India vs Pakistan: ಪಾಕಿಸ್ತಾನ್ ತಂಡದಿಂದ ಯುವ ಆಟಗಾರ ಔಟ್

India vs Pakistan: ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯವು ಅಮೆರಿಕ ಕಾಲಮಾನ ಬೆಳಿಗ್ಗೆ 10.30 ರಿಂದ ಶುರುವಾಗಲಿದೆ. ಅಂದರೆ ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ನೇರ ಪ್ರಸಾರ ವೀಕ್ಷಿಸಬಹುದು. ಸ್ಟಾರ್ ಸ್ಪೋರ್ಟ್ಸ್ ಕನ್ನಡ ಸೇರಿದಂತೆ ಸ್ಟಾರ್ ನೆಟ್​ವರ್ಕ್​ನ ಬಹುತೇಕ ಸ್ಪೋರ್ಟ್ಸ್ ಚಾನೆಲ್​ಗಳಲ್ಲಿ ಈ ಪಂದ್ಯದ ಲೈವ್ ಇರಲಿದೆ.

India vs Pakistan: ಪಾಕಿಸ್ತಾನ್ ತಂಡದಿಂದ ಯುವ ಆಟಗಾರ ಔಟ್
Pakistan Team
Follow us
|

Updated on: Jun 09, 2024 | 2:50 PM

ನ್ಯೂಯಾರ್ಕ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನ 19ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಇಂದು (ಜೂ.9) ಜರುಗಲಿರುವ ಈ ಪಂದ್ಯದಿಂದ ಪಾಕಿಸ್ತಾನ್ ತಂಡದ ಯುವ ವಿಕೆಟ್ ಕೀಪರ್ ಬ್ಯಾಟರ್ ಆಝಂ ಖಾನ್ ಹೊರಗುಳಿಯುವುದು ಬಹುತೇಕ ಖಚಿತ. ಏಕೆಂದರೆ ಯುಎಸ್​ಎ ವಿರುದ್ಧದ ಪಂದ್ಯದಲ್ಲಿ ಆಝಂ ಖಾನ್ ಶೂನ್ಯಕ್ಕೆ ಔಟಾಗಿದ್ದರು. ಇದಾದ ಬಳಿಕ ಆಝಂ ಆಯ್ಕೆ ಬಗ್ಗೆ ಅಪಸ್ವರಗಳು ಕೇಳಿ ಬಂದಿದ್ದವು.

ಅಲ್ಲದೆ ಟೀಮ್ ಇಂಡಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಪಾಕ್ ತಂಡದ ಅಭ್ಯಾಸದ ವೇಳೆಯೂ ಆಝಂ ಖಾನ್ ಕಾಣಿಸಿಕೊಂಡಿಲ್ಲ. ಅಂದರೆ ಭಾರತದ ವಿರುದ್ಧದ ಪಂದ್ಯಕ್ಕೆ ಆಯ್ಕೆ ಮಾಡಲಾಗುವ ಪ್ಲೇಯಿಂಗ್ ಇಲೆವೆನ್​ನಿಂದ ಯುವ ದಾಂಡಿಗನನ್ನು ಕೈ ಬಿಡುವುದು ಖಚಿತ. ಹೀಗಾಗಿಯೇ ಬ್ಯಾಟಿಂಗ್ ಅಭ್ಯಾಸ ನಡೆಸಿಲ್ಲ ಎಂದು ವರದಿಯಾಗಿದೆ.

ಬದಲಿ ಆಟಗಾರ ಯಾರು?

ಆಝಂ ಖಾನ್ ಹೊರಗುಳಿದರೆ ಇಮಾದ್ ವಾಸಿಂ ಕಣಕ್ಕಿಳಿಯಲಿದ್ದಾರೆ. ಏಕೆಂದರೆ ಕಳೆದ ಪಂದ್ಯದಲ್ಲಿ ಗಾಯದ ಕಾರಣ ಅವರು ಆಡಿರಲಿಲ್ಲ. ಹೀಗಾಗಿ ಆಝಂ ಖಾನ್ ಸ್ಥಾನದಲ್ಲಿ ಆಲ್​ರೌಂಡರ್ ಇಮಾದ್ ವಾಸಿಂ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಅದರಂತೆ ಪಾಕಿಸ್ತಾನ್ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ…

ಇದನ್ನೂ ಓದಿ: India vs Pakistan Playing XI: ಪಾಕ್ ವಿರುದ್ಧ ಭಾರತದ ಪ್ಲೇಯಿಂಗ್ XI ಹೀಗಿರಲಿದೆ

ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಉಸ್ಮಾನ್ ಖಾನ್, ಫಖರ್ ಝಮಾನ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಂ, ಶಾದಾಬ್ ಖಾನ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಮೊಹಮ್ಮದ್ ಅಮೀರ್, ಹ್ಯಾರಿಸ್ ರೌಫ್.

ಇದನ್ನೂ ಓದಿ: Babar Azam: ಬಾಬರ್ ಅಬ್ಬರಕ್ಕೆ ಕಿಂಗ್ ಕೊಹ್ಲಿಯ ದಾಖಲೆ ಉಡೀಸ್

ಪಾಕಿಸ್ತಾನ್ ತಂಡ: ಬಾಬರ್ ಆಝಂ (ನಾಯಕ), ಅಬ್ರಾರ್ ಅಹ್ಮದ್, ಆಝಂ ಖಾನ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಂ, ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಝ್ವಾನ್, ನಸೀಮ್ ಶಾ, ಸೈಮ್ ಅಯೂಬ್, ಶಾದಾಬ್ ಖಾನ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ಖಾನ್.

ತಾಜಾ ಸುದ್ದಿ
ಜಿಯೋ ಏರ್​ಫೈಬರ್ ಗ್ರಾಹಕರಿಗೆ ಶೇ 30 ಡಿಸ್ಕೌಂಟ್ ಆಫರ್
ಜಿಯೋ ಏರ್​ಫೈಬರ್ ಗ್ರಾಹಕರಿಗೆ ಶೇ 30 ಡಿಸ್ಕೌಂಟ್ ಆಫರ್
ಮೊದಲ ಮಳೆ,ಕತ್ತೆಗಳಿಗೆ ಗುಲಾಬ್​​​ ಜಾಮೂನು ತಿನಿಸಿ ಸಂಭ್ರಮಿಸಿದ ಗ್ರಾಮಸ್ಥರು
ಮೊದಲ ಮಳೆ,ಕತ್ತೆಗಳಿಗೆ ಗುಲಾಬ್​​​ ಜಾಮೂನು ತಿನಿಸಿ ಸಂಭ್ರಮಿಸಿದ ಗ್ರಾಮಸ್ಥರು
ಬೂಜು ಕುಂಬಳಕಾಯಿ ಆರೋಗ್ಯ ಪ್ರಯೋಜನಗಳು ತಿಳಿದರೆ ಇಂದಿನಿಂದ ಬಳಸುತ್ತೀರಿ!
ಬೂಜು ಕುಂಬಳಕಾಯಿ ಆರೋಗ್ಯ ಪ್ರಯೋಜನಗಳು ತಿಳಿದರೆ ಇಂದಿನಿಂದ ಬಳಸುತ್ತೀರಿ!
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ