India vs Pakistan: ಟೀಮ್ ಇಂಡಿಯಾ ಕೈಯಲ್ಲಿ ಪಾಕಿಸ್ತಾನ್ ತಂಡದ ಟಿ20 ವಿಶ್ವಕಪ್ ಭವಿಷ್ಯ

|

Updated on: Jun 09, 2024 | 1:03 PM

ಟಿ20 ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಒಟ್ಟು 7 ಬಾರಿ ಸೆಣಸಿದೆ. ಈ ವೇಳೆ ಟೀಮ್ ಇಂಡಿಯಾ 5 ಬಾರಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಪಾಕಿಸ್ತಾನ್ ತಂಡ ಗೆದ್ದಿರುವುದು ಕೇವಲ ಒಂದು ಬಾರಿ ಮಾತ್ರ. ಇನ್ನೊಂದು ಪಂದ್ಯವು ಟೈನಲ್ಲಿ ಅಂತ್ಯಗೊಂಡಿತ್ತು. ಈ ಟೈ ಪಂದ್ಯದಲ್ಲಿ ಬೌಲ್​ ಔಟ್ ಮೂಲಕ ಭಾರತ ತಂಡ ಜಯ ಸಾಧಿಸಿತ್ತು.

India vs Pakistan: ಟೀಮ್ ಇಂಡಿಯಾ ಕೈಯಲ್ಲಿ ಪಾಕಿಸ್ತಾನ್ ತಂಡದ ಟಿ20 ವಿಶ್ವಕಪ್ ಭವಿಷ್ಯ
IND vs PAK
Follow us on

T20 World Cup 2024: ಟಿ20 ವಿಶ್ವಕಪ್​ನ ಬಹುನಿರೀಕ್ಷಿತ ಪಂದ್ಯಕ್ಕಾಗಿ ಕ್ಷಣಗಣನೆ ಶುರುವಾಗಿದೆ. ನ್ಯೂಯಾರ್ಕ್​ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಕಣಕ್ಕಿಳಿಯಲಿದೆ. ವಿಶೇಷ ಎಂದರೆ ಈ ಪಂದ್ಯವು ಪಾಕ್ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್​ನಲ್ಲಿ ಪಾಕಿಸ್ತಾನ್ ತಂಡ ಸೋತರೆ ಟಿ20 ವಿಶ್ವಕಪ್​ನಿಂದ ಹೊರಬೀಳುವುದು ಬಹುತೇಕ ಖಚಿತವಾಗಲಿದೆ.

ಅಂದರೆ ಯುಎಸ್​ಎ ವಿರುದ್ಧ ಸೋತಿರುವ ಪಾಕ್ ಪಾಲಿಗೆ ಇಂದಿನ ಪಂದ್ಯವು ನಿರ್ಣಾಯಕ. ಭಾರತದ ವಿರುದ್ಧ ಗೆದ್ದರೆ ಮಾತ್ರ ಮುಂದಿನ ಹಂತಕ್ಕೇರುವುದನ್ನು ಎದುರು ನೋಡಬಹುದು.

ಅಂಕಪಟ್ಟಿಯ ಲೆಕ್ಕಾಚಾರ:

ಭಾರತದ ವಿರುದ್ಧ ಪಾಕಿಸ್ತಾನ್ ಸೋತರೆ ಟಿ20 ವಿಶ್ವಕಪ್​ನಿಂದ ಹೊರಬೀಳುವ ಸಾಧ್ಯತೆ ಹೆಚ್ಚು. ಏಕೆಂದರೆ ಗ್ರೂಪ್-ಎ ಅಂಕ ಪಟ್ಟಿಯಲ್ಲಿ 2 ಗೆಲುವು ದಾಖಲಿಸಿರುವ ಯುಎಸ್​ಎ ತಂಡ ಅಗ್ರಸ್ಥಾನದಲ್ಲಿದೆ.

ಇನ್ನು 1 ಗೆಲುವಿನೊಂದಿಗೆ ಭಾರತ ತಂಡ ದ್ವಿತೀಯ ಸ್ಥಾನದಲ್ಲಿದೆ. ಇಂದು ಪಾಕ್ ವಿರುದ್ಧ ಭಾರತ ತಂಡ ಗೆದ್ದರೆ 2 ಜಯಗಳೊಂದಿಗೆ ಮೊದಲ ಸ್ಥಾನಕ್ಕೇರಲಿದೆ.
ಅತ್ತ 2 ಸೋಲುಗಳೊಂದಿಗೆ ಪಾಕಿಸ್ತಾನ್ ತಂಡ 4ನೇ ಅಥವಾ 5ನೇ ಸ್ಥಾನಕ್ಕೆ ಕುಸಿಯಬಹುದು. ಅಲ್ಲದೆ ಕೊನೆಯ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ್ ತಂಡ ಗೆದ್ದರೂ ಯುಎಸ್​ಎ ಗಿಂತ ಹೆಚ್ಚಿನ ನೆಟ್ ರನ್ ರೇಟ್ ಹೊಂದಿದ್ದರೆ ಮಾತ್ರ ಮುಂದಿನ ಹಂತಕ್ಕೇರಬಹುದು.

ಆದರೆ ಅತ್ತ ಟೀಮ್ ಇಂಡಿಯಾ ಮತ್ತು ಯುಎಸ್​ಎ ತಂಡಗಳು 3 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಪಾಕಿಸ್ತಾನ್ ತಂಡ ಹೊರಬೀಳುವುದು ಖಚಿತವಾಗಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ್ ಗೆದ್ದರೆ ಮಾತ್ರ ಸೂಪರ್-8 ಹಂತಕ್ಕೇರಲು ಅವಕಾಶ ಇರಲಿದೆ ಎನ್ನಬಹುದು.

ಸೂಪರ್-8 ಹಂತ ಪ್ರವೇಶ ಹೇಗೆ?

ಈ ಬಾರಿಯ ವಿಶ್ವಕಪ್​ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿದಿದೆ. ಈ ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ನಾಲ್ಕು ಗುಂಪುಗಳಿಗೂ ಪ್ರತ್ಯೇಕ ಪಾಯಿಂಟ್ಸ್ ಟೇಬಲ್​ ಇದ್ದು, ಈ ಅಂಕ ಪಟ್ಟಿಗಳಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಸೂಪರ್-8 ಹಂತಕ್ಕೇರಲಿದೆ.

ಇದನ್ನೂ ಓದಿ: ಬಾಬರ್ ದಾಖಲೆ ಮುರಿಯುವವರು ಯಾರು? ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ

ಇದೀಗ ಗ್ರೂಪ್-ಎ ಪಾಯಿಂಟ್ಸ್​ ಟೇಬಲ್​ನ ಮೊದಲೆರಡು ಸ್ಥಾನಗಳಲ್ಲಿ ಯುಎಸ್​ಎ ಮತ್ತು ಭಾರತ ತಂಡವಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ್ ಗೆಲ್ಲುವುದು ಅನಿವಾರ್ಯ. ಹೀಗಾಗಿಯೇ ಪಾಕಿಸ್ತಾನ್ ತಂಡದ ಟಿ20 ವಿಶ್ವಕಪ್ ಭವಿಷ್ಯ ಟೀಮ್ ಇಂಡಿಯಾ ಕೈಯಲ್ಲಿದೆ ಎನ್ನಬಹುದು.