AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾಗೆ ಭರ್ಜರಿ ಗಿಫ್ಟ್ ಘೋಷಿಸಿದ ಟಾಟಾ

India Women vs South Africa Women, Final: ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್​ನ ಫೈನಲ್ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 45.3 ಓವರ್​ಗಳಲ್ಲಿ 246 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 52 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಟೀಮ್ ಇಂಡಿಯಾಗೆ ಭರ್ಜರಿ ಗಿಫ್ಟ್ ಘೋಷಿಸಿದ ಟಾಟಾ
Tata - Team India
ಝಾಹಿರ್ ಯೂಸುಫ್
|

Updated on: Nov 06, 2025 | 1:25 PM

Share

ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ದೇಶದ ಪ್ರಮುಖ ಆಟೋಮೊಬೈಲ್ ಕಂಪೆನಿ ಟಾಟಾ ಮೋಟರ್ಸ್ ಭರ್ಜರಿ ಉಡುಗೊರೆ ಘೋಷಿಸಿದೆ. ನವೆಂಬರ್ 2 ರಂದು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 52 ರನ್​ಗಳ ಜಯ ಸಾಧಿಸಿತ್ತು. ಈ ಮೂಲಕ ಭಾರತ ಮಹಿಳಾ ತಂಡ ಚೊಚ್ಚಲ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದೆ.

ಈ ಐತಿಹಾಸಿಕ ಸಾಧನೆಗಾಗಿ ಇದೀಗ ಟಾಟಾ ಕಂಪೆನಿಯು ಟೀಮ್ ಇಂಡಿಯಾ ಆಟಗಾರ್ತಿಯರಿಗೆ ಹೊಚ್ಚ ಹೊಸ ಟಾಟಾ ಸಿಯೆರಾ ಎಸ್‌ಯುವಿ ಕಾರನ್ನು ನೀಡುವುದಾಗಿ ತಿಳಿಸಿದೆ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾದ ಕೋಚ್ ಹಾಗೂ ಸಹಾಯಕ ಸಿಬ್ಬಂದಿಗಳಿಗೂ ಈ ಉಡುಗೊರೆ ಸಿಗಲಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಶೈಲೇಶ್ ಚಂದ್ರ, “ಭಾರತೀಯ ಮಹಿಳಾ ತಂಡವು ತನ್ನ ದೃಢನಿಶ್ಚಯ ಮತ್ತು ಆತ್ಮವಿಶ್ವಾಸದಿಂದ ದೇಶಕ್ಕೆ ಹೆಮ್ಮೆಯ ಕ್ಷಣವನ್ನು ನೀಡಿದೆ. ಅವರ ಸಾಧನೆಗಳನ್ನು ಗೌರವಿಸಲು ನಾವು ಸಂತೋಷಪಡುತ್ತೇವೆ.

ಟಾಟಾ ಸಿಯೆರಾ ಭಾರತೀಯ ಆಟೋಮೊಬೈಲ್ ಇತಿಹಾಸದಲ್ಲಿ ಒಂದು ಪರಂಪರೆಯ ಐಕಾನ್ ವಾಹನವಾಗಿದೆ. ಈ ಕಾರುಗಳನ್ನು ಇದೀಗ ಗೌರವಾನ್ವಿತ ವ್ಯಕ್ತಿಗಳಿಗೆ ನಾವು ಪ್ರತಿಷ್ಠಿತ ವಸ್ತುವನ್ನಾಗಿ ಉಡುಗೊರೆಯಾಗಿ ನೀಡುತ್ತಿದ್ದೇವೆ. ಟಾಟಾ ಸಿಯೆರಾ ಹಾಗೂ ಟೀಮ್ ಇಂಡಿಯಾ ಎರಡೂ ಸ್ಫೂರ್ತಿಯ ಸಂಕೇತಗಳು. ಹೀಗಾಗಿ ಹೊಚ್ಚ ಹೊಸ ವಿನ್ಯಾಸದ ಟಾಟಾ ಸಿಯೆರಾ ಕಾರನ್ನು ಭಾರತೀಯ ತಂಡಕ್ಕೆ ನೀಡುತ್ತಿದ್ದೇವೆ ಎಂದು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಶೈಲೇಶ್ ಚಂದ್ರ ಹೇಳಿದ್ದಾರೆ.

ನವೆಂಬರ್ 25 ರಂದು ಬಿಡುಗಡೆ:

ಟಾಟಾ ಸಿಯೆರಾ ಕಾರಿನ ಹೊಸ ಮಾಡೆಲ್ ಇನ್ನೂ ಸಹ ಬಿಡುಗಡೆಯಾಗಿಲ್ಲ. 90 ರ ದಶಕದಲ್ಲಿ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಸಿಯೆರಾ ಕಾರಿಗೆ ಇದೀಗ ಆಧುನಿಕ ಟಚ್ ನೀಡಲಾಗಿದ್ದು, ಈ ಮೂಲಕ ಟಾಟಾ ಕಂಪೆನಿ ಮತ್ತೊಮ್ಮೆ ತನ್ನ ಐಕಾನ್ ಕಾರನ್ನು ರಸ್ತೆಗಿಳಿಸಲು ನಿರ್ಧರಿಸಿದೆ. ಅದರಂತೆ ಇದೇ ನವೆಂಬರ್ 25 ರಂದು ಟಾಟಾ ಸಿಯೆರಾ ಕಾರು ಬಿಡುಗಡೆಯಾಗಲಿದೆ. ಇದೇ ವೇಳೆ ಟೀಮ್ ಇಂಡಿಯಾ ಆಟಗಾರ್ತಿಯರಿಗೆ ಕಾರನ್ನು ಹಸ್ತಾಂತರಿಸುವ ಸಾಧ್ಯತೆಯಿದೆ.

ಟಾಟಾ ಸಿಯೆರಾ ಬೆಲೆ ಎಷ್ಟು?

ಹೊಸ ಸಿಯೆರಾ ವಿನ್ಯಾಸವು ಹಳೆಯ ಸಿಯೆರಾದ ‘ಸುತ್ತು-ಗಾಜಿನ’ ಲುಕ್​ನಲ್ಲೇ ಇರಲಿದೆ. ಇದಾಗ್ಯೂ ಕಾರಿಗೆ ಆಧುನಿಕ ಟಚ್ ನೀಡಲಾಗಿದ್ದು,  LED ಲೈಟ್ ಬಾರ್ ವಿಶೇಷ ಆಕರ್ಷಣೆಯಾಗಲಿದೆ. ಅಲ್ಲದೆ ಈ ಕಾರಿನಲ್ಲಿ ಟ್ರಿಪಲ್-ಸ್ಕ್ರೀನ್ ಡ್ಯಾಶ್‌ಬೋರ್ಡ್ (ಮೂರು-ಸ್ಕ್ರೀನ್ ಸೆಟಪ್), ಲೆವೆಲ್-2 ADAS ಮತ್ತು ಪನೋರಮಿಕ್ ಸನ್‌ರೂಫ್‌ನಂತಹ ಆಧುನಿಕ ವೈಶಿಷ್ಟ್ಯಗಳನ್ನು ಸಹ ನೀಡಲಾಗಿದೆ.

ಇನ್ನು ಟಾಟಾ ಸಿಯೆರಾ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದ್ದು, 1.5-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.0-ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಸಬಹುದು. ಅಲ್ಲದೆ ಮುಂಬರುವ ದಿನಗಳಲ್ಲಿ ಇದೇ ಕಾರಿನ ಎಲೆಕ್ಟ್ರಿಕ್ (EV) ವರ್ಷನ್​ ಅನ್ನು ಸಹ ಬಿಡುಗಡೆ ಮಾಡಲಾಗುತ್ತದೆ.

ಇದನ್ನೂ ಓದಿ: ಏಳೇ ಏಳು ಪಂದ್ಯಗಳಲ್ಲಿ ಸಾರ್ವಕಾಲಿಕ ವಿಶ್ವ ದಾಖಲೆ ಮುರಿದ ಮ್ಯಾಥ್ಯೂ ಬ್ರೀಟ್ಝ್​ಕೆ

ಅಂದಹಾಗೆ ಟೀಮ್ ಇಂಡಿಯಾ ಆಟಗಾರ್ತಿಯರಿಗೆ ನೀಡಲಾಗುವ ಟಾಟಾ ಸಿಯೆರಾ ಕಾರಿನ ಬೆಲೆ ಸರಿಸುಮಾರು 13.50 ಲಕ್ಷದಿಂದ 24 ಲಕ್ಷ ರೂ. (ಎಕ್ಸ್-ಶೋರೂಮ್ ಬೆಲೆ).