T20 world cup 2021: ಭಾರತ-ಪಾಕ್ ಮೊದಲ ಕದನ: ಯಾರು ಬಲಿಷ್ಠ?

IND vs PAK Head to Head Records: ವಿಕೆಟ್ ಪಡೆದವರ ಪಟ್ಟಿಯಲ್ಲಿ ಭಾರತ ಪರ ಇರ್ಫಾನ್ ಪಠಾಣ್ 5 ಹಾಗೂ ಪಾಕ್ ಪರ ಉಮರ್ ಗುಲ್ 11 ವಿಕೆಟ್ ಕಬಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಆದರೆ ಈ ಇಬ್ಬರೂ ಪ್ರಸ್ತುತ ತಂಡದಲ್ಲಿರದ ಕಾರಣ ಇದು ಪರಿಗಣನೆಗೆ ಬರುವುದಿಲ್ಲ.

T20 world cup 2021: ಭಾರತ-ಪಾಕ್ ಮೊದಲ ಕದನ: ಯಾರು ಬಲಿಷ್ಠ?
IND vs PAK
Follow us
TV9 Web
| Updated By: ಝಾಹಿರ್ ಯೂಸುಫ್

Updated on: Oct 23, 2021 | 10:08 PM

T20 world cup 2021: ಭಾರತ-ಪಾಕಿಸ್ತಾನ್ (India vs Pakistan) ನಡುವಣ ಜಿದ್ದಾಜಿದ್ದಿನ ಪಂದ್ಯಕ್ಕಾಗಿ ಕ್ಷಣಗಣನೆ ಶುರುವಾಗಿದೆ. ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸುವ ಇರಾದೆಯಲ್ಲಿದೆ ಟೀಮ್ ಇಂಡಿಯಾ. ಅತ್ತ ಭಾರತ ವಿರುದ್ದ ಗೆದ್ದರೆ ವಿಶೇಷ ಬೋನಸ್ ನೀಡುವುದಾಗಿ ಪಾಕ್ ಕ್ರಿಕೆಟ್ ಮಂಡಳಿ ತಮ್ಮ ಆಟಗಾರರಿಗೆ ಇನಾಮು ಘೋಷಿಸಿದೆ. ಹೀಗಾಗಿ ಪಾಕ್ ಕೂಡ ಗೆಲ್ಲಲು ಇನ್ನಿಲ್ಲದ ಪ್ರಯತ್ನ ಮಾಡಲಿದೆ. ಆದರೆ ಪ್ರಸ್ತುತ ಪಾಕ್​ ತಂಡವನ್ನು ಗಮನಿಸಿದರೆ ಟೀಮ್ ಇಂಡಿಯಾ ವಿರುದ್ದ ಗೆಲ್ಲೋದು ಸುಲಭವಲ್ಲ. ಏಕೆಂದರೆ ಬಲಾಢ್ಯರನ್ನೇ ಒಳಗೊಂಡಿರುವ ಭಾರತ ತಂಡವು ಅಭ್ಯಾಸ ಪಂದ್ಯಗಳಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳಿಗೆ ಸೋಲಿನ ರುಚಿ ತೋರಿಸಿತ್ತು. ಈ ಎರಡು ತಂಡಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಪಾಕ್ ತಂಡ ಟೀಮ್ ಇಂಡಿಯಾ ಪಾಲಿಗೆ ಸುಲಭ ಸವಾಲಾಗಲಿದೆ.

ಏಕೆಂದರೆ ಅಭ್ಯಾಸ ಪಂದ್ಯದಲ್ಲಿ ಪಾಕ್ ವೆಸ್ಟ್ ಇಂಡೀಸ್ ವಿರುದ್ದ 7 ವಿಕೆಟ್​ಗಳ ಗೆಲುವು ಸಾಧಿಸಿದರೂ, 2ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ 6 ವಿಕೆಟ್​ಗಳಿಂದ ಸೋಲನುಭವಿಸಿತ್ತು. ಇನ್ನು ಈ ಹಿಂದಿನ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡರೂ, ಅಲ್ಲೂ ಕೂಡ ಭಾರತ ತಂಡವೇ ಮೇಲುಗೈ ಸಾಧಿಸಿದೆ.

ಉಭಯ ತಂಡಗಳು ಇದುವರೆಗೆ ಟಿ20 ಕ್ರಿಕೆಟ್​ನಲ್ಲಿ 8 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಅದರಲ್ಲಿ ಪಾಕ್ ಗೆದ್ದಿದ್ದು ಕೇವಲ 1 ಪಂದ್ಯದಲ್ಲಿ ಮಾತ್ರ. ಅಂದರೆ 8 ರಲ್ಲಿ ಟೀಮ್ ಇಂಡಿಯಾ 7 ಬಾರಿ ವಿಜಯ ಸಾಧಿಸಿದೆ. ಹಾಗೆಯೇ ಕೊನೆಯ 5 ಮುಖಾಮುಖಿಯಲ್ಲಿ ಟೀಮ್ ಇಂಡಿಯಾ 4 ರಲ್ಲಿ ಜಯ ಸಾಧಿಸಿದೆ. ಇನ್ನು ಟಿ20 ವಿಶ್ವಕಪ್​ ಮುಖಾಮುಖಿಯ ಅಂಕಿ ಅಂಶವನ್ನು ಗಮನಿಸಿದ್ರೆ, ಉಭಯ ತಂಡಗಳು 5 ಬಾರಿ ಆಡಿದೆ. ಈ ಐದು ಪಂದ್ಯಗಳನ್ನು ಭಾರತ ತಂಡವೇ ಗೆದ್ದುಕೊಂಡಿರುವುದು ವಿಶೇಷ.

ಇದಲ್ಲದೆ ಉಭಯ ತಂಡಗಳ ಮುಖಾಮುಖಿಯಲ್ಲಿ ಟಾಸ್ ಪಾತ್ರವನ್ನು ಗಮನಿಸಿದ್ರೆ, ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 3 ಬಾರಿ ಗೆದ್ದರೆ, ಪಾಕ್ ಒಂದು ಬಾರಿ ಕೂಡ ಗೆದ್ದಿಲ್ಲ. ಇನ್ನು ಚೇಸಿಂಗ್ ಮಾಡಿ ಭಾರತ ಪಾಕ್ ವಿರುದ್ದ 4 ಬಾರಿ ವಿಜಯ ಸಾಧಿಸಿದೆ. ಪಾಕ್ ಚೇಸಿಂಗ್​ನಲ್ಲಿ ಗೆದ್ದಿದ್ದು ಕೇವಲ 1 ಬಾರಿ ಮಾತ್ರ.

ಇನ್ನು ಉಭಯ ತಂಡಗಳ ಟಾಪ್ ಸ್ಕೋರರ್ ಯಾರು ಎಂದು ನೋಡಿದ್ರೆ ಟೀಮ್ ಇಂಡಿಯಾ ಪರ ಅಜೇಯ 78 ರನ್​ ಬಾರಿಸಿರುವ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಭಾರತದ ವಿರುದ್ದ ಮೊಹಮ್ಮದ್ ಹಫೀಜ್ 61 ರನ್ ಬಾರಿಸಿದ್ದು ಗರಿಷ್ಠ ಸ್ಕೋರ್. ವಿಕೆಟ್ ಪಡೆದವರ ಪಟ್ಟಿಯಲ್ಲಿ ಭಾರತ ಪರ ಇರ್ಫಾನ್ ಪಠಾಣ್ 5 ಹಾಗೂ ಪಾಕ್ ಪರ ಉಮರ್ ಗುಲ್ 11 ವಿಕೆಟ್ ಕಬಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಆದರೆ ಈ ಇಬ್ಬರೂ ಪ್ರಸ್ತುತ ತಂಡದಲ್ಲಿರದ ಕಾರಣ ಇದು ಪರಿಗಣನೆಗೆ ಬರುವುದಿಲ್ಲ.

ಒಟ್ಟಾರೆ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ ಯಾವುದೇ ಹಂತದಲ್ಲೂ ಪಾಕಿಸ್ತಾನ್ ಟೀಮ್ ಇಂಡಿಯಾಗೆ ಸರಿಸಾಟಿಯಾಗಿಲ್ಲ. ಪ್ರತಿಯೊಂದು ವಿಭಾಗದಲ್ಲೂ ಟೀಮ್ ಇಂಡಿಯಾ ಪಾಕ್ ವಿರುದ್ದ ಮೇಲುಗೈ ಸಾಧಿಸಿದೆ. ಹೀಗಾಗಿ ಎಲ್ಲಾ ರೀತಿಯಿಂದಲೂ ಪಾಕ್ ವಿರುದ್ದ ಭಾರತವೇ ಬಲಿಷ್ಠ. ಇದಾಗ್ಯೂ ದುಬೈ ಕ್ರಿಕೆಟ್​ ಸ್ಟೇಡಿಯಂನಲ್ಲಿ ಉಭಯ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದ್ದು, ಹೀಗಾಗಿ ರೋಚಕ ಹೋರಾಟ ನಿರೀಕ್ಷಿಸಬಹುದು.

ಇದನ್ನೂ ಓದಿ: India vs Pakistan, T20 World cup 2021: ಒಂದು ದಿನ ಮೊದಲೇ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ್

ಇದನ್ನೂ ಓದಿ: T20 World cup 2021: ಪಾಕ್ ವಿರುದ್ದದ ಪಂದ್ಯದೊಂದಿಗೆ ಹೊಸ ಸಾಧನೆ ಮಾಡಲಿದ್ದಾರೆ ಕೆಎಲ್ ರಾಹುಲ್, ಪಾಂಡ್ಯ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

(T20 world cup 2021: IND vs PAK Head to Head Records)

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ