India vs Pakistan: ಭಾರತ vs ಪಾಕ್: ಮಳೆ ಬಂದರೆ 5 ಓವರ್ ಪಂದ್ಯ ಕೂಡ ಇರಲಿದೆ..!

| Updated By: ಝಾಹಿರ್ ಯೂಸುಫ್

Updated on: Oct 22, 2022 | 10:55 PM

T20 World Cup 2022: ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ವೇಳೆ ಮಳೆ ಬಂದರೆ ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ ಓವರ್​ಗಳ ಕಡಿತದೊಂದಿಗೆ ಪಂದ್ಯವನ್ನು ಮುಂದುವರೆಸಲಾಗುತ್ತದೆ.

India vs Pakistan: ಭಾರತ vs ಪಾಕ್: ಮಳೆ ಬಂದರೆ 5 ಓವರ್ ಪಂದ್ಯ ಕೂಡ ಇರಲಿದೆ..!
India vs Pakistan
Follow us on

T20 World Cup 2022:  ಐಸಿಸಿ ಟಿ20 ವಿಶ್ವಕಪ್​ನ (T20 World Cup 2022) ಸೂಪರ್​-12 ಪಂದ್ಯಗಳು ಶುರುವಾಗಿದೆ. ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿದು ನ್ಯೂಜಿಲೆಂಡ್ ತಂಡವು ಶುಭಾರಂಭ ಮಾಡಿದೆ. ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ (India vs Pakistan) ತಂಡವನ್ನು ಎದುರಿಸಲಿದೆ. ಮೆಲ್ಬೋರ್ನ್​ನಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯವು ಇದೀಗ ವರುಣನ ಅವಕೃಪೆಗೆ ಒಳಗಾಗುವ ಸಾಧ್ಯತೆಯಿದೆ. ಏಕೆಂದರೆ ಮೆಲ್ಬೋರ್ನ್​ ಭಾಗದಲ್ಲಿ ಭಾನುವಾರ ಸಂಜೆಯ ವೇಳೆ ಮಳೆಯಾಗುವ ಸಾಧ್ಯತೆಯಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ವರದಿ ಮಾಡಿದೆ. ಹೀಗಾಗಿಯೇ ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ಗತಿಯೇನು ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ…

ಸೂಪರ್-12 ಹಂತದ ಪಂದ್ಯಗಳ ವೇಳೆ ಮಳೆ ಬಂದರೂ, ಮಳೆ ನಿಂತ ಬಳಿಕ ಪಂದ್ಯವನ್ನು ಮುಂದುವರೆಸಲಾಗುತ್ತದೆ. ಆದರೆ ಇದಕ್ಕೂ ಒಂದು ಸಮಯವಕಾಶವನ್ನು ನಿಗದಿಪಡಿಸಲಾಗಿರುತ್ತದೆ. ಅಂದರೆ ಒಂದು ಪಂದ್ಯದ ಒಟ್ಟಾರೆ ಸಮಯವನ್ನು ಆಧರಿಸಿ ಕಟ್​ ಆಫ್ ಟೈಮ್ ನಿಗದಿ ಮಾಡಲಾಗುತ್ತದೆ. ಅಂದರೆ ಸಾಮಾನ್ಯವಾಗಿ ಟಿ20 ಪಂದ್ಯವನ್ನು ಎರಡೂವರೆಯಿಂದ ಮೂರು ಗಂಟೆಯೊಳಗೆ ಮುಗಿಸಲಾಗುತ್ತದೆ. ಇಲ್ಲಿ ಪಂದ್ಯ ಮುಗಿಯುವ ಕೊನೆಯ ಅರ್ಧಗಂಟೆಯನ್ನು ಸಾಮಾನ್ಯವಾಗಿ ಕಟ್ ಆಫ್ ಟೈಮ್ ಎಂದು ಪರಿಗಣಿಸಲಾಗುತ್ತದೆ.

ಒಂದು ವೇಳೆ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದರೆ, ಆ ಬಳಿಕ ಮಳೆ ನಿಂತರೆ ಓವರ್​ ಕಡಿತದೊಂದಿಗೆ ಪಂದ್ಯವನ್ನು ಮುಂದುವರೆಸಲಾಗುತ್ತದೆ. ಇದಾಗ್ಯೂ ಮಳೆ ಸ್ಥಗಿತಗೊಳ್ಳದಿದ್ದರೆ ಕಟ್​ ಆಫ್ ಟೈಮ್ ಅನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅಂದರೆ ಪಂದ್ಯಕ್ಕೆ ನಿಗದಿಯಾದ ಸಮಯದ ಮುಕ್ತಾಯದ ವೇಳೆ ಮಳೆ ನಿಂತರೆ, 5 ಓವರ್​ಗಳ ಪಂದ್ಯವನ್ನು ಆಡಿಸಲಾಗುತ್ತದೆ. ಇದಾಗ್ಯೂ ಮಳೆ ನಿಲ್ಲದಿದ್ದರೆ ಮಾತ್ರ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ.

ಇದನ್ನೂ ಓದಿ
T20 World Cup 2022: ಟಿ20 ವಿಶ್ವಕಪ್​ನಲ್ಲಿ ವಿದೇಶಿ ತಂಡದ ಪರ ಆಡುತ್ತಿರುವ ಭಾರತೀಯ ಮೂಲದವರು ಯಾರೆಲ್ಲಾ ಗೊತ್ತಾ?
T20 World Cup 2022 All Squad: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ
T20 World Cup 2022: ಭಾರತ-ಪಾಕ್ ಅಲ್ಲ, ಈ ಬಾರಿ ಸೂರ್ಯ vs ರಿಜ್ವಾನ್..!
Team India: ಟೀಮ್ ಇಂಡಿಯಾದ ಮೊದಲ ಟಿ20 ತಂಡದಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಮಳೆಯಿಂದ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಗುತ್ತದೆ. ಹೀಗಾಗಿ ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ವೇಳೆ ಮಳೆ ಬಂದರೆ ಪೂರ್ಣ 2 ಅಂಕ ಪಡೆಯಬೇಕಿದ್ದರೆ ಕನಿಷ್ಠ 5 ಓವರ್​ಗಳ ಪಂದ್ಯವನ್ನಾದರೂ ಆಡಬೇಕಾಗುತ್ತದೆ. ಇದಾಗ್ಯೂ ಮೀಸಲು ದಿನದಲ್ಲಿ ಪಂದ್ಯವನ್ನು ಆಯೋಜಿಸುವುದಿಲ್ಲ. ಹೀಗಾಗಿ ಮಳೆ ಬಂದರೆ ಕನಿಷ್ಠ 5 ಓವರ್​ಗಳ ಪಂದ್ಯವನ್ನಾದರೂ ಆಯೋಜಿಸಲು ಇನ್ನಿಲ್ಲದ ಕಸರತ್ತು ನಡೆಸಲಿದ್ದಾರೆ.

ನಾಕೌಟ್​ ಪಂದ್ಯಗಳಿಗೆ ಮೀಸಲು ದಿನ:

ಸೆಮಿಫೈನಲ್ ಮತ್ತು ಫೈನಲ್‌ ವೇಳೆ ಕೂಡ ಮಳೆ ಆಡಚಣೆ ಮಾಡಿದ್ರೆ ಒಂದು ಇನ್ನಿಂಗ್ಸ್‌ನಲ್ಲಿ ಕನಿಷ್ಠ 10 ಓವರ್‌ ಆಡಬೇಕಾಗುತ್ತದೆ. ಅಂದರೆ ಫಲಿತಾಂಶ ನಿರ್ಧಾರವಾಗಲು ಉಭಯ ತಂಡಗಳು 10 ಓವರ್​ ಆಡಲೇಬೇಕಾಗುತ್ತದೆ. ಇದಾಗ್ಯೂ ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ ಮೀಸಲು ದಿನ ಪಂದ್ಯವನ್ನು ನಡೆಸಲಾಗುತ್ತದೆ.

ಅಂದರೆ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳ ವೇಳೆ ಮಳೆ ಬಂದರೆ ಮರುದಿನ ಪಂದ್ಯವನ್ನು ಮುಂದುವರೆಸಲಾಗುತ್ತದೆ. ಆದರೆ ಇಲ್ಲಿ ಪಂದ್ಯ ಎಲ್ಲಿಗೆ ಸ್ಥಗಿತವಾಗಿರುತ್ತದೆಯೋ ಅಲ್ಲಿಂದಲೇ ಮರುದಿನ ಶುರುವಾಗಲಿದೆ.
ಉದಾಹರಣೆಗೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 15 ಓವರ್​ ಬ್ಯಾಟಿಂಗ್ ಮಾಡಿದ ವೇಳೆ ಮಳೆ ಬಂದರೆ, ಮರುದಿನ ಟೀಮ್ ಇಂಡಿಯಾಗೆ ಕೊನೆಯ 5 ಓವರ್​ ಬ್ಯಾಟ್ ಮಾಡಲು ಮಾತ್ರ ಅವಕಾಶ ಇರಲಿದೆ. ಬದಲಾಗಿ ಮತ್ತೆ ಆರಂಭದಿಂದ ಪಂದ್ಯ ಶುರುವಾಗುವುದಿಲ್ಲ.

ಅದಾಗ್ಯೂ ಮೀಸಲು ದಿನದಲ್ಲೂ ಸೆಮಿಫೈನಲ್​ ಪಂದ್ಯಗಳನ್ನು ನಡೆಸಲು ಸಾಧ್ಯವಾಗದಿದ್ದರೆ ಸೂಪರ್-12 ಹಂತದಲ್ಲಿ ಪಡೆದಿರುವ ಪಾಯಿಂಟ್​ಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ ಹೆಚ್ಚು ಪಾಯಿಂಟ್ ಪಡೆದಿರುವ ತಂಡಗಳು ಫೈನಲ್​ಗೆ ಅವಕಾಶ ಪಡೆಯಲಿದೆ.

ಹಾಗೆಯೇ ಫೈನಲ್ ಪಂದ್ಯದ ವೇಳೆ ಮಳೆ ಬಂದು ಮೀಸಲು ದಿನದಲ್ಲೂ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.

ಅಂದರೆ ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ವೇಳೆ ಮಳೆ ಬಂದರೆ ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ ಓವರ್​ಗಳ ಕಡಿತದೊಂದಿಗೆ ಪಂದ್ಯವನ್ನು ಮುಂದುವರೆಸಲಾಗುತ್ತದೆ. ಇದಾಗ್ಯೂ ಮಳೆ ಕಡಿಮೆಗೊಳ್ಳಲಿದ್ದರೆ ಪಂದ್ಯದ ನಿಗದಿತ ಸಮಯದೊಳಗೆ ಕನಿಷ್ಠ 5 ಓವರ್​ಗಳ ಪಂದ್ಯವನ್ನು ಆಯೋಜಿಸಲು ಮುಂದಾಗಲಿದ್ದಾರೆ. ಅದಕ್ಕೂ ಅವಕಾಶ ಇರದಿದ್ದರೆ ಮಾತ್ರ ಪಂದ್ಯವನ್ನು​ ರದ್ದುಗೊಳಿಸಿ ಉಭಯ ತಂಡಗಳಿಗೆ ತಲಾ ಒಂದೊಂದು ಪಾಯಿಂಟ್ ನೀಡಲಾಗುತ್ತದೆ.