IND vs USA, T20 World Cup 2024 Live Streaming: ಭಾರತ vs ಯುಎಸ್​ಎ ಪಂದ್ಯ ಎಷ್ಟು ಗಂಟೆಗೆ ಶುರು? ಇಲ್ಲಿದೆ ಸಂಪೂರ್ಣ ಮಾಹಿತಿ

India vs USA, T20 World Cup 2024: ಭಾರತ ತಂಡವು ತನ್ನ ಮೂರನೇ ಪಂದ್ಯದಲ್ಲಿ ಯುಎಸ್​ಎ ತಂಡವನ್ನು ಎದುರಿಸಲಿದೆ. ಈ ಪಂದ್ಯವು ನ್ಯೂಯಾರ್ಕ್​ನ ನಸ್ಸೌ ಕೌಂಟಿ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಹೀಗಾಗಿ ಈ ಮ್ಯಾಚ್​ನಲ್ಲಿ ಗೆಲ್ಲೋರು ಯಾರು ಎಂಬ ಕುತೂಹಲ ಏರ್ಪಟ್ಟಿದೆ. ಏಕೆಂದರೆ ಇದೇ ಮೈದಾನದಲ್ಲಿ ನಡೆದ ಹಲವು ಪಂದ್ಯವು ಲೋ ಸ್ಕೋರ್ ಪೈಪೋಟಿಗೆ ಸಾಕ್ಷಿಯಾಗಿತ್ತು.

IND vs USA, T20 World Cup 2024 Live Streaming: ಭಾರತ vs ಯುಎಸ್​ಎ ಪಂದ್ಯ ಎಷ್ಟು ಗಂಟೆಗೆ ಶುರು? ಇಲ್ಲಿದೆ ಸಂಪೂರ್ಣ ಮಾಹಿತಿ
IND vs USA
Follow us
|

Updated on:Jun 11, 2024 | 6:36 PM

T20 World Cup 2024: ಟಿ20 ವಿಶ್ವಕಪ್​ನ 25ನೇ ಪಂದ್ಯದಲ್ಲಿ ಭಾರತ ಮತ್ತು ಯುಎಸ್​ಎ ತಂಡಗಳು ಮುಖಾಮುಖಿಯಾಗಲಿದೆ. ಬುಧವಾರ (ಜೂ.12) ನ್ಯೂಯಾರ್ಕ್​ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದರೆ, ಸೂಪರ್-8 ಹಂತಕ್ಕೇರಲಿದೆ. ಅತ್ತ ಯುಎಸ್​ಎ ತಂಡ ಈ ಪಂದ್ಯದಲ್ಲಿ ಜಯ ಸಾಧಿಸಿದರೆ ಮುಂದಿನ ಹಂತಕ್ಕೇರಬಹುದು. ಹೀಗಾಗಿ ಈ ಪಂದ್ಯದಲ್ಲಿ ಜಯ ಸಾಧಿಸಲು ಉಭಯ ತಂಡಗಳು ಕಠಿಣ ಪೈಪೋಟಿ ನಡೆಸಲಿದೆ.

ಅದರಲ್ಲೂ ನ್ಯೂಯಾರ್ಕ್​ನ ನಸ್ಸೌ ಸ್ಟೇಡಿಯಂ ಪಿಚ್​ನಲ್ಲಿ ಯಾರು ಗೆಲ್ತಾರೆ ಎಂದು ಊಹಿಸುವುದೇ ಕಷ್ಟ. ಅದರಲ್ಲೂ ಯುಎಸ್​ಎ ತಂಡ ಈಗಾಗಲೇ ಪಾಕಿಸ್ತಾನ್ ತಂಡಕ್ಕೆ ಸೋಲುಣಿಸಿದೆ. ಹೀಗಾಗಿ ಬುಧವಾರದ ಪಂದ್ಯ ಕೂಡ ಕುತೂಹಲದ ಕೇಂದ್ರವಾಗಿ ಮಾರ್ಪಟ್ಟಿದೆ. ಇನ್ನು ಈ ಪಂದ್ಯದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ…

ಎಷ್ಟು ಗಂಟೆಗೆ ಪಂದ್ಯ ಶುರು?

ಭಾರತ ಮತ್ತು ಯುಎಸ್​ಎ ನಡುವಣ ಪಂದ್ಯವು ಬುಧವಾರ ರಾತ್ರಿ 8 ಗಂಟೆಗೆ (ಭಾರತೀಯ ಕಾಲಮಾನ) ಶುರುವಾಗಲಿದೆ. ಇನ್ನು ಟಾಸ್ ಪ್ರಕ್ರಿಯೆ 7.30 ಕ್ಕೆ ನಡೆಯಲಿದೆ.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಈ ಪಂದ್ಯವನ್ನು ಸ್ಟಾರ್​ ಸ್ಪೋರ್ಟ್ಸ್ ಕನ್ನಡ ಸೇರಿದಂತೆ, ಸ್ಟಾರ್ ನೆಟವರ್ಕ್​ನ ಎಲ್ಲಾ ಚಾನೆಲ್​ಗಳಲ್ಲಿ ನೇರ ಪ್ರಸಾರ ಇರಲಿದೆ.

ಯಾವ ಆ್ಯಪ್​ನಲ್ಲಿ ವೀಕ್ಷಿಸಬಹುದು?

ಡಿಸ್ನಿ ಹಾಟ್ ಸ್ಟಾರ್ ಆ್ಯಪ್​ನಲ್ಲಿ ಈ ಪಂದ್ಯವನ್ನು ಉಚಿತವಾಗಿ ವೀಕ್ಷಿಸಬಹುದು. ಇನ್ನು ಡಿಸ್ನಿ ಹಾಟ್ ಸ್ಟಾರ್ ವೆಬ್​ಸೈಟ್​ನಲ್ಲೂ ಪಂದ್ಯದ ಪ್ರಸಾರ ಇರಲಿದ್ದು, ಇದಕ್ಕಾಗಿ ಎಕ್ಸ್​ಟ್ರಾ ರಿಚಾರ್ಜ್​ ಮಾಡಬೇಕಾಗುತ್ತದೆ.

ಉಭಯ ತಂಡಗಳು:

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್​ಪ್ರೀತ್ ಬುಮ್ರಾ.

ಇದನ್ನೂ ಓದಿ: T20 World Cup 2024: ಟಿ20 ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ಉಗಾಂಡ ಬೌಲರ್

ಯುಎಸ್​ಎ ತಂಡ: ಮೊನಾಂಕ್ ಪಟೇಲ್ (ನಾಯಕ), ಆರೋನ್ ಜೋನ್ಸ್, ಆಂಡ್ರೀಸ್ ಗೌಸ್, ಕೋರಿ ಆಂಡರ್ಸನ್, ಅಲಿ ಖಾನ್, ಹರ್ಮೀತ್ ಸಿಂಗ್, ಜೆಸ್ಸಿ ಸಿಂಗ್, ಮಿಲಿಂದ್ ಕುಮಾರ್, ನಿಸರ್ಗ್ ಪಟೇಲ್, ನಿತೀಶ್ ಕುಮಾರ್, ನೋಷ್ತುಶ್ ಕೆಂಜಿಗೆ, ಸೌರಭ್ ನೇತ್ರಲ್ವಾಕರ್, ಶಾಡ್ಲಿ ವ್ಯಾನ್ ಸ್ಚಾಲ್ಕ್‌ವಿಕ್, ಸ್ಟೀವನ್ ಟೇಲರ್, ಶಯಾನ್ ಜಹಾಂಗೀರ್. ಮೀಸಲು ಆಟಗಾರರು: ಗಜಾನಂದ್ ಸಿಂಗ್, ಜುವಾನೊಯ್ ಡ್ರೈಸ್‌ಡೇಲ್, ಯಾಸಿರ್ ಮೊಹಮ್ಮದ್.

Published On - 6:35 pm, Tue, 11 June 24

ತಾಜಾ ಸುದ್ದಿ
ತುಳಸಿ ಗಿಡಕ್ಕೆ ಅತಿಯಾಗಿ ನೀರು ಹಾಕುವುದು ಕೂಡ ಶುಭವಲ್ಲ ಏಕೆ? ವಿಡಿಯೋ ನೋಡಿ
ತುಳಸಿ ಗಿಡಕ್ಕೆ ಅತಿಯಾಗಿ ನೀರು ಹಾಕುವುದು ಕೂಡ ಶುಭವಲ್ಲ ಏಕೆ? ವಿಡಿಯೋ ನೋಡಿ
Daily Horoscope: ಭೂಮಿಯ ಖರೀದಿಯ ಬಗ್ಗೆ ಬಂಧುಗಳಿಂದ ಒತ್ತಡ ಬರಬಹುದು
Daily Horoscope: ಭೂಮಿಯ ಖರೀದಿಯ ಬಗ್ಗೆ ಬಂಧುಗಳಿಂದ ಒತ್ತಡ ಬರಬಹುದು
ರಾಜ್ಯದ ವರಮಾನ ಹೆಚ್ಚಿಸಲು ವಿದೇಶಿ ಕಂಪನಿಗಳಿಂದ ಸಲಹೆ: ಬಿಜೆಪಿ ಕಿಡಿ
ರಾಜ್ಯದ ವರಮಾನ ಹೆಚ್ಚಿಸಲು ವಿದೇಶಿ ಕಂಪನಿಗಳಿಂದ ಸಲಹೆ: ಬಿಜೆಪಿ ಕಿಡಿ
ಒಂದೇ ಒಂದು ಅವಕಾಶ ಕೊಡಿ ಎಂದು ಪೊಲೀಸರ ಬಳಿ ಬೇಡಿಕೆ ಇಟ್ಟ ಪ್ರಜ್ವಲ್ ರೇವಣ್ಣ!
ಒಂದೇ ಒಂದು ಅವಕಾಶ ಕೊಡಿ ಎಂದು ಪೊಲೀಸರ ಬಳಿ ಬೇಡಿಕೆ ಇಟ್ಟ ಪ್ರಜ್ವಲ್ ರೇವಣ್ಣ!
ಮಾಧ್ಯಮಗಳ ಕ್ಯಾಮೆರಾ ಕಂಡು ಗರಂ ಆದ ಪವಿತ್ರಾ ಗೌಡ ಸಹೋದರ; ಇಲ್ಲಿದೆ ವಿಡಿಯೋ..
ಮಾಧ್ಯಮಗಳ ಕ್ಯಾಮೆರಾ ಕಂಡು ಗರಂ ಆದ ಪವಿತ್ರಾ ಗೌಡ ಸಹೋದರ; ಇಲ್ಲಿದೆ ವಿಡಿಯೋ..
ಅಂತಾರಾಷ್ಟ್ರೀಯ ಯೋಗ ದಿನ; ದಟ್ಟ ಹಿಮದಲ್ಲಿ ಯೋಗಾಭ್ಯಾಸ ಮಾಡಿದ ಸೈನಿಕರು
ಅಂತಾರಾಷ್ಟ್ರೀಯ ಯೋಗ ದಿನ; ದಟ್ಟ ಹಿಮದಲ್ಲಿ ಯೋಗಾಭ್ಯಾಸ ಮಾಡಿದ ಸೈನಿಕರು
ದರ್ಶನ್-ಪ್ರೇಮ್ ಸಿನಿಮಾ ಆರಂಭವಾಗುತ್ತ? ಅಥವಾ ನಿಲ್ಲುತ್ತಾ?
ದರ್ಶನ್-ಪ್ರೇಮ್ ಸಿನಿಮಾ ಆರಂಭವಾಗುತ್ತ? ಅಥವಾ ನಿಲ್ಲುತ್ತಾ?
‘ದರ್ಶನ್​ ಒಳ್ಳೆ ವ್ಯಕ್ತಿ, ಜೊತೆಗಾರರಿಂದ ಏನೋ ಮೋಸ ನಡೆದಿದೆ’: ಶ್ರೀನಿವಾಸ್​
‘ದರ್ಶನ್​ ಒಳ್ಳೆ ವ್ಯಕ್ತಿ, ಜೊತೆಗಾರರಿಂದ ಏನೋ ಮೋಸ ನಡೆದಿದೆ’: ಶ್ರೀನಿವಾಸ್​
ಮೊಟ್ಟೆಯ ಮೇಲೆ 60 ಯೋಗಾಸನ ಭಂಗಿ; ಬೆರಗು ಮೂಡಿಸಿದ ಕಲಾವಿದನ ಕೈಚಳಕ
ಮೊಟ್ಟೆಯ ಮೇಲೆ 60 ಯೋಗಾಸನ ಭಂಗಿ; ಬೆರಗು ಮೂಡಿಸಿದ ಕಲಾವಿದನ ಕೈಚಳಕ
ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಹೈಕಮಾಂಡ್ ಬೇಸರ; ಪರಮೇಶ್ವರ ಹೇಳಿದ್ದಿಷ್ಟು
ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಹೈಕಮಾಂಡ್ ಬೇಸರ; ಪರಮೇಶ್ವರ ಹೇಳಿದ್ದಿಷ್ಟು