T20 World Cup 2021 Final: ನ್ಯೂಜಿಲೆಂಡ್ ಟೀಮ್ನಲ್ಲಿ 1 ಬದಲಾವಣೆ : ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11
New Zealand vs Australia Predicted Playing XI: ಡೇವಿಡ್ ವಾರ್ನರ್ , ಆರೋನ್ ಫಿಂಚ್ (ನಾಯಕ) , ಮಿಚೆಲ್ ಮಾರ್ಷ್ , ಸ್ಟೀವನ್ ಸ್ಮಿತ್ , ಗ್ಲೆನ್ ಮ್ಯಾಕ್ಸ್ ವೆಲ್ , ಮಾರ್ಕಸ್ ಸ್ಟೊಯಿನಿಸ್ , ಮ್ಯಾಥ್ಯೂ ವೇಡ್
ಟಿ20 ವಿಶ್ವಕಪ್ ಫೈನಲ್ (T20 World Cup 2021 Final) ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ನವೆಂಬರ್ 14 ರಂದು ದುಬೈನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್ (New zealand vs Australia Final) ಮುಖಾಮುಖಿಯಾಗಲಿದೆ. ಉಭಯ ತಂಡಗಳು 2015ರ ಏಕದಿನ ವಿಶ್ವಕಪ್ ಬಳಿಕ ಮತ್ತೆ ಫೈನಲ್ನಲ್ಲಿ ಮುಖಾಮುಖಿಯಾಗುತ್ತಿರುವುದು ವಿಶೇಷ. ಹೀಗಾಗಿ ಅಂತಿಮ ಪಂದ್ಯವು ಜಿದ್ದಾಜಿದ್ದಿನಿಂದ ಕೂಡಿರಲಿದೆ. ಸೆಮಿಫೈನಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಉಭಯ ತಂಡಗಳು ಫೈನಲ್ ಪಂದ್ಯದ ಪ್ಲೇಯಿಂಗ್ ಇಲೆವೆನ್ನಲ್ಲಿ ದೊಡ್ಡ ಬದಲಾವಣೆ ಮಾಡುವುದಿಲ್ಲ. ಅದರಂತೆ ಆಸ್ಟ್ರೇಲಿಯಾ ತಂಡವು ಪಾಕ್ ವಿರುದ್ದ ಕಣಕ್ಕಿಳಿಸಿದ ಬಳಗವನ್ನೇ ಫೈನಲ್ನಲ್ಲೂ ಆಡಿಸಲಿದೆ.
ಇನ್ನೊಂದೆಡೆ ನ್ಯೂಜಿಲೆಂಡ್ ತಂಡದಲ್ಲಿ ಒಂದು ಮಹತ್ವದ ಬದಲಾವಣೆ ಕಂಡು ಬರುವುದು ಖಚಿತವಾಗಿದೆ. ಏಕೆಂದರೆ ಫೈನಲ್ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ವಿಕೆಟ್ ಕೀಪರ್ ಬ್ಯಾಟರ್ ಡೆವೊನ್ ಕಾನ್ವೇ ಗಾಯಗೊಂಡಿದ್ದು, ಹೀಗಾಗಿ ಅವರು ಅಂತಿಮ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ನ್ಯೂಜಿಲೆಂಡ್ ಹೆಡ್ ಕೋಚ್ ಗ್ಯಾರಿ ಸ್ಟೀಡ್ ತಿಳಿಸಿದ್ದಾರೆ.
ಅದರಂತೆ ಕಾನ್ವೇ ಬದಲಿಗೆ ನ್ಯೂಜಿಲೆಂಡ್ ತಂಡ ಟಿಮ್ ಸೀಫರ್ಟ್ ಅವರನ್ನು ಫೈನಲ್ನಲ್ಲಿ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಸಿಫರ್ಟ್ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಆಡಿದ್ದರು. 26ರ ಹರೆಯದ ಸಿಫರ್ಟ್ ಕಿವೀಸ್ ತಂಡದ ಸ್ಫೋಟಕ ಬ್ಯಾಟರ್ಗಳಲ್ಲಿ ಒಬ್ಬರು. ಏಕದಿನ ಮತ್ತು T20 ಎರಡರಲ್ಲೂ ಸಿಫರ್ಟ್ ಸ್ಟ್ರೈಕ್ ರೇಟ್ 120 ಕ್ಕಿಂತ ಮೇಲಿದೆ. ಹೀಗಾಗಿ ನಿರ್ಣಾಯಕ ಪಂದ್ಯದಲ್ಲಿ ಸೀಫರ್ಟ್ಗೆ ಅವಕಾಶ ಸಿಗಲಿದೆ.
ಅದರಂತೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ:
ನ್ಯೂಜಿಲೆಂಡ್ ಸಂಭಾವ್ಯ ಪ್ಲೇಯಿಂಗ್ 11: ಮಾರ್ಟಿನ್ ಗಪ್ಟಿಲ್ , ಡೇರಿಲ್ ಮಿಚೆಲ್ , ಕೇನ್ ವಿಲಿಯಮ್ಸನ್ (ನಾಯಕ) , ಟಿಮ್ ಸೀಫರ್ಟ್ (ವಿಕೆಟ್ ಕೀಪರ್) , ಗ್ಲೆನ್ ಫಿಲಿಪ್ಸ್ , ಜೇಮ್ಸ್ ನೀಶಮ್ , ಮಿಚೆಲ್ ಸ್ಯಾಂಟ್ನರ್ , ಆಡಮ್ ಮಿಲ್ನ್ , ಟಿಮ್ ಸೌಥಿ , ಇಶ್ ಸೋಧಿ , ಟ್ರೆಂಟ್ ಬೌಲ್ಟ್
ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್ 11: ಡೇವಿಡ್ ವಾರ್ನರ್ , ಆರೋನ್ ಫಿಂಚ್ (ನಾಯಕ) , ಮಿಚೆಲ್ ಮಾರ್ಷ್ , ಸ್ಟೀವನ್ ಸ್ಮಿತ್ , ಗ್ಲೆನ್ ಮ್ಯಾಕ್ಸ್ ವೆಲ್ , ಮಾರ್ಕಸ್ ಸ್ಟೊಯಿನಿಸ್ , ಮ್ಯಾಥ್ಯೂ ವೇಡ್ ( ವಿಕೆಟ್ ಕೀಪರ್ ) , ಪ್ಯಾಟ್ ಕಮಿನ್ಸ್ , ಮಿಚೆಲ್ ಸ್ಟಾರ್ಕ್ , ಆಡ್ಯಂ ಝಂಪಾ , ಜೋಶ್ ಹ್ಯಾಝಲ್ವುಡ್.
ಇದನ್ನೂ ಓದಿ: Explained: ನ್ಯೂಜಿಲೆಂಡ್-ಆಸ್ಟ್ರೇಲಿಯಾ ಮತ್ತೊಂದು ಭಾರತ-ಪಾಕಿಸ್ತಾನ್…ಆದರೆ
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ
(T20 World Cup 2021 Final: New Zealand vs Australia Predicted Playing XI)
Published On - 10:06 pm, Sat, 13 November 21