T20 World Cup 2022: ಸೌತ್ ಆಫ್ರಿಕಾ ಟಿ20 ವಿಶ್ವಕಪ್ ತಂಡಕ್ಕೆ SRH ಸ್ಟಾರ್ ವೇಗಿ ಎಂಟ್ರಿ..!
T20 World Cup 2022: ವಿಶೇಷ ಎಂದರೆ ಭಾರತ ಹಾಗೂ ಸೌತ್ ಆಫ್ರಿಕಾ ಟಿ20 ವಿಶ್ವಕಪ್ನಲ್ಲಿ ಒಂದೇ ಗ್ರೂಪ್ನಲ್ಲಿದೆ. ಅದರಂತೆ ಅಕ್ಟೋಬರ್ 30 ರಂದು ಪರ್ತ್ ಸ್ಟೇಡಿಯಂನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ – ಸೌತ್ ಆಫ್ರಿಕಾ ತಂಡಗಳು ಸೆಣಸಲಿದೆ.
T20 World Cup 2022: ಟಿ20 ವಿಶ್ವಕಪ್ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಸೌತ್ ಆಫ್ರಿಕಾ ತಂಡದಿಂದ ಸ್ಟಾರ್ ಆಲ್ರೌಂಡರ್ ಡ್ವೈನ್ ಪ್ರಿಟೋರಿಯಸ್ (Dwaine Pretorius) ಗಾಯಗೊಂಡು ವಿಶ್ವಕಪ್ಹೊರಬಿದ್ದಿದ್ದಾರೆ. ಟೀಮ್ ಇಂಡಿಯಾ (India vs South Africa) ವಿರುದ್ಧದ ಏಕದಿನ ಸರಣಿಯ ಅಭ್ಯಾಸದ ವೇಳೆ ಪ್ರಿಟೋರಿಯಸ್ ಅವರ ಎಡಗೈ ಹೆಬ್ಬೆರಳಿನ ಮೂಳೆ ಮುರಿತಕ್ಕೊಳಗಾಗಿತ್ತು. ಹೀಗಾಗಿ ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಐಸಿಸಿ ಟಿ20 ವಿಶ್ವಕಪ್ನಿಂದ ಹೊರಗುಳಿದಿದ್ದಾರೆ.
ಇದೀಗ ಡ್ವೈನ್ ಪ್ರಿಟೋರಿಯಸ್ ಅವರ ಬದಲಿ ಆಟಗಾರನನ್ನು ಸೌತ್ ಆಫ್ರಿಕಾ ಆಯ್ಕೆ ಮಾಡಿದೆ. ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಮಿಂಚಿದ್ದ ಎಡಗೈ ವೇಗಿ ಮಾರ್ಕೊ ಯಾನ್ಸನ್ ಚೊಚ್ಚಲ ಟಿ20 ವಿಶ್ವಕಪ್ ಆಡುವ ಅವಕಾಶ ಪಡೆದಿದ್ದಾರೆ. ಈ ಹಿಂದೆ ಮೀಸಲು ಆಟಗಾರನ ಪಟ್ಟಿಯಲ್ಲಿದ್ದ ಮಾರ್ಕೊ ಯಾನ್ಸನ್ ಇದೀಗ 15 ಸದಸ್ಯರ ಬಳಗಕ್ಕೆ ಆಯ್ಕೆಯಾಗಿದ್ದಾರೆ. ಸೌತ್ ಆಫ್ರಿಕಾ ಮೀಸಲು ಆಟಗಾರರ ಪಟ್ಟಿಗೆ ಲಿಝಾರ್ಡ್ ವಿಲಿಯಮ್ಸ್ ಅವರನ್ನು ಆಯ್ಕೆ ಮಾಡಲಾಗಿದೆ.
ಸೌತ್ ಆಫ್ರಿಕಾ ಪರ ಏಕೈಕ ಟಿ20 ಪಂದ್ಯವಾಡಿರುವ ಮಾರ್ಕೊ ಯಾನ್ಸನ್ ಈ ಹಿಂದೆ ಐಪಿಎಲ್ನಲ್ಲಿ 10 ಪಂದ್ಯಗಳನ್ನಾಡಿದ್ದರು ಎಂಬುದು ವಿಶೇಷ. ಈ ವೇಳೆ 9 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಟಿ20 ವಿಶ್ವಕಪ್ನಲ್ಲೂ ಅವಕಾಶ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ವಿಶೇಷ ಎಂದರೆ ಭಾರತ ಹಾಗೂ ಸೌತ್ ಆಫ್ರಿಕಾ ಟಿ20 ವಿಶ್ವಕಪ್ನಲ್ಲಿ ಒಂದೇ ಗ್ರೂಪ್ನಲ್ಲಿದೆ. ಅದರಂತೆ ಅಕ್ಟೋಬರ್ 30 ರಂದು ಪರ್ತ್ ಸ್ಟೇಡಿಯಂನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ – ಸೌತ್ ಆಫ್ರಿಕಾ ತಂಡಗಳು ಸೆಣಸಲಿದೆ. ಅಂದರೆ ಮೊದಲ ಸುತ್ತಿನ 5 ಪಂದ್ಯಗಳಲ್ಲಿ ಟೀಮ್ ಇಂಡಿಯಾ 3ನೇ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಯಾನ್ಸೆನ್ ಅವರನ್ನು ಸೌತ್ ಆಫ್ರಿಕಾ ಕಣಕ್ಕಿಳಿಸಲಿದೆಯಾ ಕಾದು ನೋಡಬೇಕಿದೆ.
ಸೌತ್ ಆಫ್ರಿಕಾ ಟಿ20 ವಿಶ್ವಕಪ್ ತಂಡ ಹೀಗಿದೆ:
ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ಹೆನ್ರಿಕ್ ಕ್ಲಾಸೆನ್, ರೀಜಾ ಹೆಂಡ್ರಿಕ್ಸ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಕ್ ನೋಕಿಯಾ, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ರಿಲ್ಲೆ ರೊಸ್ಸೋವ್, ತಬ್ರೇಝ್ ಶಂಸಿ, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಯಾನ್ಸನ್.
ಮೀಸಲು ಆಟಗಾರರು: ಜಾರ್ನ್ ಫಾರ್ಟುಯಿನ್, ಲಿಝಾರ್ಡ್ ವಿಲಿಯಮ್ಸ್ ಮತ್ತು ಆಂಡಿಲ್ ಫೆಹ್ಲುಕ್ವಾಯೊ.