KL Rahul: ಸತತ ವೈಫಲ್ಯ…ಈ ವರ್ಷ ಕೆಎಲ್ ರಾಹುಲ್ ಕಲೆಹಾಕಿದ್ದು ಎಷ್ಟು ರನ್ ಗೊತ್ತಾ?

India vs New Zealand: ಯುಎಇನಲ್ಲಿ ನಡೆದ ದ್ವಿತಿಯಾರ್ಧದಲ್ಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಹೀಗಾಗಿಯೇ ಈ ಸಲ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್​ ಆಗಿ ರಾಹುಲ್ ಹೆಸರು ಮುಂಚೂಣಿಯಲ್ಲಿತ್ತು.

KL Rahul: ಸತತ ವೈಫಲ್ಯ...ಈ ವರ್ಷ ಕೆಎಲ್ ರಾಹುಲ್ ಕಲೆಹಾಕಿದ್ದು ಎಷ್ಟು ರನ್ ಗೊತ್ತಾ?
KL Rahul
Follow us
TV9 Web
| Updated By: ಝಾಹಿರ್ ಯೂಸುಫ್

Updated on: Oct 31, 2021 | 10:35 PM

ಇಂಡಿಯನ್ ಪ್ರೀಮಿಯರ್ ಲೀಗ್​​​ನ (IPL) ಬೆಸ್ಟ್​ ಬ್ಯಾಟರ್ ಯಾರು ಎಂದು ಕೇಳಿದ್ರೆ ಥಟ್ಟನೆ ಬರುವ ಉತ್ತರ ಕೆಎಲ್ ರಾಹುಲ್ (KL Rahul). ಇದಕ್ಕೆ ಸಾಕ್ಷಿಯಾಗಿ ರಾಹುಲ್ ಅವರ ಅಂಕಿ ಅಂಶಗಳು ಸಿಗುತ್ತವೆ. ಈ ಬಾರಿಯ ಐಪಿಎಲ್​ ಅಂಕಿ ಅಂಶಗಳನ್ನೇ ತೆಗೆದುಕೊಂಡರೆ…ರಾಹುಲ್ 13 ಪಂದ್ಯಗಳಿಂದ 626 ರನ್​ ಕಲೆಹಾಕಿದ್ದಾರೆ. ಇದೇ ವೇಳೆ 6 ಅರ್ಧಶತಕಗಳನ್ನು ಬಾರಿಸಿದ್ದರು. ಅಷ್ಟೇ ಅಲ್ಲದೆ ಈ ಬಾರಿ ಐಪಿಎಲ್​ನಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದರು. ಇನ್ನು ಕಳೆದ ಐಪಿಎಲ್ 2020 ರಲ್ಲೂ ರಾಹುಲ್ ಭರ್ಜರಿಯಾಗಿ ಬ್ಯಾಟ್ ಬೀಸಿದ್ದರು. 14 ಪಂದ್ಯಗಳಲ್ಲಿ 670 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದಾಗ್ಯೂ ಟೀಮ್ ಇಂಡಿಯಾ ಪರ ಆಡುವಾಗ ಕೆಎಲ್ ರಾಹುಲ್ ವಿಫಲರಾಗುತ್ತಿರುವುದೇ ಅಚ್ಚರಿ.

ಏಕೆಂದರೆ ಕೆಎಲ್ ರಾಹುಲ್ ಈ ವರ್ಷ ಟೀಮ್ ಇಂಡಿಯಾ ಪರ ಆಡಿದ 6 ಇನಿಂಗ್ಸ್​ಗಳಲ್ಲಿ ಕಲೆಹಾಕಿದ್ದು ಕೇವಲ 36 ರನ್ ಎಂದರೆ ನಂಬಲೇಬೇಕು. ಇಂಗ್ಲೆಂಡ್​ ವಿರುದ್ದದ 5 ಪಂದ್ಯಗಳ ಟಿ20 ಸರಣಿಯಲ್ಲಿ ವಿಫಲರಾಗಿದ್ದ ರಾಹುಲ್ ಅವರನ್ನು ಅಂತಿಮ ಪಂದ್ಯದಿಂದ ಕೈ ಬಿಡಲಾಗಿತ್ತು. ಅಂದರೆ ಸತತ ನಾಲ್ಕು ಅವಕಾಶಗಳಲ್ಲೂ ರಾಹುಲ್ ವೈಫಲ್ಯ ಅನುಭವಿಸಿದ್ದರು.

ಇಂಗ್ಲೆಂಡ್ ವಿರುದ್ದದ ಮೊದಲ ಪಂದ್ಯದಲ್ಲಿ 1 ರನ್​ಗಳಿಸಿದರೆ, 2ನೇ ಹಾಗೂ 3ನೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಇನ್ನು 4ನೇ ಪಂದ್ಯದಲ್ಲಿ ಕೇವಲ 14 ರನ್​ಗಳಿಸಿ ನಿರಾಸೆ ಮೂಡಿಸಿದ್ದರು. ಇದಾಗ್ಯೂ ಐಪಿಎಲ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ರಾಹುಲ್ ಪಂಜಾಬ್ ಕಿಂಗ್ಸ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಅದರಲ್ಲೂ ಯುಎಇನಲ್ಲಿ ನಡೆದ ದ್ವಿತಿಯಾರ್ಧದಲ್ಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಹೀಗಾಗಿಯೇ ಈ ಸಲ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್​ ಆಗಿ ರಾಹುಲ್ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಪಾಕಿಸ್ತಾನ್ ವಿರುದ್ದದ ಮಹತ್ವದ ಪಂದ್ಯದಲ್ಲಿ ರಾಹುಲ್ ಕೇವಲ 3 ರನ್​ಗಳಿಸಿ ಕ್ಲೀನ್ ಬೌಲ್ಡ್ ಆಗಿದ್ದರು. ಇನ್ನು ನ್ಯೂಜಿಲೆಂಡ್ ವಿರುದ್ದ ನಿರ್ಣಾಯಕ ಪಂದ್ಯದಲ್ಲಿ 18 ರನ್​ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಅತ್ತ ಐಪಿಎಲ್​ನಲ್ಲಿ 13 ಪಂದ್ಯಗಳಿಂದ 626 ರನ್​ ಬಾರಿಸಿದ್ದ ರಾಹುಲ್, ಇತ್ತ ಟೀಮ್ ಇಂಡಿಯಾ ಪರ ಕಳೆದ 6 ಇನಿಂಗ್ಸ್​ಗಳಿಂದ ಕಲೆಹಾಕಿದ್ದು ಕೇವಲ 36 ರನ್​ ಮಾತ್ರ. ಐಪಿಎಲ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ರಾಹುಲ್ ಟೀಮ್ ಇಂಡಿಯಾ ಪರ ವಿಫಲರಾಗುತ್ತಿರುವುದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್​ ಚಿಂತೆಯನ್ನು ಹೆಚ್ಚಿಸಿದೆ.

ಇದನ್ನೂ ಓದಿ: IPL 2022: ನಾಲ್ವರು ಆಟಗಾರರಿಗೆ 42 ಕೋಟಿ ರೂ. ನಿಗದಿ: ಐಪಿಎಲ್ ಹೊಸ ರಿಟೈನ್ ನಿಯಮ

ಇದನ್ನೂ ಓದಿ: T20 World Cup 2021: ಸೆಮಿಫೈನಲ್ ಲೆಕ್ಕಾಚಾರ: ನ್ಯೂಜಿಲೆಂಡ್ ವಿರುದ್ದ ಟೀಮ್ ಇಂಡಿಯಾ ಗೆಲ್ಲಲೇಬೇಕು, ಯಾಕೆ ಗೊತ್ತಾ?

ಇದನ್ನೂ ಓದಿ: ICC T20 Batter Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಇಬ್ಬರ ಸ್ಥಾನ ಕುಸಿತ

(T20 World Cup 2021 Another flop show from KL Rahul)