India vs Pakistan: 150 ರನ್​ಗಳಿಸಿದರೆ ಗೆಲುವು ಖಚಿತ..!

ಟಿ20 ಕ್ರಿಕೆಟ್​ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಒಟ್ಟು 12 ಬಾರಿ ಮುಖಾಮುಖಿಯಾಗಿ. ಈ ವೇಳೆ ಟೀಮ್ ಇಂಡಿಯಾ 9 ಬಾರಿ ವಿಜಯದ ಪಾತಾಕೆ ಹಾರಿಸಿದೆ. ಹಾಗೆಯೇ ಪಾಕಿಸ್ತಾನ್ ತಂಡ ಗೆದ್ದಿರುವುದು ಕೇವಲ 3 ಬಾರಿ ಮಾತ್ರ. ಹೀಗಾಗಿ ಈ ಬಾರಿ ಕೂಡ ಗೆಲ್ಲುವ ಫೇವರೇಟ್ ತಂಡವಾಗಿ ಟೀಮ್ ಇಂಡಿಯಾ ಗುರುತಿಸಿಕೊಂಡಿದೆ.

India vs Pakistan: 150 ರನ್​ಗಳಿಸಿದರೆ ಗೆಲುವು ಖಚಿತ..!
IND vs PAK
Follow us
ಝಾಹಿರ್ ಯೂಸುಫ್
|

Updated on: Jun 09, 2024 | 11:04 AM

T20 World Cup 2024: ಟಿ20 ವಿಶ್ವಕಪ್​ನ 19ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ನ್ಯೂಯಾರ್ಕ್​ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆಯುತ್ತಿರುವುದರಿಂದ ಬೃಹತ್ ಮೊತ್ತದ ಸ್ಕೋರ್ ಅನ್ನು ನಿರೀಕ್ಷಿಸುವಂತಿಲ್ಲ. ಏಕೆಂದರೆ ಈ ಮೈದಾನದಲ್ಲಿ ಆಡಲಾದ 4 ಪಂದ್ಯಗಳಲ್ಲಿ ಒಂದೇ ಒಂದು ತಂಡವು 150 ಕ್ಕಿಂತ ಹೆಚ್ಚಿನ ರನ್ ಕಲೆಹಾಕಿಲ್ಲ.

ಹೀಗಾಗಿಯೇ ಈ ಮೈದಾನದಲ್ಲಿ 150 ರನ್​ಗಳಿಸಿದರೆ ಗೆಲುವು ಖಚಿತ ಎನ್ನಲಾಗುತ್ತಿದೆ. ಇದಕ್ಕೆ ಸಾಕ್ಷಿ ಈ ಮೈದಾನದಲ್ಲಿ ಆಡಲಾದ 4 ಪಂದ್ಯಗಳ ಅಂಕಿ ಅಂಶಗಳು…

  • ಶ್ರೀಲಂಕಾ vs ಸೌತ್ ಆಫ್ರಿಕಾ: ನಸ್ಸೌ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಪಂದ್ಯವಾಡಿದ್ದ ಶ್ರೀಲಂಕಾ ಮತ್ತು ಸೌತ್ ಆಫ್ರಿಕಾ ತಂಡಗಳು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 19.1 ಓವರ್​ಗಳಲ್ಲಿ ಕೇವಲ 77 ರನ್​ಗಳಿಗೆ ಆಲೌಟ್ ಆಗಿತ್ತು. ಇನ್ನು ಈ ಗುರಿಯನ್ನು ಬೆನ್ನತ್ತಲು ಸೌತ್ ಆಫ್ರಿಕಾ ತಂಡವು 16.2 ಓವರ್​ಗಳನ್ನು ತೆಗೆದುಕೊಂಡಿದ್ದರು. ಈ ಮೂಲಕ ಸೌತ್ ಆಫ್ರಿಕಾ 6 ವಿಕೆಟ್​ಗಳ ಜಯ ಸಾಧಿಸಿತ್ತು.
  • ಭಾರತ vs ಐರ್ಲೆಂಡ್: ಟಿ20 ವಿಶ್ವಕಪ್​ನ 8ನೇ ಪಂದ್ಯಕ್ಕೆ ಇದೇ ಮೈದಾನ ಆತಿಥ್ಯವಹಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡವು 16 ಓವರ್​ಗಳಲ್ಲಿ 96 ರನ್ ಬಾರಿಸಿ ಆಲೌಟ್ ಆಗಿತ್ತು. ಇನ್ನು ಟೀಮ್ ಇಂಡಿಯಾ 12.2 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 97 ರನ್ ಬಾರಿಸಿ ಗೆಲುವು ದಾಖಲಿಸಿತು.
  • ಕೆನಡಾ vs ಐರ್ಲೆಂಡ್: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆನಡಾ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 137 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಐರ್ಲೆಂಡ್ ತಂಡವು 125 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಕೆನಡಾ ತಂಡವು 12 ರನ್​ಗಳ ರೋಚಕ ಜಯ ಸಾಧಿಸಿತು.
  • ನೆದರ್​ಲೆಂಡ್ಸ್ vs ಸೌತ್ ಆಫ್ರಿಕಾ: ಟಿ20 ವಿಶ್ವಕಪ್​ನ 16ನೇ ಪಂದ್ಯದಲ್ಲಿ ನೆದರ್​ಲೆಂಡ್ಸ್ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೆದರ್​ಲೆಂಡ್ಸ್ ತಂಡವು 20 ಓವರ್​ಗಳಲ್ಲಿ 103 ರನ್ ಕಲೆಹಾಕಿತು. ಈ ಸುಲಭ ಟಾರ್ಗೆಟ್ ಅನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ ಗುರಿ ತಲುಪಲು 18.5 ಓವರ್​ಗಳನ್ನು ತೆಗೆದುಕೊಂಡಿದ್ದರು.

ಅಂದರೆ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಬಾರಿ ಮೂಡಿಬಂದ ಗರಿಷ್ಠ ಸ್ಕೋರ್ 137 ರನ್​ಗಳು. ಕೆನಡಾ ತಂಡ ಕಲೆಹಾಕಿದ ಈ ಗರಿಷ್ಠ ಸ್ಕೋರ್ ಅನ್ನು ಬೆನ್ನತ್ತಲು ಐರ್ಲೆಂಡ್​ ತಂಡಕ್ಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ನಸ್ಸೌ ಸ್ಟೇಡಿಯಂನಲ್ಲಿ 150 ಕ್ಕಿಂತ ಹೆಚ್ಚಿನ ರನ್ ಕಲೆಹಾಕಿದರೆ ಚೇಸಿಂಗ್ ಮಾಡುವುದು ಕಷ್ಟಕರ ಎಂದೇ ಹೇಳಬಹುದು.

ಅದರಲ್ಲೂ ಪಾಕ್ ವಿರುದ್ಧ ಭಾರತ ತಂಡವು 150 ರನ್​ ಬಾರಿಸಿದರೆ ಟೀಮ್ ಇಂಡಿಯಾ ಗೆಲುವು ಖಚಿತ ಎನ್ನಬಹುದು. ಏಕೆಂದರೆ ಪಾಕಿಸ್ತಾನ್ ತಂಡ ಉತ್ತಮ ಬ್ಯಾಟಿಂಗ್ ಲೈನಪ್ ಹೊಂದಿಲ್ಲ. ಹೀಗಾಗಿ ಟೀಮ್ ಇಂಡಿಯಾ ಗೆಲುವಿಗೆ 150 ರನ್​ಗಳು ಸಾಕಾಗಬಹುದು.

ಇದನ್ನೂ ಓದಿ: Babar Azam: ಬಾಬರ್ ಅಬ್ಬರಕ್ಕೆ ಕಿಂಗ್ ಕೊಹ್ಲಿಯ ದಾಖಲೆ ಉಡೀಸ್

ಪಾಕಿಸ್ತಾನ್ ತಂಡ 150 ರನ್ ಬಾರಿಸಿದರೆ?

ಒಂದು ವೇಳೆ ಪಾಕಿಸ್ತಾನ್ ತಂಡ 150 ರನ್ ಬಾರಿಸಿದರೆ ಯಾರು ಗೆಲ್ತಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕುತ್ತರ ಟೀಮ್ ಇಂಡಿಯಾ. ಏಕೆಂದರೆ ಇದೇ ಮೈದಾನದಲ್ಲಿ ಬಾಂಗ್ಲಾದೇಶ್ ವಿರುದ್ಧ ಆಡಲಾದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವು 20 ಓವರ್​ಗಳಲ್ಲಿ 182 ರನ್ ಕಲೆಹಾಕಿತ್ತು. ಹೀಗಾಗಿ ಪಾಕ್ ತಂಡ ದೊಡ್ಡ ಮೊತ್ತ ಪೇರಿಸಿದರೂ, ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿರುವ ಭಾರತ ತಂಡದಿಂದ ಚೇಸಿಂಗ್ ಅನ್ನು ನಿರೀಕ್ಷಿಸಬಹುದು.