T20 World Cup 2024: ಎಚ್ಚರ ತಪ್ಪಿದರೆ 5 ರನ್ ಪೆನಾಲ್ಟಿ! ಟಿ20 ವಿಶ್ವಕಪ್‌ನಲ್ಲಿ ಬಳಸುತ್ತಿರುವ ಈ ನಿಯಮದ ಬಗ್ಗೆ ನಿಮಗೆಷ್ಟು ಗೊತ್ತು?
T20 World Cup 2024: ಟಿ20 ವಿಶ್ವಕಪ್‌ನಲ್ಲಿ ನಿಗದಿತ ಸಮಯದಲ್ಲಿ ತಮ್ಮ ಓವರ್‌ಗಳನ್ನು ಪೂರ್ಣಗೊಳಿಸದ ತಂಡಗಳಿಗೆ ಈ ನಿಯಮ ದುಬಾರಿಯಾಗುವುದಂತೂ ಖಚಿತ. ಪ್ರಯೋಗವಾಗಿ ಈ ನಿಯಮವು ಯಶಸ್ವಿಯಾದ ನಂತರ ಐಸಿಸಿ, ಈ ವಿಶ್ವಕಪ್‌ನಿಂದ ವೈಟ್ ಬಾಲ್ ಮಾದರಿಯಲ್ಲಿ ಸ್ಟಾಪ್ ಕ್ಲಾಕ್ ನಿಯಮವನ್ನು ಬಳಸಲು ಮುಂದಾಗಿದೆ.
2024 ರ ಟಿ20 ವಿಶ್ವಕಪ್ (T20 World Cup 2024) ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಐಸಿಸಿಯ (ICC) ಈ ಮೆಗಾ ಈವೆಂಟ್ ಜೂನ್ 2 ರಿಂದ ಪ್ರಾರಂಭವಾಗಲಿದೆ. 2007ರಿಂದ ಆರಂಭವಾದ ಈ ಮಿನಿ ವಿಶ್ವಸಮರ ಈಗಾಗಲೇ 8 ಆವೃತ್ತಿಗಳನ್ನು ಮುಗಿಸಿದ್ದು, 9ನೇ ಸೀಸನ್ಗೆ ಕಾಲಿಟ್ಟಿದೆ. ಕಳೆದಿರುವ 8 ಆವೃತ್ತಿಗಳಲ್ಲೂ ಐಸಿಸಿ ಹಲವು ನೂತನ ನಿಯಮಗಳನ್ನು ಈ ಮಾದರಿಯಲ್ಲಿ ಅಳವಡಿಸಿಕೊಂಡಿದೆ. ಅದರಂತೆ ಈ ಬಾರಿಯೂ ನೂತನ ನಿಯಮವೊಂದು ಅಳವಡಿಸಿಕೊಂಡಿದೆ. ಆ ನಿಯಮವೇ ಸ್ಟಾಪ್ ಕ್ಲಾಕ್ ನಿಯಮ (Stop Clock Rule).
ಟಿ20 ವಿಶ್ವಕಪ್‌ನಲ್ಲಿ ನಿಗದಿತ ಸಮಯದಲ್ಲಿ ತಮ್ಮ ಓವರ್‌ಗಳನ್ನು ಪೂರ್ಣಗೊಳಿಸದ ತಂಡಗಳಿಗೆ ಈ ನಿಯಮ ದುಬಾರಿಯಾಗುವುದಂತೂ ಖಚಿತ. ಪ್ರಯೋಗವಾಗಿ ಈ ನಿಯಮವು ಯಶಸ್ವಿಯಾದ ನಂತರ ಐಸಿಸಿ, ಈ ವಿಶ್ವಕಪ್‌ನಿಂದ ವೈಟ್ ಬಾಲ್ ಮಾದರಿಯಲ್ಲಿ ಸ್ಟಾಪ್ ಕ್ಲಾಕ್ ನಿಯಮವನ್ನು ಬಳಸಲು ಮುಂದಾಗಿದೆ.
ಟಿ20 ವಿಶ್ವಕಪ್ ಆಡಿದ ಆಟಗಾರನಿಗೆ 5 ವರ್ಷ ಜೈಲು! 20 ವರ್ಷಗಳ ನಿಷೇಧ
ಏನಿದು ಸ್ಟಾಪ್ ಕ್ಲಾಕ್ ನಿಯಮ?
ಈ ನಿಯಮದ ಪ್ರಕಾರ ಎರಡು ಓವರ್‌ಗಳ ನಡುವೆ ತಂಡಕ್ಕೆ ಮುಂದಿನ ಓವರ್ ಆರಂಭಿಸಲು 60 ಸೆಕೆಂಡ್ ಸಮಯಾವಕಾಶವನ್ನು ನೀಡಲಾಗುತ್ತದೆ. ಈ ಸಮಯದ ಮಧ್ಯಂತರದಲ್ಲಿ ಬೌಲಿಂಗ್ ತಂಡವು ಮುಂದಿನ ಓವರ್ ಅನ್ನು ಪ್ರಾರಂಭಿಸಬೇಕಾಗುತ್ತದೆ. ಒಂದು ಓವರ್ ಮುಗಿದ ತಕ್ಷಣ, ಮೂರನೇ ಅಂಪೈರ್ ಈ ನಿಯಮವನ್ನು ಅನುಷ್ಠಾನಕ್ಕೆ ತರುತ್ತಾರೆ. ಈ ಸಮಯದ ಮಿತಿಯೊಳಗೆ ಓವರ್ ಪ್ರಾರಂಭವಾಗದಿದ್ದರೆ, ಮೈದಾನದಲ್ಲಿರುವ ಅಂಪೈರ್, ಬೌಲಿಂಗ್ ತಂಡಕ್ಕೆ ಎರಡು ಎಚ್ಚರಿಕೆಗಳನ್ನು ನೀಡುತ್ತಾರೆ. ಮೂರನೇ ಎಚ್ಚರಿಕೆಯಲ್ಲಿ ಐದು ರನ್‌ಗಳ ದಂಡ ವಿಧಿಸಲಾಗುತ್ತದೆ. ಈ ರನ್‌ಗಳು ಬ್ಯಾಟಿಂಗ್ ತಂಡದ ಖಾತೆಗೆ ಸೇರ್ಪಡೆಯಾಗಲಿವೆ.
ಡಿ. 23 ರಂದು ಪ್ರಯೋಗವಾಗಿ ಜಾರಿ
ಐಸಿಸಿ ಡಿಸೆಂಬರ್ 2023 ರಿಂದ ವೈಟ್ ಬಾಲ್ ಮಾದರಿಯಲ್ಲಿ ಈ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮವು ಪಂದ್ಯದ ಸಮಯದಲ್ಲಿ 20 ನಿಮಿಷಗಳ ಸಮಯವನ್ನು ಉಳಿಸುತ್ತದೆ. ಈ ಯಶಸ್ಸಿನಿಂದ ಉತ್ತೇಜಿತವಾದ ಐಸಿಸಿ, ಈ ನಿಯಮವನ್ನು ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಜಾರಿಗೆ ತರುತ್ತಿದೆ.
ಈ ಸಂದರ್ಭದಲ್ಲಿ ಈ ನಿಯಮ ಅನ್ವಯವಾಗುವುದಿಲ್ಲ
ವಾಸ್ತವವಾಗಿ ಪಂದ್ಯದ ವೇಳೆ ಕೆಲವು ಸಂದರ್ಭಗಳಲ್ಲಿ ಈ ನಿಯಮ ಬಳಸಲಾಗುವುದಿಲ್ಲ. ಆದಾಗ್ಯೂ, ಈ ನಿಯಮವನ್ನು ಬಳಸುವುದು ಹಾಗೂ ಬಳಸದಿರುವುದು ಸಂಪೂರ್ಣವಾಗಿ ಮೂರನೇ ಅಂಪೈರ್ ಮೇಲೆ ಅವಲಂಬಿತವಾಗಿರುತ್ತದೆ. ಹೊಸ ಬ್ಯಾಟ್ಸ್‌ಮನ್ ಕ್ರಿಸ್ಗೆ ಬರುವ ಸಂದರ್ಭದಲ್ಲಿ ಈ ನಿಯಮ ಅನ್ವಯವಾಗುವುದಿಲ್ಲ. ಅಲ್ಲದೆ ಅಧಿಕೃತ ಪಾನೀಯಗಳ ವಿರಾಮದ ಸಮಯದಲ್ಲೂ ಈ ನಿಯಮದಿಂದ ರಿಯಾಯಿತಿ ಇರುತ್ತದೆ. ಬ್ಯಾಟ್ಸ್‌ಮನ್ ಅಥವಾ ಫೀಲ್ಡರ್‌ಗೆ ಗಾಯವಾದಾಗ ಅಥವಾ ಫೀಲ್ಡಿಂಗ್ ತಂಡದಿಂದ ಸಮಯ ವ್ಯರ್ಥವಾಗದ ಸಂದರ್ಭದಲ್ಲೂ ಈ ನಿಯಮವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ