T20 World Cup 2022: ಈ ಬಾರಿಯ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಬಲ್ಲ ಐವರು ಬೌಲರ್ಗಳಿವರು..
T20 World Cup 2022: ಹೊಸ ಚೆಂಡನ್ನು ಸ್ವಿಂಗ್ ಮಾಡುವ ಕೌಶಲ್ಯವನ್ನು ಹೊಂದಿರುವ ಅರ್ಷದೀಪ್ ಸಿಂಗ್ಗೆ ಡೆತ್ ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡುವ ಪ್ರಬಲ ಯಾರ್ಕರ್‌ಗಳನ್ನು ಎಸೆಯುವುದು ಸಹ ಕರಗತವಾಗಿದೆ.
ಕಾಂಗರೂಗಳ ನಾಡಲ್ಲಿ ಟಿ20 ವಿಶ್ವಕಪ್ (T20 World Cup 2022) ಸಂಭ್ರಮ ಶುರುವಾಗಿದೆ. ಈ ಮಿನಿ ಸಮರದಲ್ಲಿ 16 ತಂಡಗಳು ಭಾಗವಹಿಸುತ್ತಿದ್ದು, ನವೆಂವರ್ 13 ರಂದು 8ನೇ ಆವೃತ್ತಿಗೆ ಹೊಸ ಚಾಂಪಿಯನ್ ತಂಡ ಸಿಗಲಿದೆ. ಆದರೆ ಅದಕ್ಕೂ ಮೊದಲು ಅ. 23 ರಂದು ಮಿನಿ ಫೈನಲ್ ನಡೆಯಲಿದ್ದು, ಈ ದಿನಾಂಕದಂದು ಬದ್ದವೈರಿಗಳಾದ ಭಾರತ ಮತ್ತು ಪಾಕಿಸ್ತಾನ (India Vs Pakistan) ಮುಖಾಮುಖಿಯಾಗಲಿವೆ. ಹೀಗಾಗಿ ವಿಶ್ವ ಕ್ರಿಕೆಟ್ನ ಕಣ್ಣು ಈ ಪಂದ್ಯದ ಮೇಲೆ ನೆಟ್ಟಿದೆ. ಹಾಗೆಯೇ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಕ್ರಿಕೆಟಿಗರು ಕೂಡ ಮೈದಾನದಲ್ಲಿ ಬ್ಯಾಟಿಂಗ್- ಹಾಗೂ ಬೌಲಿಂಗ್ ಮೂಲಕ ಸುನಾಮಿ ಎಬ್ಬಿಸಲು ಕಾತುರರಾಗಿದ್ದಾರೆ. ಅವರಲ್ಲಿ ಪ್ರಮುಖವಾಗಿ ಈ ಐದು ಬೌಲರ್ಗಳು ತಮ್ಮ ಚಾಣಾಕ್ಯ ಬೌಲಿಂಗ್ನಿಂದ ಬ್ಯಾಟರ್ಗಳನ್ನು ಕಟ್ಟಿಹಾಕುವುದರೊಂದಿಗೆ ತಂಡಕ್ಕೆ ಗೆಲುವಿನ ಉಡುಗೊರೆ ನೀಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅಂತಹ ಬೌಲರ್‌ಗಳ ಪಟ್ಟಿಯಲ್ಲಿ ಭಾರತ ತಂಡದ ಯುವ ಬೌಲರ್ ಅರ್ಷದೀಪ್ ಸಿಂಗ್ (Arshdeep Singh) ಕೂಡ ಸೇರಿದ್ದಾರೆ.
ಈ ಐದು ಬೌಲರ್‌ಗಳ ಮೇಲೆ ಎಲ್ಲರ ಕಣ್ಣು
ಟ್ರೆಂಟ್ ಬೋಲ್ಟ್: ಕಿವೀಸ್ ತಂಡದ ಪ್ರಮುಖ ಅಸ್ತ್ರವಾಗಿರುವ ಬೋಲ್ಟ್, ಕಳೆದ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡ ಫೈನಲ್‌ಗೆ ಪ್ರಯಾಣಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಆವೃತ್ತಿಯಲ್ಲಿ 13 ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದರು. ವೇಗದ ಬೌಲಿಂಗ್ ಜೊತೆಗೆ ಚೆಂಡನ್ನು ಸ್ವಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಬೋಲ್ಟ್ ಆರಂಭದಲ್ಲೇ ಬ್ಯಾಟರ್ಗಳಿಗೆ ಚಳ್ಳೆ ಹಣ್ಣು ತಿನ್ನಿಸುವುದರಲ್ಲಿ ನಿಸ್ಸೀಮರಾಗಿದ್ದಾರೆ. ಹೀಗಾಗಿ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಅವರು ಟಿಮ್ ಸೌಥಿ ಜೊತೆಗೆ ನ್ಯೂಜಿಲೆಂಡ್ ತಂಡದ ವೇಗದ ದಾಳಿಯ ಜವಬ್ದಾರಿ ಹೊತ್ತಿದ್ದಾರೆ.
ರೀಸ್ ಟೋಪ್ಲಿ: ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ವಿರುದ್ಧ ಅದ್ಭುತ ಪ್ರದರ್ಶನ ನೀಡಿರುವ ಟೋಪ್ಲಿ ವಿಶೇಷ ಬೌಲಿಂಗ್ ಕೌಶಲ್ಯವನ್ನು ಹೊಂದಿದ್ದಾರೆ. ಟೋಪ್ಲಿಗೆ ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುವ ಕಲೆ ಚೆನ್ನಾಗಿಯೇ ತಿಳಿದಿದೆ. ನಿಖರವಾದ ಲೈನ್ ಲೆಂಗ್ತ್ನಿಂದಾಗಿ ಅವರು ಎದುರಾಳಿ ತಂಡಕ್ಕೆ ಸಂಕಷ್ಟ ತಂದೊಡ್ಡುವಲ್ಲಿ ಟೋಪ್ಲಿ ನಿಸ್ಸೀಮರು.
ಇದನ್ನೂ ಓದಿ: ನಮೀಬಿಯಾ ಎದುರು ಸೋತ ಲಂಕಾ ತಂಡಕ್ಕೆ ಬಿಗ್ ಶಾಕ್; ಟಿ20 ವಿಶ್ವಕಪ್ನಿಂದ ತಂಡದ ಸ್ಟಾರ್ ಬೌಲರ್ ಔಟ್..!
ಆಡಮ್ ಝಂಪಾ: ಆಸ್ಟ್ರೇಲಿಯಾ ತಂಡದ ಪ್ರಮುಖ ಸ್ಪಿನ್ ಅಸ್ತ್ರವಾಗಿರುವ ಲೆಗ್ ಸ್ಪಿನ್ನರ್ ಝಂಪಾ ಗೂಗ್ಲಿ ಬೌಲಿಂಗ್ಗೆ ತುಂಬಾ ಹೆಸರುವಾಸಿ. ಅಲ್ಲದೆ ಈ ಬಾರಿಯ ವಿಶ್ವಕಪ್ ಆಸ್ಟ್ರೇಲಿಯಾದಲ್ಲೇ ನಡೆಯುವುದರಿಂದ ಅವರು ತವರಿನ ಲಾಭ ಪಡೆಯಲಿದ್ದಾರೆ. ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 77 ವಿಕೆಟ್ ಪಡೆದಿರುವ ಝಂಪಾ 21.87 ಸರಾಸರಿಯಲ್ಲಿ ವಿಕೆಟ್ ಪಡೆದಿದ್ದಾರೆ.
ಹ್ಯಾರಿಸ್ ರೌಫ್: ಪಾಕಿಸ್ತಾನ ತಂಡದ ಪ್ರಮುಖ ವೇಗದ ಬೌಲರ್ ಆಗಿರುವ ಹ್ಯಾರಿಸ್ ರೌಫ್, ಡೆತ್ ಓವರ್‌ಗಳಲ್ಲಿ ಯಾರ್ಕರ್ ಎಸೆತಗಳೊಂದಿಗೆ ಎದುರಾಳಿ ತಂಡಕ್ಕೆ ತೊಂದರೆ ಉಂಟುಮಾಡುವ ಕಲೆಯನ್ನು ತುಂಬಾ ಚೆನ್ನಾಗಿ ಅರಿತಿದ್ದಾರೆ. ಅದರಲ್ಲೂ ಅವರ ಶಾರ್ಟ್ ಪಿಚ್ ಎಸೆತಗಳು ಎಂತಹ ಬ್ಯಾಟ್ಸ್ಮನ್ಗಳ ಗುಂಡಿಗೆಯಲ್ಲೂ ಭಯ ಹುಟ್ಟಿಸುತ್ತವೆ.
ಅರ್ಷದೀಪ್ ಸಿಂಗ್: ಭಾರತದ ಯುವ ಸ್ಟಾರ್ ಬೌಲರ್ ಅರ್ಷದೀಪ್ ಸಿಂಗ್ ಇತ್ತೀಚೆಗೆ ಟಿ20 ಕ್ರಿಕೆಟ್ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಕೇವಲ 13 ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ಅನುಭವ ಹೊಂದಿರುವ ಅರ್ಷದೀಪ್ ಸಿಂಗ್, 19.78ರ ಸರಾಸರಿಯಲ್ಲಿ 19 ವಿಕೆಟ್ ಪಡೆದಿದ್ದಾರೆ. ಟಿ20 ವಿಶ್ವಕಪ್‌ನ ಭಾಗವಾಗಿರುವ ಖುಷಿಯ ಜೊತೆಗೆ ಪ್ರಮುಖ ಪಂದ್ಯಗಳ ಒತ್ತಡವೂ ಅರ್ಷದೀಪ್ ಅವರ ಮೇಲಿದೆ. ಅಲ್ಲದೆ ಹೊಸ ಚೆಂಡನ್ನು ಸ್ವಿಂಗ್ ಮಾಡುವ ಕೌಶಲ್ಯವನ್ನು ಹೊಂದಿರುವ ಅರ್ಷದೀಪ್ ಸಿಂಗ್ಗೆ ಡೆತ್ ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡುವ ಪ್ರಬಲ ಯಾರ್ಕರ್‌ಗಳನ್ನು ಎಸೆಯುವುದು ಸಹ ಕರಗತವಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ