ಮೇ 30 ರಿಂದ ಇಂಗ್ಲೆಂಡ್​ನಲ್ಲಿ ವಿಟಾಲಿಟಿ ಬ್ಲಾಸ್ಟ್ ಟೂರ್ನಿ ಶುರುವಾಗಲಿದ್ದು, ಈ ಟೂರ್ನಿಯ ಫೈನಲ್ ಪಂದ್ಯ ಮೇ 26 ರಂದು ನಡೆಯಲಿದೆ.

ಇದರ ಬೆನ್ನಲ್ಲೇ ಟಿ20 ವಿಶ್ವಕಪ್​ ಕೂಡ ಶುರುವಾಗಲಿದೆ. ಅಂದರೆ ಜೂನ್- 4 ರಿಂದ ಜೂನ್ 30 ತನಕ ಚುಟುಕು ವಿಶ್ವಕಪ್ ಕದನ ನಡೆಯಲಿದೆ.

ಇನ್ನು ಇಂಗ್ಲೆಂಡ್​ನ ಹಂಡ್ರೇಡ್ ಲೀಗ್​ ಅನ್ನು ಆಗಸ್ಟ್​ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಮತ್ತೊಂದೆಡೆ ವೆಸ್ಟ್ ಇಂಡೀಸ್​ನಲ್ಲಿ ಆಗಸ್ಟ್-ಸೆಪ್ಟೆಂಬರ್ ನಡುವೆ ಕೆರಿಬಿಯನ್ ಪ್ರೀಮಿಯರ್ ಲೀಗ್​ ನಡೆಯಲಿದೆ.

ಹಾಗೆಯೇ ಅಬುಧಾಬಿ ಟಿ10 ಲೀಗ್ ಅಕ್ಟೋಬರ್ ತಿಂಗಳಲ್ಲಿ ಜರುಗಲಿದೆ. ಇನ್ನು ಬಿಗ್ ಬ್ಯಾಷ್ ಲೀಗ್ ಡಿಸೆಂಬರ್​ನಿಂದ ಆರಂಭವಾಗಿ ಮುಂದಿನ ವರ್ಷ ಜನವರಿಯಲ್ಲಿ ಮುಗಿಯಲಿದೆ.

ಅಂದರೆ ಇಲ್ಲಿ ಫ್ರಾಂಚೈಸಿ ಲೀಗ್ ಕ್ರಿಕೆಟ್​ ವರ್ಷಂಪೂರ್ತಿ ನಡೆಯುತ್ತಿರುವುದು ವಿಶೇಷ. ಇದರ ನಡುವೆ ಹಲವು ಸರಣಿಗಳನ್ನು ಕೂಡ ಆಡಲಾಗುತ್ತದೆ. ಹೀಗಾಗಿ ಈ ವರ್ಷವಿಡೀ ಕ್ರಿಕೆಟ್​ ಪ್ರೇಮಿಗಳಿಗೆ ಮನರಂಜನೆಯ ರಸದೌತಣ ಸಿಗುವುದು ಖಚಿತ ಎಂದೇ ಹೇಳಬಹುದು.

ಇದನ್ನೂ ಓದಿ: Virat Kohli: ಹೊಸ ವರ್ಷದಲ್ಲಿ ಕಿಂಗ್ ಕೊಹ್ಲಿ ಮುಂದಿದೆ 10 ದಾಖಲೆಗಳು

ಫ್ರಾಂಚೈಸಿ ಲೀಗ್​ಗಳ ವೇಳಾಪಟ್ಟಿ:

  • ಸೌತ್ ಆಫ್ರಿಕಾ 20 ಲೀಗ್ (SA20)- ಜನವರಿ 9 ರಿಂದ ಫೆಬ್ರವರಿ 10
  • ಇಂಟರ್​ನ್ಯಾಷನಲ್​ ಲೀಗ್ ಟಿ20 (ILT20)- ಜನವರಿ 19 ರಿಂದ ಫೆಬ್ರವರಿ 17
  • ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ (BPL)- ಜನವರಿ 19 ರಿಂದ ಮಾರ್ಚ್ 1
  • ಪಾಕಿಸ್ತಾನ್ ಸೂಪರ್ ಲೀಗ್ (PSL)- ಫೆಬ್ರವರಿ 13 ರಿಂದ ಮಾರ್ಚ್ 19
  • ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮಾರ್ಚ್ 23 ರಿಂದ ಮೇ 26 (ತಾತ್ಕಾಲಿಕ ದಿನಾಂಕ ನಿಗದಿ)
  • ವಿಟಾಲಿಟಿ ಬ್ಲಾಸ್ಟ್ (Vitality Blast)- ಮೇ 30 ರಿಂದ ಸೆಪ್ಟೆಂಬರ್ 14
  • ದಿ ಹಂಡ್ರೆಡ್ ಲೀಗ್ (The Hundread)- ಆಗಸ್ಟ್​
  • ಕೆರಿಬಿಯನ್ ಪ್ರೀಮಿಯರ್ ಲೀಗ್ (CPL)- ಆಗಸ್ಟ್​-ಸೆಪ್ಟೆಂಬರ್
  • ಟಿ10 ಲೀಗ್ (T10 League)- ಅಕ್ಟೋಬರ್
  • ಬಿಗ್ ಬ್ಯಾಷ್ ಲೀಗ್ (BBL)- ಡಿಸೆಂಬರ್-ಜನವರಿ

—————————————————————–

  • ಟಿ20 ವಿಶ್ವಕಪ್ 2024 (T20 WC 2024)- ಜೂನ್ 4 ರಿಂದ ಜೂನ್ 30

Published On - 2:22 pm, Tue, 2 January 24

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ