ಟಿ20 ಮಹಿಳಾ ವಿಶ್ವಕಪ್ (T20 Women’s World Cup) ಅಂತಿಮ ಹಂತ ತಲುಪಿದೆ. ಇದೇ ಫೆ. 26 ರಂದು ಎರಡು ತಂಡಗಳ ನಡುವೆ ಫೈನಲ್ ಕದನ ನಡೆಯಲಿದೆ. ಸೆಮಿಫೈನಲ್ನಲ್ಲಿ ಬಲಿಷ್ಠ ತಂಡಗಳನ್ನು ಮಣಿಸಿ ಫೈನಲ್ಗೆ ಎಂಟ್ರಿಕೊಟ್ಟಿರುವ ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ (South Africa and Australia) ನಡುವೆ ಫೈನಲ್ ಪಂದ್ಯ ನಡೆಯಲಿದೆ. ಆಸ್ಟ್ರೇಲಿಯಾ ಬರೋಬ್ಬರಿ ಏಳನೇ ಬಾರಿ ಫೈನಲ್ಗೆ ತಲುಪಿದೆ. ಆದರೆ ಇತ್ತ ದಕ್ಷಿಣ ಆಫ್ರಿಕಾ ತಂಡ ಇದೇ ಮೊದಲ ಬಾರಿಗೆ ಫೈನಲ್ ತಲುಪಿದೆ. ಈಗ ವಿಶ್ವಕಪ್ ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಅಂಟಿಕ್ಕೊಂಡಿರುವ ಚೋಕರ್ಸ್ ಹಣೆಪಟ್ಟಿಯನ್ನು ಕಳಚುವ ಅವಕಾಶ ಸೃಷ್ಟಿಯಾಗಿದೆ. ಯಾಕೆಂದರೆ, ದಕ್ಷಿಣ ಆಫ್ರಿಕಾದ ಪುರುಷ ಹಾಗೂ ಮಹಿಳಾ ತಂಡಗಳು ಪ್ರತಿ ಐಸಿಸಿ ಈವೆಂಟ್ನಲ್ಲೂ ಪ್ರಶಸ್ತಿ ಗೆಲ್ಲುವ ಪ್ರಮುಖ ಸ್ಪರ್ಧಿಯಾಗಿ ಕಣಕ್ಕಿಳಿಯುತ್ತವೆ. ಆದರೆ ಪ್ರಮುಖ ಪಂದ್ಯಗಳಲ್ಲಿ ಸೋಲುವ ಮೂಲಕ ಪ್ರಶಸ್ತಿಯಿಂದ ವಂಚಿತವಾಗಿವೆ. ಹಾಗಾಗಿ ಈ ತಂಡಕ್ಕೆ ಚೋಕರ್ಸ್ ಎಂಬ ಹಣೆಪಟ್ಟಿ ಕಟ್ಟಲಾಗಿದೆ.
ಒಂದು ಕಾಲದಲ್ಲಿ, ದಕ್ಷಿಣ ಆಫ್ರಿಕಾದ ಪುರುಷರ ತಂಡದಲ್ಲಿ ಸ್ಟಾರ್ ಕ್ರಿಕೆಟಿಗರ ದಂಡೆ ಇತ್ತು. ಮಿ.360 ಖ್ಯಾತಿಯ ಎಬಿ ಡಿವಿಲಿಯರ್ಸ್, ಹಾಶಿಮ್ ಆಮ್ಲಾ, ಡು ಪ್ಲೆಸಿಸ್, ಡೇವಿಡ್ ಮಿಲ್ಲರ್, ಮೊರ್ಕೆಲ್, ಡೇಲ್ ಸ್ಟೇಯ್ನ್ ಅವರ ಉಪಸ್ಥಿತಿಯ ಹೊರತಾಗಿಯೂ ಆಫ್ರಿಕನ್ ತಂಡಕ್ಕೆ ಐಸಿಸಿ ಈವೆಂಟ್ನಲ್ಲಿ ಫೈನಲ್ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಆದರೆ ಮಹಿಳಾ ತಂಡ ಈ ವರ್ಷ ಟಿ20 ವಿಶ್ವಕಪ್ ಫೈನಲ್ಗೇರಿದ್ದು, ಕಪ್ ಗೆಲ್ಲುವ ಮೂಲಕ ತಮ್ಮ ತಂಡಕ್ಕೆ ಅಂಟಿಕೊಂಡಿರುವ ಕಳಂಕವನ್ನು ತೊಳೆಯುವಂತಹ ಅದ್ಭುತ ಅವಕಾಶ ಹೊಂದಿದೆ.
T20 World Cup 2023:ಕೇವಲ 14 ಎಸೆತಗಳಲ್ಲಿ 56 ರನ್! ಟಿ20ಯಲ್ಲಿ ಪಾಕ್ ಪರ ಸಿಡಿಯಿತು ಮೊದಲ ಶತಕ
ಆಫ್ರಿಕಾ ತಂಡ ವಿಶ್ವಕಪ್ ಎತ್ತಿಹಿಡಿಯಲು ಒಂದು ಗೆಲುವಿನ ಅಂತರದಲ್ಲಿದೆ. ಆದರೆ ಈ ಸವಾಲು ಅವರಿಗೆ ಸುಲಭವಲ್ಲ. ಏಕೆಂದರೆ ಆಸ್ಟ್ರೇಲಿಯ ತಂಡ ಬಲಿಷ್ಠವಾಗಿದ್ದು, ಕಳೆದ ಬಾರಿಯ ಮುಖಾಮುಖಿಯಲ್ಲೂ ಆಸೀಸ್ ತಂಡ ಹರಿಣಗಳಿಗೆ ಮಣ್ಣು ಮುಕ್ಕಿಸಿತ್ತು. ಇದೇ ಟೂರ್ನಿಯಲ್ಲೇ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾವನ್ನು ಸೋಲಿಸಿತ್ತು.
ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತು. ಈ ಸವಾಲನ್ನು ಆಸ್ಟ್ರೇಲಿಯಾ 16.3 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಪೂರ್ಣಗೊಳಿಸಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Sat, 25 February 23