India vs South Africa: ಕಳಪೆ ಫೀಲ್ಡಿಂಗ್​ಗೆ ಬೆಲೆತೆತ್ತ ಟೀಮ್ ಇಂಡಿಯಾ

T20 World Cup 2022: ಟೀಮ್ ಇಂಡಿಯಾ ಬೌಲರ್​ಗಳು 134 ರನ್​ ಟಾರ್ಗೆಟ್​ ಅನ್ನು ಕೊನೆಯ ಓವರ್​ ತನಕ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು.

India vs South Africa: ಕಳಪೆ ಫೀಲ್ಡಿಂಗ್​ಗೆ ಬೆಲೆತೆತ್ತ ಟೀಮ್ ಇಂಡಿಯಾ
Team India
Follow us
TV9 Web
| Updated By: ಝಾಹಿರ್ ಯೂಸುಫ್

Updated on: Oct 30, 2022 | 9:54 PM

T20 World Cup 2022:  ಪರ್ತ್​ನಲ್ಲಿ ನಡೆದ ಸೌತ್ ಆಫ್ರಿಕಾ (South Africa) ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 5 ವಿಕೆಟ್​ಗಳಿಂದ ಸೋಲನುಭವಿಸಿದೆ. ಆದರೆ ಈ ಸೋಲಿಗೆ ಒಂದು ಕಾರಣ ಭಾರತ ತಂಡದ ಬ್ಯಾಟ್ಸ್​ಮನ್​ಗಳ ವೈಫಲ್ಯ. ಇದಾಗ್ಯೂ ಟೀಮ್ ಇಂಡಿಯಾಗೆ ಬೌಲರ್​ಗಳು ಅತ್ಯುತ್ತಮ ಆರಂಭ ಒದಗಿಸಿದ್ದರು. ಆದರೆ ಈ ಉತ್ತಮ ಆರಂಭವನ್ನು ಮುಂದುವರೆಸುವಲ್ಲಿ ಟೀಮ್ ಇಂಡಿಯಾ ಫೀಲ್ಡರ್​ಗಳು ಎಡವಿದ್ದರು. ಅಂದರೆ ಕಳಪೆ ಫೀಲ್ಡಿಂಗ್​ನಿಂದ ಟೀಮ್ ಇಂಡಿಯಾ ಪಂದ್ಯವನ್ನೇ ಕೈಚೆಲ್ಲಿಕೊಂಡಿತು ಎಂದರೆ ತಪ್ಪಾಗಲಾರದು.

ಏಕೆಂದರೆ ಕೇವಲ 134 ರನ್​ಗಳ ಸುಲಭ ಗುರಿಯೊಳಗೆ ಎದುರಾಳಿಗಳನ್ನು ನಿಯಂತ್ರಿಸಲು ಅತ್ಯುತ್ತಮ ಬೌಲಿಂಗ್ ಹಾಗೂ ಫೀಲ್ಡಿಂಗ್ ಅತ್ಯವಶ್ಯಕ. ಅದರಂತೆ ಟೀಮ್ ಇಂಡಿಯಾಗೆ ಪವರ್​ಪ್ಲೇನಲ್ಲಿ ವೇಗದ ಬೌಲರ್​ಗಳು ಅತ್ಯುತ್ತಮ ಆರಂಭ ಒದಗಿಸಿದ್ದರು. ಕೇವಲ 24 ರನ್​ ನೀಡಿ 3 ವಿಕೆಟ್ ಕಬಳಿಸಿ ಸೌತ್ ಆಫ್ರಿಕಾಗೆ ಆರಂಭಿಕ ಆಘಾತ ನೀಡಿದ್ದರು.

ಇದನ್ನೂ ಓದಿ
Image
Virat Kohli: ಒಂದಲ್ಲ, ಎರಡಲ್ಲ…ಹಲವು ವಿಶ್ವ ದಾಖಲೆಗಳನ್ನು ಉಡೀಸ್ ಮಾಡಿದ ಕಿಂಗ್ ಕೊಹ್ಲಿ
Image
India vs Pakistan: ಪಾಕ್​ನ ಬಗ್ಗು ಬಡಿದು ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
Image
IND vs PAK: ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ರೋಹಿತ್ ಶರ್ಮಾ
Image
India vs Pakistan: ಹೊಸ ದಾಖಲೆ ನಿರ್ಮಿಸಿದ ದಿನೇಶ್ ಕಾರ್ತಿಕ್

ಆದರೆ ಸೌತ್ ಆಫ್ರಿಕಾ ಬ್ಯಾಟರ್​ಗಳ ಮೇಲೆ ಇದೇ ಒತ್ತಡವನ್ನು ಮುಂದುವರೆಸುವಲ್ಲಿ ಸಾಧ್ಯವಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ ಭಾರತೀಯ ಆಟಗಾರರ ಕಳಪೆ ಫೀಲ್ಡಿಂಗ್. ಏಕೆಂದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಕೈಚೆಲ್ಲಿಕೊಂಡಿದ್ದು ಬರೋಬ್ಬರಿ 4 ಅವಕಾಶಗಳನ್ನು.

ಪಂದ್ಯದ ಆರಂಭದಲ್ಲೇ ಡೇವಿಡ್ ಮಿಲ್ಲರ್​ನನ್ನು ರನೌಟ್ ಮಾಡುವ ಅವಕಾಶ ರೋಹಿತ್ ಶರ್ಮಾಗೆ ಲಭಿಸಿತ್ತು. ಆದರೆ ಹಿಟ್​ಮ್ಯಾನ್ ಎಸೆದ ಥ್ರೋ ವಿಕೆಟ್​ನಿಂದ ದೂರ ಸಾಗಿತ್ತು. ಇದಾದ ಬಳಿಕ ಏಡನ್ ಮಾರ್ಕ್ರಾಮ್ ಅವರನ್ನು ರನೌಟ್ ಮಾಡುವ ಮತ್ತೊಂದು ಅವಕಾಶ ಸೂರ್ಯಕುಮಾರ್ ಮುಂದಿತ್ತು. ಆದರೆ ವಿಕೆಟ್​ಗೆ ಡೈರೆಕ್ಟ್ ಹಿಟ್​ ಮಾಡುವಲ್ಲಿ ಸೂರ್ಯ ವಿಫಲರಾಗಿದ್ದರು.

ಇನ್ನು 12ನೇ ಓವರ್​ನಲ್ಲಿ ಏಡನ್ ಮಾರ್ಕ್ರಾಮ್ ನೀಡಿದ ಸುಲಭ ಕ್ಯಾಚ್​ ಅನ್ನು ವಿರಾಟ್ ಕೊಹ್ಲಿ ಕೈಚೆಲ್ಲಿದ್ದರು. ಇದರ ಬೆನ್ನಲ್ಲೇ 13ನೇ ಓವರ್​ನಲ್ಲಿ ಡೇವಿಡ್ ಮಿಲ್ಲರ್ ಅವರನ್ನು ಸುಲಭವಾಗಿ ರನೌಟ್ ಮಾಡುವ ಅವಕಾಶ ರೋಹಿತ್ ಶರ್ಮಾ ಮುಂದಿತ್ತು. ಆದರೆ ಅತ್ಯುತ್ತಮ ಅವಕಾಶದಲ್ಲೂ ವಿಕೆಟ್​ಗೆ ಡೈರೆಕ್ಟ್​ ಆಗಿ ಚೆಂಡು ತಾಗಿಸುವಲ್ಲಿ ಹಿಟ್​ಮ್ಯಾನ್ ವಿಫಲರಾದರು.

ಹೀಗೆ 13 ಓವರ್​ಗಳ ಒಳಗೆ ಸಿಕ್ಕ ನಾಲ್ಕು ಅವಕಾಶಗಳನ್ನು ಟೀಮ್ ಇಂಡಿಯಾ ಕೈಚೆಲ್ಲಿಕೊಂಡಿದ್ದು ದುಬಾರಿಯಾಯಿತು ಎನ್ನಬಹುದು. ಏಕೆಂದರೆ ಈ ಹಂತದಲ್ಲಿ ಸೌತ್ ಆಫ್ರಿಕಾ ಕಲೆಹಾಕಿದ್ದು ಕೇವಲ 68 ರನ್​ಗಳು ಮಾತ್ರ. ಆದರೆ ಟೀಮ್ ಇಂಡಿಯಾ ಫೀಲ್ಡರ್​ಗಳು ನೀಡಿದ ಜೀವದಾನವನ್ನು ಬಳಸಿಕೊಂಡ ಡೇವಿಡ್ ಮಿಲ್ಲರ್ (59) ಹಾಗೂ ಏಡನ್ ಮಾರ್ಕ್ರಾಮ್ (52) ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಜಯ ತಂದುಕೊಡುವಲ್ಲಿ ಯಶಸ್ವಿಯಾದರು.

ಇದರ ಹೊರತಾಗಿ ಟೀಮ್ ಇಂಡಿಯಾ ಬೌಲರ್​ಗಳು 134 ರನ್​ ಟಾರ್ಗೆಟ್​ ಅನ್ನು ಕೊನೆಯ ಓವರ್​ ತನಕ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಕಳಪೆ ಫೀಲ್ಡಿಂಗ್​ನಿಂದಲೇ ಟೀಮ್ ಇಂಡಿಯಾ ಪಂದ್ಯ ಕೈಚೆಲ್ಲಿಕೊಂಡಿತು ಎಂದರೆ ತಪ್ಪಾಗಲಾರದು.

ಸೌತ್ ಆಫ್ರಿಕಾ ಪ್ಲೇಯಿಂಗ್ 11–  ಕ್ವಿಂಟನ್ ಡಿ ಕಾಕ್, ತೆಂಬಾ ಬವುಮಾ (ನಾಯಕ), ರಿಲೀ ರೊಸ್ಸೊ, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಲುಂಗಿ ಎನ್‌ಗಿಡಿ, ಅನ್ರಿಕ್ ನೋಕಿಯಾ

ಟೀಮ್ ಇಂಡಿಯಾ ಪ್ಲೇಯಿಂಗ್ 11– ರೋಹಿತ್ ಶರ್ಮಾ (ನಾಯಕ), ಕೆಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ , ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಅಶ್ವಿನ್.

ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?