IND vs ENG: ಭಾರತವನ್ನು ಸೋಲಿಸಲು ಒಳ ಸಂಚು? ಪಿಚ್ ಕ್ಯುರೇಟರ್ ಜೊತೆ ಗಂಭೀರ್ ಜಗಳ

India vs England T20 World Cup Semifinal: ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ-ಇಂಗ್ಲೆಂಡ್ ಮುಖಾಮುಖಿಯಾಗಲಿವೆ. ವಾಂಖೆಡೆ ಪಿಚ್‌ನಲ್ಲಿ ಹಸಿರು ಹುಲ್ಲಿನ ಪದರ ಕಂಡುಬಂದಿದ್ದು, ಇದು ವೇಗದ ಬೌಲರ್‌ಗಳಿಗೆ ನೆರವಾಗುವ ನಿರೀಕ್ಷೆಯಿದೆ. ಈ ಬಗ್ಗೆ ಗೌತಮ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿ, ಪಿಚ್ ಕ್ಯುರೇಟರ್ ಜೊತೆ ವಾಗ್ವಾದ ನಡೆಸಿದ್ದಾರೆ. ಈ ಪಿಚ್ ಭಾರತಕ್ಕೆ ಪ್ರತಿಕೂಲವಾಗಬಹುದು ಮತ್ತು ಇಂಗ್ಲೆಂಡ್‌ಗೆ ಅನುಕೂಲಕರವಾಗಬಹುದು ಎಂಬ ಆತಂಕ ಸೃಷ್ಟಿಸಿದ್ದು, ಒಳಸಂಚಿನ ಅನುಮಾನಗಳಿಗೆ ಕಾರಣವಾಗಿದೆ.

IND vs ENG: ಭಾರತವನ್ನು ಸೋಲಿಸಲು ಒಳ ಸಂಚು? ಪಿಚ್ ಕ್ಯುರೇಟರ್ ಜೊತೆ ಗಂಭೀರ್ ಜಗಳ
Gautam Gambir

Updated on: Mar 04, 2026 | 8:17 PM

ಟಿ20 ವಿಶ್ವಕಪ್ ಸೆಮಿಫೈನಲ್‌ನ (T20 World Cup Semi-final) ಎರಡನೇ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ (India vs England) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ (Wankhede Pitch) ನಡೆಯಲಿದೆ. ಒಂದೆಡೆ ತವರಿನ ಲಾಭ ಪಡೆದು ಫೈನಲ್​ಗೇರುವ ಇರಾದೆಯೊಂದಿಗೆ ಟೀಂ ಇಂಡಿಯಾ ಇದ್ದರೆ, ಇತ್ತ ಇಂಗ್ಲೆಂಡ್, ಕಳೆದ ಟಿ20 ವಿಶ್ವಕಪ್ ಸೆಮಿಫೈನಲ್‌ ಸೋಲಿಗೆ ಸೇಡು ತೀರಿಸಿಕೊಳ್ಳಲು ನೋಡುತ್ತಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋವೊಂದು ಚರ್ಚೆಗೆ ಗ್ರಾಸವಾಗಿದ್ದು, ಟೀಂ ಇಂಡಿಯಾವನ್ನು ಮಣಿಸಲು ಒಳ ಸಂಚು ನಡೆದಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಅಷ್ಟಕ್ಕೂ ಈ ಅನುಮಾನ ಹುಟ್ಟಲು ಕಾರಣವೇನು? ವೈರಲ್ ಆಗುತ್ತಿರುವ ಫೋಟೋದಲ್ಲಿ ಅಂತದ್ದೇನಿದೆ ಎಂಬುದನ್ನು ನೋಡುವುದಾದರೆ..

ಪಿಚ್‌ನಲ್ಲಿ ಹಸಿರು ಹುಲ್ಲಿನ ಪದರ

ವಾಸ್ತವವಾಗಿ ವಾಂಖೆಡೆ ಪಿಚ್ ಯಾವಾಗಲೂ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ನೆರವು ನೀಡುತ್ತದೆ. ಅಂದರೆ ಈ ಪಿಚ್​ನಲ್ಲಿ ರನ್ ಮಳೆ ಹರಿಯುವುದು ವಾಡಿಕೆ. ಆದರೆ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಪಿಚ್ ಅಧ್ಯಯನ ನಡೆಸುವ ವೇಳೆ ಪಿಚ್ ಕ್ಯುರೇಟರ್ ಜೊತೆ ವಾಗ್ವಾದ ನಡೆಸಿರುವುದು ಅಭಿಮಾನಿಗಳಲ್ಲಿ ಆತಂಕ ಹುಟ್ಟಿಹಾಕಿದೆ. ವರದಿಯ ಪ್ರಕಾರ, ವಾಂಖೆಡೆ ಪಿಚ್‌ನಲ್ಲಿ ಹಸಿರು ಹುಲ್ಲಿನ ಪದರ ಗೋಚರಿಸುತ್ತಿದೆ. ಇದು ವೇಗದ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ. ಆದ್ದರಿಂದ, ಸೆಮಿಫೈನಲ್ ಪಂದ್ಯದಲ್ಲಿ ವೇಗದ ಬೌಲರ್‌ಗಳು ದೊಡ್ಡ ಪಾತ್ರವನ್ನು ವಹಿಸುವ ಸಾಧ್ಯತೆಯಿದ್ದು, ಪವರ್ ಪ್ಲೇನಲ್ಲಿ ರನ್ ವೇಗಕ್ಕೆ ಕಡಿವಾಣ ಹಾಕಲಿದ್ದಾರೆ.

ವೇಗದ ಬೌಲರ್‌ಗಳಿಗೆ ಹೆಚ್ಚು ಪ್ರಯೋಜನ

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೋದಲ್ಲಿ, ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಪಿಚ್ ಕ್ಯುರೇಟರ್ ಜೊತೆ ಚರ್ಚಿಸುತ್ತಿರುವುದು ಕಂಡುಬರುತ್ತದೆ. ಈ ಸಮಯದಲ್ಲಿ, ಗೌತಮ್ ಗಂಭೀರ್ ಕೋಪಗೊಂಡವರಂತೆ ಕಾಣುತ್ತಿದ್ದಾರೆ. ಗೌತಮ್ ಗಂಭೀರ್ ಈ ಪಿಚ್ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಪಿಚ್​ ಹುಲ್ಲಿನ ಮೇಲ್ಮೈ ಹೊಂದಿದ್ದರೆ, ಅದು ವೇಗದ ಬೌಲರ್‌ಗಳಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಆದ್ದರಿಂದ, ಪವರ್‌ಪ್ಲೇನಲ್ಲಿ ರನ್ ಗಳಿಸುವುದು ಕಷ್ಟಕರವಾಗಬಹುದು. ಇದರ ಲಾಭವನ್ನು ಇಂಗ್ಲೆಂಡ್‌ ತಂಡ ಪಡೆಯಬಹುದು.

IND vs ENG: ಭಾರತ- ಇಂಗ್ಲೆಂಡ್‌ ಮುಖಾಮುಖಿ ದಾಖಲೆ ಹೇಗಿದೆ? ಇಲ್ಲಿದೆ ಪೂರ್ಣ ಜಾತಕ

ಏಕೆಂದರೆ ಇಂಗ್ಲೆಂಡ್‌ನಲ್ಲಿ ಎಲ್ಲಾ ಪಿಚ್​ಗಳು ಹುಲ್ಲಿನ ಪದರವನ್ನು ಹೊಂದಿರುತ್ತವೆ. ಹಾಗಾಗಿ ಇಂಗ್ಲೆಂಡ್‌ ಆಟಗಾರರು ಅಂತಹ ಪಿಚ್​ಗಳಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಮತ್ತೊಂದೆಡೆ, ಪ್ರಸ್ತುತ ಇಂಗ್ಲೆಂಡ್‌ ತಂಡದ ಅನೇಕ ಆಟಗಾರರು ಐಪಿಎಲ್ ಪಂದ್ಯಾವಳಿಯಲ್ಲಿ ಆಡಿದ್ದಾರೆ. ಆದ್ದರಿಂದ, ಅವರಿಗೆ ಭಾರತೀಯ ಪಿಚ್‌ಗಳ ಬಗ್ಗೆ ಅರಿವಿದೆ. ಇಂತಹ ಪರಿಸ್ಥಿತಿಯಲ್ಲಿ, ಇಂಗ್ಲೆಂಡ್, ಭಾರತ ತಂಡಕ್ಕೆ ಕಠಿಣ ಸವಾಲು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:16 pm, Wed, 4 March 26

Follow Us