T20 World Cup 2024: ಟಿ20 ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ಮುಂದುವರೆಸಿರುವ ಸೌತ್ ಆಫ್ರಿಕಾ ತಂಡ ಸೂಪರ್-8 ಹಂತಕ್ಕೇರಿದೆ. ಆಡಿರುವ ಮೂರು ಪಂದ್ಯಗಳಲ್ಲೂ ಗೆಲುವು ದಾಖಲಿಸಿರುವ ಸೌತ್ ಆಫ್ರಿಕಾ ಒಟ್ಟು 6 ಅಂಕಗಳೊಂದಿಗೆ ಮುಂದಿನ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ. ಇನ್ನು ಭಾರತ ತಂಡ ಸೂಪರ್-8 ಹಂತಕ್ಕೇರಲು ಒಂದೆಜ್ಜೆ ದೂರಲ್ಲಿದೆ.
ಅಂದರೆ ಬುಧವಾರ ಯುಎಸ್ಎ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದರೆ, ಸೂಪರ್-8 ಹಂತಕ್ಕೇರಲಿದೆ. ಏಕೆಂದರೆ ಟೀಮ್ ಇಂಡಿಯಾ ಈಗಾಗಲೇ 2 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಒಟ್ಟು 4 ಅಂಕಗಳೊಂದಿಗೆ ಗ್ರೂಪ್-ಎ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಇದೀಗ ಮೂರನೇ ಗೆಲುವು ದಾಖಲಿಸಿದರೆ ಸೂಪರ್-8 ಹಂತಕ್ಕೇರುವುದು ಖಚಿತವಾಗಲಿದೆ. ಹೀಗಾಗಿ ಬುಧವಾರ (ಜೂ.12) ನಡೆಯಲಿರುವ ಪಂದ್ಯದ ಮೂಲಕ ಭಾರತ ತಂಡವು ಮುಂದಿನ ಹಂತಕ್ಕೇರುವುದನ್ನು ಎದುರು ನೋಡಬಹುದು.
ಈ ಬಾರಿಯ ಟಿ20 ವಿಶ್ವಕಪ್ನಲ್ಲಿ 20 ತಂಡಗಳನ್ನು 4 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಇಲ್ಲಿ ಪ್ರತಿ ಗ್ರೂಪ್ನಲ್ಲಿ 5 ತಂಡಗಳಿವೆ. ಅಲ್ಲದೆ ಆಯಾ ಗ್ರೂಪ್ನಲ್ಲಿ ಪಂದ್ಯಗಳನ್ನಾಡಲಾಗುತ್ತದೆ.
ಅಂದರೆ, ಭಾರತ, ಪಾಕಿಸ್ತಾನ್, ಯುಎಸ್ಎ, ಕೆನಡಾ ಮತ್ತು ಐರ್ಲೆಂಡ್ ತಂಡಗಳು ಗ್ರೂಪ್ ಎ ನಲ್ಲಿದೆ. ಈ ಗ್ರೂಪ್ನಲ್ಲಿ 4 ತಂಡಗಳ ವಿರುದ್ಧ ಭಾರತ ಲೀಗ್ ಪಂದ್ಯಗಳನ್ನಾಡುತ್ತಿದೆ.
ಇಲ್ಲಿ ಆಯಾ ಗ್ರೂಪ್ಗೆ ಅಂಕ ಪಟ್ಟಿಯನ್ನು ಕೂಡ ನೀಡಲಾಗುತ್ತದೆ. ಲೀಗ್ ಹಂತದ ಪಂದ್ಯಗಳ ಮುಕ್ತಾಯದ ವೇಳೆಗೆ ಈ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡ ಮುಂದಿನ ಹಂತಕ್ಕೇರಲಿದೆ.
ಲೀಗ್ ಹಂತದ 4 ಗುಂಪುಗಳಿಂದ ಒಟ್ಟು 8 ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದೆ. ಇದನ್ನೇ ಇಲ್ಲಿ ಸೂಪರ್-8 ಹಂತ ಎನ್ನಲಾಗಿದೆ.
ಇನ್ನು ಸೂಪರ್-8 ಹಂತದಲ್ಲಿ ಮೇಲೆ ಹೇಳಿದಂತೆ ಒಟ್ಟು 8 ತಂಡಗಳು ಕಣಕ್ಕಿಳಿಯಲಿದೆ. ಇಲ್ಲಿ ಈ ತಂಡಗಳನ್ನು 2 ಗ್ರೂಪ್ಗಳಾಗಿ ವಿಂಗಡಿಸಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಲೀಗ್ ಹಂತದಲ್ಲಿ ಒಂದೇ ಗ್ರೂಪ್ನಲ್ಲಿ ಕಾಣಿಸಿಕೊಂಡ ತಂಡಗಳು ಇಲ್ಲಿ ಪರಸ್ಪರ ಮುಖಾಮುಖಿಯಾಗುವುದಿಲ್ಲ ಎಂಬುದು. ಬದಲಾಗಿ ಉಳಿದ ತಂಡಗಳ ವಿರುದ್ಧ ಆಡಲಿದೆ.
ಇದನ್ನೂ ಓದಿ: T20 World Cup 2024: ಟಿ20 ವಿಶ್ವಕಪ್ನಲ್ಲಿ ವಿಶ್ವ ದಾಖಲೆ ಬರೆದ ಉಗಾಂಡ ಬೌಲರ್
ಹಾಗೆಯೇ ಸೂಪರ್-8 ಹಂತದಲ್ಲೂ ಎರಡು ಗ್ರೂಪ್ಗಳಿಗೂ ಅಂಕ ಪಟ್ಟಿ ಇರಲಿದೆ. ಈ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ 4 ತಂಡಗಳು ಸೆಮಿಫೈನಲ್ ಹಂತಕ್ಕೇರಲಿದೆ.
ಸೆಮಿಫೈನಲ್ನಲ್ಲಿ ಗೆಲ್ಲುವ 2 ತಂಡಗಳು ಫೈನಲ್ಗೆ ಅರ್ಹತೆ ಪಡೆಯಲಿದೆ. ಅದರಂತೆ ಜೂನ್ 29 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಈ ತಂಡಗಳು ಮುಖಾಮುಖಿಯಾಗಲಿದೆ.
Published On - 4:28 pm, Tue, 11 June 24