AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಮಿಫೈನಲ್​ಗೆ ತಂಡಗಳು ಫಿಕ್ಸ್; ಸೂಪರ್ 12 ಸುತ್ತಿನಲ್ಲಿ ಈ 4 ತಂಡಗಳ ಪ್ರದರ್ಶನ ಹೇಗಿತ್ತು ಗೊತ್ತಾ?

T20 World Cup 2022: ನಿಯಮದ ಪ್ರಕಾರ ಭಾರತ, ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದು, ನ್ಯೂಜಿಲೆಂಡ್ ತಂಡ ಪಾಕಿಸ್ತಾನವನ್ನು ಎದುರಿಸಲಿದೆ.

ಸೆಮಿಫೈನಲ್​ಗೆ ತಂಡಗಳು ಫಿಕ್ಸ್; ಸೂಪರ್ 12 ಸುತ್ತಿನಲ್ಲಿ ಈ 4 ತಂಡಗಳ ಪ್ರದರ್ಶನ ಹೇಗಿತ್ತು ಗೊತ್ತಾ?
ಟಿ20 ವಿಶ್ವಕಪ್ 2022ರಲ್ಲಿ ಪಾಕಿಸ್ತಾನದ ಕಾರು ಹೇಗೋ ಸೆಮಿಫೈನಲ್ ತಲುಪಿದೆ. ಅಂದರೆ ಶೀರ್ಷಿಕೆ ಈಗ ಎರಡು ಹೆಜ್ಜೆ ದೂರದಲ್ಲಿದೆ. ಆದರೆ, ಈ ಎರಡು ಹೆಜ್ಜೆಗಳ ಅಂತರವನ್ನ ಪಾಕಿಸ್ತಾನ ದಾಟುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ. ಆದರೆ ಅದಕ್ಕೂ ಮುನ್ನ ಅನೇಕರು 1992 ವಿಶ್ವಕಪ್​ ಅನ್ನು ಈ ವಿಶ್ವಕಪ್​ಗೆ ಹೋಲಿಸಿ ಅನೇಕ ಕಾಕತಾಳೀಯ ಸಂಗತಿಗಳನ್ನು ಹೊರಹಾಕಿದ್ದಾರೆ.
TV9 Web
| Edited By: |

Updated on:Nov 07, 2022 | 11:45 AM

Share

2022ರ ಟಿ20 ವಿಶ್ವಕಪ್‌ (T20 World Cup 2022) ಸೆಮಿಫೈನಲ್​ಗೆ ಯಾವ 4 ತಂಡಗಳು ಎಂಟ್ರಿಕೊಡುತ್ತವೆ ಎಂಬ ಪ್ರಶ್ನೆಗೆ ಅಂತಿಮವಾಗಿ ಉತ್ತರ ಸಿಕ್ಕಿದೆ. ಸೂಪರ್ 12 ಸುತ್ತಿನ ಎಲ್ಲಾ ಪಂದ್ಯಗಳು ಭಾನುವಾರವೇ ಕೊನೆಗೊಳ್ಳುವುದರೊಂದಿಗೆ ಸೇಮಿಸ್ ಆಡಲಿರುವ ತಂಡಗಳ ಪೂರ್ಣ ಚಿತ್ರಣ ಹೊರಬಿದ್ದಿದೆ. ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ (New Zealand and England) ಗ್ರೂಪ್ 1 ರಿಂದ ಸೆಮಿಫೈನಲ್ ಟಿಕೆಟ್‌ ಖಚಿತಪಡಿಸಿಕೊಂಡಿದ್ದರೆ, ಭಾರತ ಮತ್ತು ಪಾಕಿಸ್ತಾನ (India and Pakistan) ಗುಂಪು 2 ರಲ್ಲಿ ನಾಕೌಟ್ ಸುತ್ತಿಗೆ ತಲುಪಿವೆ. ಈಗ ನಾಕೌಟ್ ಹಂತವು ನವೆಂಬರ್ 9 ರಿಂದ ಪ್ರಾರಂಭವಾಗಲಿದ್ದು, ಅಲ್ಲಿ ಬಲಿಷ್ಠ ತಂಡಗಳ ನಡುವೆ ರೋಚಕ ಕದನ ನಡೆಯಲಿದೆ.

ಗುಂಪು 1 ರಲ್ಲಿ ಮೂರು ಗೆಲುವುಗಳೊಂದಿಗೆ 7 ಅಂಕಗಳನ್ನು ಹೊಂದಿರುವ ನ್ಯೂಜಿಲೆಂಡ್ ತಂಡ ಅಗ್ರಸ್ಥಾನದಲ್ಲಿದೆ. ಹಾಗೆಯೇ ಅದೇ ಅಂಕಗಳನ್ನು ಇಂಗ್ಲೆಂಡ್ ಕೂಡ ಹೊಂದಿದೆ. ಆದರೆ ಉತ್ತಮ ನೆಟ್ರೇಟ್‌ನಿಂದಾಗಿ ಕಿವೀಸ್ ತಂಡ ಅಗ್ರಸ್ಥಾನ ಕಾಯ್ದುಕೊಂಡಿದೆ. ಎರಡನೇ ಗುಂಪಿನಲ್ಲಿ, ಭಾರತವು ಐದು ಪಂದ್ಯಗಳಿಂದ ನಾಲ್ಕು ಗೆಲುವುಗಳೊಂದಿಗೆ ಎಂಟು ಅಂಕಗಳನ್ನು ಗಳಿಸಿ, ಮೊದಲ ಸ್ಥಾನವನ್ನು ಅಲಂಕರಿಸಿಕೊಂಡಿದೆ. ಎರಡನೇ ಶ್ರೇಯಾಂಕದ ಪಾಕಿಸ್ತಾನವು ಅದೇ ಸಂಖ್ಯೆಯ ಪಂದ್ಯಗಳಲ್ಲಿ ಆರು ಅಂಕಗಳನ್ನು ಗಳಿಸಿದೆ. ಆದ್ದರಿಂದಲೇ ಅವರು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಟಿ20 ವಿಶ್ವಕಪ್​ನ ನಿಯಮಗಳ ಪ್ರಕಾರ, ಸೆಮಿಫೈನಲ್‌ನಲ್ಲಿ ಎರಡೂ ಗುಂಪುಗಳ ನಡುವೆ ಕ್ರಾಸ್‌ಒವರ್ ಪಂದ್ಯ ನಡೆಯಲಿದೆ. ಅಂದರೆ ಮೊದಲ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡವು ಎರಡನೇ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡದೊಂದಿಗೆ ಆಡುತ್ತದೆ. ಹಾಗೆಯೇ ಎರಡನೇ ಗುಂಪಿನ ಅಗ್ರ ತಂಡವು ಮೊದಲ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡವನ್ನು ಎದುರಿಸಲಿದೆ. ಈ ನಿಯಮದ ಪ್ರಕಾರ ಭಾರತ, ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದು, ನ್ಯೂಜಿಲೆಂಡ್ ತಂಡ ಪಾಕಿಸ್ತಾನವನ್ನು ಎದುರಿಸಲಿದೆ.

ಟಿ20 ವಿಶ್ವಕಪ್ ಸೆಮಿಫೈನಲ್ ಲೈನ್ ಅಪ್

ಟೀಂ ಇಂಡಿಯಾದ ಪ್ರದರ್ಶನ

ಈ ವಿಶ್ವಕಪ್​ನಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿತ್ತು. ಈ ರೋಚಕ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿತ್ತು. ಮುಂದಿನ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು 56 ರನ್​ಗಳಿಂದ ಸೋಲಿಸುವಲ್ಲಿ ರೋಹಿತ್ ಪಡೆ ಯಶಸ್ವಿಯಾಗಿತ್ತು. ಆದರೆ, ಅದರ ಮುಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ, ಭಾರತಕ್ಕೆ ಟೂರ್ನಿಯ ಮೊದಲ ಸೋಲಿನ ಶಾಕ್ ನೀಡಿತ್ತು. ಈ ಪಂದ್ಯವನ್ನು ಹರಿಣಗಳು ಐದು ವಿಕೆಟ್‌ಗಳಿಂದ ಗೆದ್ದುಕೊಂಡಿದ್ದರು. ನಂತರ ಬಾಂಗ್ಲಾದೇಶ ವಿರುದ್ಧ ಡಕ್ವರ್ತ್ ಲೂಯಿಸ್ ಆದಾರದ ಮೇಲೆ ಟೀಂ ಇಂಡಿಯಾ ಗೆಲ್ಲುವುದರೊಂದಿಗೆ ಸೇಮಿಸ್ ಹಾದಿಯನ್ನು ಸುಗಮಗೊಳಿಸಿಕೊಂಡಿತ್ತು. ಗೆಲ್ಲಲೇಬೇಕಾದ ಪಂದ್ಯದಲ್ಲಿ ಆಫ್ರಿಕಾ ಸೋತಿದ್ದರಿಂದ ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಪಾಯಿಂಟ್ ಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಜಿಂಬಾಬ್ವೆ ಎದುರು ಕಣಕ್ಕಿಳಿದಿದ್ದ ರೋಹಿತ್ ಪಡೆ ಕೊನೆಯ ಪಂದ್ಯವನ್ನು 71 ರನ್‌ಗಳಿಂದ ಜಯಿಸಿ ನಂ.1 ಸ್ಥಾನವನ್ನು ತಮ್ಮಲ್ಲಿಯೇ ಉಳಿಸಿಕೊಂಡಿದೆ.

ಇದನ್ನೂ ಓದಿ: T20 World Cup: ಪರಿಣಿತರ ಪ್ರಕಾರ.. ಇಂಗ್ಲೆಂಡ್, ಪಾಕ್​ಗೆ ಸೋಲು: ಫೈನಲ್​ಗೆ ಟೀಂ ಇಂಡಿಯಾ! ಆದರೆ..?

ಪಾಕಿಸ್ತಾನದ ಪ್ರದರ್ಶನ

ಟೂರ್ನಿಯಲ್ಲಿ ಪಾಕಿಸ್ತಾನ ಅತ್ಯಂತ ಕಳಪೆ ಆರಂಭ ಮಾಡಿ, ತನ್ನ ಮೊದಲ ಪಂದ್ಯದಲ್ಲಿ ಭಾರತದ ಎದುರು ಸೋಲು ಕಂಡಿತ್ತು. ಇದರ ನಂತರ ತಮ್ಮ ಮುಂದಿನ ಪಂದ್ಯದಲ್ಲಿಯೂ ಬಾಬರ್ ಪಡೆ ಜಿಂಬಾಬ್ವೆ ವಿರುದ್ಧ ರೋಚಕ ಪಂದ್ಯದಲ್ಲಿ ಸೋತಿತ್ತು. ಈ ಸೋಲಿನೊಂದಿಗೆ ಪಾಕಿಸ್ತಾನ ಟೂರ್ನಿಯಿಂದ ಭಾಗಶಃ ಔಟ್ ಎಂದು ನಿರ್ಧಾರವಾಗಿತ್ತು. ಆದರೆ ಅದೃಷ್ಟ, ಹಾಗೂ ಉಳಿದ ಪಂದ್ಯಗಳನ್ನು ಗೆಲ್ಲುವುದರೊಂದಿಗೆ ಪಾಕ್ ಪಡೆ ಸೆಮಿಫೈನಲ್ ತಲುಪಿತು. ತನ್ನ ಮೂರನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಪಾಕಿಸ್ತಾನ ಮಣಿಸಿದರೆ, ದಕ್ಷಿಣ ಆಫ್ರಿಕಾ ವಿರುದ್ಧದ ನಿರ್ಣಾಯಕ ಪಂದ್ಯವನ್ನು 33 ರನ್ಗಳಿಂದ ಗೆದ್ದುಕೊಂಡಿತ್ತು. ತಂಡದ ಪಾಲಿಗೆ ನಿರ್ಣಾಯಕವಾಗಿದ್ದ ಬಾಂಗ್ಲಾದೇಶ ವಿರುದ್ಧದ ಪಂದ್ಯವನ್ನು ಐದು ವಿಕೆಟ್‌ಗಳಿಂದ ಗೆಲುವು ಸಾಧಿಸುವುದರೊಂದಿಗೆ ಪಾಕಿಸ್ತಾನ ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿತ್ತು.

ನ್ಯೂಜಿಲೆಂಡ್ ಪ್ರದರ್ಶನ

ಟೂರ್ನಿ ಆರಂಭದ ಪಂದ್ಯದಲ್ಲೇ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡವು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ 89 ರನ್​ಗಳ ಗೆಲುವಿನೊಂದಿಗೆ ಶುಭಾರಂಭ ಮಾಡಿತ್ತು. ಇದಾದ ಬಳಿಕ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿತ್ತು. ಮೂರನೇ ಪಂದ್ಯದಲ್ಲಿ ಏಷ್ಯನ್ ಚಾಂಪಿಯನ್ ಶ್ರೀಲಂಕಾವನ್ನು 65 ರನ್​ಗಳ ಬೃಹತ್ ಅಂತರದಿಂದ ಮಣಿಸಿತು. ಆದರೆ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಕಿವೀಸ್ ತನ್ನ ಮೊದಲ ಸೋಲು ಕಂಡಿತ್ತು. ಶನಿವಾರ ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿ ಕೇನ್ ಪಡೆ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ.

ಇಂಗ್ಲೆಂಡ್ ಪ್ರದರ್ಶನ

ಇಂಗ್ಲೆಂಡ್‌ ಈ ಟೂರ್ನಿಯಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಐದು ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತ್ತು. ಇದಾದ ಬಳಿಕ ಎರಡನೇ ಪಂದ್ಯದಲ್ಲಿ ಮಳೆಯಿಂದಾಗಿ ಶಾಕಿಂಗ್ ಫಲಿತಾಂಶ ಹೊರಬಿದ್ದಿತ್ತು. ಮಳೆ ಪೀಡಿತ ಈ ಪಂದ್ಯವನ್ನು ಐರ್ಲೆಂಡ್ ಐದು ರನ್‌ಗಳಿಂದ ಗೆದ್ದು ಇಂಗ್ಲೆಂಡ್‌ಗೆ ಆಘಾತ ನೀಡಿತು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರಿಂದ ಆಂಗ್ಲರಿಗೆ ಟೂರ್ನಿಯಿಂದ ಹೊರಹೋಗುವ ಆತಂಕ ಎದುರಾಗಿತ್ತು. ಆದರೆ ಅದರ ನಂತರದ ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು 20 ರನ್‌ಗಳಿಂದ ಸೋಲಿಸಿದ ಆಂಗ್ಲರು, ಶ್ರೀಲಂಕಾವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:45 am, Mon, 7 November 22

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ