T20 World Cup 2021: ದಕ್ಷಿಣ ಆಫ್ರಿಕಾಗೆ ಸೋಲುಣಿಸಿ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಿದ ಆಸ್ಟ್ರೇಲಿಯಾ

T20 World Cup 2021: ಇದರ ಬೆನ್ನಲ್ಲೇ ರಬಾಡಗೆ ವಿಕೆಟ್ ಒಪ್ಪಿಸಿ ವಾರ್ನರ್ (14) ಕೂಡ ಪೆವಿಲಿಯನ್ ಕಡೆ ಮುಖ ಮಾಡಿದರು. ಕೇಶವ್ ಮಹರಾಜ್ ಎಸೆತದಲ್ಲಿ ಮಿಚೆಲ್ ಮಾರ್ಷ್ (11) ಕ್ಯಾಚ್ ನೀಡಿ ನಿರ್ಗಮಿಸಿದರು.

T20 World Cup 2021: ದಕ್ಷಿಣ ಆಫ್ರಿಕಾಗೆ ಸೋಲುಣಿಸಿ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಿದ ಆಸ್ಟ್ರೇಲಿಯಾ
ಹೌದು, ಟಿ20 ವಿಶ್ವಕಪ್​ ಫೈನಲ್​ನ ಗೆಲುವಿನ ರೂವಾರಿಗಳಾದ ಜೋಶ್ ಹ್ಯಾಝಲ್​ವುಡ್​ ಹಾಗೂ ಮಿಚೆಲ್ ಮಾರ್ಷ್​ ಮೂರು ವಿಶ್ವಕಪ್​ ಗೆದ್ದ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಂದರೆ ಅಂಡರ್ 19, ಏಕದಿನ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್​ ಗೆದ್ದ ಸಾಧನೆಯನ್ನು ಈ ಇಬ್ಬರು ಆಟಗಾರರು ಮಾಡಿದ್ದಾರೆ.

ಟಿ20 ವಿಶ್ವಕಪ್​ನ (T20 World Cup 2021) ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಆಸ್ಟ್ರೇಲಿಯಾ ಐದು ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ನಾಯಕ ಆರೋನ್ ಫಿಂಚ್ ಫೀಲ್ಡಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾಗೆ ನಿರೀಕ್ಷಿತ ಆರಂಭ ಸಿಕ್ಕಿರಲಿಲ್ಲ. 2ನೇ ಓವರ್​ನಲ್ಲಿ ನಾಯಕ ಬುವುಮಾ(12) ಮ್ಯಾಕ್ಸ್​ವೆಲ್ ಎಸೆತಕ್ಕೆ ಬೌಲ್ಡ್ ಆದರೆ, ಇದರ ಬೆನ್ನಲ್ಲೇ ವಾನ್ ಡೆರ್ ಡುಸ್ಸೆನ್ (2) ಹ್ಯಾಝಲ್​ವುಡ್​ಗೆ ವಿಕೆಟ್ ಒಪ್ಪಿಸಿದರು. ಇನ್ನು ವಿಭಿನ್ನ ಹೊಡೆತಕ್ಕೆ ಮುಂದಾಗಿ ಡಿಕಾಕ್ (7) ಕೂಡ ಹೊರನಡೆದರು.

ಈ ಹಂತದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ ಐಡೆನ್ ಮಾರ್ಕ್ರಮ್ 36 ಎಸೆತಗಳಲ್ಲಿ 40 ರನ್​ಗಳಿಸಿದರು. ಇನ್ನು ಅಂತಿಮದಲ್ಲಿ ರಬಾಡ 19 ರನ್ ಬಾರಿಸುವ ಮೂಲಕ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ ತಂಡದ ಮೊತ್ತವನ್ನು 118 ಕ್ಕೆ ತಂದು ನಿಲ್ಲಿಸಿದರು. ಈ ಸಾಧಾರಣ ಗುರಿ ಪಡೆದ ಆಸ್ಟ್ರೇಲಿಯಾ ಆರಂಭ ಕೂಡ ಉತ್ತಮವಾಗಿರಲಿಲ್ಲ. ಖಾತೆ ತೆರೆಯುವ ಮುನ್ನವೇ ಆರೋನ್ ಫಿಂಚ್ ಅನ್ರಿಕ್ ನೋಕಿಯಾಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.

ಇದರ ಬೆನ್ನಲ್ಲೇ ರಬಾಡಗೆ ವಿಕೆಟ್ ಒಪ್ಪಿಸಿ ವಾರ್ನರ್ (14) ಕೂಡ ಪೆವಿಲಿಯನ್ ಕಡೆ ಮುಖ ಮಾಡಿದರು. ಕೇಶವ್ ಮಹರಾಜ್ ಎಸೆತದಲ್ಲಿ ಮಿಚೆಲ್ ಮಾರ್ಷ್ (11) ಕ್ಯಾಚ್ ನೀಡಿ ನಿರ್ಗಮಿಸಿದರು. 38 ರನ್​ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಸ್ಟೀವ್ ಸ್ಮಿತ್ (35) ಹಾಗೂ ಮ್ಯಾಕ್ಸ್​ವೆಲ್ (18) ಆಸರೆಯಾದರು. ಅಂತಿಮ ಓವರ್​ ವೇಳೆ ಕಣಕ್ಕಿಳಿದ ಮಾರ್ಕಸ್ ಸ್ಟೊಯಿನಿಸ್ (24) ಹಾಗೂ ಮ್ಯಾಥ್ಯೂ ವೇಡ್ (15) ಉತ್ತಮ ಜೊತೆಯಾಟವಾಡಿದರು. ಅದರಂತೆ ಆಸ್ಟ್ರೇಲಿಯಾ ತಂಡವು 19.4 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 121 ರನ್​ಗಳಿಸಿ ದಕ್ಷಿಣ ಆಫ್ರಿಕಾ ವಿರುದ್ದ 5 ವಿಕೆಟ್​ಗಳ ಜಯ ಸಾಧಿಸಿತು.

ಇದನ್ನೂ ಓದಿ: India vs Pakistan, T20 World cup 2021: ಒಂದು ದಿನ ಮೊದಲೇ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ್

ಇದನ್ನೂ ಓದಿ: T20 World cup 2021: ಪಾಕ್ ವಿರುದ್ದದ ಪಂದ್ಯದೊಂದಿಗೆ ಹೊಸ ಸಾಧನೆ ಮಾಡಲಿದ್ದಾರೆ ಕೆಎಲ್ ರಾಹುಲ್, ಪಾಂಡ್ಯ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

(T20 World Cup Match Result 2021 Know Who Won Australia vs south africa T20 World Cup Match on 23 october Highlights)

Click on your DTH Provider to Add TV9 Kannada