IND vs PAK: ಪಂತ್ ಪವರ್, ಬುಮ್ರಾ ಬಿರುಗಾಳಿ ಮುಂದೆ ಮಂಡಿಯೂರಿದ ಪಾಕಿಸ್ತಾನ..!

IND vs PAK T20 World Cup 2024: ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ರಣ ರೋಚಕ ಪಂದ್ಯದಲ್ಲಿ ಭಾರತ ಆರು ರನ್‌ಗಳಿಂದ ಪಾಕಿಸ್ತಾನವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಲೀಗ್​ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದ ಟೀಂ ಇಂಡಿಯಾ 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

IND vs PAK: ಪಂತ್ ಪವರ್, ಬುಮ್ರಾ ಬಿರುಗಾಳಿ ಮುಂದೆ ಮಂಡಿಯೂರಿದ ಪಾಕಿಸ್ತಾನ..!
ಭಾರತ- ಪಾಕಿಸ್ತಾನ
Follow us
|

Updated on:Jun 10, 2024 | 1:48 AM

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ (Nassau County International Cricket Stadium) ನಡೆದ ರಣ ರೋಚಕ ಪಂದ್ಯದಲ್ಲಿ ಭಾರತ ಆರು ರನ್‌ಗಳಿಂದ ಪಾಕಿಸ್ತಾನವನ್ನು (India vs Pakistan) ಸೋಲಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಲೀಗ್​ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದ ಟೀಂ ಇಂಡಿಯಾ (Team India) 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇತ್ತ ಲೀಗ್​ನಲ್ಲಿ ಸತತ ಎರಡನೇ ಸೋಲು ಅನುಭವಿಸಿದ ಪಾಕ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲೇ ಉಳಿದುಕೊಂಡಿದ್ದು, ಈ ಸೋಲಿನ ನಂತರ ಲೀಗ್ ಹಂತದಲ್ಲೇ ತನ್ನ ಪ್ರಯಾಣ ಮುಗಿಸುವ ಆತಂಕದಲ್ಲಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 19 ಓವರ್‌ಗಳಲ್ಲಿ 119 ರನ್‌ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಉತ್ತಮ ಆರಂಭದ ಹೊರತಾಗಿಯೂ ಸತತ ವಿಕೆಟ್​ಗಳ ಪತನದ ಕಾರಣ ಹಾಗೂ ಭಾರತದ ವೇಗಿಗಳ ಕರಾರುವಕ್ಕಾದ ದಾಳಿಯಿಂದಾಗಿ 20 ಓವರ್​ಗಳಲ್ಲಿ 113 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಭಾರತದ ಪರ ಬುಮ್ರಾ ಮೂರು ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಹಾರ್ದಿಕ್ ಎರಡು ವಿಕೆಟ್, ಅರ್ಷದೀಪ್ ಮತ್ತು ಅಕ್ಷರ್ ತಲಾ ಒಂದು ವಿಕೆಟ್ ಪಡೆದರು.

ತತ್ತರಿಸಿದ ಭಾರತದ ಇನ್ನಿಂಗ್ಸ್

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ಪೂರ್ಣ 20 ಓವರ್ ಕೂಡ ಆಡಲು ಸಾಧ್ಯವಾಗಲಿಲ್ಲ. ಇಡೀ ತಂಡ 19 ಓವರ್‌ಗಳನಷ್ಟೇ ಆಡಲು ಶಕ್ತವಾಗಿ 119 ರನ್‌ಗಳಿಗೆ ಆಲೌಟ್ ಆಯಿತು. ಟೀಂ ಇಂಡಿಯಾ ಪರ ಕೇವಲ ಮೂವರಿಗೆ ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು. ಇಬ್ಬರು ಆಟಗಾರರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಉಳಿದ ಆರು ಬ್ಯಾಟರ್ಸ್​ಗಳು ಒಂದಂಕಿಗೆ ಪೆವಿಲಿಯನ್ ಸೇರಿಕೊಂಡರು.

IND vs PAK: ಅಫ್ರಿದಿ ವಿರುದ್ಧ ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟರ್ ರೋಹಿತ್ ಶರ್ಮಾ..!

ಪಂತ್ ಏಕಾಂಗಿ ಹೋರಾಟ

ರಿಷಬ್ ಪಂತ್ ಟೀಂ ಇಂಡಿಯಾ ಪರ ಗರಿಷ್ಠ 42 ರನ್ ಬಾರಿಸಿದರೆ, ಅಕ್ಷರ್ ಪಟೇಲ್ 20 ರನ್ ಮತ್ತು ನಾಯಕ ರೋಹಿತ್ ಶರ್ಮಾ 13 ರನ್​ಗಳ ಕಾಣಿಕೆ ನೀಡಿದರು. ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಇಬ್ಬರಿಗೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ 4 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 7 ರನ್, ಶಿವಂ ದುಬೆ 3 ರನ್ ಮತ್ತು ಅರ್ಷದೀಪ್ ಸಿಂಗ್ 9 ರನ್, ಮೊಹಮ್ಮದ್ ಸಿರಾಜ್ ಔಟಾಗದೆ 7 ರನ್ ಗಳಿಸಿದರು. ಪಾಕ್ ಪರ ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್ ತಲಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಅಮೀರ್ 2 ವಿಕೆಟ್, ಶಾಹೀನ್ ಅಫ್ರಿದಿ 1 ವಿಕೆಟ್ ಪಡೆದರು.

ಪಾಕ್ ತಂಡಕ್ಕೆ ಉತ್ತಮ ಆರಂಭ

ಭಾರತ ನೀಡಿದ 119 ರನ್​ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನಕ್ಕೆ ಉತ್ತಮ ಆರಂಭ ಸಿಕ್ಕಿತು. ನಾಯಕ ಬಾಬರ್ ಹಾಗೂ ರಿಜ್ವಾನ್ ಮೊದಲ ವಿಕೆಟ್​ಗೆ 26 ರನ್​​ಗಳ ಜೊತೆಯಾಟ ನೀಡಿದರು. ಈ ವೇಳೆ ಶಿವಂ ದುಬೆ, ರಿಜ್ವಾನ್ ಅವರ ಕ್ಯಾಚ್ ಕೈಚೆಲ್ಲಿದ್ದು, ಪಾಕ್ ತಂಡಕ್ಕೆ ವರವಾಯಿತು. ಆದರೆ ಯಾರ್ಕರ್ ಕಿಂಗ್ ಬುಮ್ರಾ, ಬಾಬರ್ ವಿಕೆಟ್ ಉರುಳಿಸುವ ಮೂಲಕ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

ರಿಜ್ವಾನ್ ವಿಕೆಟ್ ಪಂದ್ಯಕ್ಕೆ ತಿರುವು ನೀಡಿತು

ಎರಡನೇ ವಿಕೆಟ್​ಗೆ ಜೊತೆಯಾದ ಉಸ್ಮಾನ್ ಖಾನ್ 13 ರನ್​​ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಫಾಖರ್ ಜಮಾನ್ ಕೂಡ 13 ರನ್​ಗಳಿಗೆ ವಿಕೆಟ್ ಒಪ್ಪಿಸಿದರು.  ಇತ್ತ ಆರಂಭದಲ್ಲೇ ಜೀವದಾನದ ಲಾಭ ಪಡೆದಿದ್ದ ರಿಜ್ವಾನ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದರು. ಹೀಗಾಗಿ ಟೀಂ ಇಂಡಿಯಾಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುವಂತ್ತಾಗಿತ್ತು.

ಕೊನೆಯಲ್ಲಿ ಭಾರತದ ಕರಾರುವಕ್ಕಾದ ದಾಳಿ

ಆದರೆ ಈ ವೇಳೆ ದಾಳಿಗಿಳಿದ ಬುಮ್ರಾ ರಿಜ್ವಾನ್​ರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಪಂದ್ಯವನ್ನು ಮತ್ತೆ ಟೀಂ ಇಂಡಿಯಾ ಪರ ವಾಲುವಂತೆ ಮಾಡಿದರು. ಇಲ್ಲಿಂದ ಭಾರತದ ವೇಗಿಗಳು ಪಾಕ್ ಬ್ಯಾಟರ್​ಗಳಿಗೆ ಸುಲಭವಾಗಿ ರನ್ ಬಿಟ್ಟುಕೊಡಲಿಲ್ಲ. ಹೀಗಾಗಿ ಒತ್ತಡಕ್ಕೆ ಸಿಲುಕಿದ ಪಾಕ್ ಬ್ಯಾಟರ್ಸ್​ಗಳು ನಿಯಮಿತ ಅಂತರದಲ್ಲಿ ವಿಕೆಟ್ ಚೆಲ್ಲುತ್ತ ಟೀಂ ಇಂಡಿಯಾ ಮುಂದೆ ಶರಣಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:30 am, Mon, 10 June 24

ತಾಜಾ ಸುದ್ದಿ
ಗದಗ: ಗೋದಾಮಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ಕಿ, ಗೋಧಿ ಹುಳುಗಳ ಪಾಲು
ಗದಗ: ಗೋದಾಮಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ಕಿ, ಗೋಧಿ ಹುಳುಗಳ ಪಾಲು
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿಚಾರಣೆ ಏಕೆ
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿಚಾರಣೆ ಏಕೆ
Horoscope: ಈ ರಾಶಿಯವರಿಗೆ ಇಂದು ಪಿತ್ರಾರ್ಜಿತ ಸಂಪತ್ತಗಳು ಸಿಗುವ ಸಾಧ್ಯತೆ
Horoscope: ಈ ರಾಶಿಯವರಿಗೆ ಇಂದು ಪಿತ್ರಾರ್ಜಿತ ಸಂಪತ್ತಗಳು ಸಿಗುವ ಸಾಧ್ಯತೆ
ಹನುಮಂತನಿಗೆ ವೀಳ್ಯದೆಲೆ ಮಾಲೆ ಧಾರಣೆಯ ಮಹತ್ವವೇನು?
ಹನುಮಂತನಿಗೆ ವೀಳ್ಯದೆಲೆ ಮಾಲೆ ಧಾರಣೆಯ ಮಹತ್ವವೇನು?
ಸ್ಯಾಮ್​ಸಂಗ್ ಸ್ಮಾರ್ಟ್​ ಟಿವಿ ಸರಣಿಯಲ್ಲಿ ಮತ್ತೊಂದು ಲೇಟೆಸ್ಟ್​ ಮಾಡೆಲ್
ಸ್ಯಾಮ್​ಸಂಗ್ ಸ್ಮಾರ್ಟ್​ ಟಿವಿ ಸರಣಿಯಲ್ಲಿ ಮತ್ತೊಂದು ಲೇಟೆಸ್ಟ್​ ಮಾಡೆಲ್
ಡಿಎನ್​ಎ ಟೆಸ್ಟ್​ ಮಾಡಿಸಲು ಆಸ್ಪತ್ರೆಗೆ ತೆರಳುವಾಗಿ ಟೆನ್ಷನ್​ ಆದ ಪವಿತ್ರಾ
ಡಿಎನ್​ಎ ಟೆಸ್ಟ್​ ಮಾಡಿಸಲು ಆಸ್ಪತ್ರೆಗೆ ತೆರಳುವಾಗಿ ಟೆನ್ಷನ್​ ಆದ ಪವಿತ್ರಾ
ಡಿಕೆ ಶಿವಕುಮಾರ್​ ಸಭೆಗೂ ಕೈಕೊಟ್ಟ ವಿದ್ಯುತ್: ಅಧಿಕಾರಿಗಳ ಸರ್ಕಸ್ ನೋಡಿ
ಡಿಕೆ ಶಿವಕುಮಾರ್​ ಸಭೆಗೂ ಕೈಕೊಟ್ಟ ವಿದ್ಯುತ್: ಅಧಿಕಾರಿಗಳ ಸರ್ಕಸ್ ನೋಡಿ
ಆಕಾಶದಲ್ಲಿದ್ದ ವಿಮಾನದಲ್ಲಿ ಕೈಕೊಟ್ಟ AC, ಪ್ರಯಾಣಿಕರ ಪರದಾಟ: ವಿಡಿಯೋ ನೋಡಿ
ಆಕಾಶದಲ್ಲಿದ್ದ ವಿಮಾನದಲ್ಲಿ ಕೈಕೊಟ್ಟ AC, ಪ್ರಯಾಣಿಕರ ಪರದಾಟ: ವಿಡಿಯೋ ನೋಡಿ
‘ಡೆವಿಲ್​ ಎದುರು ನನ್ನ ಸಿನಿಮಾ ರಿಲೀಸ್​’: ಪ್ರಥಮ್​ ಬಹಿರಂಗ ಸವಾಲು
‘ಡೆವಿಲ್​ ಎದುರು ನನ್ನ ಸಿನಿಮಾ ರಿಲೀಸ್​’: ಪ್ರಥಮ್​ ಬಹಿರಂಗ ಸವಾಲು
ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡಕ್ಕೆ ಧುಮುಕಿದ ಡಿಕೆ ಶಿವಕುಮಾರ್‌
ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡಕ್ಕೆ ಧುಮುಕಿದ ಡಿಕೆ ಶಿವಕುಮಾರ್‌